(ಸಂಜೆ ಆಗಿತ್ತು. ಶೌರ್ಯ ಎಲ್ಲರಿಗಾಗಿ ಕ್ಯಾಬ್ ಬುಕ್ ಮಾಡಿದ್ದ. ಅವನು ಹೋಟೆಲ್ ಮುಂದೆ ನಿಂತಿದ್ದ. ಆಗ ಕ್ಯಾಬ್ ಬಂತು. ಶೌರ್ಯಗೆ ದುರ್ಗಾನ ಬಿಟ್ಟು ಬೇರೆ ಎಲ್ಲರು ಕಾಣಿಸಿದರು.) ಶೌರ್ಯ : ಅಂಕಲ್, ದುರ್ಗಾ ಬರಲಿಲ್ಲವಾ? ನಾರಾಯಣ : ಇಲ್ಲ, ಅವಳಿಗೆ ಸ್ವಲ್ಪ ಕೆಲಸ ಇತ್ತು. ಅವಳು ಸ್ವಲ್ಪ ಹೊತ್ತು ಬಿಟ್ಟು ನಂತರ ಬರ್ತಾಳೆ. ನೀನು ಅವಳಿಗೆ ಲೊಕೇಶನ್ ಮೆಸೇಜ್ ಮಾಡಿಬಿಡು. ಶೌರ್ಯ : ಹೌದಾ ಸರಿ. (ನನಗೆ ಈ ಹುಡುಗಿ ಮೇಲೆ ಯಾವುದೇ ನಂಬಿಕೆ ಇಲ್ಲ. ಏನಾದರೂ ಕಿತಾಪತಿ ಮಾಡೇ ಮಾಡ್ತಾಳೆ ಅಂತ ಅಂದುಕೊಂಡು ಅವಳಿಗೆ ಲೊಕೇಶನ್ ಮೆಸೇಜ್ ಮಾಡಿದ.) ನಾರಾಯಣ : ಹೋಟೆಲ್ ತುಂಬ ಚೆನ್ನಾಗಿದೆ ಶೌರ್ಯ. ಹೌದು, ನಿನ್ನ ಸ್ನೇಹಿತ ಎಲ್ಲಿದ್ದಾನೆ? ಶೌರ್ಯ : ಅವನಿಗೆ ಏನೋ ಕೆಲಸ ಇದೆ ಅಂತ ಈಗಷ್ಟೇ ಹೊರಗಡೆ ಹೋದ. ಬನ್ನಿ ಅಂಕಲ್, ನಾವು ತಿನ್ನೋಕೆ ಶುರು ಮಾಡೋಣ. ಅವನು ನಂತರ ಬರುತ್ತಾನೆ. ಎಲ್ಲರೂ ಕುಳಿತರು. ನಂತರ ಯಾರಿಗೆ ಏನು ಬೇಕು ಅಂತ