ಹೆಲ್ಮೆಟ್

  • 75

ಮಂಗಳೂರಿನ ಕ್ಲಾಕ್ ಟವರ್ ಜಂಕ್ಷನ್ ಎಂದರೆ ಅದು ವಾಹನಗಳ ಸಾಗರ. ಸುಡುವ ಬಿಸಿಲಿಗೆ ರಸ್ತೆಯೇ ಕರಗಿ ಹೋಗುವ ಹದದಲ್ಲಿತ್ತು. ಕರ್ಕಶ ಹಾರ್ನ್ ಶಬ್ದಗಳ ನಡುವೆ ಟ್ರಾಫಿಕ್ ಪೊಲೀಸ್ ವಿಕ್ರಮ್ ಸಿಂಹ ತನ್ನ HF Deluxe ನಿಲ್ಲಿಸಿ, ಹಣೆಯ ಬೆವರಿನ ಹನಿಗಳನ್ನು ಒರೆಸಿಕೊಳ್ಳುತ್ತಾ ರಸ್ತೆಯನ್ನೇ ಹದ್ದಿನಂತೆ ನೋಡುತ್ತಿದ್ದರು. ವಿಕ್ರಮ್ ಸಿಂಹ ಎಂದರೆ ಈ ಭಾಗದ ಪುಂಡ ಪೋಕರಿಗಳಿಗೆ ಒಂದು ರೀತಿಯ ನಡುಕ. ಆದರೆ ಆ ನಡುಕಕ್ಕೆ ಕಾರಣ ಅವರ ಲಾಠಿಯಲ್ಲ, ಅವರ ಚುರುಕಾದ ಮೆದುಳು. ದಿನನಿತ್ಯ ರೂಲ್ಸ್ ಬ್ರೇಕ್ ಮಾಡುತ್ತಿದ್ದ ಅದೆಷ್ಟೋ ಜನರಿಗೆ ದಂಡ ಹಾಕುತ್ತಿದ್ದರೂ, ಅವರಿಗೆ ಒಂದು ವಿಷಯ ಕಾಡುತ್ತಿತ್ತು—ದಂಡ ಹಾಕುವುದರಿಂದ ಹಣ ಸರ್ಕಾರದ ಖಜಾನೆ ಸೇರುತ್ತದೆಯೇ ಹೊರತು ಜನರ ತಲೆಯಲ್ಲಿರುವ ಬುದ್ಧಿ ಬದಲಾಗುತ್ತಿಲ್ಲ. ಅಷ್ಟರಲ್ಲಿ ವಿಕ್ರಮ್ ಕಣ್ಣಿಗೆ ಆ ದೃಶ್ಯ ಬಿತ್ತು. ರಸ್ತೆಯ ಆ ಕಡೆ ಮರದ ಕೆಳಗೆ ಸೈಕಲ್ ಮೇಲೆ ಐದಾರು ಹೆಲ್ಮೆಟ್‌ಗಳನ್ನು ನೇತುಹಾಕಿಕೊಂಡು ಒಬ್ಬ ವೃದ್ಧ ಕುಳಿತಿದ್ದ. ಅವನೇ ಮುತ್ತಪ್ಪ ಅವನ ಮುಖ ಬಿರುಬಿಸಿಲಿಗೆ ಕಪ್ಪಗಾಗಿತ್ತು, ಕಣ್ಣಲ್ಲಿ ಹತಾಶೆ