BP

  • 297
  • 93

BPಬೆಂಗಳೂರಿನ ಆ ಅಂಡರ್‌ಗ್ರೌಂಡ್ ಮೆಟ್ರೋ ಸ್ಟೇಷನ್‌ನ ಕತ್ತಲೆಯ ಮೂಲೆಯಲ್ಲಿ ಸಿದ್ಧಾರ್ಥ್ ಕುಳಿತಿದ್ದಾಗ, ಅವನ ಸುತ್ತ ಸಾವಿರಾರು ಜನರ ಓಡಾಟವಿತ್ತು. ಮೆಟ್ರೋ ರೈಲುಗಳು ಹಳಿಗಳ ಮೇಲೆ ಅಬ್ಬರಿಸುತ್ತಾ ಬಂದು ಹೋಗುತ್ತಿದ್ದವು. ಆದರೆ, ಆ ಸದ್ದಿನ ನಡುವೆಯೂ ಸಿದ್ಧಾರ್ಥ್‌ನ ಗಮನ ಮಾತ್ರ ತನ್ನ ಬಲಗೈ ಬೆರಳುಗಳ ಮೇಲಿತ್ತು. ಅವನ ಬೆರಳುಗಳು ಎಡಗೈ ಮಣಿಕಟ್ಟಿನಲ್ಲಿದ್ದ ಆ ಕಪ್ಪು ಸ್ಮಾರ್ಟ್ ವಾಚ್‌ನ ಸ್ಕ್ರೀನ್ ಅನ್ನು ಪದೇ ಪದೇ ಒತ್ತುತ್ತಿದ್ದವು. ಸ್ಕ್ರೀನ್ ಮೇಲೆ ಕೆಂಪು ಅಕ್ಷರಗಳಲ್ಲಿ ಸಂಖ್ಯೆಗಳು ಅಪಾಯದ ಮುನ್ಸೂಚನೆಯಂತೆ ಮಿನುಗುತ್ತಿದ್ದವು. 140, 165, 180.ಅವನ ಹಣೆಯ ಮೇಲೆ ಬೆವರಿನ ಹನಿಗಳು ಜಿನುಗಿ ಕಣ್ಣಂಚಿಗೆ ಇಳಿಯುತ್ತಿದ್ದವು. ಅವನ ಮುಖದಲ್ಲಿ ತೀವ್ರವಾದ ಆತಂಕ, ಒಂದು ರೀತಿಯ ನಿಗೂಢ ನಿಶ್ಯಕ್ತಿ ಎದ್ದು ಕಾಣಿಸುತ್ತಿತ್ತು. ದಿನದಿಂದ ದಿನಕ್ಕೆ ಈ BP ಅವನನ್ನು ಒಳಗೊಳಗೇ ಕರಗಿಸುತ್ತಿತ್ತು. ತನು ಮನವನ್ನೆಲ್ಲಾ ಆವರಿಸಿಕೊಳ್ಳುತ್ತಿದ್ದ ಆ ತಲ್ಲಣವನ್ನು ನಾರ್ಮಲ್ ತರಲು ಅವನು ಮಾಡದ ಪ್ರಯತ್ನಗಳೇ ಇರಲಿಲ್ಲ. ಆದರೆ, ಎಲ್ಲವೂ ವ್ಯರ್ಥವಾಗಿದ್ದವು.ಸಿದ್ಧಾರ್ಥ್, ನಿಮಗಿನ್ನೂ ವಯಸ್ಸು ಮೂವತ್ತೂ ಆಗಿಲ್ಲ. ಈ ಐಟಿ