ರಾಕ್ಷಸ ತಾಲ್‌

  • 30

ಹಿಮಾಲಯದ ಮಡಿಲಲ್ಲಿರುವ ರಾಕ್ಷಸ ತಾಲ್ ಕೇವಲ ಒಂದು ಜಲರಾಶಿಯಲ್ಲ ಅದು ಭೂಮಿಯ ಮೇಲಿರುವ ನರಕದ ದ್ವಾರ. ಮಾನಸ ಸರೋವರವು ದೇವತೆಗಳ ಸನ್ನಿಧಿಯಾದರೆ, ಅದರ ಪಕ್ಕದಲ್ಲೇ ಇರುವ ಈ ಕೆರೆ ರಾಕ್ಷಸರ ಮತ್ತು ಶಾಪಗ್ರಸ್ತ ಆತ್ಮಗಳ ಅಡಗುದಾಣ. ಸ್ಥಳೀಯ ಲಾಮಾಗಳು ಇಂದಿಗೂ ಸೂರ್ಯ ಮುಳುಗಿದ ಮೇಲೆ ಆ ಕಡೆಗೆ ತಲೆ ಹಾಕಿ ಮಲಗುವುದಿಲ್ಲ. ಅಲ್ಲಿ ಹಕ್ಕಿಗಳು ರೆಕ್ಕೆ ಬಡಿಯುವುದಿಲ್ಲ, ಅಲ್ಲಿನ ಗಾಳಿಯಲ್ಲಿ ಆಮ್ಲಜನಕಕ್ಕಿಂತ ಹೆಚ್ಚಾಗಿ ಸತ್ತವರ ಹಸಿ ಮಾಂಸದ ವಾಸನೆ ಇರುತ್ತದೆ.ಅವಿನಾಶ್ ಒಬ್ಬ ಹಠವಾದಿ ಕಥೆಗಾರ ಮತ್ತು ಸಿನಿಮಾ ನಿರ್ದೇಶಕ. ಲೋಕದ ಕಣ್ಣಿಗೆ ಕಾಣದ ನಿಗೂಢತೆಗಳನ್ನು ಬೆನ್ನಟ್ಟುವುದು ಅವನ ರಕ್ತದಲ್ಲೇ ಇತ್ತು. ಸಾವಿಗೆ ಯಾವುದೇ ಸೈಕಾಲಜಿ ಇರುವುದಿಲ್ಲ, ಅದಕ್ಕಿರುವುದು ಕೇವಲ ಹಸಿವು ಮಾತ್ರ ಎಂಬುದು ಅವನ ಲೇಖನಿಯ ಶಕ್ತಿ. ಸುಮಾರು 200 ಕ್ಕೂ ಅಧಿಕ ಕಥೆಗಳನ್ನು ಬರೆದಿರುವ ಅವನಿಗೆ, ರಾಕ್ಷಸ ತಾಲ್ ಎನ್ನುವ ಹೆಸರೇ ಒಂದು ದೊಡ್ಡ ಸಸ್ಪೆನ್ಸ್ ಥ್ರಿಲ್ಲರ್‌ನಂತೆ ಕಾಣುತ್ತಿತ್ತು. ತನ್ನ ಆತ್ಮೀಯ ಮಿತ್ರ ಮತ್ತು ಕ್ಯಾಮೆರಾಮ್ಯಾನ್ ಸಂಜಯ್ ಜೊತೆಗೂಡಿ, ಒಂದು