ಅಜಂತಾದ ಕಲ್ಲುಗಳ ಕಾವ್ಯವನ್ನು ದಾಟಿ ಆದರ್ಶ್ ತನ್ನ ಹಳೆಯ ಹೆಚ್.ಎಫ್ ಡಿಲಕ್ಸ್ ಬೈಕ್‌ನಲ್ಲಿ ರಶ್ಮಿಯನ್ನು ಕೂರಿಸಿಕೊಂಡು ಎಲ್ಲೋರಾದ 16ನೇ ಗುಹೆಯಾದ ಕೈಲಾಸ ದೇವಸ್ಥಾನದ ಮುಂದೆ ಬಂದು ನಿಂತಾಗ, ಅಲ್ಲಿನ ಭವ್ಯತೆ ಮತ್ತು ಅತಿಮಾನುಷ ಶಕ್ತಿ ಅವನನ್ನು ಒಂದು ಕ್ಷಣ ಬೆಚ್ಚಿಬೀಳಿಸಿತು. ಇದು ಮನುಷ್ಯರು ಕೆಳಗಿನಿಂದ ಮೇಲೆ ಕಟ್ಟಿದ ದೇವಸ್ಥಾನವಲ್ಲ ಬದಲಾಗಿ ಒಂದು ಬೃಹತ್ ಪರ್ವತವನ್ನೇ ಮೇಲಿನಿಂದ ಕೆಳಕ್ಕೆ ಸೀಳುತ್ತಾ, ಅಡಿಪಾಯದವರೆಗೆ ಕೆತ್ತಿ ಹೊರತೆಗೆದ ಜಗತ್ತಿನ ಏಕೈಕ ಏಕಶಿಲಾ ಅದ್ಭುತ. ಆದರ್ಶ್‌ನ ಸುವರ್ಣ ಲೇಖನಿಯಲ್ಲಿದ್ದ ಆ 'ಶಿಲಾ ಮಂತ್ರದ ಕಮಲವು ಈಗ ದೇವಸ್ಥಾನದ ಆಳವಾದ ದಿಕ್ಕಿಗೆ ತಿರುಗಿ ಪ್ರಖರವಾದ ನೀಲಿ ಕಿರಣಗಳನ್ನು ಹೊರಸೂಸತೊಡಗಿತು. ಅದು ಪರ್ವತದ ಬೇರುಗಳಲ್ಲಿ ಅಡಗಿರುವ ಅಶ್ವತ್ಥಾಮನ ಕರಾಳ ಶಕ್ತಿಯನ್ನು ಪತ್ತೆಹಚ್ಚಿತ್ತು.ಆದರ್ಶ್, ಈ ದೇವಸ್ಥಾನವನ್ನು ನೋಡಿದರೆ ನನಗೆ ಭಕ್ತಿಯ ಬದಲು ಒಂದು ರೀತಿಯ ಭಯವಾಗುತ್ತಿದೆ. ಈ ಇಡೀ ಪರ್ವತವೇ ನಮ್ಮನ್ನು ನುಂಗಲು ಹೊಂಚು ಹಾಕಿ ಕುಳಿತಿರುವಂತೆ ಭಾಸವಾಗುತ್ತಿದೆ. ಅಶ್ವತ್ಥಾಮನು ತನ್ನ ಶಾಪದ ಅಂತಿಮ ರಹಸ್ಯವನ್ನು ಈ ಪರ್ವತದ ಅತಿ ಆಳವಾದ,