ಬಯಸದೆ ಬಂದವಳು... - 20

(211)
  • 2.2k
  • 1.2k

ಅಧ್ಯಾಯ20 : ಪ್ರೀತಿ ಮತ್ತು ಪ್ರತಿಷ್ಠೆಜೆಕೆ ಅಮ್ಮು ರೂಮ್‌ನಿಂದ ಸೂರ್ಯನನ್ನು ಕರೆದುಕೊಂಡು ಮಾಧವ್ ರೂಮ್‌ಗೆ ಬಂದನು. ಸೂರ್ಯ ಒಳಗೆ ಬರುತ್ತಿದ್ದಂತೆಯೇ, ಮಾಧವ್ ಅವನತ್ತ ನೋಡುತ್ತಾ,“ಸೂರ್ಯ ನೀನು ಮಾಡಿದ್ದು ಸರಿನಾ??” ಎಂದು ಕೇಳಿದ.ಅದಕ್ಕೆ ಸೂರ್ಯ ತಲೆತಗ್ಗಿಸಿಕೊಂಡು,“sorry ಭಾವಾ ನನ್ನಿಂದ ತಪ್ಪಾಗೋಯ್ತು, ಈ ವಿಷಯ ನಾ ಯಾರಿಗೂ ಹೇಳ್ಬೇಡ ಅಂತಾ ನಾನೆ ಜೆಕೆ ಹತ್ರ ಪ್ರಾಮಿಸ್ ಮಾಡಸ್ಗೊಂಡಿದ್ದೆ ಇದರಲ್ಲಿ ಅವನದೇನು ತಪ್ಪಿಲ್ಲ” ಎಂದು ಬೇಸರದಿಂದ ಉತ್ತರಿಸಿದ.ಅವರ ಮಾತುಗಳನ್ನು ಕೇಳುತ್ತಿದ್ದ ಭುವನ್,“ನೀವು ತಪ್ಪು ಮಾಡಿಬಿಟ್ರಿ ಕಣ್ರೋ” ಎಂದು ಹೇಳಿದ.ಆ ಮಾತು ಮೂವರಲ್ಲೂ ಸ್ವಲ್ಪ ಆತಂಕವನ್ನು ಉಂಟುಮಾಡಿತು.ಅದನ್ನು ಕೇಳಿದ ಜೆಕೆ ತಕ್ಷಣ ಕೇಳಿದ,“ಅಣ್ಣ ಯಾಕೆ ಹೀಗೆ ಹೇಳ್ತಿದ್ದಿಯಾ??, ಅಮ್ಮು ಮತ್ತೆ ಸೂರ್ಯ ಪ್ರೀತಿ ಮಾಡ್ತಿರೋದು ನಿಮಗೇನಾದ್ರೂ ಇಷ್ಟ ಆಗಲಿಲ್ಲವಾ”.ಮಾಧವ್ ಶಾಂತವಾಗಿ ಉತ್ತರಿಸಿದ,“ಅಲ್ಲ ಕಣೋ.. ನಮಗಂತೂ ತುಂಬಾ ಖುಷಿ ಆಯ್ತು ಆದರೆ ಈಗಾಗಲೇ ತುಂಬಾ ಲೇಟ್ ಆಯ್ತು ಅಂತ ಅನಸ್ತಿದೆ”.ಅದಕ್ಕೆ ಸೂರ್ಯ ಕಳವಳದಿಂದ,“ಎನ್ ಭಾವ ನೀವೇ ಹೀಗೆ ಹೇಳ್ಬಿಟ್ರೆ ನಮ್ಮಿಬ್ಬರ ಗತಿ ಏನು” ಎಂದು ಕೇಳಿದ.ಜೆಕೆ ಬೇಡಿಕೊಳ್ಳುತ್ತಾ,“ಪ್ಲೀಸ್ ಕಣ್ರೋ