ರಕ್ತ ಲಿಪಿಯ ಚಿರಂಜೀವಿ - 42

  • 246
  • 72

ನೇಪಾಳದ ಕಡಿದಾದ ಬೆಟ್ಟಗಳು, ಉಸಿರು ಗಟ್ಟಿಸುವ ಪ್ರಪಾತಗಳು ಮತ್ತು ಮೈ ನಡುಗಿಸುವ ಹಿಮಗಾಳಿಯನ್ನು ಸೀಳಿಕೊಂಡು ಆದರ್ಶ್‌ನ ಹಳೆಯ ಹೆಚ್.ಎಫ್ ಡಿಲಕ್ಸ್ ಬೈಕ್ ಕೊನೆಗೂ ಸಮುದ್ರ ಮಟ್ಟದಿಂದ 12,000 ಅಡಿ ಎತ್ತರದಲ್ಲಿರುವ ಮುಕ್ತಿನಾಥನ ಪುಣ್ಯಕ್ಷೇತ್ರವನ್ನು ತಲುಪಿತು. ಸುತ್ತಲೂ ದವಳಗಿರಿಯ ಧವಳ ಶಿಖರಗಳು ಬೆಳ್ಳಿಯ ಕವಚ ತೊಟ್ಟ ದೈತ್ಯರಂತೆ ಆಕಾಶವನ್ನು ಚುಂಬಿಸುತ್ತಿದ್ದವು. ಅಲ್ಲಿನ ಗಾಳಿಯು ಎಷ್ಟು ವಿರಳವಾಗಿತ್ತೆಂದರೆ, ಪ್ರತಿ ಉಸಿರಿಗೂ ಬದುಕಿನ ಹೋರಾಟ ಮಾಡಬೇಕಿತ್ತು. ಆದರ್ಶ್‌ನ ಸುವರ್ಣ ಲೇಖನಿಯ ತುದಿಯಲ್ಲಿದ್ದ ಆ ನೇಪಾಳದ 'ಪ್ರಾಣಲಿಂಗದ ಹರಳು ಈಗ ಸಂಪೂರ್ಣವಾಗಿ ಬಿಳಿಯಾಗಿ ಬದಲಾಗತೊಡಗಿತು. ಅದು ಈ ಹಿಮದ ಮರೆಯಲ್ಲಿ ಅಡಗಿರುವ ಅಶ್ವತ್ಥಾಮನ ಕರ್ಮ ಶುದ್ಧೀಕರಣದ ಕರಾಳ ಸಂಚನ್ನು ಮೊದಲೇ ಪತ್ತೆಹಚ್ಚಿ ಎಚ್ಚರಿಸುತ್ತಿತ್ತು. ಆದರ್ಶ್, ಇಲ್ಲಿನ ಚಳಿ ನಮ್ಮ ರಕ್ತವನ್ನೇ ಹೆಪ್ಪುಗಟ್ಟಿಸುತ್ತಿದೆ. ಇಲ್ಲಿನ ಆ 108 ಪವಿತ್ರ ನೀರಿನ ಧಾರೆಗಳ ಅಡಿಯಲ್ಲಿ ಸ್ನಾನ ಮಾಡಿದರೆ ಮಾತ್ರ ಅಶ್ವತ್ಥಾಮನ ಶಾಪದ ಮುಂದಿನ ಹಾದಿ ತೆರೆಯುತ್ತದೆ ಎನ್ನುತ್ತಾರೆ. ಆದರೆ ಈ ಮೈನಸ್ ಡಿಗ್ರಿ ಚಳಿಯ ನಡುವೆ ಆ ಮಂಜಿನ ನೀರು ನಮ್ಮ