ಪಚ್ಚೇನಗರಿ - 2

  • 18.1k
  • 2
  • 7.1k

ಮೆಲ್ಲಗೆ ಗುಲಾಬಿ ಹಿಡಿದ ಕೈ ಗೀತಾಳ ಕೈ ತಾಕಿ ಮೇಲೆತ್ತಲು ಪ್ರಯತ್ನಿಸಿತು. ಗೀತಾ ಮುಂದೆ ಇದ್ದ ಪೂರ್ಣ ಮುಖವನ್ನು ನೋಡತೊಡಗಿದಳು.ಯಾರಿದು! ಗೀತಾ : ಯಾರು ನೀವು?ಮುಂದಿದ್ದ ಮುಖ : ಸಂದೀಪ್ ನನ್ ಹೆಸರು ಸಂದೀಪ್ ಅಂತ.ಗೀತಾ : ಯಾಕೆ ನಂಗೆ ಇಷ್ಟು ಹೆದರಿಸಿದ್ರಿ, ಏನಿದು ಕೈನಲ್ಲಿ ಹೂವು! ಯಾಕೆ ನನ್ ಫಾಲೋ ಮಾಡಿದ್ರಿ? ನಂಗೆ ತುಂಬಾ ಭಯ ಆಯ್ತು.ಹೀಗೇನಾ ಹೆದರಿಸೋದು?ಸಂದೀಪ್ : ಸಾರಿ!(ಗೀತಾ ನಿಶ್ಯಬ್ದ)ಸಂದೀಪ್ : ಈ ಗುಲಾಬಿ ನಿಮಗಾಗಿ! ಇದನ್ನ ಕೊಡೋಕೆ ನಾನುಓಡೋಡಿ ಬಂದಿದ್ದು.ಪ್ಲೀಸ್ ತಗೊಳ್ಳಿ!ಗೀತಾ : ಯಾಕೆ ಈ ಗುಲಾಬಿ? ನನಗೆ ಬೇಡ. ಮಳೆ ತುಂಬಾ ಬಾರೋ ಹಾಗಿದೆ. ನಾನು ಹೊರಡಬೇಕು. ಬೈ.ಸಂದೀಪ್ : ಗೀತಾ....ಪ್ಲೀಸ್...ನಿಂತುಕೊಳ್ಳಿ. ಪ್ಲೀಸ್...(ಗೀತಾ ಏನು ಮಾತಾಡದೆ ತನ್ನ ಮನೆ ಕಡೆ ಹೊರಟಳು)ಸಂದೀಪ್ ಕಣ್ಣುಗಳು ಮಾತ್ರ ಗೀತಾ ಮರೆಯಾಗುವ ವರೆಗೂ ನೋಡುತ್ತಿದ್ದವು.(ಗೀತಾ ಮನೆ)ಗೀತಾಳ ಅಮ್ಮ: ಗೀತಾ ಅನ್ನ ಇದೆ ಮಜ್ಜಿಗೆ ಇದೆ ಹಾಕೊಂಡು ತಿನ್ನು.(ಗೀತಾ ಊಟ ತಿನ್ನುತ್ತ ಯೋಚಿಸತೊಡಗಿದಳು).ಈತನನ್ನ ಎಲ್ಲೋ ನೋಡಿದ್ದೀನಿ ಆದ್ರೆ ಎಲ್ಲಿ ಅಂತ