ಅಭಿನಯನಾ - 26

  • 135

    ಅಭಿ ನ ನೋಡಿದ ಸಾರಿಕಾ ಗೆ ನೋವು ಅಳು ಎರಡು ಕಂಟ್ರೋಲ್ ಆಗಲಿಲ್ಲ, ಬಿಕ್ಕಿ ಬಿಕ್ಕಿ ಅಳೋಕೆ ಶುರು ಮಾಡಿದಳು, ಅಳ್ತಾ ಅಪ್ಪ ದೇವ್ರೇ ನಾನು ಯಾರನ್ನ ಈ ಜನ್ಮದಲ್ಲಿ ಮತ್ತೆ ನೋಡಬಾರದು ಅವರ ಮುಂದೆ ನಿಲ್ಲ ಬಾರದು ಅಂತ ಅನ್ಕೊಂಡು ಬದ್ನೋ ಕೊನೆಗೂ ನೀನು ನನ್ನ ತಂದು ಅವನ ಮುಂದೆ ನಿಲ್ಲಿಸಿದೆ, ಏನ್ ಪಾಪ ಮಾಡಿದ್ದೆ ದೇವ್ರೇ ನಾನು, ಅವನ ಕಣ್ಣುಗಳು ನನ್ನ ಸಾವಿರ ಪ್ರಶ್ನೆಗಳನ್ನ ಕೇಳ್ತಾ ಇದ್ವು, ಅದಕ್ಕೆ ಉತ್ತರ ಅಲ್ಲ ಅವನನ್ನ ಎದುರಿಸೋ ಶಕ್ತಿ ಕೂಡ ನನಗೆ ಇಲ್ಲಾ, ನೆಮ್ಮದಿಯಾಗಿ ಬದುಕೋಣ ಅಂತ ಈ ಊರಿಗೆ ಬಂದೆ, ಅದ್ರೆ ಇಲ್ಲಿ ನನ್ನಿಂದ ನೆಮ್ಮದಿ ಖುಷಿ ಸಂತೋಷ ಪ್ರೀತಿ ಎಲ್ಲವನ್ನು ಕಳೆದುಕೊಂಡವನು ನನ್ನೆದುರು ನಿಂತಿದ್ದಾನೆ, ಅವನಿಗೆ ನಾನ್ ಏನು ಉತ್ತರ ಕೊಡಲಿ. ಪ್ರೀತಿ ನೇ ಬೇಡ ಅಂತ ಹೇಳಿದವನನ್ನ, ಹಠ ಮಾಡಿ ಪ್ರೀತಿಸಿ ಕೊನೆಗೆ ಅವನನ್ನ ನನ್ನ ಸ್ವಾರ್ಥಕ್ಕೆ, ಅವನನ್ನ ಬಿಟ್ಟು ಅವನಿಗೆ ಮೋಸ ಮಾಡಿ