ಮಧ್ಯರಾತ್ರಿ ಹೈವೇಯಲ್ಲಿ ಲಿಫ್ಟ್ ಕೇಳಿದ ಆ ಭೂತ…

(0)
  • 66
  • 0
  • 4.7k

ಮಧ್ಯರಾತ್ರಿ 12:30. ರಾಹುಲ್ ಫ್ರೆಂಡ್ಸ್ ಜೊತೆ ಪಾರ್ಟಿ ಮಾಡಿ ಸ್ವಲ್ಪ ಡ್ರಿಂಕ್ಸ್ ಮಾಡಿ ಕಾರ್ ಹತ್ರ ಬರ್ತಾನೆ ಹಾಗೆ ಫ್ರೆಂಡ್ಸ್ಗೆಲ್ಲ ಬೈ ಹೇಳಿ ಕಾರ್ ಸ್ಟಾರ್ಟ್ ಮಾಡ್ತಾನೆ ಅಷ್ಟರಲ್ಲಿ ಇನ್ನೊಬ್ಬ ಫ್ರೆಂಡ್ ಪ್ರಶಾಂತ್ ಮಚ್ಚಾ ನನ್ನ ಮನೆಗೆ ಡ್ರಾಪ್ ಮಾಡೋ ಅಂದಾಗ ಅಲ್ರೆಡಿ ಟೈಮ್ ಆಗಿದೆ ಇವಾಗ ನಿನ್ನ ಬಿಟ್ಟು ನಾನು ಮನೆಗೆ ಹೋಗೋಷ್ಟೋತಿಗೆ ಇನ್ನು ಲೇಟ್ ಆಗುತ್ತೆ ಮಚ್ಚಾ ಮನೆ ಕೂಡ ದೂರ ಇದೆ ಗೊತ್ತಲಾ, ಪ್ರಶಾಂತ್ ಸರಿ ಆಯ್ತು ನಿನ್ ಹೊರಡು ನಾನು ಅನಿಲ್ ಹತ್ರ ಡ್ರಾಪ್ ತಗಂತಿನಿ ಅಂತಾ ಹೇಳಿದಾಗ ರಾಹುಲ್ ಹೋಗ್ಲಿ ಬಾ ನಾನೆ ಡ್ರಾಪ್ ಮಾಡ್ತೀನಿ ಗಾಡಿ ಹತ್ತು , , ಇಬ್ಬರು ಹೊರಡುತ್ತಾರೆ ಪ್ರಶಾಂತನ ಮನೆ ಬರುತ್ತೆ " ಓಯ್ ಗಾಡಿ ನಿಲ್ಸು ಎಲ್ಲಿ ನಿನ್ ಮನೆಗೆ ಕರೆದುಕೊಂಡು ಹೊಕ್ತಿಯಾ " ರಾಹುಲ್ ನಗಾಡುತ್ತ ನೀನು ಬರ್ತೀನಿ ಅಂದ್ರೆ ಇವಾಗಲೇ ಹೋಗೋಣ ಅದಕ್ಕೆ ಪ್ರಶಾಂತ್ ಬೇಡ ಇವತ್ತು ಸ್ವಲ್ಪ ಜಾಸ್ತಿ ಆಗಿದೆ ನೆಸ್ಟ್

1

ಮಧ್ಯರಾತ್ರಿ ಹೈವೇಯಲ್ಲಿ ಲಿಫ್ಟ್ ಕೇಳಿದ ಆ ಭೂತ… - 1

ಮಧ್ಯರಾತ್ರಿ 12:30. ರಾಹುಲ್ ಫ್ರೆಂಡ್ಸ್ ಜೊತೆ ಪಾರ್ಟಿ ಮಾಡಿ ಸ್ವಲ್ಪ ಡ್ರಿಂಕ್ಸ್ ಮಾಡಿ ಕಾರ್ ಹತ್ರ ಬರ್ತಾನೆ ಹಾಗೆ ಫ್ರೆಂಡ್ಸ್ಗೆಲ್ಲ ಬೈ ಹೇಳಿ ಕಾರ್ ಸ್ಟಾರ್ಟ್ ಅಷ್ಟರಲ್ಲಿ ಇನ್ನೊಬ್ಬ ಫ್ರೆಂಡ್ ಪ್ರಶಾಂತ್ ಮಚ್ಚಾ ನನ್ನ ಮನೆಗೆ ಡ್ರಾಪ್ ಮಾಡೋ ಅಂದಾಗ ಅಲ್ರೆಡಿ ಟೈಮ್ ಆಗಿದೆ ಇವಾಗ ನಿನ್ನ ಬಿಟ್ಟು ನಾನು ಮನೆಗೆ ಹೋಗೋಷ್ಟೋತಿಗೆ ಇನ್ನು ಲೇಟ್ ಆಗುತ್ತೆ ಮಚ್ಚಾ ಮನೆ ಕೂಡ ದೂರ ಇದೆ ಗೊತ್ತಲಾ, ಪ್ರಶಾಂತ್ ಸರಿ ಆಯ್ತು ನಿನ್ ಹೊರಡು ನಾನು ಅನಿಲ್ ಹತ್ರ ಡ್ರಾಪ್ ತಗಂತಿನಿ ಅಂತಾ ಹೇಳಿದಾಗ ರಾಹುಲ್ ಹೋಗ್ಲಿ ಬಾ ನಾನೆ ಡ್ರಾಪ್ ಮಾಡ್ತೀನಿ ಗಾಡಿ ಹತ್ತು , , ಇಬ್ಬರು ಹೊರಡುತ್ತಾರೆ ಪ್ರಶಾಂತನ ಮನೆ ಬರುತ್ತೆ ಓಯ್ ಗಾಡಿ ನಿಲ್ಸು ಎಲ್ಲಿ ನಿನ್ ಮನೆಗೆ ಕರೆದುಕೊಂಡು ಹೊಕ್ತಿಯಾ ರಾಹುಲ್ ನಗಾಡುತ್ತ ನೀನು ಬರ್ತೀನಿ ಅಂದ್ರೆ ಇವಾಗಲೇ ಹೋಗೋಣ ಅದಕ್ಕೆ ಪ್ರಶಾಂತ್ ಬೇಡ ಇವತ್ತು ಸ್ವಲ್ಪ ಜಾಸ್ತಿ ಆಗಿದೆ ನೆಸ್ಟ್ ...Read More

2

ಮಧ್ಯರಾತ್ರಿ ಹೈವೇಯಲ್ಲಿ ಲಿಫ್ಟ್ ಕೇಳಿದ ಆ ಭೂತ… - 2

ಹೈವೇ ಮತ್ತೆ ಸಂಪೂರ್ಣ ಕತ್ತಲೆಯಲ್ಲೇ ಮುಳುಗಿತ್ತು.ಕಾರಿನ ಹೆಡ್‌ಲೈಟ್ ಹಠಾತ್ ಆಫ್ ಆದ ಕ್ಷಣದಲ್ಲಿ ರಾಹುಲ್ ಹೃದಯ ಬಡಿತವೇ ನಿಂತಂತೆ ಆಯಿತು. ಅವನು ತಕ್ಷಣ ಬ್ರೇಕ್ ಒತ್ತಿದ. ರಸ್ತೆ ಮಧ್ಯದಲ್ಲೇ ನಿಂತಿತು.ಸುತ್ತಲೂ ಸಂಪೂರ್ಣ ಮೌನ.ಗಾಳಿ ಮಾತ್ರ ಜೋರಾಗಿ ಬೀಸುತ್ತಿತ್ತು. ಕಾಡಿನ ಮರಗಳು ಒದೆಯುವ ಶಬ್ದ ಕೇಳಿಸುತ್ತಿತ್ತು.ರಾಹುಲ್ ಕೈಗಳು ನಡುಗುತ್ತಿವೆ. ಉಸಿರು ವೇಗವಾಗಿ ಬರುತ್ತಿದೆ.ಕೆಲವೇ ಕ್ಷಣಗಳ ಹಿಂದೆ ಅವನು ರಿಯರ್ ವ್ಯೂ ಮಿರರ್‌ನಲ್ಲಿ ಕಂಡ ದೃಶ್ಯ ಅವನ ಮೆದುಳಿನಲ್ಲಿ ಮತ್ತೆ ಮತ್ತೆ ಮೂಡುತ್ತಿತ್ತು.ರಾಹುಲ್ ಮತ್ತೇ ಕಾರನ್ನು ವೇಗವಾಗಿ ಓಡಿಸುತ್ತಿದ್ದ. ಅವನ ಹೃದಯ ಇನ್ನೂ ಜೋರಾಗಿ ಬಡಿತ ಹೊಡೆಯುತ್ತಿತ್ತು. ಕೆಲವೇ ಕ್ಷಣಗಳ ಹಿಂದೆ ರಿಯರ್ ವ್ಯೂ ಮಿರರ್‌ನಲ್ಲಿ ಕಂಡ ಆ ಭಯಾನಕ ದೃಶ್ಯ ಅವನ ಮನಸ್ಸಿನಿಂದ ಹೋಗುತ್ತಿರಲಿಲ್ಲ.ಮನಸಲ್ಲೇ ನೆನಪಿಗೆ ಬರೋ ದೇವರನೆಲ್ಲ ನೆನೆಸಿಕೊಂಡು ಕಾಪಾಡಪ್ಪ ತಂದೆ ನಾನೇನಾದರೂ ತಪ್ಪು ಮಾಡಿದ್ರೆ ನನ್ನ ಕ್ಷಮಿಸಿ ನನ್ನ ಕಾಪಾಡು ಎನ್ನುತ್ತಿದ್ದಂತೆ ಅವನು ಮೆಲ್ಲಗೆ ರಿಯರ್ ವ್ಯೂ ಮಿರರ್ ನ ನೋಡುತ್ತಾನೆಅದೇ ಹೆಂಗಸು… ಕಾರಿನ ಹಿಂಬದಿ ಸೀಟಿನಲ್ಲಿ ಕುಳಿತಿದ್ದಳು.ಅವಳ ...Read More