ಕಥೆ ಶುರುವಾಗುವುದು ಸಂದೀಪ್ ತನ್ನ ರೂಮಿನಲ್ಲಿ ಕುಳಿತು ಕಥೆ ಬರೆಯುವುದರಿಂದ ಅಲ್ಲ, ಬದಲಿಗೆ ಅವನು ಈಗಾಗಲೇ ಸತ್ತು ಹೋಗಿ, ತನ್ನದೇ ಶವದ ಮುಂದೆ ನಿಂತಿರುವುದರೊಂದಿಗೆ. ಹೌದು, ಸಂದೀಪ್ ತನ್ನ ರೂಮಿನ ನೆಲದ ಮೇಲೆ ನಿಶ್ಚಲವಾಗಿ ಬಿದ್ದಿದ್ದ ತನ್ನದೇ ಶವವನ್ನು ದಿಟ್ಟಿಸಿ ನೋಡುತ್ತಿದ್ದ. ಅವನ ಶರೀರ ತಣ್ಣಗಾಗಿತ್ತು, ಕಣ್ಣುಗಳು ಅರ್ಧ ತೆರೆದಿದ್ದವು. ಅವನ ನಿಶ್ಚಲ ಕೈಗಳ ಮಧ್ಯೆ ಅವನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿ ಬರೆಯುತ್ತಿದ್ದ ಮ್ಯಾಸಿವ್ ಮಿಸ್ಟರಿ ಕಾದಂಬರಿ 'ಮಾಯಾದ ಡೈರಿ ಇತ್ತು. ರೂಮಿನ ಗಡಿಯಾರದಲ್ಲಿ ಸಮಯ ಸರಿಯಾಗಿ ರಾತ್ರಿ 2.22 ಕ್ಕೆ ನಿಂತುಹೋಗಿತ್ತು.ನಾನು ಬರೆಯುತ್ತಿದ್ದ ಕಥೆಯ ಕೊನೆಯ ಪುಟವನ್ನು ಮುಗಿಸುವ ಮುನ್ನವೇ ನನ್ನ ಉಸಿರು ನಿಂತುಹೋಯಿತೇ? ಇಡೀ ಜಗತ್ತಿಗೆ ನನ್ನ ಕಥೆ ತಲುಪಿಸುವುದು ಹೀಗೆ ಅರ್ಧಕ್ಕೆ ನಿಂತಿತೇ? ಎಂದು ಸಂದೀಪ್ ಆತಂಕದಿಂದ ತನ್ನದೇ ಶವವನ್ನು ಮುಟ್ಟಲು ಹೋದ. ಆದರೆ ಮರುಕ್ಷಣವೇ ಇಡೀ ರೂಮಿನ ನೆಲ ಜ್ವಾಲಾಮುಖಿಯಂತೆ ಬಿರಿದು, ಅವನು ಪಾತಾಳದ ಕತ್ತಲಿಗೆ ಬಿದ್ದಂತೆ ಭಾಸವಾಯಿತು. ಕಿವಿ ಫಟ್ ಎನ್ನುವಂತಹ ಶಬ್ದದೊಂದಿಗೆ ಕಣ್ಣು ಮುಚ್ಚಿ