ಬಯಸದೆ ಬಂದವಳು... - 23

  • 168

ಅಧ್ಯಾಯ 34 : ವಿಧಿಯ ಆಟಮೋಹನ್ ರಾವ್ ಅವರ ಕುಟುಂಬವು ಆನಂದದಲ್ಲಿ ತೇಲಾಡುತ್ತಿತ್ತು. ಆ ಕ್ಷಣದಲ್ಲಿ ಮೋಹನ್ ರಾವ್ ಆಶ್ಚರ್ಯದಿಂದ ಶೇಖರ್‌ರನ್ನು ನೋಡಿದರು.“ಶೇಖರ್, ನೀವು ಹೇಳ್ತಿರೋದು ನಿಜಾನಾ?.. ನನಗಂತೂ ಇದನ್ನ ನಂಬೋದಕ್ಕೆ ಆಗ್ತಿಲ್ಲಾ.”ಶೇಖರ್ ಮುಗುಳ್ನಗುತ್ತಾ ಹೇಳಿದರು.“ನಾನು ನಿಜಾನೇ ಹೇಳ್ತಿರೋದು.”ಅಂತ ಹೇಳಿ ಸುಮತಿಯ ಕಡೆ ನೋಡಿದರು. ಆದರೆ ಸುಮತಿಯ ಮುಖದಲ್ಲಿ ಸ್ವಲ್ಪ ದುಗುಡ ಮತ್ತು ಆತಂಕ ಸ್ಪಷ್ಟವಾಗಿ ಕಾಣುತ್ತಿತ್ತು. ಅವಳ ಮನಸ್ಥಿತಿಯನ್ನು ಅರ್ಥಮಾಡಿಕೊಂಡ ಶೇಖರ್ ನಿಧಾನವಾಗಿ ಹೇಳಿದರು,“ಸುಮತಿ, ನೀನು ಯೋಚನೆ ಮಾಡೋ ಅವಶ್ಯಕತೆನೇ ಇಲ್ಲಾ. ರೋಹನ್‌ನಂತ ಹುಡುಗ ಹುಡುಕಿದರೂ ಮತ್ತೆ ಸಿಗೋಲ್ಲ.”ಸರಳಾ ಸುಮತಿಯ ಕೈ ಹಿಡಿದು ಮೃದುವಾಗಿ ಮಾತನಾಡಿದರು.“ಸುಮತಿ, ಕಂಡಿತಾ ನಾವು ನಿಮಗೆ ಬಲವಂತ ಮಾಡೋಲ್ಲ. ನಿಮಗೆ ಇಷ್ಟ ಇದ್ರೆ ಮಾತ್ರ ಈ ಸಂಬಂಧ ಮುಂದುವರೆಸ್ತಿವಿ. ಇಲ್ಲ ಅಂದ್ರೆ...”“ಛೇ!.. ಛೇ!.. ಹಾಗೇನೂ ಇಲ್ಲಾ. ಸಡನ್ ಆಗಿ ಡಿಸಿಷನ್ ತಗೊಂಡ್ರೆ ಏನು ಹೇಳ್ಬೇಕು ಅಂತಾ ಗೊತ್ತಾಗ್ತಿಲ್ಲ,” ಎಂದು ಸುಮತಿ ಉತ್ತರಿಸಿದರು.ಲಕ್ಕಿ ಪ್ರೀತಿಯಿಂದ ಹೇಳಿದರು,“ಮಗಳೇ, ನೀನೇನು ತಲೆ ಕೆಡಸ್ಗೋಬೇಡ. ನನ್ನ ಮೊಮ್ಮಗಳು ಸಹ ಒಳ್ಳೆ ಮನೆಗೆ