ಬ್ರಹ್ಮಾಂಡದ ಲಯದಲ್ಲಿ ಅಂತಿಮ 16 ಕಲೆಗಳ ಪಯಣವು ಈಗ ಹದಿನೈದನೇ ಹಂತವನ್ನು ತಲುಪಿದ್ದು ಅಧ್ಯಾಯದಲ್ಲಿ 'ಸೃಷ್ಟಿಯ ಮಹಾಕಲೆ'ಯನ್ನು ಸಾಧಿಸಿದ ಆದರ್ಶ್ ಮತ್ತು ರಶ್ಮಿ, ಈಗ ಪ್ರವೇಶಿಸುತ್ತಿರುವುದು, ಲಯದ ಆನಂದದ ಕಲೆಯೇ - ಹದಿನೈದನೇ ಕಲೆಇದು ಸೃಷ್ಟಿಕರ್ತನ ಪಯಣದ ಅಂತಿಮ ಹಂತದ ಮೊದಲನೆಯ ಭಾಗ. ಸೃಷ್ಟಿಸಿದ ಪ್ರತಿಯೊಂದೂ ಮರಳಿ ಮೂಲಕ್ಕೆ ಸೇರುವ, ವಿನಾಶದಲ್ಲಿ ಆನಂದವನ್ನು ಕಾಣುವ ಅತೀಂದ್ರಿಯ ಹಂತವಿದು. ಸೃಷ್ಟಿಯ ಮಹಾಕಲೆಯನ್ನು ಪೂರ್ಣಗೊಳಿಸಿದ ಆದರ್ಶ್ಗೆ ಈಗ ಎಲ್ಲವೂ ತನ್ನದೇ ಪ್ರತಿಬಿಂಬವಾಗಿ ಕಾಣಿಸುತ್ತಿತ್ತು. ಆದರೆ, ಸೃಷ್ಟಿಯಾದದ್ದೆಲ್ಲವೂ ಲಯವಾಗದಿದ್ದರೆ ಅದು ಪೂರ್ಣವಾಗುವುದಿಲ್ಲ. ಈಗ ಅವರು ಕೈಲಾಸದ ಶಿಖರದ ಅಂತಿಮ ದ್ವಾರದ ಮುಂದೆ ನಿಂತಿದ್ದಾರೆ. ಇದು ಲಯದ ದ್ವಾರ'. ಈ ದ್ವಾರವನ್ನು ದಾಟಿದರೆ, ಅವರ ಸೃಷ್ಟಿಸಿದ ಲೋಕಗಳು, ಅವರ ಪಾತ್ರಗಳು, ಅಶ್ವತ್ಥಾಮನ ಶಾಪದ ನೆನಪುಗಳು, ಎಲ್ಲವೂ ಬ್ರಹ್ಮಾಂಡದ ಮಹಾ ಸಾಗರದಲ್ಲಿ ವಿಲೀನವಾಗುತ್ತವೆ. ಇದು ನಾಶವಲ್ಲ, ಇದು 'ಪೂರ್ಣತೆ'.ಆದರ್ಶ್, ನೋಡು ನಾವು ಸೃಷ್ಟಿಸಿದ ಆ ದಿವ್ಯ ಲೋಕಗಳು ಈಗ ಅಗ್ನಿಯಾಗಿ ಬದಲಾಗಿ ನಮ್ಮತ್ತ ಮರಳುತ್ತಿವೆ. ಇದು ಭಯಾನಕವಲ್ಲ, ಇದು ಒಂದು