ಆವತ್ತು ಮಧ್ಯರಾತ್ರಿ 2:00 ಗಂಟೆಗೆ, ಆಸ್ಪತ್ರೆಯಲ್ಲಿ ಹೆರಿಗೆ ನೋವಿನಿಂದ ನರಳುತ್ತಿರುವ ಒಬ್ಬ ಮಹಿಳೆಯ ಶಬ್ದ ಹೊರಗಡೆ ನಿಂತಿದ್ದ ಎಲ್ಲರಿಗೂ ಕೇಳಿಸುತ್ತಿತ್ತು. ಯಾವಾಗ ಮಗುವಿನ ಅಳುವಿನ ಶಬ್ದ ಹೊರಗಡೆ ಕೇಳಿಸಿತು, ಎಲ್ಲರಿಗೂ ತುಂಬಾ ಖುಷಿಯಾಯಿತು. ಸ್ವಲ್ಪ ಸಮಯ ಕಳೆದ ನಂತರ ಡಾಕ್ಟರ್ ಹೊರಗಡೆ ಬಂದು, ಮಗು ಹಾಗೂ ತಾಯಿ ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಹೇಳಿದರು. ಆಗ ಎಲ್ಲರೂ ನಿರಾಳವಾದ ಉಸಿರನ್ನು ಬಿಟ್ಟರು. ಎಲ್ಲರೂ ಕುತೂಹಲದಿಂದ ಮಗುವಿನ ಬಗ್ಗೆ ಕೇಳಿದರು, ಈ ವಿಷಯದಲ್ಲಿ ಎಲ್ಲರಿಗೂ ಕುತೂಹಲ ಇದ್ದೇ ಇರುತ್ತದೆ. ಡಾಕ್ಟರ್ “ನಿಮ್ಮ ಮನೆಗೆ ಹೆಣ್ಣುಮಗು ಬಂದಿದೆ” ಎಂದು ಹೇಳಿದರು, ಅದನ್ನು ಕೇಳಿ ಎಲ್ಲರಿಗೂ ತುಂಬಾ ಸಂತೋಷವಾಯಿತು. ಯಾಕೆಂದರೆ ಆ ತಾಯಿಗೆ ಮೊದಲೇ ಒಂದು ಗಂಡು ಮಗು ಇತ್ತು, ಹೀಗಾಗಿ “ಮನೆಗೆ ಮಹಾಲಕ್ಷ್ಮಿ ಬಂದಳು” ಎಂದು ಎಲ್ಲರೂ ತುಂಬಾ ಖುಷಿಪಟ್ಟರು. ಇಲ್ಲಿಂದಲೇ ಆ ಮುಗ್ಧ ಕಂದಮ್ಮನಾದ ನನ್ನ ಕಥಾನಾಯಕಿಯ ಕಥೆ ಆರಂಭವಾಗುತ್ತದೆ.
Full Novel
ಅವಳ ಹೋರಾಟ - 1
ಆವತ್ತು ಮಧ್ಯರಾತ್ರಿ 2:00 ಗಂಟೆಗೆ, ಆಸ್ಪತ್ರೆಯಲ್ಲಿ ಹೆರಿಗೆ ನೋವಿನಿಂದ ನರಳುತ್ತಿರುವ ಒಬ್ಬ ಮಹಿಳೆಯ ಶಬ್ದ ಹೊರಗಡೆ ನಿಂತಿದ್ದ ಎಲ್ಲರಿಗೂ ಕೇಳಿಸುತ್ತಿತ್ತು. ಯಾವಾಗ ಮಗುವಿನ ಅಳುವಿನ ಶಬ್ದ ಕೇಳಿಸಿತು, ಎಲ್ಲರಿಗೂ ತುಂಬಾ ಖುಷಿಯಾಯಿತು. ಸ್ವಲ್ಪ ಸಮಯ ಕಳೆದ ನಂತರ ಡಾಕ್ಟರ್ ಹೊರಗಡೆ ಬಂದು, ಮಗು ಹಾಗೂ ತಾಯಿ ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಹೇಳಿದರು. ಆಗ ಎಲ್ಲರೂ ನಿರಾಳವಾದ ಉಸಿರನ್ನು ಬಿಟ್ಟರು. ಎಲ್ಲರೂ ಕುತೂಹಲದಿಂದ ಮಗುವಿನ ಬಗ್ಗೆ ಕೇಳಿದರು, ಈ ವಿಷಯದಲ್ಲಿ ಎಲ್ಲರಿಗೂ ಕುತೂಹಲ ಇದ್ದೇ ಇರುತ್ತದೆ. ಡಾಕ್ಟರ್ “ನಿಮ್ಮ ಮನೆಗೆ ಹೆಣ್ಣುಮಗು ಬಂದಿದೆ” ಎಂದು ಹೇಳಿದರು, ಅದನ್ನು ಕೇಳಿ ಎಲ್ಲರಿಗೂ ತುಂಬಾ ಸಂತೋಷವಾಯಿತು. ಯಾಕೆಂದರೆ ಆ ತಾಯಿಗೆ ಮೊದಲೇ ಒಂದು ಗಂಡು ಮಗು ಇತ್ತು, ಹೀಗಾಗಿ “ಮನೆಗೆ ಮಹಾಲಕ್ಷ್ಮಿ ಬಂದಳು” ಎಂದು ಎಲ್ಲರೂ ತುಂಬಾ ಖುಷಿಪಟ್ಟರು. ಇಲ್ಲಿಂದಲೇ ಆ ಮುಗ್ಧ ಕಂದಮ್ಮನಾದ ನನ್ನ ಕಥಾನಾಯಕಿಯ ಕಥೆ ಆರಂಭವಾಗುತ್ತದೆ. ಮನೆಯಲ್ಲಿ ಎಲ್ಲರೂ ತುಂಬಾ ಖುಷಿಯಾಗಿದ್ದರು, ಯಾಕೆಂದರೆ ಇವತ್ತು ತಾಯಿ ಮತ್ತು ಮಗಳು ಇಬ್ಬರೂ ...Read More
ಅವಳ ಹೋರಾಟ - 2
ಆ ಕಡೆ ನಾರಾಯಣ ಹೊರಗಡೆ ಕೆಲಸಕ್ಕೆ ಅಂತ ಹೋದ. ಈ ಕಡೆ ಲಕ್ಷ್ಮಿ ಮನೆ ಕೆಲಸ ಶುರು ಮಾಡಿದ್ದಳು. ರಾತ್ರಿ ಆಯಿತು, ಎಲ್ಲರೂ ಮಲಗಿದರು, ಆದರೆ ಮಾತ್ರ ನಾರಾಯಣ ಬರುವುದನ್ನು ಕಾಯ್ತಾ ಕುಳಿತಿದ್ದಳು. ಬಾಗಿಲು ಬಡಿಯೋ ಶಬ್ದ ಕೇಳಿಬಂತು. ಲಕ್ಷ್ಮಿ ಎದ್ದು ಬಾಗಿಲುತೆಗೆದಳು. ನಾರಾಯಣ ನಿಂತಿದ್ದ. ಅವನು ತುಂಬ ಸುಸ್ತಾಗಿರುವಂತೆ ಕಾಣಿಸುತ್ತಿದ್ದ. ...Read More
ಅವಳ ಹೋರಾಟ - 3
ರಾತ್ರಿಯಾಗಿತ್ತು. ಎಲ್ಲರೂ ನಿದ್ರೆ ಮಾಡುತ್ತಿದ್ದರು, ಆದರೆ ಎಂದಿನಂತೆ ಲಕ್ಷ್ಮಿ ಕಾಯ್ತಾ ಕುಳಿತಿದ್ದಳು. ಬಾಗಿಲು ಬಡಿಯೋ ಶಬ್ದ ಆಯಿತು. ಲಕ್ಷ್ಮಿ ಬಾಗಿಲು ತೆಗೆಯಿತು. ಆದರೆ ಅವಳಿಗೆ ಆಶ್ಚರ್ಯ — ನಾರಾಯಣ ತುಂಬ ಖುಷಿಯಾಗಿದ್ದ. ನಾಮಕರಣಕ್ಕೆ ಬೇಕಾಗಿರುವ ಎಲ್ಲಾ ವಸ್ತುಗಳನ್ನು ಜೊತೆಗೆ ತಗೊಂಡು ಬಂದಿದ್ದ. ನಾರಾಯಣ ಖುಷಿಯಾಗಿರುವುದನ್ನು ನೋಡಿ ಲಕ್ಷ್ಮಿಗೂ ತುಂಬ ಖುಷಿ ಆಯಿತು. ...Read More
ಅವಳ ಹೋರಾಟ - 4
ನಾರಾಯಣ ಒಮ್ಮಿಂದೊಮ್ಮೆಲೆ ಬಂದು ರಾಘವೇಂದ್ರನ ಕೈಯಲ್ಲಿದ್ದ ಲೋಟವನ್ನು ಎಸೆದಿಬಿಟ್ಟ, ಎಲ್ಲರೂ ನಾರಾಯಣನ ಕಡೆ ನೋಡಿದರು. ಲಕ್ಷ್ಮಿ ಗಾಜಿನ ಶಬ್ದ ಕೇಳಿ ಮಗು ಮಲಗಿದ್ದಾಳೋ ಇಲ್ಲವೋ ಅಂತ ಹೊರಗಡೆ ಬಂದಳು. ಶಿವರಾಜ್ : ಇದ್ದಕ್ಕಿದ್ದಂತೆ ನಿನಗೆ ಏನಾಯಿತು? (ಅಂತ ಕೋಪದಿಂದ ಕೇಳಿದ). ನಾರಾಯಣ : ನಾನು ನಿಮೆಲ್ಲರಿಗೆ ಮೊದಲು ಎಚ್ಚರಿಕೆ ಕೊಟ್ಟಿದ್ದೆ, ಮರೆತೋದೆರಾ? ಸುಲೋಚನಾ : ಈಗ ಯಾರಿಗೆ ಏನಾಯಿತು ಅಂತ ಇಷ್ಟೊಂದು ಮಾತಾಡ್ತಿದ್ದೀಯಾ? ನಾರಾಯಣ : ರಾಘವೇಂದ್ರ, ನಿನ್ನ ಪಾಲಿನ ಹಾಲು ಖಾಲಿ ಆಗಿದೆಯಾ ಅಥವಾ ಇನ್ನೂ ಇದೆಯಾ? ರಾಘವೇಂದ್ರ : ಇನ್ನೂ ಇದೆ ಅಪ್ಪಾ, ತಗೊಂಡು ಬರಲಾ? ನಾರಾಯಣ : ತಗೊಂಡು ಬಾ. (ಆಗ ರಾಘವೇಂದ್ರ ತನ್ನ ಪಾಲಿನ ಉಳಿದ ಹಾಲು ತರೋಕೆ ಓಡಿದ. ನಂತರ ನಾರಾಯಣ ಮುಂದುವರಿದು) ಪ್ರಸಾದ್, ರಾಜಾ ನೀವಿಬ್ಬರು ನಿಮ್ಮ ಪಾಲಿನ ಹಾಲು ತಗೊಂಡು ಬನ್ನಿ (ನಾರಾಯಣನ ಮಾತಿಗೆ ಅವರೆಿಬ್ಬರೂ ಹಾಲು ತರಲು ಓಡಿದರು). ಅವರ ಹಿಂದೆಯೇ ಪದ್ಮ ಕೂಡ ಹೋಗಲು ಎದ್ದು ನಿಂತಳು. ...Read More
ಅವಳ ಹೋರಾಟ - 5
(೧೦ ವರ್ಷಗಳ ಹಿಂದೆ) ಪದ್ಮಾ ಯಾರ ಜೊತೆನೋ ಫೋನ್‌ನಲ್ಲಿ ಮಾತನಾಡುತ್ತ ಹೊರಗಡೆ ಓಡಾಡುತ್ತಿದ್ದಳು, ಪ್ರಸಾದ್ ಮತ್ತು ರಾಜ ಇಬ್ಬರು ಹೊರಗಡೆ ಆಟ ಆಡುತ್ತಿದ್ದರು, ರಾಘವೇಂದ್ರ ಒಳಗಡೆ ಕುಳಿತಿದ್ದ, ಲಕ್ಷ್ಮಿ ದುರ್ಗನನ್ನು ಆಟ ಆಡಿಸುತ್ತ ಕುಳಿತಿದ್ದಳು. ಸುಲೋಚನಾ : ಲಕ್ಷ್ಮಿ ಲಕ್ಷ್ಮಿ.... ಸುಲೋಚನಾಳ ಕೂಗು ಕೇಳಿ ಲಕ್ಷ್ಮಿ ದುರ್ಗನನ್ನು ಅಲ್ಲೇ ಬಿಟ್ಟು ಅಡುಗೆಮನೆಗೆ ಹೋದಳು, ಅಲ್ಲೇ ಆಡುತ್ತಿದ್ದ ದುರ್ಗ ಹಾಗೇ ಹೊರಗಡೆ ಹೋದಳು. ಪದ್ಮಾ ಫೋನ್‌ನಲ್ಲಿ ಮಾತನಾಡುತ್ತ ತುಂಬ ದೂರ ಹೋಗಿಬಿಟ್ಟಿದ್ದಳು, ಎದುರಿಗೆ ಲಾರಿ ಬರುತ್ತಿದ್ದದ್ದು ಅವಳಿಗೆ ಕಾಣಿಸಲಿಲ್ಲ, ಅಷ್ಟು ಮಗ್ಗ್ನವಾಗಿ ಫೋನ್‌ನಲ್ಲಿ ಮಾತನಾಡುತ್ತಿದ್ದಳು. ಆ ಲಾರಿ ಡ್ರೈವರ್ ಕುಡಿದು ಗಾಡಿ ಓಡಿಸುತ್ತಿದ್ದ. ಪದ್ಮಾ ಇನ್ನೇನು ಫೋನ್ ಇಳಿಸಿ ಆ ಕಡೆ ನೋಡೋಷ್ಟರಲ್ಲಿ ಲಾರಿ ಬಂದು ಅವಳಿಗೆ ಜೋರಾಗಿ ಗುದ್ದಿಬಿಟ್ಟಿತು. ಪ್ರಸಾದ್ ಮತ್ತು ರಾಜ ಜೋರಾಗಿ "ಅಮ್ಮ...." ಅಂತ ಕೂಗಿದರು. ಒಂದೇ ಕ್ಷಣದಲ್ಲಿ ಎಲ್ಲ ಮುಗಿದುಹೋಯಿತು, ದುರ್ಗವೂ ಜೋರಾಗಿ ಅಳಲು ಶುರುಮಾಡಿದಳು. ಸುಲೋಚನಾ ಮತ್ತು ಲಕ್ಷ್ಮಿ ಹೊರಗಡೆ ಓಡಿ ಬಂದರು, ಅವರಿಬ್ಬರೂ ...Read More
ಅವಳ ಹೋರಾಟ - 6
(ನಾರಾಯಣನ ಮಾತು ಕೇಳಿ ಲಕ್ಷ್ಮಿ, ರಾಘವೇಂದ್ರ ಮತ್ತು ದುರ್ಗಾ ಬಾಗಿಲತ್ತ ನೋಡಿದರು.) ಶೌರ್ಯ : ಏನಿಲ್ಲ ಅಂಕಲ್, ಇಲ್ಲಿ ಸ್ವಲ್ಪ ಕೆಲಸ ಇತ್ತು ಬಂದಿದ್ದೆ. ಹಾಗೇ ನೋಡ್ಕೊಂಡು ಹೋಗೋಣ ಅಂತ ಬಂದೆ. (ಶೌರ್ಯ ನಾರಾಯಣನ ಸ್ನೇಹಿತನ ಮಗನಾಗಿದ್ದ. ಶೌರ್ಯ ಬಂದಿದ್ದು ಎಲ್ಲರಿಗೂ ತುಂಬ ಖುಷಿ ಆಯ್ತು. ಚಿಕ್ಕವಯಸ್ಸಿನಿಂದಲೇ ರಾಘವೇಂದ್ರ ಮತ್ತು ಶೌರ್ಯ ಒಟ್ಟಿಗೆ ಆಟ ಆಡುತ್ತಿದ್ದರು. ಆದರೆ ದುರ್ಗಾಗೆ ಮೊದಲಿನಿಂದಲೇ ಶೌರ್ಯನನ್ನು ಕಂಡರೆ ಅಷ್ಟೇನೂ ಇಷ್ಟ ಇರಲಿಲ್ಲ.) ದುರ್ಗಾ : ಅಪ್ಪಾ, ನಾನು ಚಿಕ್ಕವಯಸ್ಸಿಂದ ನೋಡ್ತಾ ಇದ್ದೀನಿ, ನೀವು ಯಾಕೆ ಅವನಿಗೆ ಇಷ್ಟು ಸಲುಗೆ ಕೊಡ್ತೀರೀ? ಲಕ್ಷ್ಮಿ : ದುರ್ಗಾ, ಈ ರೀತಿ ಎಲ್ಲ ಮಾತಾಡ್ಬಾರದು. ಅಷ್ಟಕ್ಕೂ ಅವನು ನಿನಗೆ ಏನು ಮಾಡಿದ್ದಾನೆ? ನಾನು ಮೊದಲಿಂದಲೇ ನೋಡ್ತಾ ಇದ್ದೀನಿ, ಅವನು ನಿನ್ನ ಜೊತೆ ಚೆನ್ನಾಗಿ ಮಾತಾಡಿದ್ರೂ ನೀನು ಯಾಕೆ ಇಷ್ಟು ಸೋಕು ತೋರಿಸ್ತೀಯಾ ಅವನಿಗೆ? ಶೌರ್ಯ ತುಂಬ ಒಳ್ಳೆ ಹುಡುಗ. ದೊಡ್ಡವರಂದ್ರೆ ಎಷ್ಟು ಗೌರವ ಇದೆ ಅವನಿಗೆ. ದುರ್ಗಾ : ...Read More
ಅವಳ ಹೋರಾಟ - 7
(ಸಂಜೆ ಆಗಿತ್ತು. ಶೌರ್ಯ ಎಲ್ಲರಿಗಾಗಿ ಕ್ಯಾಬ್ ಬುಕ್ ಮಾಡಿದ್ದ. ಅವನು ಹೋಟೆಲ್ ಮುಂದೆ ನಿಂತಿದ್ದ. ಆಗ ಕ್ಯಾಬ್ ಬಂತು. ಶೌರ್ಯಗೆ ದುರ್ಗಾನ ಬಿಟ್ಟು ಬೇರೆ ಎಲ್ಲರು ಶೌರ್ಯ : ಅಂಕಲ್, ದುರ್ಗಾ ಬರಲಿಲ್ಲವಾ? ನಾರಾಯಣ : ಇಲ್ಲ, ಅವಳಿಗೆ ಸ್ವಲ್ಪ ಕೆಲಸ ಇತ್ತು. ಅವಳು ಸ್ವಲ್ಪ ಹೊತ್ತು ಬಿಟ್ಟು ನಂತರ ಬರ್ತಾಳೆ. ನೀನು ಅವಳಿಗೆ ಲೊಕೇಶನ್ ಮೆಸೇಜ್ ಮಾಡಿಬಿಡು. ಶೌರ್ಯ : ಹೌದಾ ಸರಿ. (ನನಗೆ ಈ ಹುಡುಗಿ ಮೇಲೆ ಯಾವುದೇ ನಂಬಿಕೆ ಇಲ್ಲ. ಏನಾದರೂ ಕಿತಾಪತಿ ಮಾಡೇ ಮಾಡ್ತಾಳೆ ಅಂತ ಅಂದುಕೊಂಡು ಅವಳಿಗೆ ಲೊಕೇಶನ್ ಮೆಸೇಜ್ ಮಾಡಿದ.) ನಾರಾಯಣ : ಹೋಟೆಲ್ ತುಂಬ ಚೆನ್ನಾಗಿದೆ ಶೌರ್ಯ. ಹೌದು, ನಿನ್ನ ಸ್ನೇಹಿತ ಎಲ್ಲಿದ್ದಾನೆ? ಶೌರ್ಯ : ಅವನಿಗೆ ಏನೋ ಕೆಲಸ ಇದೆ ಅಂತ ಈಗಷ್ಟೇ ಹೊರಗಡೆ ಹೋದ. ಬನ್ನಿ ಅಂಕಲ್, ನಾವು ತಿನ್ನೋಕೆ ಶುರು ಮಾಡೋಣ. ಅವನು ನಂತರ ಬರುತ್ತಾನೆ. ಎಲ್ಲರೂ ಕುಳಿತರು. ನಂತರ ಯಾರಿಗೆ ಏನು ಬೇಕು ಅಂತ ...Read More
ಅವಳ ಹೋರಾಟ - 8
ನಾರಾಯಣ ಜೋರಾಗಿ "ದುರ್ಗಾ" ಅಂತ ಕೂಗಿದ, ಏಕೆಂದರೆ ಅಪರಿಚಿತ ಎರಚಿದ್ದು ಲಕ್ಷ್ಮಿಯ ಮೇಲೆ ಬೀಳಬೇಕು ಅನ್ನೋ ಅಷ್ಟರಲ್ಲಿ ದುರ್ಗಾ ಅಡ್ಡ ಬಂದಿದ್ದಳು, ಹಾಗಾಗಿ ಅದು ದುರ್ಗಾಳ ಮೇಲೆ ಬಿದ್ದಿತ್ತು. ಎಲ್ಲರೂ ದುರ್ಗಾಳ ಕೈಗೆ ಏನಾಗಿದೆ ಎಂದು ನೋಡುತ್ತಿದ್ದರು, ಆದರೆ ದುರ್ಗಾ ಆ ವ್ಯಕ್ತಿಯ ಬಗ್ಗೆ ಯೋಚಿಸುತ್ತಿದ್ದಳು. ಅವಳ ಕೈ ತುಂಬಾ ನೋವಾಗುತ್ತಿತ್ತು, ಆ ನೋವಿನಲ್ಲಿ ಅವಳಿಗೆ ಹೆಚ್ಚು ಯೋಚಿಸಲು ಆಗಲಿಲ್ಲ. ನಾರಾಯಣ : ದುರ್ಗಾ ಏನಾಯ್ತು ದುರ್ಗಾ (ಅಂತ ಅಳುತ್ತ ಕೇಳಿದ). ಲಕ್ಷ್ಮಿ : ಯಾರವನು, ಏನು ಎರಚಿ ಹೋದ (ಎಂದು ಕೋಪದಿಂದ ಕೇಳಿದಳು). ದುರ್ಗಾ : ಆಸಿಡ್ (ಎಂದು ರೋಷದಿಂದ ಹೇಳಿದಳು). ಲಕ್ಷ್ಮಿ : ಏನು ಆಸಿಡ್! ದುರ್ಗಾ ನೀನು ಏಕೆ ಅಡ್ಡ ಬಂದೆ (ಎಂದು ಅವಳ ಕೈ ಹಿಡಿದು ಜೋರಾಗಿ ಅಳಲು ಶುರು ಮಾಡಿದಳು). ದುರ್ಗಾ : ಅಮ್ಮ ಈಗ ನನಗೆ ನೋವಾಗುತ್ತಿದೆ, ಇದನ್ನು ನಾನು ಸಹಿಸಿಕೊಳ್ಳುತ್ತೇನೆ. ಆದರೆ ನಿಮಗೆ ಏನಾದರೂ ಆಗಿದ್ದರೆ ನನಗೆ ಸಹಿಸಿಕೊಳ್ಳಲು ಆಗಲ್ಲ. ...Read More
ಅವಳ ಹೋರಾಟ - 9
ದುರ್ಗ ಸ್ವಲ್ಪ ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ತೆಗೆದುಕೊಂಡು ನಂತರ ಅಲ್ಲಿಂದಲೇ ಅಜ್ಜಿ ಮನೆಗೆ ಹೋದಳು. ನಾರಾಯಣ, ಲಕ್ಷ್ಮಿ ಮತ್ತು ರಾಘವೇಂದ್ರ ಮನೆಗೆ ಹೋದರು. ರಾತ್ರಿ ಆಗಿತ್ತು. ಹಾಗೆಯೇ ಯೋಚಿಸುತ್ತಾ ಕುಳಿತಿದ್ದ. ಆಗ ಅಲ್ಲಿಗೆ ರಾಘವೇಂದ್ರ ಮತ್ತು ಲಕ್ಷ್ಮಿ ಬಂದರು. ಲಕ್ಷ್ಮಿ: ಏನಾಯ್ತು? ಆಸ್ಪತ್ರೆಯಿಂದ ಬಂದಾಗಿನಿಂದ ನೀವು ಬೇರೆ ತರ ಕಾಣಿಸುತ್ತಿದ್ದೀರಾ. ಏನಾದರೂ ಯೋಚನೆ ಇದ್ದರೆ ನಮಗೆ ಹೇಳಿ. ಯಾಕೆ ಒಬ್ಬರೇ ಅನುಭವಿಸುತ್ತಿದ್ದೀರಾ? ದುರ್ಗಳನ್ನು ಅಲ್ಲಿಂದಲೇ ಅತ್ತೆ ಮನೆಗೆ ಕಳಿಸಿದ್ದೀರಿ ಯಾಕೆ? ನಾರಾಯಣ : ಹಾಗೇನಿಲ್ಲ ಲಕ್ಷ್ಮಿ, ದುರ್ಗ ಬಗ್ಗೆ ಯೋಚಿಸುತ್ತಿದ್ದೆ ಅಷ್ಟೇ. ಅಕಸ್ಮಾತ್ ಆ ಆಸಿಡ್ ಅವಳ ಮುಖಕ್ಕೆ ಬಿದ್ದಿದ್ದರೆ ಏನಾಗುತ್ತಿತ್ತು? ಲಕ್ಷ್ಮಿ: ಹೌದು, ಎಲ್ಲ ದೇವರ ಆಶೀರ್ವಾದ. ದುರ್ಗೆಗೆ ಹೆಚ್ಚು ಗಾಯ ಏನೂ ಆಗಿಲ್ಲ. ಡಾಕ್ಟರ್ ಕೂಡ ಇದು ಕೆಲ ತಿಂಗಳಲ್ಲಿ ವಾಸಿಯಾಗುತ್ತದೆ ಅಂತ ಹೇಳಿದ್ದಾರೆ. ರಾಘವೇಂದ್ರ : ಅಪ್ಪಾ, ಆಸಿಡ್ ಹಾಕಿದವನ ಬಗ್ಗೆ ಏನಾದರೂ ಮಾಹಿತಿ ಸಿಕ್ಕಿದೆಯಾ? ನಾರಾಯಣ : ಆದಷ್ಟು ಬೇಗ ಎಲ್ಲ ಮಾಹಿತಿ ಸಿಗುತ್ತದೆ. ...Read More
ಅವಳ ಹೋರಾಟ - 10
ಶಿವರಾಜನನ್ನು ನೋಡಿದ ತಕ್ಷಣ ದುರ್ಗಾ ಓಡಿ ಹೋಗಿ ಅವನ ಕಾಲಿಗೆ ನಮಸ್ಕರಿಸಿದಳು. ಶಿವರಾಜ ಅವಳಿಗೆ ಆಶೀರ್ವಾದ ಮಾಡದೆ ಅಲ್ಲಿಂದ ಒಂದು ಹೆಜ್ಜೆ ಹಿಂದೆ ತೆಗೆದುಕೊಂಡ. ಶಿವರಾಜ ಮಾಡಿದ್ದನ್ನು ನೋಡಿ ದುರ್ಗಾಗೆ ತುಂಬ ಬೇಜಾರ್ ಆಯ್ತು, ಆದರೂ ಅದನ್ನು ತೋರಿಸಿಕೊಳ್ಳಲಿಲ್ಲ. ದುರ್ಗಾ : ಹೇಗಿದ್ದೀರಿ ದೊಡ್ಡಪ್ಪ (ಎಂದು ತುಂಬಾ ಕಾಳಜಿಯಿಂದ ಕೇಳಿದಳು). ಶಿವರಾಜ : ನೀನು ಯಾಕೆ ಬಂದೆ ಇಲ್ಲಿಗೆ? ಸುಲೋಚನಾ : ಶಿವರಾಜ, ಯಾಕೆ ಹೀಗೆ ಮಾತಾಡ್ತಿದ್ದೀಯಾ? ಇದು ಅವಳ ಮನೆ, ಅವಳು ಯಾವಾಗ ಬೇಕಾದರೂ ಬರಬಹುದು, ಎಷ್ಟು ದಿನ ಬೇಕಾದರೂ ಇರಬಹುದು. ಶಿವರಾಜ : ಬಂದು ಇನ್ನೂ ಸ್ವಲ್ಪ ಹೊತ್ತಾಗಿದ್ದರೂ ಆಗಲೇ ಅಮ್ಮನ್ನ ನನ್ನ ವಿರುದ್ಧ ಎತ್ತ ಕಟ್ಟಿಿದ್ದೀಯಲ್ಲಾ, ನಿನ್ನನ್ನ ಮೆಚ್ಚಬೇಕು ದುರ್ಗಾ. ದುರ್ಗಾ : ನನಗೆ ಗೊತ್ತು ದೊಡ್ಡಪ್ಪ, ನಿಮಗೆ ನನ್ನ ಮೇಲೆ ತುಂಬಾ ಕೋಪ ಇದೆ ಅಂತ. ಆದರೆ ನಿಮ್ಮ ಕೋಪಕ್ಕೆ ಯಾವ ಅರ್ಥವೂ ಇಲ್ಲ ಅನ್ನೋದು ನಿಮಗೂ ಗೊತ್ತು, ಎಲ್ಲರಿಗೂ ಗೊತ್ತು. ಶಿವರಾಜ : ...Read More
ಅವಳ ಹೋರಾಟ - 11
(ಪ್ರಸಾದ್ ಮತ್ತು ದುರ್ಗಾ ಇಬ್ಬರೂ ಅವರ ಹಳ್ಳಿಗೆ ಹೋದರು, ಅವರ ಊರಿನ ಹೆಸರು ರಾಮಪುರ ಅಂತ) ದುರ್ಗಾ : ಅರೆ ಈ ಊರನ್ನು ನೋಡಿದರೆ ಯಾರೂ ಅನ್ನಲ್ಲ, ಅಲ್ಲ ಅಣ್ಣ ಹಳ್ಳಿ ಅಂದರೆ ಹಸಿರು ಹಸಿರಾಗಿ ಎಷ್ಟು ಚೆನ್ನಾಗಿರುತ್ತೆ, ಆದರೆ ಇದು ಬರಡು ಭೂಮಿ ಹಾಗೆ ಇದೆ, ಸ್ವಲ್ಪವೂ ಹಳ್ಳಿ ಕಳೆನೇ ಇಲ್ಲ. ಪ್ರಸಾದ್ : ಅಜ್ಜ ತೀರಿಕೊಳ್ಳೋ ಮುಂಚೆ ಈ ಊರು ತುಂಬಾ ಚೆನ್ನಾಗಿತ್ತು, ಅಮೇಲೆ ಹಿರಿಯರು ಯಾರೂ ಇಲ್ಲದಿರುವ ಕಾರಣ ಈ ಊರು ಹೀಗಾಗಿದೆ ಅಂತ ಅಜ್ಜಿ ನನಗೆ ಆಗಾಗ ಹೇಳ್ತಾ ಇದ್ದಳು. ಸರಿಯಾಗಿ ಹೇಳ್ದೆ ಕಣಪ್ಪ (ಎಂದು ಹಿಂದಿನಿಂದ ಯಾರೋ ಹೇಳಿದರು, ಆ ಧ್ವನಿ ಕೇಳಿ ಇಬ್ಬರೂ ಹಿಂದೆ ತಿರುಗಿದರು). ದುರ್ಗಾ : ಕ್ಷಮಿಸಿ ನೀವು ಯಾರು ಅಂತ ನಮಗೆ ಗೊತ್ತಾಗಲಿಲ್ಲ. ಭೀಮಪ್ಪ : ನನ್ನ ಹೆಸರು ಭೀಮಪ್ಪ ಅಂತ, ನೀವು ಅನಂದರಾವ್ ಅವರ ಮೊಮ್ಮಕ್ಕಳು ಅಲ್ಲವಾ? ಪ್ರಸಾದ್ : ನಿಮಗೆ ಹೇಗೆ ಗೊತ್ತಾಯ್ತು? ಭೀಮಪ್ಪ ...Read More
ಅವಳ ಹೋರಾಟ - 12
ಬೆಳಿಗ್ಗೆ ಆಯ್ತು, ಶಿವರಾಜ ಈಗಷ್ಟೇ ಕೊಣೆಯಿಂದ ಹೊರಗಡೆ ಬಂದ, ದುರ್ಗಾ ಅಜ್ಜನ ಫೋಟೋ ನೋಡತಾ ಅಲ್ಲಿ ಕುಳಿತಿರುವುದನ್ನು ಅವನು ಗಮನಿಸಿದ. ಅವಳು ಕುರ್ಚಿಗೆ ಆಸರೆಯಾಗಿ ಅಜ್ಜನ ನೋಡುತ್ತಾ ಇದ್ದಳು. ಅವಳ ಕಣ್ಣಿಂದ ನೀರು ಹಾಗೆ ಸುರಿಯುತ್ತಿತ್ತು. ಅದನ್ನು ನೋಡಿ ಶಿವರಾಜಗೆ ತುಂಬನೇ ಸಂಕಟ ಆಯ್ತು. (ನನ್ನಿಂದ ನೀವು ಎಲ್ಲ ಎಷ್ಟು ಕಷ್ಟ ಅನುಭವಿಸಿದ್ದೀರಾ, ದಯವಿಟ್ಟು ನನ್ನನ್ನು ಕ್ಷಮಿಸಿ ಬಿಡು ದುರ್ಗಾ) ಎಂದು ಮನಸಲ್ಲೇ ಅಂದುಕೊಳ್ಳುತ್ತಾ ಅವಳ ಹತ್ತಿರ ಬಂದ. ಶಿವರಾಜ : ದುರ್ಗಾ, ದುರ್ಗಾ.. ದುರ್ಗಾ : (ಅವಳು ಎಚ್ಚೆತ್ತುಕೊಂಡು ಶಿವರಾಜನ್ನು ನೋಡಿದಳು, ಕಣ್ಣೀರು ಒರೆಸಿಕೊಂಡಳು) ಹಾ ದೊಡ್ಡಪ್ಪ, ಏನಾದ್ರು ಕೆಲಸ ಇತ್ತಾ? ಶಿವರಾಜ : ಏನಿಲ್ಲ, ಅಮ್ಮ ತಿಂಡಿಗೆ ಅಂತ ಕರೀತಿದ್ದಾಳೆ ಒಳಗಡೆ ಹೋಗು. ದುರ್ಗಾ : ಹಾ, ನೀವು ಬನ್ನಿ ಒಟ್ಟಿಗೆ ತಿಂಡಿ ಮಾಡೋಣ. ಶಿವರಾಜ : ನಾನು ಈಗಷ್ಟೇ ಎದ್ದೆ, ಸ್ನಾನ ಅದು ಮಾಡಿಕೊಂಡು ಬರುತ್ತೇನೆ, ನೀವೆಲ್ಲ ತಿಂಡಿ ಮಾಡಿ (ಅಂತ ಹೇಳಿ ಅಲ್ಲಿಂದ ಹೊರಟ, ...Read More
ಅವಳ ಹೋರಾಟ - 13
(ನಾರಾಯಣ ಮತ್ತು ಎಲ್ಲರು ಊರಿಗೆ ಬಂದರು, ನಾರಾಯಣ ಹಳ್ಳಿಯ ದಾರಿಯಲ್ಲಿ ಸಾಗುತ್ತಾ, ತನ್ನ ಹಳೆಯ ನೆನಪುಗಳನ್ನು ಮರುಕಳಿಸುತ್ತಾ ಹೋಗುತ್ತಿದ್ದ, ಶೌರ್ಯ ಮತ್ತು ವಿನಿತ್ ಸ್ವಲ್ಪ ಭಯದಲ್ಲೇ ಸಾಗುತ್ತಿದ್ದರು.) ಭೀಮಪ್ಪ : ಅರೆ ನೀವು ಬಂದ್ರಾ (ಎಂದು ಭೀಮಪ್ಪ ಅವರ ಹತ್ತಿರ ಬಂದ). ನಾರಾಯಣ : ಕ್ಷಮಿಸಿ ನೀವು ಯಾರು ಅಂತ ನಮಗೆ ಗೊತ್ತಾಗಲಿಲ್ಲ. ಭೀಮಪ್ಪ : ಹೇಗೆ ಗೊತ್ತಾಗತ್ತೆ, ನೀವು ಯಾರು ನನ್ನನ್ನು ನೋಡೇ ಇಲ್ಲ, ನಾನು ನಿಮ್ಮ ಅಪ್ಪನ ಕಾಲದಿಂದಲೂ ಇಲ್ಲೇ ಇದ್ದೀನಿ, ಬನ್ನಿ ನಿಮ್ಮ ಮಗಳು ನಿಮಗೋಸ್ಕರನೇ ಪಂಚಾಯ್ತಿ ಕಟ್ಟೆ ಹತ್ತಿರ ಕಾಯ್ತಿದ್ದಾಳೆ. ಶೌರ್ಯ ಮತ್ತು ವಿನಿತ್ ಪಂಚಾಯ್ತಿ ಕಟ್ಟೆ ಹೆಸರು ಕೇಳಿ ಒಬ್ಬರಿಗೊಬ್ಬರು ಮುಖ ನೋಡಿಕೊಂಡರು, ಎಲ್ಲರು ಕಟ್ಟೆಯ ಹತ್ತಿರ ಹೋದರು, ಅಲ್ಲಿ ಇಡೀ ಊರಿಗೆ ಊರೆ ಸೇರಿತ್ತು, ಪ್ರಸಾದ್ ಮತ್ತು ರಾಜ ಕೂಡ ಅಲ್ಲೇ ನಿಂತಿದ್ದರು, ಅವರು ನಾರಾಯಣನ ಕುಟುಂಬ ಬರುತ್ತಿರುವುದನ್ನು ನೋಡಿ ಓಡಿ ಹೋಗಿ ನಾರಾಯಣ ಮತ್ತು ಲಕ್ಷ್ಮಿಗೆ ನಮಸ್ಕರಿಸಿದರು, ಅವರಿಬ್ಬರು ಆಶೀರ್ವಾದ ...Read More
ಅವಳ ಹೋರಾಟ - 14
(ಶಿವರಾಜ್ ಕುರ್ಚಿ ಮೇಲೆ ಕೂತಿರೋ ದುರ್ಗನ್ನೇ ನೋಡ್ತಾ ನಿಂತಿದ್ದ, ಅವನಿಗೆ ಅಪ್ಪನ್ನೇ ನೋಡಿದ ಹಾಗೆ ಅನಿಸ್ತು. ಒಂದು ಕಡೆ ಅವನು ಹೇಳಿದ್ದು ನಿಜ ಇತ್ತು, ಹಳ್ಳಿಯಲ್ಲಿ ಹೆಚ್ಚು ಜನ ಹೆಣ್ಣು ಮಕ್ಕಳು ತುಂಬಾ ಸುಕ್ಷ್ಮವಾಗಿ ಇರುತ್ತಾರೆ, ತಾವಾಯ್ತು, ತಮ್ಮ ಕೆಲಸ ಆಯ್ತು ಅಂತ ಇರುತ್ತಾರೆ. ಆದರೆ ದುರ್ಗಾ ಹಾಗಿರಲಿಲ್ಲ, ನಾರಾಯಣ ಅವಳನ್ನು ಹಾಗೆ ಬೆಳೆಸಿದ್ದ. ಅದು ಅಲ್ಲದೆ ಈ ಧೈರ್ಯ, ಸ್ಥೈರ್ಯ ಅನ್ನೋದು ಅವಳಿಗೆ ರಕ್ತದಲ್ಲೇ ಬಂದಿತ್ತು.) ದುರ್ಗಾ : ನಾನು ನಿಮ್ಮನ್ನೆಲ್ಲಾ ಇವತ್ತು ಪಂಚಾಯಿತಿಗೆ ಯಾಕೆ ಕರಿಸಿದ್ದೀನಿ ಅಂತ ನೀವು ಯೋಚನೆ ಮಾಡ್ತಾ ಇರಬೇಕಲ್ಲವಾ ಹೇಳ್ತೀನಿ. ನಮ್ಮ ಅಜ್ಜ ಹೇಗೆ ತೀರಿಕೊಂಡರು, ಅವರನ್ನು ಯಾರು ಕೊಲೆ ಮಾಡಿದ್ದು, ಯಾಕೆ ಮಾಡಿದ್ದು ಎಲ್ಲವೂ ನಿಮಗೆ ಗೊತ್ತೇ ಇದೆ. ರಮೇಶ್ : ಇದು ನಮಗೆಲ್ಲ ಗೊತ್ತಿದೆ ಅಂತ ನಿನಗೂ ಗೊತ್ತು ತಾನೆ. ಮತ್ತೆ ಅದನ್ನೇಕೆ ಹೇಳ್ತಿದ್ದೀಯ? ನಿಮ್ಮ ಅಜ್ಜ ನಮ್ಮ ಅಪ್ಪನಿಗೆ ದ್ರೋಹ ಮಾಡಿದರು, ಅದಕ್ಕೆ ನನ್ನ ಅಪ್ಪ ದ್ವೇಷದಿಂದ ನಿಮ್ಮ ...Read More