ಅವಳ ಹೋರಾಟ - 14

  • 393
  • 129

(ಶಿವರಾಜ್ ಕುರ್ಚಿ ಮೇಲೆ ಕೂತಿರೋ ದುರ್ಗನ್ನೇ ನೋಡ್ತಾ ನಿಂತಿದ್ದ, ಅವನಿಗೆ ಅಪ್ಪನ್ನೇ ನೋಡಿದ ಹಾಗೆ ಅನಿಸ್ತು. ಒಂದು ಕಡೆ ಅವನು ಹೇಳಿದ್ದು ನಿಜ ಇತ್ತು, ಹಳ್ಳಿಯಲ್ಲಿ ಇರುವ ಹೆಚ್ಚು ಜನ ಹೆಣ್ಣು ಮಕ್ಕಳು ತುಂಬಾ ಸುಕ್ಷ್ಮವಾಗಿ ಇರುತ್ತಾರೆ, ತಾವಾಯ್ತು, ತಮ್ಮ ಕೆಲಸ ಆಯ್ತು ಅಂತ ಇರುತ್ತಾರೆ. ಆದರೆ ದುರ್ಗಾ ಹಾಗಿರಲಿಲ್ಲ, ನಾರಾಯಣ ಅವಳನ್ನು ಹಾಗೆ ಬೆಳೆಸಿದ್ದ. ಅದು ಅಲ್ಲದೆ ಈ ಧೈರ್ಯ, ಸ್ಥೈರ್ಯ ಅನ್ನೋದು ಅವಳಿಗೆ ರಕ್ತದಲ್ಲೇ ಬಂದಿತ್ತು.) ದುರ್ಗಾ : ನಾನು ನಿಮ್ಮನ್ನೆಲ್ಲಾ ಇವತ್ತು ಪಂಚಾಯಿತಿಗೆ ಯಾಕೆ ಕರಿಸಿದ್ದೀನಿ ಅಂತ ನೀವು ಯೋಚನೆ ಮಾಡ್ತಾ ಇರಬೇಕಲ್ಲವಾ ಹೇಳ್ತೀನಿ. ನಮ್ಮ ಅಜ್ಜ ಹೇಗೆ ತೀರಿಕೊಂಡರು, ಅವರನ್ನು ಯಾರು ಕೊಲೆ ಮಾಡಿದ್ದು, ಯಾಕೆ ಮಾಡಿದ್ದು ಎಲ್ಲವೂ ನಿಮಗೆ ಗೊತ್ತೇ ಇದೆ. ರಮೇಶ್ : ಇದು ನಮಗೆಲ್ಲ ಗೊತ್ತಿದೆ ಅಂತ ನಿನಗೂ ಗೊತ್ತು ತಾನೆ. ಮತ್ತೆ ಅದನ್ನೇಕೆ ಹೇಳ್ತಿದ್ದೀಯ? ನಿಮ್ಮ ಅಜ್ಜ ನಮ್ಮ ಅಪ್ಪನಿಗೆ ದ್ರೋಹ ಮಾಡಿದರು, ಅದಕ್ಕೆ ನನ್ನ ಅಪ್ಪ ದ್ವೇಷದಿಂದ ನಿಮ್ಮ