ಅನಿರ್ಬಾನ್ 000

ಮಂಗಳೂರಿನ ಬಂದರಿನಲ್ಲಿ ಅಂದು ಸುರಿಯುತ್ತಿದ್ದ ಮಳೆ ಕೇವಲ ನೀರಾಗಿರಲಿಲ್ಲ; ಅದು ಕಪ್ಪು ಶಾಯಿಯಂತೆ  ಹರಿಯುತ್ತಿತ್ತು. ನಗರದ ಪ್ರತಿಷ್ಠಿತ ಉದ್ಯಮಿ ರಘುರಾಮ್ ತನ್ನ ಗೋದಾಮಿನಲ್ಲಿ ಸತ್ತು ಬಿದ್ದಿದ್ದ. ಅವನ ಎದೆಯ ಮೇಲೆ ರಕ್ತದಲ್ಲಿ ಒಂದು ಹೆಸರಿತ್ತು ಅನಿರ್ಬಾನ್ ಚಟರ್ಜಿ.  ಇನ್ಸ್‌ಪೆಕ್ಟರ್ ಸೂರ್ಯ ಆ ಹೆಸರನ್ನು ನೋಡಿದಾಗ ಅವನಿಗೆ ಅರಿವಿರಲಿಲ್ಲ, ಅದು ಮನುಷ್ಯನ ಹೆಸರಲ್ಲ, ಅದೊಂದು ಮರಣಶಾಸನ ಎಂದು.ಶರತ್ ತನ್ನ RTRT ಬೈಕ್ ಹತ್ತಿ ಡೆಲಿವರಿ ಹೊರಟಾಗ ರಾತ್ರಿ ಹನ್ನೊಂದು ಗಂಟೆ. ಅವನಿಗೆ ವಿಚಿತ್ರವಾದ ವಿಳಾಸವೊಂದು ಸ್ಕ್ರೀನ್ ಮೇಲೆ ಮೂಡಿತು ಸ್ಮಶಾನದ ಮೂರನೇ ಗೋಡೆ, ಕತ್ತಲಲ್ಲಿ ಕಣ್ಣು ಬಿಟ್ಟಿರುವ ಮನೆ ಆರ್ಡರ್ ಮಾಡಿದ ಹೆಸರು ಮೈತ್ರೇಯಿ. ಶರತ್ ಗಾಬರಿಯಿಂದ ಬೈಕ್ ಸ್ಟಾರ್ಟ್ ಮಾಡಿದ. ಆದರೆ ಅವನ ಬೈಕ್‌ನ ಹೆಡ್‌ಲೈಟ್ ಬೆಳಕು ಚೆಲ್ಲುವ ಬದಲು ಕತ್ತಲನ್ನು ಹರಡುತ್ತಿತ್ತು‌. ಆದರೆ ಅವನು ತಲುಪಿದ್ದು ದೋಸೆ ಕ್ಯಾಂಪ್ ಪಕ್ಕದ ಒಂದು ಹಳೆಯ ಬಂಗಲೆಗೆ. ಅಲ್ಲಿ ಒಬ್ಬ ವೃದ್ಧ ವ್ಯಕ್ತಿ ಕುಳಿತು ಬಾಂಗ್ಲಾ ಭಾಷೆಯಲ್ಲಿ ಏನೋ ಬರೆಯುತ್ತಿದ್ದ. ಅವನೇ ಅನಿರ್ಬಾನ್