ಬೆಳಿಗ್ಗೆ ಆಯ್ತು, ಶಿವರಾಜ ಈಗಷ್ಟೇ ಕೊಣೆಯಿಂದ ಹೊರಗಡೆ ಬಂದ, ದುರ್ಗಾ ಅಜ್ಜನ ಫೋಟೋ ನೋಡತಾ ಅಲ್ಲಿ ಕುಳಿತಿರುವುದನ್ನು ಅವನು ಗಮನಿಸಿದ. ಅವಳು ಕುರ್ಚಿಗೆ ಆಸರೆಯಾಗಿ ಅಜ್ಜನ ಫೋಟೋನೇ ನೋಡುತ್ತಾ ಇದ್ದಳು. ಅವಳ ಕಣ್ಣಿಂದ ನೀರು ಹಾಗೆ ಸುರಿಯುತ್ತಿತ್ತು. ಅದನ್ನು ನೋಡಿ ಶಿವರಾಜಗೆ ತುಂಬನೇ ಸಂಕಟ ಆಯ್ತು. (ನನ್ನಿಂದ ನೀವು ಎಲ್ಲ ಎಷ್ಟು ಕಷ್ಟ ಅನುಭವಿಸಿದ್ದೀರಾ, ದಯವಿಟ್ಟು ನನ್ನನ್ನು ಕ್ಷಮಿಸಿ ಬಿಡು ದುರ್ಗಾ) ಎಂದು ಮನಸಲ್ಲೇ ಅಂದುಕೊಳ್ಳುತ್ತಾ ಅವಳ ಹತ್ತಿರ ಬಂದ. ಶಿವರಾಜ : ದುರ್ಗಾ, ದುರ್ಗಾ.. ದುರ್ಗಾ : (ಅವಳು ಎಚ್ಚೆತ್ತುಕೊಂಡು ಶಿವರಾಜನ್ನು ನೋಡಿದಳು, ಕಣ್ಣೀರು ಒರೆಸಿಕೊಂಡಳು) ಹಾ ದೊಡ್ಡಪ್ಪ, ಏನಾದ್ರು ಕೆಲಸ ಇತ್ತಾ? ಶಿವರಾಜ : ಏನಿಲ್ಲ, ಅಮ್ಮ ತಿಂಡಿಗೆ ಅಂತ ಕರೀತಿದ್ದಾಳೆ ಒಳಗಡೆ ಹೋಗು. ದುರ್ಗಾ : ಹಾ, ನೀವು ಬನ್ನಿ ಒಟ್ಟಿಗೆ ತಿಂಡಿ ಮಾಡೋಣ. ಶಿವರಾಜ : ನಾನು ಈಗಷ್ಟೇ ಎದ್ದೆ, ಸ್ನಾನ ಅದು ಮಾಡಿಕೊಂಡು ಬರುತ್ತೇನೆ, ನೀವೆಲ್ಲ ತಿಂಡಿ ಮಾಡಿ (ಅಂತ ಹೇಳಿ ಅಲ್ಲಿಂದ ಹೊರಟ,