ಫ್ಯಾಕ್ಟರಿ ಎಲ್ಲಾ ಸುತ್ತಾಡಿಕೊಂಡು ಬಂದ ಮೇಲೆ ಫ್ಯಾಕ್ಟರಿ ಯಿಂದ ಹೊರಗೆ ಬಂದೆ. ನಾನು ಹೊರಗೆ ಬರೋದನ್ನ ನೋಡಿ ಸೆಕ್ಯೂರಿಟಿ ಬಂದು ಸರ್ ಮಾತಾಡಿದ್ದೀನಿ ಇನ್ನೊಂದು ಗಂಟೆ ಅಲ್ಲಿ ಎಲ್ಲರೂ ಇಲ್ಲಿಗೆ ಬರ್ತಾರೆ ಸರ್ ಅಂತ ಹೇಳಿದ. ಸರಿ ವೀರಣ್ಣ ಅಂತ ಹೇಳಿ ಅವರ ಹತ್ತಿರ ಇನ್ನು ಕೆಲವು ವಿಷಯ ಗಳನ್ನ ಮಾತಾಡಿ ಅವರಿಗೆ ಹೇಳಿದೆ ಅವರ ಹತ್ತಿರ ಮಾತಾಡ್ತಾ ಇರೋವಾಗ ಕಾಲ್ ಬಂತು ನಾನು ಕಾಲ್ ಅಲ್ಲಿ ಮಾತಾಡಿ ವೀರಣ್ಣ ಗೆ ಅಣ್ಣ ಈಗ ಕೆಲಸ ಮಾಡೋಕೆ ಕೆಲವು ಜನರು ಬರ್ತಾರೆ ಅವರನ್ನ ಒಳಗೆ ಕಳಿಸಿ ಹಾಗೇ ನಿಮ್ಮವರು ಬರುವ ತನಕ ನೀವು ಇಲ್ಲೇ ಗೇಟ್ ಹತ್ತಿರ ಇರಿ ನಿಮ್ಮವರು ಬಂದಮೇಲೆ ಅವರಿಗೆ ಗೇಟ್ ಅಲ್ಲಿ ಏನ್ ಕೆಲಸ ಮಾಡಬೇಕು ಅಂತ ಹೇಳಿ ಮೂರು ಜನರನ್ನ ಇಲ್ಲೇ ಬಿಟ್ಟು ಮಿಕ್ಕಿದವರ ಜೊತೆಗೆ ನೀವು ಬಂದು ನನ್ನ ಭೇಟಿ ಮಾಡಿ ಅಂತ ಹೇಳ್ದೆ.. ವೀರಣ್ಣ ಸರಿ ಸರ್ ಅಂತ ಹೇಳಿ ಗೇಟ್ ಕಡೆಗೆ ಹೋದ್ರು. ಕೆಲವು ನಿಮಿಷ ಗಳ ನಂತರ ಕೆಲಸ ಮಾಡೋ ಜನರು ಬಂದರು. ಅವರ ಮುಖ್ಯಸ್ಥ ಒಬ್ಬರು ಬಂದು ನನ್ನ ಹತ್ತಿರ ಬಂದು ಅವರ ಪರಿಚಯ ಮಾಡಿಕೊಂಡರು. ನಾನು ಅವರನ್ನ ಕರ್ಕೊಂಡು ಹೋಗಿ ಏನೇನು ಕೆಲಸ ಮಾಡಿಸಬೇಕು ಅಂತ ಎಲ್ಲಾ ವಿಷಯ ವನ್ನ ಹೇಳಿದೆ. ಅವರು ಸರಿ ಸರ್ ಅಂತ ಹೇಳಿ ಅವರ ಕಡೆಯವರಿಗೆ ಕೆಲಸಗಳನ್ನ ಹೇಳೋಕೆ ಹೋದರು. ಕೆಲವು ಹೊತ್ತಿನ ನಂತರ ಎಲ್ಲರೂ ಕೆಲಸಗಳನ್ನ ಮಾಡೋಕೆ ಹೋದರು. ಸ್ವಲ್ಪ ಸಮಯದ ನಂತ್ರ ವೀರಣ್ಣ ಹೇಳಿದ ಜನರು ಬಂದರು ವೀರಣ್ಣ ಅವರ ಪರಿಚಯ ಮಾಡಿಸಿದ. ಅವರಿಗೆ ಏನೇನ್ ಕೆಲಸ ಮಾಡಬೇಕು ಅಂತ ಹೇಳಿ. ವೀರಣ್ಣ ನಿಗೆ ಅವರ ಪ್ರತಿಯೊಂದು ವಿವರ ನಾ ತೆಗೆದುಕೊಳ್ಳೋಕೆ ಹೇಳಿದೆ. ಫ್ಯಾಕ್ಟರಿ ಗೆ ಬೇಕಾದ ವಿದ್ಯುತ್ ಸಂಪರ್ಕ ಇಲ್ಲದೆ ಇದ್ದಾ ಕಾರಣ ಅ ವ್ಯಾಪ್ತಿಯ ವಿದ್ಯುತ್ ಸಂಪರ್ಕ ದ ಅಧಿಕಾರಿಗಳ ಹತ್ತಿರ ಮಾತಾಡಿದೆ. ಅವರು ಬಂದು ನೋಡಿ ಇಲ್ಲಾವನ್ನು ಚೆಕ್ ಮಾಡಿ 2 ದಿನಗಳಲ್ಲಿ ವಿದ್ಯುತ್ ವ್ಯವಸ್ಥೆ ನಾ ಮಾಡಿ ಕೊಡೋದಾಗಿ ಭರವಸೆ ಕೊಟ್ಟರು. ಅಲ್ಲೀತನಕ ಜನರೇಟರ್ ನಾ ಉಪಯೋಗ ಮಾಡೋಣ ಅಂತ ಹೇಳಿ ಅವರಿಗೆ ಕಾಲ್ ಮಾಡಿ ಬರೋಕೆ ಹೇಳಿದೆ. ಸಂಜೆ ಅಷ್ಟೋತ್ತಿಗೆ ಫ್ಯಾಕ್ಟರಿ ಹೊರಗಡೆ ಎಲ್ಲಾ ಕೆಲಸಗಳು ಮುಗಿದು ಹೋದವು. ರಾತ್ರಿ ಕೆಲಸ ಮಾಡೋದಕ್ಕೆ ಬೇರೆ ಯವರಿಗೆ ಕರೆದು ಕೊಂಡು ಬರೋಕೆ ಹೇಳಿದೆ. ಕೆಲಸಗಾರನ್ನ ಕರೆದುಕೊಂಡು ಬಂದ ಮುಖ್ಯಸ್ಥರು ಸರಿ ಅಂತ ಹೇಳಿದ್ರು. ನಾನು ರಾತ್ರಿ ಫ್ಯಾಕ್ಟರಿ ಅಲ್ಲೇ ಉಳಿದು ಬಿಟ್ಟೆ. ಶಿಲ್ಪಾ ಗೆ ಕಾಲ್ ಮಾಡಿ ಮನೆಗೆ ಬರೋದು ಇಲ್ಲಾ ಅಂತ ಹೇಳಿದೆ..
ಮಾರನೇ ದಿನ ಬೆಳಿಗ್ಗೆ ಎದ್ದು ವೀರಣ್ಣ ಗೆ ಹೇಳಿ ಅಲ್ಲೇ ಹತ್ತಿರದಲ್ಲೇ ಇದ್ದಾ ಒಂದು ಹೋಟೆಲ್ ಅಲ್ಲಿ ರೂಮ್ ಬುಕ್ ಮಾಡಿಕೊಂಡು ಫ್ರೆಷ್ ಅಪ್ ಆಗಿ ತಿಂಡಿ ಮಾಡಿಕೊಂಡು ಮತ್ತೆ ಫ್ಯಾಕ್ಟರಿ ಗೆ ಹೋದೆ. ಕಾಡಿನಂತೆ ಇದ್ದಾ ಫ್ಯಾಕ್ಟರಿ ಈಗ ಒಂದು ರೀತಿ ಫ್ಯಾಕ್ಟರಿ ತರ ಕಾಣಿಸ್ತಾ ಇದೆ. ತುಂಬಾ ಹಳೆ ಫ್ಯಾಕ್ಟರಿ ಅದರಿಂದ ಪ್ರತಿಯೊಂದು ಬದಲಾವಣೆ ಮಾಡಬೇಕು ಅನ್ನಿಸಿ ಮೊದಲೇ ಇದಕ್ಕೆಲ್ಲ ಪ್ಲಾನ್ ಮಾಡಿಕೊಂಡು ಇದ್ದೆ. ಕಾಲ್ ಮಾಡಿ ಎಲ್ಲರನ್ನು ಬರೋದಕ್ಕೆ ಹೇಳಿದೆ. ಕೆಲವು ಗಂಟೆಗಳ ನಂತರ ಎಲ್ಲರೂ ಬಂದರು ಅವರು ಅವರ ಕೆಲಸಗಳಲ್ಲಿ ಬ್ಯುಸಿ ಆದ್ರು. 2 ದಿನಗಳಲ್ಲಿ ಹಳೆ ಫ್ಯಾಕ್ಟರಿ ಹೊಸ ಫ್ಯಾಕ್ಟರಿ ಆಯಿತು. ಬೇಕಾದ ವಿದ್ಯುತ್ ಸಂಪರ್ಕ ಸಿಕ್ಕಿತು. ಮೆಕಾನಿಕ್ ಗಳು ಬಂದು ಮಿಷಿನ್ ಗಳನ್ನ ಚೆಕ್ ಮಾಡಿದರು ತುಂಬಾ ಹಳೆ ಮಿಷಿನ್ ಗಳು ಅದರಿಂದ ರೆಡಿ ಮಾಡೋದಕ್ಕೆ ಸ್ವಲ್ಪ ಕಷ್ಟ ನೇ ಆಯ್ತು. ನಂತರ ಆರ್ಡರ್ ಕೊಟ್ಟಿದ್ದ ಹೊಸ ಹೊಸ ಮೆಷಿನ್ ಗಳು ಬಂದವು. 70 % ಭಾಗ ಎಲ್ಲಾ ಕಂಪ್ಯೂಟರ್ ನಿಂದ ಆಟೋಮ್ಯಾಟಿಕ್ ಆಗಿ ವರ್ಕ್ ಮಾಡೋ ಹಾಗೇ ಸೆಟ್ ಮಾಡಿದರು. 15 ದಿನಗಳಲ್ಲಿ ಫ್ಯಾಕ್ಟರಿ ರೆಡಿ ಆಯಿತು. ಈ 15 ದಿನ ಹೋಟೆಲ್ ರೂಮ್ ಫ್ಯಾಕ್ಟರಿ ಅಂತ ನೇ ಇದ್ದು ಬಿಟ್ಟೆ. ಹರಿಣಿ ಅಕ್ಕನಿಗೆ ಗಂಡು ಮಗು ಆಯಿತು ಅಂತ ಶ್ವೇತಾ ಕಾಲ್ ಮಾಡಿ ಹೇಳಿದಳು ತುಂಬಾ ಖುಷಿ ಆಯ್ತು ಫ್ಯಾಕ್ಟರಿ ಕೆಲಸದಲ್ಲಿ ಬ್ಯುಸಿ ಇದ್ದಾ ಕಾರಣ ಬೆಂಗಳೂರಿಗೆ ಹೋಗಿ ನೋಡಿಕೊಂಡು ಬರೋದಕ್ಕೆ ಆಗಲಿಲ್ಲ. ಶಿಲ್ಪಾ ಪ್ರತಿ ದಿನ ಕಾಲ್ ಮಾಡಿ ಯಾವಾಗ ಬರ್ತೀಯ ಇನ್ನು ಎಷ್ಟು ದಿನ ಅಂತ ಕೇಳ್ತಾನೆ ಇದ್ದನು ನಾನು ನಾಳೆ ನಾಡಿದ್ದು ಅಂತ ಹೇಳ್ತಾ ನೇ ಇರ್ತಾ ಇದ್ದೆ. ಫ್ಯಾಕ್ಟರಿ ಅಲ್ಲಿ ಕೆಲಸ ಮಾಡೋದಕ್ಕೆ ಕೆಲಸಗಾರರು ಬೇಕಾದ ಕಾರಣ ಪೇಪರ್ ಅಲ್ಲಿ ಸೋಶಿಯಲ್ ಮೀಡಿಯಾ ದಲ್ಲಿ ಆಡ್ ಕೊಟ್ಟೆ..
ಶಿಲ್ಪಾ ಮನೆಯಲ್ಲಿ. ತಾತ ಮಾತಾಡ್ತಾ ಶಿಲ್ಪಾ ಮಹಿ ಯಾವಾಗ್ ಬರ್ತಾನೆ ಅಂತ ಏನಾದ್ರು ಹೇಳಿದ್ನ ಹೋಗಿ 15 ದಿನ ಆಯ್ತು ಹೇಗಿದ್ದಾನೋ ಏನೋ ಅಂತ ಕೇಳಿದ್ರು. ಶಿಲ್ಪಾ ಇಲ್ಲಾ ತಾತ ಫ್ಯಾಕ್ಟರಿ ಕೆಲಸ ಮೇಲೆ ಹೋಗಿದ್ದೀನಿ ಇವತ್ತು ನಾಳೆ ನಾಡಿದ್ದು ಬರ್ತೀನಿ ಅಂತ ಹೇಳ್ತಾನೆ ಇದ್ದಾನೆ ಅಷ್ಟೇ. ಅದು ಬಿಟ್ರೆ ಬೇರೇನೂ ಹೇಳ್ತಾನೆ ಇಲ್ಲಾ ಸರಿಯಾಗಿ ಮಾತನಾಡಲೇ ಇಲ್ಲಾ ಅಂತ ಹೇಳಿದ್ಲು. ಅಜ್ಜಿ ಏನ್ ಹುಚ್ಚು ಹುಡುಗ ಏನೋ ಮನೆ ಬಿಟ್ಟು ಇಲ್ಲಿಗೆ ಬಂದ ಇಲ್ಲಿಂದ ಹೋಗಿ 15 ದಿನ ಆಯ್ತು ಅರೋಗ್ಯ ಹೇಗೆ ಇದೆಯೋ ಟೈಮ್ ಸರಿಯಾಗಿ ತಿಂತ ಇದ್ದಾನೋ ಇಲ್ವೋ, ಕೆಲಸ ಅಂತ ಇದ್ದು ಬಿಟ್ರೆ ಊಟದ ಕಡೆಗೆ ಯೋಚ್ನೆ ನೇ ಇರೋದಿಲ್ಲ ಅವನಿಗೆ ಅಂತ ಹೇಳ್ತಾ ಸ್ವಲ್ಪ ನೊಂದು ಕೊಂಡರು.
ಫ್ಯಾಕ್ಟರಿ ಗೆ ನೀರು ಬೇಕಾದ ಕಾರಣ ಹಳೆ ಬೋರಿಗೆ ಮತ್ತೆ ರಿ ಬೋರ್ ಮಾಡಿಸಿದೆ, ಪುಣ್ಯ ನೀರು ಸಿಗ್ತು. ತಾತನಿಗೆ ಒಂದು ಥ್ಯಾಂಕ್ಸ್ ಹೇಳಿದೆ. ಅದಕ್ಕೆ ಮೋಟಾರ್ ಇಳಿಸಿ ಫ್ಯಾಕ್ಟರಿ ಗೆ ವಾಟರ್ ಕನೆಕ್ಷನ್ ಕೊಡಿಸಿದೆ. ಇಂಟರ್ವ್ಯೂ ಗೆ ಬಂದರು ಬೆಸ್ಟ್ ಕೊಟ್ಟವರನ್ನ ಕೆಲಸ ಮಾಡೋವರನ್ನ ಸೆಲೆಕ್ಟ್ ಮಾಡಿ ಅವರಿಗೆ ಯಾವ ದಿನ ಬರಬೇಕು ಅಂತ ಹೇಳಿ ಕಳಿಸಿ ಕೊಟ್ಟೆ. ಫ್ಯಾಕ್ಟರಿ ಅಲ್ಲಿ ಹೆಲ್ಪರ್ ಕೆಲಸ ಮಾಡೋದಕ್ಕೂ ಕೆಲಸಗಾರರು ಬೇಕಾದ ಕಾರಣ ಅವರನ್ನು ಕೂಡ ಜಾಯಿನ್ ಮಾಡಿಸಿ ಕೊಂಡೆ. 20 ದಿನಗಳಲ್ಲಿ ಫ್ಯಾಕ್ಟರಿ ಓಪನಿಂಗ್ ಗೆ ರೆಡಿ ಆಯ್ತು. ತಾತ ಗೆ ಕಾಲ್ ಮಾಡಿ ಬರೋದಕ್ಕೆ ಹೇಳಿದೆ, ವೀರಣ್ಣ ಬಂದು ಸರ್ 20 ದಿನಗಳಿಂದ ಇಲ್ಲೇ ಇದ್ದು ಮನೆಗೂ ಹೋಗದೆ ಎಲ್ಲಾ ಕೆಲಸಾನ ಮುಂದೆ ನಿಂತು ನೀವೇ ಮಾಡಿಸ್ತಾ ಇದ್ದೀರಾ ಯಜಮಾನ್ರು ಕೂಡ 3 ತಿಂಗಳಿಗೊಮ್ಮೆ ಬಂದು ಹೋಗ್ತಾ ಇದ್ರು, ಅದ್ರೆ ನೀವು ನಿಮ್ಮದೇ ಫ್ಯಾಕ್ಟರಿ ಅಂತ ಹಗಲು ರಾತ್ರಿ ಅಂತ ನೋಡದೆ ಕೆಲಸ ಮಾಡ್ತಾ ಇದ್ದೀರಾ, ನಿಮ್ಮನ್ನ ನೋಡಿದ್ರೆ ನನಗೆ ತುಂಬಾ ಸಂತೋಷ ಆಗ್ತಾ ಇದೆ. ನಿಜ ಹೇಳಿ ಸರ್ ನಿಮಗೆ ಯಜಮಾನ್ರು ಏನ್ ಆಗಬೇಕು ಅಂತ ಕೇಳಿದ್ರು. ನಾನು ನಗ್ತಾ ನಿಮ್ ಯಜಮಾನ್ರು ನನಗೆ ತಾತ ಆಗಬೇಕು ಅಂತ ಹೇಳ್ದೆ. ವೀರಣ್ಣಖುಷಿಯಾಗಿ ಅನ್ಕೊಂಡೆ ಸರ್ ನಿಮ್ಮನ್ನ ನೋಡ್ತಾ ಇದ್ರೆ ನಿಮ್ಮಲ್ಲಿ ಯಜಮಾನ್ರು ಕಾಣಿಸ್ತಾ ಇದ್ರು ಕೇಳೋ ಅಷ್ಟು ಧೈರ್ಯ ಇರಲಿಲ್ಲ ಅಂತ ಹೇಳಿದ್ರು. ಪರ್ವಾಗಿಲ್ಲ ವೀರಣ್ಣ ನಾಳೆ ಯಜಮಾನ್ರು ಬರ್ತಾರೆ, ಫ್ಯಾಕ್ಟರಿ ಓಪನಿಂಗ್ ಇದೆ ಅಂತ ಹೇಳ್ದೆ. ಅವರು ತುಂಬಾ ಖುಷಿ ಆಗಿ ಸಂತೋಷ ಸರ್ ಅಂತ ಹೇಳಿದ್ರು. ನಾನ್ ಅವರಿಗೆ ನಾಳೆ ಬರ್ತೀನಿ ಯಜಮಾನ್ರ ಜೊತೆಗೆ ಏನಾದ್ರು ಇದ್ರೆ ನನಗೆ ಕಾಲ್ ಮಾಡಿ ಅಂತ ಹೇಳಿ. ಅಲ್ಲಿಂದ ಹೊರಟು ಹೋಟೆಲ್ ಗೆ ಬಂದು ರೂಮ್ ಖಾಲಿ ಮಾಡಿ ಶಿಲ್ಪಾ ಅವರ ಮನೆ ಕಡೆಗೆ ಹೊರಟೆ.
ಶಿಲ್ಪಾ ಅವರ ಮನೆಗೆ ಬರೋ ಅಷ್ಟೋತ್ತಿಗೆ ಮಧ್ಯಾಹ್ನ 3 ಗಂಟೆ ಆಗಿತ್ತು. ಮನೇಲಿ ಅಜ್ಜಿ ಮದನ್ ಅವರ ಅಮ್ಮ ಅತ್ತೆ ಮೂರೇ ಜನ ಇದ್ರು. ನನ್ನನ್ನ ನೋಡಿ ಮೂರು ಜನ ನನ್ನ ಹತ್ತಿರ ಬಂದರು, ಅಜ್ಜಿ ನನ್ನ ನೋಡಿ ಅಪ್ಪಿಕೊಂಡು ಎಲ್ಲೋಗಿದ್ದೆ ಮಗ ಇಷ್ಟು ದಿನ ಅಂತ ಸ್ವಲ್ಪ ನೋವಿನಿಂದ ಕೇಳಿದ್ರು. ಅಜ್ಜಿ ಹೇಳಿದೆ ಅಲ್ವಾ ಫ್ಯಾಕ್ಟರಿ ಕೆಲಸದ ಮೇಲೆ ಹೋಗ್ತಾ ಇದ್ದೀನಿ ಅಂತ. ಅದಕ್ಕೆ ಬರೋಕೆ ಆಗಲಿಲ್ಲ ಅಂತ ಹೇಳ್ದೆ. ಅಲ್ಲ ಮಗ ಕೆಲಸ ಇರುತ್ತೆ ಅದ್ರೆ ಈ ರೀತಿ ಮನೆಗೆ ಬರದೇ ಹಗಲು ರಾತ್ರಿ ಅನ್ನದೆ ಕೆಲಸ ಮಾಡಿದ್ರೆ ನಿನ್ನ ಅರೋಗ್ಯ ಏನ್ ಆಗಬೇಕು ಹೇಳು. ನಿಮ್ ತಂದೆ ತಾಯಿ ಬಂದು ಕೇಳಿದ್ರೆ ನಾವು ಏನ್ ಹೇಳಬೇಕು ಹೇಳು. ಬಾ ಯಾವಾಗ ತಿಂದೆ ಏನೋ ಮೊದಲು ಬಂದು ಊಟ ಮಾಡು ಅಂತ ಹೇಳಿದ್ರು. ಸರಿ ಅಜ್ಜಿ ಹೋಗಿ ಕೈ ಕಾಲು ತೊಳ್ಕೊಂಡು ಬರ್ತೀನಿ ಅಂತ ಹೇಳ್ದೆ. ಅಜ್ಜಿ ಪರ್ವಾಗಿಲ್ಲ ಬಾ ನಾನೆ ತಿನ್ನಿಸ್ತೀನಿ ಅಂತ ಹೇಳಿ ಡೈನಿಂಗ್ ಟೇಬಲ್ ಹತ್ತಿರ ನನ್ನ ಕೂರಿಸಿ ಊಟ ತಿನ್ನಿಸೋಕೆ ಶುರು ಮಾಡಿದ್ರು. ವಸಂತ ಅವರು ಮಾತಾಡ್ತಾ ಮಹಿ ಇನ್ಮೇಲೆ ಏನೇ ಕೆಲಸ ಎಷ್ಟೇ ಕೆಲಸ ಇದ್ರು ಸಂಜೆ ಮನೆಗೆ ಬಂದು ಬಿಡು. ನೋಡು ಎಷ್ಟು ಸೊರಗಿ ಹೋಗಿದ್ದೀಯ ಅಂತ ಅಕ್ಕರೆ ಯಿಂದ ಹೇಳಿದ್ರು. ನಾನು ಸರಿ ಅಮ್ಮ ಅಂತ ಹೇಳಿ. ಅಮ್ಮ ತಾತ ಅಂಕಲ್ ಅವರು ಬಂದ್ರೆ ಹೇಳಿ ನಾಳೆ ಫ್ಯಾಕ್ಟರಿ ಓಪನಿಂಗ್ ಇದೆ ಶಬರಿ ಕಂಪನಿ ಓನರ್ ಬರ್ತಾ ಇದ್ದಾರೆ ನಾಳೆ ನಾವು ಫ್ಯಾಕ್ಟರಿ ಹತ್ತಿರ ಹೋಗಬೇಕು ಅಂತ ಹೇಳಿದೆ.. ವಸಂತ ಅವರು ಸರಿ ಮಹಿ ಹೇಳ್ತಿನಿ ಅಂತ ಹೇಳಿದ್ರು. ನಂತರ ಊಟ ತಿಂದು ಹೋಗಿ ಸ್ವಲ್ಪ ಹೊತ್ತು ರೆಸ್ಟ್ ಮಾಡ್ತೀನಿ ಅಂತ ಹೇಳಿ ರೂಮ್ ಗೆ ಬಂದು ಸರಿಯಾಗಿ ನಿದ್ದೆ ಇಲ್ಲದ ಕಾರಣ ಬೆಡ್ ಮೇಲೆ ಹಾಗೇ ಮಲಗಿ ಕೊಂಡೆ ತುಂಬಾ ಬೇಗ ನಿದ್ದೆ ಬಂತು ನೆಮ್ಮದಿ ಆಗಿ ಮಲಗಿದೆ.
ಆರಾಮಾಗಿ ಮಲಗಿದ್ದವನಿಗೆ ಸಂಜೆ 7 ಗಂಟೆ ಹಾಗೇ ಎಚ್ಚರ ಆಯ್ತು. ಕಣ್ ಬಿಟ್ಟು ನೋಡಿದಾಗ ಯಾರೋ ನನ್ನ ಪಕ್ಕದಲ್ಲಿ ಕೂತಿರೋ ಹಾಗೇ ಅನ್ನಿಸ್ತು, ನಾನು ಅ ಕಡೆಗೆ ತಿರುಗಿ ನೋಡಿದೆ. ನೀಲಾ ನನ್ನೇ ನೋಡ್ತಾ ಕೂತಿದ್ಲು. ನೀಲಾ ನಾ ನೋಡಿ ಲೇ ಇಲ್ಲಿ ಕೂತ್ಕೊಂಡು ಏನ್ ಮಾಡ್ತಾ ಇದ್ದಿಯಾ ಅಂತ ಕೇಳ್ತಾ ಎದ್ದು ಕೂತೆ. ನೀಲಾ ಕಣ್ಣಲ್ಲಿ ಕಣ್ಣೀರು ತುಂಬಿಕೊಂಡು ನನ್ನ ಅಪ್ಪಿಕೊಂಡು ಸಾರೀ ಕಣೋ ಅಂತ ಹೇಳಿದ್ಲು. ನಾನು ಇವಳೇನಕ್ಕೆ ಸಾರೀ ಕೇಳ್ತಾ ಇದ್ದಾಳೆ ಅಂತ ಅನ್ಕೊಂಡು ಲೇ ಏನಕ್ಕೆ ಸಾರೀ ಕೇಳ್ತಾ ಇದ್ದಿಯಾ ಅಂತ ಕೇಳ್ದೆ. ಅವತ್ತು ಶಿಲ್ಪಾ ಹಾಗೇ ಮಾತಾಡಿದ್ಲು ಅಂತ ಕೋಪದಲ್ಲಿ ಗೊತ್ತಾಗದೆ ನಿನ್ನ ಕೂದಲನ್ನ ಜೋರಾಗಿ ರಕ್ತ ಬರೋ ಹಾಗೇ ಎಳೆದು ಬಿಟ್ಟೆ ನಿಜವಾಗ್ಲೂ ನನಗೆ ಗೊತ್ತಾಗಿಲ್ಲ ಕಣೋ ಸಾರೀ ಅಂತ ಹೇಳ್ತಾ ಮತ್ತೆ ಅಳೋಕೆ ಶುರು ಮಾಡಿದ್ಲು. ನೀನು ಇನ್ನು ಅದನ್ನ ಮರೆತೇ ಇಲ್ವಾ ನಾನ್ ಅ ವಿಷಯ ನಾ ಅಲ್ಲೇ ಮರೆತು ಬಿಟ್ಟೆ, ನಿನ್ ಇನ್ನು ಅದನ್ನೇ ಮನಸಲ್ಲಿ ಇಟ್ಕೊಂಡು ಇದ್ದಿಯಾ ಅದನ್ನ ಮರೆತು ಬಿಡು ಅಂತ ಹೇಳ್ತಾ ಸಮಾಧಾನ ಮಾಡಿ ಅವಳ ಕಣ್ ಹೊರೆಸಿ ಹಣೆಮೇಲೆ ಒಂದು ಮುತ್ತನ್ನ ಕೊಟ್ಟು. ನೋಡು ನನಗೆ ನೀನು ಈ ರೀತಿ ಅಳೋದು ಕಣ್ಣೀರು ಹಾಕೋದು ಇಷ್ಟ ಇಲ್ಲಾ, ಅದರಲ್ಲೂ ಇಂತ ಚಿಕ್ ವಿಷಯ ಕ್ಕೆ ಅಳೋದು ಅಂದ್ರೆ ಆಗೋದೇ ಇಲ್ಲಾ. ಪ್ಲೀಸ್ ಅಳೋಕೆ ಹೋಗಬೇಡ ಇನ್ಮೇಲೆ ಅಂತ ಹೇಳ್ದೆ. ನೀಲಾ ಸ್ವಲ್ಪ ಸಮಾದಾನ ಆಗಿ. ಅವತ್ತು ನಾನ್ ಕೇಳಿದ್ದು ಕೆನ್ನೆಗೆ ಕಿಸ್ ಕೊಡು ಅಂತ ಹಣೆ ಮೇಲೆ ಅಲ್ಲ ಅಂತ ಹೇಳಿ ಸ್ವಲ್ಪ ನಾಚಿಕೊಂಡಳು. ಲೇ ಯಾರಾದ್ರೂ ಬಂದ್ರೆ ನನ್ನ ನಿನ್ನ ಈ ರೂಮ್ ಅಲ್ಲಿ ಇರೋದನ್ನ ನೋಡಿದ್ರೆ ತಪ್ಪಾಗಿ ತಿಳ್ಕೋತಾರೆ ಮೊದಲು ಇಲ್ಲಿಂದ ನಡಿ ಅಂತ ಹೇಳ್ದೆ. ನೀಲಾ ಪ್ಲೀಸ್ ಕಣೋ ಒಂದೇ ಒಂದು ಅಂತ ಕೇಳಿಕೊಂಡಳು. ನಾನು ಅವಳ ಮಾತನ್ನ ಕೇಳಿಸಿ ಕೊಳ್ಳದೆ ಎದ್ದು ವಾಶ್ರೂಮ್ ಗೆ ಹೋದೆ. ನೀಲಾ ಗೆ ಹಾಗೇ ಹೋಗಿದ್ದು ಬೇಜಾರಾಯ್ತು ಅಂತ ಅನ್ನಿಸುತ್ತೆ, ಮುಖ ನಾ ಚಿಕ್ಕದು ಮಾಡಿಕೊಂಡು ನನ್ನ ಬೈಕೊಳ್ಳೋಕೆ ಶುರು ಮಾಡಿದ್ಲು.
ಕಿಸ್ ಬೇಕು ಅಂತ ಕೇಳೋವಳಿಗೆ ಯಾರಾದ್ರೂ ಬರ್ತಾರೆ ನೋಡ್ತಾರೆ ಕೇಳೋಕೂ ಮೊದಲು ರೂಮ್ ಡೋರ್ ಕ್ಲೋಸ್ ಇದೆಯಾ ಇಲ್ವಾ ಅಂತ ನೋಡ್ಕೊಳ್ಳೋದು ಇಲ್ವಾ ಅಂತ ಕೇಳಿದ ಧ್ವನಿ ಕೇಳಿಸ್ತು. ಬೈಕೋಳ್ತಾ ಇದ್ದಾ ನೀಲಾ ತಲೆ ತಿರುಗಿಸಿ ರೂಮ್ ಡೋರ್ ಕಡೆಗೆ ನೋಡಿದ್ಲು. ರೂಮ್ ಡೋರ್ ಹತ್ತಿರ ಶಿಲ್ಪಾ ನಿಂತಿರೋದನ್ನ ನೋಡಿ, ಎದ್ದು ಕೂತು ಏನಕ್ಕೆ ಬಂದೆ ಈ ರೂಮ್ ಹತ್ತಿರ ನೋಡು ನಿನ್ನಿಂದ ಕಿಸ್ ಮಿಸ್ ಆಯ್ತು ಅಂತ ಹೇಳಿದ್ಲು. ಹಲೋ ಇದು ನನ್ನ ಗಂಡ ನಾ ಮನೆ ನನ್ನ ಅತ್ತೆ ಮಾವನ ಮನೆ ನನಗೆ ಎಲ್ಲಿ ಬೇಕಾದ್ರು ಓಡಾಡೋ ಅಧಿಕಾರ ಇದೆ. ಗೊತ್ತಾ ಅಂತ ಶಿಲ್ಪಾ ಹೇಳಿದ್ಲು. ನೀಲಾ ಹೌದ ಟೈಮ್ ಬರುತ್ತೆ ಆಗ ನಾನು ಹೇಳ್ತಿನಿ ಅಂತ ಹೇಳಿ. ಜೋರಾಗಿ ಮಹಿ ಬೇಗ ಬಾ ಎಲ್ಲರೂ ನಿನಗೋಸ್ಕರ ಕಾಯ್ತಾ ಇದ್ದಾರೆ ಅಂತ ಹೇಳಿ ರೂಮ್ ಡೋರ್ ಹತ್ತಿರ ಶಿಲ್ಪಾ ನಾ ತಳ್ಳಿಕೊಂಡು ಹೊರಗೆ ಹೋದಳು. ಶಿಲ್ಪಾ ಲೇ ನಿಂತ್ಕೋಳ್ಳೆ ನಾನು ಬರ್ತೀನಿ ಅಂತ ಅವಳ ಹಿಂದೆ ನೇ ಹೋಗಿ ಅವಳನ್ನ ಅಪ್ಪಿಕೊಂಡು ಸಾರೀ ಸುಮ್ನೆ ತಮಾಷೆ ಮಾಡಿದೆ. ಮನೇಲಿ ಮಾತಾಡ್ತೀನಿ ನೀವಿಬ್ರು ಹೊರಗಡೆ ಹೋಗಿ ಡಿನ್ನರ್ ಮಾಡ್ಕೊಂಡು ಅವನ ಜೊತೆಗೆ ಟೈಮ್ ಸ್ಪೆಂಡ್ ಮಾಡು ಹೋಗು ಅಂತ ಹೇಳಿದ್ಲು.
ನೀಲಾ ಬೇಡ್ವೇ ಮಹಿ ಈಗ ಫ್ಯಾಕ್ಟರಿ ಕೆಲಸದ ಮೇಲೆ ತುಂಬಾ ಬ್ಯುಸಿ ಇದ್ದಾನೆ, ಈ ಟೈಮ್ ಅಲ್ಲಿ ಅವನನ್ನ ಈ ರೀತಿ ಡಿಸ್ಟರ್ಬ್ ಮಾಡೋದು ಸರಿ ಅಲ್ಲ. ಎಲ್ಲಿ ಹೋಗ್ತಾನೆ ಬಿಡು ಅಂತ ಹೇಳಿ ಅಜ್ಜಿ ಮನೆಗೆ ಹೋದ್ರು. ನಾನು ಫ್ರೆಷ್ ಅಪ್ ಆಗಿ ಬಟ್ಟೆ ಚೇಂಜ್ ಮಾಡ್ಕೊಂಡು ಅಜ್ಜಿ ಮನೆಗೆ ಹೋದೆ. ಎಲ್ಲರೂ ಹಾಲ್ ಅಲ್ಲಿ ಕೂತಿದ್ರು. ನಾನು ಬರೋದನ್ನ ನೋಡಿ ತಾತ ಹೇಗಿದ್ದೀಯ ಮಹಿ, ಅಂತ ಕೇಳಿದ್ರು ಚೆನ್ನಾಗಿ ಇದ್ದೀನಿ ಅಂತ ಹೇಳಿ ಹೋಗಿ ಅವರ ಜೊತೆಗೆ ಕೂತು. ತಾತ ಶಬರಿ ಕಂಪನಿ ಓನರ್ ಹತ್ತಿರ ಮಾತಾಡಿದ್ದೀನಿ ನಾಳೆ ಅವರು ಬರ್ತಾ ಇದ್ದಾರೆ, ನಾಳೆ ಫ್ಯಾಕ್ಟರಿ ಓಪನಿಂಗ್ ಹಾಗೇ ನಾಳೆಯಿಂದನೆ ಕೆಲಸ ಶುರು ಅಂತ ಹೇಳಿದೆ. ಎಲ್ಲರೂ ಶಾಕ್ ಆದ್ರು ನಾನ್ ಹೇಳಿದ್ದನ್ನ ಕೇಳಿ. ನಂತರ ತಾತ ಮಾತಾಡ್ತಾ ಮಹಿ ಏನ್ ಹೇಳ್ತಾ ಇದ್ದಿಯಾ ಅದು ಹಳೆ ಫ್ಯಾಕ್ಟರಿ ಎಷ್ಟೊಂದು ಕೆಲಸ ಇದೆ ಮಿಷಿನ್ ಗಳು ಬೇಕು ಕೆಲಸದವರು ಬೇಕು ಮಿಷನ್ ಗಳಿಗೆ ಆರ್ಡರ್ ಕೊಡಬೇಕು ತುಂಬಾ ಕೆಲಸ ಇದೆ ನಿನ್ ನೋಡಿದ್ರೆ ನಾಳೆ ಓಪನಿಂಗ್ ಮಾಡಬೇಕು ಕೆಲಸ ಶುರು ಮಾಡಬೇಕು ಅಂತ ಇದ್ದಿಯಾ ಅಂತ ಹೇಳಿದ್ರು. ಅಜ್ಜಿ ಮಾತಾಡ್ತಾ ರೀ ಮಹಿ ಹೇಳ್ತಾ ಇದ್ದಾನೆ ಅಂದ್ರೆ ಅರ್ಥ ಮಾಡ್ಕೊಳ್ಳಿ ಅಲ್ಲಿ ಎಲ್ಲಾ ಕೆಲಸಗಳು ಆಗಿದೆ ಅಂತ ಹೇಳಿದ್ರು. ತಾತ ಅಜ್ಜಿ ಮಾತಿಗೆ ಹೋದ ಮಹಿ ಅಂತ ಕೇಳಿದ್ರು. ಹ್ಮ್ ಹೌದು ತಾತ ಎಲ್ಲಾ ಕೆಲಸಗಳು ಆಗಿ ಹೋಗಿದೆ ಕೆಲಸ ಮಾಡೋವ್ರು ಕೂಡ ನಾಳೆ ಬರ್ತಾರೆ. ನಾಳೆ ಫ್ಯಾಕ್ಟರಿ ಓಪನಿಂಗ್ ಮಾಡಿ ಪ್ರೊಡಕ್ಷನ್ ಶುರು ಮಾಡೋದು ಅಷ್ಟೇ ಬಾಕಿ. ಪ್ರೊಡಕ್ಷನ್ ಗೆ ಬೇಕಾದ ಮೆಟೀರಿಯಲ್ ನಾ ಕಳಿಸೋಕೆ ಆಲ್ರೆಡಿ ನಾನು ಮದನ್ ಗೆ ಹೇಳಿದ್ದೀನಿ. ಅಂತ ಹೇಳ್ದೆ. ತಾತ ಅಪ್ಪಿಕೊಂಡು ತುಂಬಾ ಖುಷಿ ಆಗ್ತಾ ಇದೆ ಮಹಿ ನಿನ್ನ ನೋಡಿ, ಅವತ್ತು ಶಿಲ್ಪಾ ಹತ್ತಿರ ಏನ್ ಕೆಲಸ ಮಾಡ್ತಾನೆ ಇವನು ಅಂತ ಕೇಳಿದೆ ಅದ್ರೆ ನೀನು ಕೆಲಸ ಮಾಡಿ ನಿನ್ ಏನು ಅಂತ ನಿರೂಪಿಸಿ ಬಿಟ್ಟೆ. ಆಮೇಲೆ ಸ್ವಲ್ಪ ಹೊತ್ತು ಯಾವ್ ಯಾವ ಕೆಲಸ ಮಾಡಬೇಕು ಏನೇನ್ ಮಾಡಬೇಕು ಅಂತ ಹೇಳಿ ಮಾತಾಡ್ಕೊಂಡ್ವಿ.. ನಂತರ ಎಲ್ಲರೂ ಊಟ ಮಾಡಿ. ನೀಲಾ ರೋಹಿಣಿ ಗೆ ನಾಳೆಯಿಂದ ಏನೇನ್ ಕೆಲಸ ಮಾಡಬೇಕು ಅಂತ ಹೇಳಿ ನಾನು ರೂಮ್ ಗೆ ಹೋಗಿ ಮಲಗಿ ಕೊಂಡೆ....
**************************************