ಸಾರಿಕ ತೇಜು ಜೊತೆಗೆ ಹೊರಟು ಹೋದಮೇಲೆ. ಅಭಿ ಆಫೀಸ್ ಅಲ್ಲಿ ಅವಳ ಬಗ್ಗೆ ಯೋಚ್ನೆ ಮಾಡ್ತಾ ಇದ್ದು ಬಿಡ್ತಾನೆ , ಹಾಗೇ ಎಷ್ಟೋತ್ತು ಅವಳ ಆಲೋಚನೆ ಅಲ್ಲೇ ಇದ್ದು ಬಿಟ್ಟನೋ ಅವನಿಗೆ ಗೊತ್ತಿಲ್ಲಾ. ಪ್ರಿಯಾ ಆಫೀಸ್ ಗೆ ಬಂದು ಅಭಿ ನ ನೋಡಿ ಅಭಿ ಅಂತ ಕರೀತಾಳೆ. ಅಭಿ ಆಲೋಚನೆಗಳಿಂದ ಹೊರಗೆ ಬಂದು ಪ್ರಿಯಾ ಕಡೆಗೆ ನೋಡ್ತಾನೆ.ಪ್ರಿಯಾ,,, ಅಭಿ ಕಣ್ಣುಗಳನ್ನ ನೋಡಿ , ಅಭಿ ಯಾಕೋ ಏನಾಯ್ತು, ಕಣ್ಣೆಲ್ಲ ಕೆಂಪಾಗಿದೆ.ಅಭಿ,,, ಸ್ವಲ್ಪ ನೋವಿನ ಧ್ವನಿ ಅಲ್ಲಿ ಏನಿಲ್ಲಾ, ನೀನು ಬಂದ ವಿಷಯ ಏನ್ ಹೇಳು.ಪ್ರಿಯಾ,,, ಲೋ ನಿನ್ನ ಸಾರಿಕ ಬಂದಾಗಿಂದ ಅವಳ ವಿಷಯ ಹೇಳ್ದಗಿಂದ, ತುಂಬಾ ನೋವನ್ನ ಅನುಭವಿಸ್ತಾ ಇದ್ದಿಯಾ. ಕೆಲಸ ನೇ ಬೇಡ ಅಂತ ಹೋಗ್ತಾ ಇದ್ದವಳು ನಿನ್ನ ಒಂದು ಮಾತಿಗೆ ವಾಪಸ್ಸು ಬಂದು ನೀನು ಹೇಳಿದನ್ನೆಲ್ಲ ಕೇಳಿದ್ಲು, ಕೆಲಸ ಮಾಡೋಕು ಒಪಿಕೊಂಡ್ಲು ನಿಜ ಹೇಳೋ ಸಾರಿಕ ನಿನಗೆ ಮೊದಲೇ ಪರಿಚಯ ಅಲ್ವಾ, ಇಷ್ಟು ವರ್ಷದಲ್ಲಿ ಯಾವತ್ತೂ ನಿನ್ನ ಕಣ್ಣಲ್ಲಿ