ಬಯಸದೆ ಬಂದವಳು... - 24

  • 111

ಅಧ್ಯಾಯ:24 ಗೆದ್ದ ಪ್ರೀತಿ.. ಶುರುವಾದ ಹೊಸ ಆಟಎಲ್ಲರ ಊಟ ಮುಗಿದ ತಕ್ಷಣ ಸ್ವಲ್ಪ ಹೊತ್ತು ಕಾಲ ಕಳೆದ ನಂತರ ಮೋಹನ್ ರಾವ್ ಫ್ಯಾಮಿಲಿ ಹೊರಡಲು ಸಿದ್ಧರಾಗುತ್ತಾರೆ.ಮೋಹನ್ ರಾವ್ ಶಶಿಧರ್ ಅವರ ಕಡೆಗೆ ನೋಡುತ್ತಾ,“ಶಶಿಧರ್ ಅವರೇ ಅದಷ್ಟು ಬೇಗ ರೋಹನ್ ಹಾಗೂ ಜಾನು ಮದುವೆ ಮಾಡೋಣ ನಂತರ ನಿಮ್ಮ ಸೂರ್ಯ ಹಾಗೂ ಅಂಬ್ರುತಾ ಮದುವೆ ಏನಂತೀರಾ” ಎಂದು ಕೇಳಿದರು.ಶೇಖರ್ ಸ್ವಲ್ಪ ಸಂಕೋಚದಿಂದ,“ಕ್ಷಮಿಸಿ.. ನಮ್ಮ ಜಾನು ಎಜುಕೇಷನ್ ಕಂಪ್ಲೀಟ್ ಆಗೋಕೆ ಇನ್ನೂ ಸ್ವಲ್ಪ ಸಮಯ ಬೇಕು.. ಅದಕ್ಕೆ ನೀವು, ಸ್ವಲ್ಪ ಸಮಯ ಕೊಟ್ಟರೆ ಒಳ್ಳೇದು ಅವಳು ಇಂಡಿಯಾ ಗೆ ಬಂದ ತಕ್ಷಣ ಮುಹೂರ್ತ ಫಿಕ್ಸ್ ಮಾಡೋಣ ಏನಂತೀರಾ”?ಎಂದು ಹೇಳಿದರು.ಅದಕ್ಕೆ ಮೋಹನ್ ರಾವ್ ಹಾಗೂ ಅವರ ಫ್ಯಾಮಿಲಿ ಸಮ್ಮತಿಯನ್ನು ನೀಡಿದರು.ಲಕ್ಕಿ ಅಜ್ಜಿ ಕೂಡ,“ಯಾವ್ದಕ್ಕೂ ನಮ್ಮ ಮನೆ ಪುರೋಹಿತರಿಗೆ ಕೇಳಿ.. ನಾಲ್ವರ ಜಾತಕವನ್ನು ತೋರಿಸಿ ನಂತರ ಒಳ್ಳೆ ಮುಹೂರ್ತ ಫಿಕ್ಸ್ ಮಾಡಿದರಾಯಿತು” ಎಂದು ಹೇಳಿದರು.ಮನೆಯ ತುಂಬೆಲ್ಲ ಹಬ್ಬದ ವಾತಾವರಣ.ಸಂಭ್ರಮ, ನಗು, ನಿರೀಕ್ಷೆ — ಎಲ್ಲವೂ ಗಾಳಿಯಲ್ಲಿ ತೇಲಿದವು.ಅಷ್ಟರಲ್ಲಿ