ವೈರಸ್ ಹರಡುತ್ತಿದೆ

ವೈರಸ್ ಹರಡುತ್ತಿದೆ   ಒಂದು ಹೈ-ಪ್ರೊಫೈಲ್ ಮೆಡಿಕಲ್ ಹಗರಣದಲ್ಲಿ ಸಿಕ್ಕಿಬಿದ್ದಿದ್ದ ಜಗತ್ಪ್ರಸಿದ್ಧ ಹಿಪ್ನೋಟಿಸ್ಟ್ ಡಾ. ವಿಕ್ರಮ, ಕಾನೂನಿನ ಕಣ್ಣಿಗೆ ಮಣ್ಣೆರಚಿ ನಗರದ ಹೊರವಲಯದ ಆ ಪಾಳುಬಿದ್ದ ಹಳೇ ಸಿಮೆಂಟ್ ಫ್ಯಾಕ್ಟರಿಯ ಕತ್ತಲೆ ಕೋಣೆಯಲ್ಲಿ ಅಡಗಿ ಕುಳಿತಿದ್ದ. ಹೊರಗೆ ಗಾಢವಾದ ಕತ್ತಲೆ ಆವರಿಸಿತ್ತು, ಫ್ಯಾಕ್ಟರಿಯ ತಗಡಿನ ಸೀಲಿಂಗ್ ಮೇಲೆ ಮಳೆಯ ಹನಿಗಳು ಬೀಳುತ್ತಿದ್ದ ಶಬ್ದ ಇಡೀ ವಾತಾವರಣದಲ್ಲಿ ಒಂದು ರೀತಿಯ ನಿಗೂಢ ನಿಶ್ಯಬ್ದವನ್ನು ಸೃಷ್ಟಿಸಿತ್ತು. ಸುತ್ತಲೂ ಯಾವುದೇ ಮೊಬೈಲ್ ನೆಟ್‌ವರ್ಕ್ ಇಲ್ಲದ ಆ ನಿರ್ಜನ ಜಾಗದಲ್ಲಿ ವಿಕ್ರಮನ ಬಳಿ ಇದ್ದದ್ದು ಕೇವಲ ಒಂದು ಹಳೇ ಸ್ಯಾಟಲೈಟ್ ಫೋನ್ ಮತ್ತು ಇಂಟರ್ನೆಟ್ ಸಂಪರ್ಕವಿಲ್ಲದ ತೈವಾನ್ ಮೇಡ್ ಹ್ಯಾಂಡ್ ಹೆಲ್ಡ್ ಟ್ಯಾಬ್ಲೆಟ್ ಮಾತ್ರ. ಯಾರ ಭಯದಿಂದ ಅವನು ನಗರ ಬಿಟ್ಟು ಓಡಿಬಂದಿದ್ದನೋ, ಅದೇ ಭಯ ಇಂದು ಅವನ ಕಣ್ಣೆದುರು ಬೇರೆ ರೂಪದಲ್ಲಿ ನಿಂತಿತ್ತು.   ಹತ್ತು ಇಂಚಿನ ಆ ಟ್ಯಾಬ್ಲೆಟ್ ಸ್ಕ್ರೀನ್ ಮೇಲೆ ಹಳದಿ ಬಣ್ಣದ ಮರಳುಗಡಿಯಾರದಂತಹ ಲೋಗೋ ನೆಟ್‌ವರ್ಕ್ ಇಲ್ಲದಿದ್ದರೂ ತಾನಾಗಿಯೇ ತಿರುಗುತ್ತಿತ್ತು. ಇಂಟರ್ನೆಟ್ ಸಂಪರ್ಕವೇ ಇಲ್ಲದ