ಸೂಪರ್ ಮಾರ್ಕೆಟ್ ಗೆ ಬಂದ ವಿಶ್ವನಾಥ್,,, ಅಭಿ ಗೆ ಕಾಲ್ ಮಾಡ್ತಾರೆ, ಸ್ವಿಚ್ ಅಪ್ ಬರುತ್ತೆ. ವಿಶ್ವನಾಥ್ ಗೆ ಅಭಿ ಬಗ್ಗೆ ಯೋಚ್ನೆ ಕಾಡೋಕೆ ಶುರುವಾಗುತ್ತೆ. ಅಭಿ ಯಾವತ್ತೂ ಹೀಗೆ ಮಾಡೋವನು ಅಲ್ಲ ಏನೇ ಇದ್ರು ಕಾಲ್ ಮಾಡಿ ಹೇಳ್ತಾ ಇದ್ದಾ. ಈಗ ಸ್ವೀಟ್ ಆಫ್ ಮಾಡ್ಕೊಂಡು ಇದ್ದಾನೆ. ಮತ್ತೆ ಏನಾದ್ರು ಹುಷಾರಿಲ್ಲದೆ ಆಯ್ತಾ, ಇಲ್ಲಿ ನೋಡಿಕೊಳ್ಳೋವ್ರು ಯಾರು ಇಲ್ಲಾ ಅಂತ ಅವನ ಮನೆಗೆ ಏನಾದ್ರು ಹೋದ್ನ. ಅಂತ ಯೋಚ್ನೆ ಮಾಡ್ತಾ ಆಫೀಸ್ ಅಲ್ಲಿ ಕೂತಿರೋವಾಗ ನಯನಾ ಆಫೀಸ್ ರೂಮ್ ಡೋರ್ ಹತ್ತಿರ ಬರ್ತಾಳೆ. ನಯನಾ ನಾ ನೋಡಿ ವಿಶ್ವನಾಥ್,,, ನಯನಾ ನೀನು ಇಲ್ಲಿ ನಯನಾ,,, ಅಪ್ಪ ಅದು, ಅಭಿ ಅಂತ ಮೌನವಾಗಿ ಬಿಡ್ತಾಳೆ ವಿಶ್ವ,,, ಇಲ್ಲಾ ನಯನಾ ಕಾಲ್ ಮಾಡಿದ್ರೆ ಸ್ವಿಚ್ ಅಪ್ ಬರ್ತಾ ಇದೆ. ಯಾವತ್ತೂ ಹೀಗೆ ಮಾಡಿದವನೇ ಅಲ್ಲ. ನಿರಂಜನ್ ನಾ ಕಳಿಸಿದ್ದೀನಿ ನೋಡ್ಕೊಂಡು ಬರೋಕೆ, ನೀನು ಬಂದು ಕುತ್ಕೋ.ನಯನಾ,,, ಇಲ್ಲಾ ಅಪ್ಪ ನಾನು ಕೌಂಟರ್ ಹತ್ತಿರ ಇರ್ತೀನಿ