ರಕ್ತ ಲಿಪಿಯ ಚಿರಂಜೀವಿ - 19

  • 1k
  • 381

ಚಾಮುಂಡಿ ಬೆಟ್ಟದ ಸಾವಿರದ ಒಂದನೇ ಮೆಟ್ಟಿಲಿನ ಮೇಲೆ ಮಂಜು ಮುಸುಕಿದ ಬೆಳಗಿನ ಜಾವದ ಶೀತಲ ಗಾಳಿ ಬೀಸುತ್ತಿತ್ತು. ಆದರ್ಶ್ ತನ್ನ ಹಣೆಯ ಮೇಲಿದ್ದ ಆ ಬೆಳ್ಳಿಯ ಬಣ್ಣದ ಪವಿತ್ರ ಮಣಿಯ ದಿವ್ಯ ಬೆಳಕಿನಲ್ಲಿ ರಶ್ಮಿಯ ಮುಖವನ್ನು ನೋಡುತ್ತಿದ್ದ. ಆದರೆ ಅವಳ ಕಣ್ಣುಗಳಲ್ಲಿ ಮೊದಲಿಗಿದ್ದ ಆ ಎಂಟು ತಿಂಗಳ ಸುಂದರ ಪ್ರೀತಿಯ, ನಂಬಿಕೆಯ ಮತ್ತು ಆಪ್ತತೆಯ ನೆನಪುಗಳಿರಲಿಲ್ಲ. ಅಶ್ವತ್ಥಾಮನ ಕರಾಳ ಮಾಯೆಯು ಅವಳ ಮೆದುಳಿನಿಂದ ಆದರ್ಶ್ ಎಂಬ ಹೆಸರನ್ನೇ ಅಳಿಸಿಹಾಕಿತ್ತು. ಅವಳು ಅವನನ್ನು ಯಾವುದೋ ಒಬ್ಬ ಅಪರಿಚಿತ, ಭಯಾನಕ ಮಾಂತ್ರಿಕನನ್ನು ನೋಡುವಂತೆ ದಿಗಿಲಿನಿಂದ ನೋಡುತ್ತಿದ್ದಳು.ನನ್ನ ಕೈ ಬಿಡಿ ನೀವು ಯಾರು? ಈ ಕತ್ತಲೆಯಲ್ಲಿ ನಾನು ಇಲ್ಲಿಗೆ ಹೇಗೆ ಬಂದೆ? ನನ್ನನ್ನು ಈ ಕ್ಷಣವೇ ಮನೆಗೆ ಕಳುಹಿಸಿ, ಇಲ್ಲವಾದರೆ ನಾನು ಕಿರುಚುತ್ತೇನೆ ರಶ್ಮಿ ಆಕ್ರೋಶದಿಂದ ಆದರ್ಶ್‌ನ ಕೈಯನ್ನು ಕೊಡವಿಕೊಂಡಳು. ಅವಳ ದನಿಯಲ್ಲಿ ಪ್ರೀತಿಯ ಬದಲು ಅಸಹ್ಯವಿತ್ತು.ಆದರ್ಶ್‌ನ ಎದೆಯಲ್ಲಿ ಯಾರೋ ಕಾದ ಸೀಸವನ್ನು ಸುರಿದಂತಾಯಿತು. ರಶ್ಮಿ ನಾನೇ ಆದರ್ಶ್ ನಿನ್ನ ಪ್ರೀತಿಯ ಆದರ್ಶ್ ನಾವು ಬೆಂಗಳೂರಿನಿಂದ