ಕಾರ್ ಡೋರ್ ಓಪನ್ ಮಾಡಿಕೊಂಡು ಕೋಪದಿಂದ ಬರ್ತಾ ಇರೋ ಮೊಮ್ಮಗಳನ್ನ ನೋಡಿ, ಸೀತಾ ಏನಾಯ್ತು ಇವತ್ತು ಇಷ್ಟೊಂದು ಕೋಪದಲ್ಲಿ ಇದ್ದಿಯಾ ಅಂತ ಕೇಳಿದ್ರು. ಮತ್ತೆ ಇನ್ನೇನ್ ತಾತ ಕನ್ನಡವರು ಅಂತ ನಾನೆ ಹೋಗಿ ಮಾತಾಡಿಸಿದ್ದೀನಿ, ಕ್ಲಾಸ್ ಅಲ್ಲಿ ಪಕ್ಕದಲ್ಲಿ ಚೇರ್ ಅಲ್ಲಿ ಕುತ್ಕೋ ಅಂತ ಕೂಡ ಹೇಳಿದ್ದೀನಿ, ಅದನ್ನೆಲ್ಲಾ ಬಿಟ್ಟು ಹೋಗಿ ಲಾಸ್ಟ್ ಅಲ್ಲಿ ಕುತ್ಕೊಂಡ್ರು, ಯಾಕೆ ಅಂತ ಕೇಳಿದಕ್ಕೆ. ಬೋರ್ಡ್ ಮೇಲೆ ಪ್ರಾಬ್ಲೆಸ್ ಬರೀತಾರೆ ನಾವು ಎಷ್ಟು ಹತ್ತಿರ ಇರ್ತೀವೋ ಪ್ರಾಬ್ಲೆಸ್ ಅಷ್ಟು ದೊಡ್ಡದಾಗಿ ಕಾಣುತ್ತೆ. ದೂರ ಕೂತ್ಕೊಂಡು ನೋಡಿದ್ರೆ ಬೋಡ್ ಪ್ರಾಬ್ಲಮ್ ತುಂಬಾ ಚಿಕ್ಕದಾಗಿ ಕಾಣುತ್ತೆ. ಹ್ಯಾಪಿ ಆಗಿ ಆರಾಮಾಗಿ ಟೆನ್ಶನ್ ಇಲ್ದೆ ಫ್ರೀ ಆಗಿ ಇರಬಹುದು ಅಂತ ಬುದ್ಧನ ಹಾಗೇ ಬೋಧನೆ ಮಾಡ್ತಾನೆ ಅಂತ ಕೋಪದಲ್ಲೇ ಹೇಳಿದ್ಲು. ತಾತ ನೇ ಅಂದ್ರೆ ಹುಡುಗ ನ ಅಂತ ಕೇಳಿದ್ರು. ಅ ಹೌದು ಹುಡುಗನೇ, ಬೆಂಗಳೂರಿಂದ ಬಂದಿದ್ದಾನೆ, ಕನ್ನಡವನು ಅಂತ ಗೊತ್ತಾದಮೇಲೆ ಅದರಲ್ಲೂ ನನ್ನ ಕ್ಲಾಸ್ ಹುಡುಗ ಅಂತ ಗೊತ್ತಾದ ಮೇಲೆ ಮಾತಾಡಿಸೋಣ ಅಂತ ಹೋದ್ರೆ ಅವರ ಅಮ್ಮನ ಜೊತೆಗೆ, ಒಂದೂವರೆ ಗಂಟೆ ಮಾತಾಡ್ಕೊಂಡು ಇದ್ದಾ. ಅಷ್ಟೋತ್ತು ಕಾದು ಹೋಗಿ ಮಾತಾಡಿಸಿದೆ ಅಲ್ವಾ, ನಾನ್ ಏನ್ ಕೇಳ್ದೆ ಪಕ್ಕದಲ್ಲಿ ಕುತ್ಕೋ ಅಂತ ಹೇಳಿದ್ದು ಅಷ್ಟೇ ಅಲ್ವಾ. ಅದಕ್ಕೆ ಅದು ಇದು ಅಂತ ಬಿಲ್ಡ್ ಅಪ್ ಕೊಟ್ರೆ ಕೋಪ ಬರದೇ ಇನ್ನೇನ್ ಬರುತ್ತೆ ಅಂತ ಹೇಳಿದ್ಲು.
ತಾತ ನಗ್ತಾ ಸರಿಯೋಯ್ತು. ಅಲ್ಲ ಮಗ ಅ ಹುಡುಗ ಹೇಳಿದ್ರಲ್ಲಿ ತಪ್ಪೇನಿದೆ. ಕ್ಲಾಸ್ ಅಲ್ಲಿ ಹೇಳೋ ಪ್ರಾಬ್ಲಮ್ ನ ಅವನು ಅವನ ಲೈಫ್ ಅಲ್ಲಿ ಬರೋ ಪ್ರಾಬ್ಲಮ್ ಅಂತ ಆಂಕೊಳ್ತಾ ಇದ್ದಾನೆ, ಹತ್ತಿರ ಇದ್ದಷ್ಟು ದೊಡ್ಡದಾಗಿ ಕಾಣುತ್ತೆ. ದೂರ ಇದ್ರೆ ಚಿಕ್ಕದಾಗಿ ಕಾಣುತ್ತೆ. ಅದನ್ನ ಕ್ಲಿಯರ್ ಮಾಡೋಕೆ ಸುಲಭ ಆಗುತ್ತೆ, ಒಂದು ವಿಷಯ ತಿಳ್ಕೊ ವ್ಯಕ್ತಿ ಗಳನ್ನ ಹತ್ತಿರದಿಂದ ನೋಡಿ ಅವರ ಬಗ್ಗೆ ತಿಳ್ಕೊಬೇಕು. ಪ್ರಾಬ್ಲಮ್ ನ ದೂರ ಇಟ್ಟು ಅದಕ್ಕೆ ಸೊಲ್ಯೂಷನ್ ಹುಡುಕ ಬೇಕು. ಕ್ಲಿಯರ್ ಮಾಡಬೇಕು. ಒಂದು ಸರಿ ಅ ಹುಡುಗನನ್ನ ಮನೆಗೆ ಕರ್ಕೊಂಡು ಬಾ ಮಾತಾಡಿಸೋಣ ಅಂತ ಹೇಳಿದ್ರು. ಸೀತಾ ನೋಡೋಣ ನಾಳೆ ಅವನಾಗೆ ಬಂದು ಮಾತಾಡಿಸಿದ್ರೆ ಮಾತಾಡಿಸ್ತಿನಿ ಮನೆಗೆ ಕರ್ಕೊಂಡು ಬರೋದರ ಬಗ್ಗೆ ಯೋಚ್ನೆ ಮಾಡ್ತೀನಿ ಅಂತ ಹೇಳಿ ಎದ್ದು ಅವಳ ರೂಮ್ ಗೆ ಹೋದ್ಲು.
ಮಾರನೇ ದಿನ ರೆಡಿ ಆಗಿ ಕಾಲೇಜ್ ಗೆ ಬಂದೆ. 1st ಕ್ಲಾಸ್ ಫ್ರೀ ಅಂತ ಗೊತ್ತಾಯಿತು. ಹೊರಗೆ ಹೋಗೋಣ ಅಂತ ಅಂದ್ರೆ ಚಳಿ ಯಾವನ್ ಹೋಗೋದು ಅಂತ ನನ್ನ ಪ್ಲೇಸ್ ಗೆ ಬಂದು ಕುತ್ಕೊಂಡೆ. ಸೀತಾ ಇನ್ನು ಬಂದಿರಲಿಲ್ಲ. ಬಿಡು ಮಾತಾಡೋಕೆ ಇಷ್ಟ ಇಲ್ಲಾ ಅಂದಾಗ ಮೇಲೆ ಬಿದ್ದು ಮಾತಾಡಿಸೋದು ತಪ್ಪು ಅಂತ ಅನ್ಕೊಂಡು ಮೊಬೈಲ್ ತೆಗೆದು ಶ್ವೇತಾ ಗೆ ಕಾಲ್ ಮಾಡಿದೆ.
* ಶ್ವೇತಾ ಕಾಲೇಜ್ ಅಲ್ಲಿ. ಕ್ಲಾಸ್ ಅಲ್ಲಿ ಕೂತ್ಕೊಂಡು ಇದ್ದಾ ಶ್ವೇತಾ ಇನ್ನು ಡಲ್ ಆಗಿ ಇರೋದನ್ನ ನೋಡಿ ಅವಳ ಫ್ರೆಂಡ್ ಲೇ ಶ್ವೇತಾ ಇನ್ನು ಎಷ್ಟು ದಿನ ಅಂತ ಹೀಗೆ ಡಲ್ ಆಗಿ ಇರ್ತೀಯ ಫೈನಲ್ ಇಯರ್ ಕಣೆ, ನೀನು ಸ್ಟಡಿ ಮೇಲೆ ಫೋಕಸ್ ಮಾಡದೇ ಈಗೆ ಇದ್ರೆ ಹೇಗೆ ಅಂತ ಕೇಳಿದ್ಲು. ಶ್ವೇತಾ ಲೇ ಅವನ ಜೊತೆ ಮಾತಾಡದೆ ಜಗಳ ಮಾಡದೇ ಒಂದು ದಿನ ಕೂಡ ಇರ್ತಾ ಇದ್ದಿಲ್ಲ. ಎಲ್ಲಿ ಹೋದ್ನೋ ಗೊತ್ತಿಲ್ಲ ಹೇಗಿದ್ದಾನೋ ಗೊತ್ತಿಲ್ಲ. ಕಾಲ್ ಮಾಡಿದ್ರೆ ಸ್ವಿಚ್ ಅಪ್ ಅಮ್ಮ ನ ಕೇಳಿದ್ರೆ ನನಗು ಗೊತ್ತಿಲ್ಲ ಅಂತ ಹೇಳಿದ್ರು. ಅಟ್ಲಿಸ್ಟ್ ಎಲ್ಲಿಗೆ ಹೋದ ಹೇಳಮ್ಮ ಅಂತ ಅಂದ್ರು, ಹೋಗೋವಾಗ ಹೋಗಿ ಬರ್ತೀನಿ ಅಂತ ಹೇಳ್ದ ಅಷ್ಟೇ ಎಲ್ಲಿಗೆ ಅಂತ ಹೇಳಿಲ್ಲ ಅಂತ ಹೇಳಿದ್ರು. ಚಿಕ್ ವಯಸ್ಸಿನಿಂದ ಒಂದು ದಿನ ಕೂಡ ಅವನನ್ನ ಬಿಟ್ಟು ಇರಲಿಲ್ಲ. ಕಾಲೇಜ್ ಟ್ರಿಪ್ ನ ಎಷ್ಟೋ ಸರಿ ಅವನಿಗೋಸ್ಕರ ಕ್ಯಾನ್ಸಲ್ ಮಾಡ್ಕೊಂಡಿದ್ದೀನಿ. ಎಷ್ಟೋ ವಿಷಯ ನ ಅವನ ಹತ್ತಿರ ಶೇರ್ ಮಾಡ್ಕೊಂಡು ಇದ್ದೀನಿ. ನಾನ್ ಅವನಿಗೆ ಎಷ್ಟೇ ಕಾಟ ಕೊಟ್ರು ಎಷ್ಟೇ ಹೊಡೆದ್ರು ಒಂದು ದಿನ ಕೂಡ ನನಗೆ ಎದುರು ನಿಂತವನಲ್ಲ, ಕೈ ಎತ್ತಿ ಹೊಡೆದವನು ಅಲ್ಲ. ನಿಮಗೆ ಗೊತ್ತಿಲ್ಲ ಕಣೆ ಹುಡುಗರು ನನ್ನ ರೇಗಿಸೋಕು ಭಯ ಬೀಳ್ತಾರೆ, ಯಾಕಂದ್ರೆ ನನಗೆ ಕರಾಟೆ ಕುಂಗ್ ಫು ಬರುತ್ತೆ, ರೇಗಿಸಿದ್ರೆ ಮೂಳೆ ಮುರೀತಾಳೆ ಅಂತ. ನನಗೆ ಅ ವಿದ್ಯೆ ನ ಹೇಳಿ ಕೊಟ್ಟಿದ್ದೆ ಅವನು. ಅಕ್ಕ ಯಾವಾಗ್ಲೂ ನಾನು ನಿನ್ ಜೊತೆ ನೇ ಇರೋಕೆ ಆಗಲ್ಲಾ. ಸಮಯ ಯಾವಾಗ ಹೇಗೆ ಇರುತ್ತೆ ಅಂತ ಗೊತ್ತಿಲ್ಲ. ಅದಕ್ಕೆ ಈ ವಿದ್ಯೆ ನ ನನಗೆ ಕಲಿಸಿದ. ಈಗ ನನ್ನನ್ನ ಒಬ್ಬಂಟಿಯಾಗಿ ಬಿಟ್ಟು ಎಲ್ಲೋ ಹೋಗಿದ್ದಾನೆ ಅಂತ ಹೇಳ್ತಾ ಇರೋವಾಗ, ಇನ್ನೊಬ್ಬಳು ಲೇ ಶ್ವೇತಾ ನಿನ್ ಮೊಬೈಲ್ ಸೈಲೆಂಟ್ ಆಗಿ ಇದೆ ಅನ್ನಿಸುತ್ತೆ ಅವಾಗಿಂದ ಯಾರೋ ಬ್ಯಾಕ್ ಟು ಬ್ಯಾಕ್ ಕಾಲ್ ಮಾಡ್ತಾ ಇದ್ದಾರೆ ಅಂತ ಹೇಳಿ ಮೊಬೈಲ್ ನ ಶ್ವೇತಾ ಕೈಗೆ ಕೊಟ್ಲು. ಶ್ವೇತಾ ಮೊಬೈಲ್ ಅಲ್ಲಿ ನಂಬರ್ ನೋಡಿದ್ಲು ಹೊಸ ನಂಬರ್. ಕಾಲ್ ಪಿಕ್ ಮಾಡಿ ಹಲೋ ಯಾರು ಅಂತ ಕೇಳಿದ್ಲು.
ನಾನ್ ಕಣೆ ನಿನ್ನ ಬಾಯ್ಫ್ರೆಂಡ್ ಅಂತ ಹೇಳ್ದೆ. ಶ್ವೇತಾ ಅಯ್ಯೋ ನಿನ್ನ ಮುಖ ಮುಚ್ಚ, ಡಬ್ಬ ದರ್ವೇಸಿ ತಿರ್ಬೋಕಿ ಲೋಫರ್ ನನ್ನ ಮಗನೆ, ಎಲ್ಲೋ ಹೋಗಿದ್ದೆ ಇಷ್ಟು ದಿನ ಹಾಳಾಗಿ. ಎಲ್ಲಿ ನಾಯಿ ತರ ಬೀದಿ ಬೀದಿ ತಿರುಗಾಡ್ತಾ ಇದ್ದಿಯಾ. ನಿನ್ನ ನೀನು ಏನ್ ಅಂತ ಅಂಕೊಂಡು ಇದ್ದಿಯಾ ಮಗನೆ. ತಿಂದು ಕೊಬ್ಬು ಜಾಸ್ತಿ ಆಗಿದೆಯಾ. ಹೋಗೋವ್ನು ಒಂದು ಮಾತು ಹೇಳಿ ಹೋಗೋಕೆ ಏನೋ ಆಗಿತ್ತು. ಬಾಯಲ್ಲಿ ಈ ಇಟ್ಕೊಂಡು ಇದ್ದೆ. ಇವಾಗ ನಿನ್ನ ಬಾಯ್ಫ್ರೆಂಡ್ ಅಂತ ಹೇಳ್ತಾ ಇದ್ದಿಯಾ ಹೇಳೋ ಎಲ್ಲೋ ಇದ್ದಿಯಾ, ನನಗೆ ಬರ್ತಾ ಇರೋ ಕೋಪಕ್ಕೆ ಅಲ್ಲೇ ಬಂದು ನಿನ್ನ ತುಳಿದು ತುಳಿದು ಸಾಯಿಸಿ ಬಿಡ್ತೀನಿ. ತುಕಾಲಿ ತುಕ್ಕು ಇಡಿದಿರೋ ಡ್ರಮ್ ನನ್ನ ಮಗನೆ. ಪಾಚಿ ತಿನ್ನೋ ಕಪ್ಪೆ ಮುಖದವನೇ ಹೇಳೋ ಎಲ್ಲೋ ಇದ್ದಿಯಾ ಅಂತ ನಾನ್ ಸ್ಟಾಪ್ ಬೈಯ್ಯೋಕೆ ಶುರು ಮಾಡಿದ್ಲು. ನಾನು ಲೌಡ್ ಸ್ಪೀಕರ್ ಇಟ್ಟು ಅವಳು ಬೈಯ್ಯೋದನ್ನ ಕೇಳ್ತಾ ಎಂಜಾಯ್ ಮಾಡ್ತಾ ಇದ್ದೆ.
ಲೋ ನಿನ್ನೆ ಕೇಳ್ತಾ ಇರೋದು ಹೇಳೋ ಎಲ್ಲಿದ್ದೀಯ ಅಂತ ಕೇಳಿದ್ಲು. ಶ್ವೇತಾ ಯಾವತ್ತೂ ಅಷ್ಟು ಕೋಪದಿಂದ ಅ ರೀತಿ ಮಾತಾಡದೆ ಇರೋದನ್ನ ನೋಡದೆ ಇರೋ ಅವರ ಕ್ಲಾಸ್ಮೇಟ್ಸ್ ಅವಳು ಇಷ್ಟು ಕರಾಬ್ ಆಗಿ ಬೈಯ್ಯೋದನ್ನ ಕೇಳಿ ಹುಡುಗರೆಲ್ಲ ಭಯ ಬಿದ್ರೆ, ಹುಡುಗೀರು ಶ್ವೇತಾ ಗೆ ಬಾಯ್ಫ್ರೆಂಡ್ ಅ, ಅಂತ ಶಾಕ್ ಆದ್ರು. ಶ್ವೇತಾ ಮತ್ತೆ ಮಾತಾಡ್ತಾ ಲೋ ನಿನ್ನೆ ಕೇಳ್ತಾ ಇರೋದು ಮಾತಾಡು, ಬಾಯಿ ಏನಾದ್ರು ಬಿದ್ದೋಗಿದೆಯಾ ಅಂತ ಕೇಳಿದ್ಲು. ನಾನ್ ಮಾತಾಡ್ತಾ ಬೇಬಿ ನನಗೆ ಮಾತಾಡೋ ಚಾನ್ಸ್ ಕೊಟ್ರೆ ಅಲ್ವಾ ಮಾತಾಡೋಕೆ. ನಾನ್ ಸ್ಟಾಪ್ ಆಗಿ ಮಾತಾಡ್ತಾ ಇದ್ರೆ ನಾನ್ ಎಲ್ಲಿ ಮಾತಾಡ್ಲಿ. ಇನ್ನು ಬೈಯ್ಯೋದು ಏನಾದ್ರು ಬಾಕಿ ಇದ್ರೆ ಬೈದು ಬಿಡು. ಇಲ್ಲಾ ಮಾತಾಡು. ಅಂತ ಹೇಳ್ದೆ. ಶ್ವೇತಾ ಸ್ವಲ್ಪ ಕೂಲ್ ಆಗಿ ಕಣ್ಣಲ್ಲಿ ಕಣ್ಣೀರು ತುಂಬಿಕೊಂಡು. ಲೋ ಎಲ್ಲೋ ಇದ್ದಿಯಾ ಹೇಗೋ ಇದ್ದಿಯಾ ನಿನ್ನ ನೋಡಬೇಕು ಅಂತ ಅನ್ನಿಸ್ತಾ ಇದೆ ಪ್ಲೀಸ್ ಮನೆಗೆ ಬಾರೋ ಅಂತ ಕಣ್ಣೀರು ಸುರಿಸುತ್ತಾ ಅಳು ಧ್ವನಿ ಅಲ್ಲಿ ಕೇಳಿದ್ಲು. ನನ್ನ ಮನಸ್ಸಿಗೆ ತುಂಬಾ ನೋವಾಯ್ತು. ತಕ್ಷಣ ವಿಡಿಯೋ ಕಾಲ್ ಮಾಡಿದೆ. ಶ್ವೇತಾ ವಿಡಿಯೋ ಕಾಲ್ ಪಿಕ್ ಮಾಡಿ ನನ್ನ ನೋಡಿದ್ಲು. ಅವಳ ಮುಖ ನೋಡಿ ನಗ್ತಾ ಏನೇ ಅಳ್ತಾ ಇದ್ದಿಯಾ. ನಿಮ್ ಕಾಲೇಜ್ ಅಲ್ಲಿ ಅಳೋ ಕಾಂಪಿಟಿಷನ್ ಏನಾದ್ರು ಇಟ್ಟಿದ್ದಾರಾ ಅಂತ ಕೇಳ್ದೆ. ಅವಳು ನನ್ನ ನೋಡಿ ಖುಷಿಯಾಗಿ ತು ಲೋಫರ್ ಎಲ್ಲೋ ಇದ್ದಿಯಾ ಅಂತ ಕೇಳಿದ್ಲು. ಎಲ್ಲಿ ಅಂದ್ರೆ ಕಾಲೇಜ್ ಅಲ್ಲಿ ಕ್ಲಾಸ್ ಅಲ್ಲಿ ಅಂತ ಬ್ಯಾಕ್ ಕ್ಯಾಮೆರಾ ಆನ್ ಮಾಡಿ ಕ್ಲಾಸ್ ರೂಮ್ ತೋರಿಸಿದೆ. ಶ್ವೇತಾ ಎಲ್ಲೋ ಏನು ಕಾಣಿಸ್ತಾ ಇಲ್ಲಾ ಅಂತ ಹೇಳಿದ್ಲು. ನಾನು ಕಾಣಿಸ್ತಾ ಇಲ್ವಾ ಅಂತ ತಲೆ ಎತ್ತಿ ನೋಡಿದೆ ಎದುರಿಗೆ ಸೀತಾ ನನ್ನ ಕಡೆಗೆ ಕೋಪದಿಂದ ನೋಡ್ತಾ ನಿಂತಿದ್ಲು. ನಾನು ಏನು ಮಾತನಾಡಿಸದೆ ಎದ್ದು ನಿಂತು ಕ್ಲಾಸ್ ರೂಮ್ ತೋರಿಸಿದೆ. ಸೀತಾ ನಾನು ಹಾಗೇ ಮಾಡಿದಕ್ಕೆ ಇನ್ನು ಕೋಪ ಮಾಡ್ಕೊಂಡು ಅಲ್ಲಿಂದ ಹೊರಟು ಅವಳ ಪ್ಲೇಸ್ ಗೆ ಹೋದ್ಲು.
ಶ್ವೇತಾ ಕ್ಲಾಸ್ ನ ನೋಡಿ ಸರಿ ನಿನ್ನ ಮುಖ ತೋರಿಸು ಅಂತ ಹೇಳಿದ್ಲು. ಸೆಲ್ಫಿ ಕ್ಯಾಮೆರಾ ಆನ್ ಮಾಡಿ ಕೂತು ಮಾತಾಡೋಕೆ ಶುರು ಮಾಡಿದೆ. ಶ್ವೇತಾ ಯಾವ್ ಕಾಲೇಜ್ ಅಂತ ಕೇಳಿದ್ಲು. ಯಾವ ಕಾಲೇಜ್ ಯಾವ ಊರು ಅಂತ ಮಾತ್ರ ಕೇಳಬೇಡ. ನಾನ್ ಇಲ್ಲಿ ಆರಾಮಾಗಿ ಇದ್ದೀನಿ. ಸಾರೀ ಯಾರಿಗೂ ಹೇಳದೆ ಬಂದು ಬಿಟ್ಟೆ, ಬಂದು ಕಾಲ್ ಮಾಡೋಣ ಅಂತ ಅನ್ಕೊಂಡೆ ಬಟ್ ಟೈಮ್ ಸಿಗಲಿಲ್ಲ , ಇವತ್ತು ಕ್ಲಾಸ್ ಇದ್ದಿಲ್ಲ ಸರಿ ನಿನ್ನ ಹತ್ತಿರ ಮಾತಾಡೋಣ ಅಂತ ಕಾಲ್ ಮಾಡಿದೆ. ಕ್ಲಾಸ್ ರೂಮ್ ಅಂತ ನೋಡದೆ ಬಾಯಿಗೆ ಬಂದ ಹಾಗೇ ಬೈದ್ರೆ ಹೇಗೆ ಅಂತ ಕೇಳ್ದೆ. ಅದಕ್ಕೆ ಶ್ವೇತಾ ನಗ್ತಾ ಅದು ನಿನ್ನ ಕರ್ಮ ನಾನ್ ಏನ್ ಮಾಡೋಕೆ ಆಗುತ್ತೆ. ನನಗೆ ನಿನ್ನ ಎಲ್ಲೇ ಇದ್ರು ಹೇಗೆ ಇದ್ರು ಯಾರೇ ನಿನ್ನ ಪಕ್ಕ ಇದ್ರು ಬೈಯ್ಯೋ ರೈಟ್ಸ್ ಇದೆ ಬೈತೀನಿ. ಬೈಸ್ಕೊ ಅಷ್ಟೇ. ಅದನ್ನ ಕೇಳಿಸಿಕೊಂಡವರಿಗೆ ನಿನ್ ಬೇಕಾದ್ರೆ ಸಮಾಧಾನ ಕೊಡು ಅಂತ ಹೇಳಿದ್ಲು. ಲೇ ನಾನ್ ಹೇಳಿದ್ದು ನನ್ನ ಕ್ಲಾಸ್ ಅಲ್ಲಿ ಇರೋವ್ರು ಏನ್ ಆಂಕೊಳ್ತಾರೆ ಅಂತ ಅಲ್ಲ ಕೇಳಿದ್ದು. ನಿನ್ನ ಕ್ಲಾಸ್ ಅಲ್ಲಿ ಇರೋವ್ರು ನೀನು ಮಾತಾಡಿದನ್ನ ಕೇಳಿ ಏನ್ ಆಂಕೊಳ್ತಾರೆ ಅಂತ ಕೇಳ್ದೆ. ಶ್ವೇತಾ ನಗ್ತಾ ಅಂದುಕೊಂಡ್ರೆ ಅಂದುಕೊಳ್ಳಿ ಹೋಗೋದು ನನಗೆ ಏನು ಇಲ್ಲಾ. ನನ್ನ ಬಾಯ್ಫ್ರೆಂಡ್ ನನ್ನ ಇಷ್ಟ ಬಂದು ಕೇಳೋವ್ರಿಗೆ ಹಲ್ಲು ಉದರಿಸಿ ಕಳಿಸ್ತೀನಿ ಅಂತ ಹೇಳಿದ್ಲು. ನಾನು ನಗ್ತಾ ಹ್ಮ್ ಮಾಡಿದ್ರು ಮಾಡ್ತಿಯಾ ಎಷ್ಟೇ ಆದ್ರು ರೌಡಿ ಬೇಬಿ ಅಲ್ವಾ ನೀನು. ನಿನ್ನ ಕೋಪ ನೋಡಿದ್ರೆ ಗೊತ್ತಾಗುತ್ತೆ ನೀನು ನನ್ನ ಎಷ್ಟು ಮಿಸ್ ಮಾಡ್ಕೊಂಡು ಇದ್ದಿಯಾ ಅಂತ. ಸಾರೀ ಐ ಮಿಸ್ ಯು ಅಂತ ಹೇಳ್ದೆ. ಶ್ವೇತಾ ಕೂಡ ಸೇಮ್ ನಾನು ಕೂಡ ನಿನ್ನ ತುಂಬಾ ಮಿಸ್ ಮಾಡ್ಕೋತ ಇದ್ದೀನಿ. ಸರಿ ಯಾವಾಗ ಬರ್ತೀಯ ಅಂತ ಕೇಳಿದ್ಲು. ಇಂತ ದಿನ ಅಂತ ಹೇಳೋಕೆ ಆಗಲ್ಲಾ ಬಟ್ ಅವಾಗವಾಗ ಕಾಲ್ ಮಾಡ್ತಾ ಇರ್ತೀನಿ. ಇದೆ ನನ್ನ ಹೊಸ ನಂಬರ್ ಸೇವ್ ಮಾಡ್ಕೋ. ನಿನಗೆ ಏನಾದ್ರು ಮಾತಾಡಬೇಕು ಅಂತ ಅನ್ನಿಸಿದ್ರೆ ಈವನಿಂಗ್ 5 ಗಂಟೆ ಗೆ ಮೇಲೆ ಕಾಲ್ ಮಾಡು ಅಂತ ಹೇಳ್ದೆ. ಶ್ವೇತಾ ಖುಷಿಯಾಗಿ ಹ್ಮ್ ಸರಿ ಕಣೋ ಇನ್ಮೇಲಿಂದ ದಿನ ಕಾಲ್ ಮಾಡ್ತೀನಿ. ನೀನು ಹುಷಾರು ಟೈಮ್ ಸರಿಯಾಗಿ ತಿನ್ನು. ಚೆನ್ನಾಗಿ ತಿಂದು ಕಾಡೆಮ್ಮೆ ತರ ಆಗು. ಇಲ್ಲಾ ಅಂದ್ರೆ ನೀನು ಎದುರಿಗೆ ಬಂದಾಗ ನನಗೆ ಇರೋ ಕೋಪಕ್ಕೆ ನಾನು ಹೊಡಿಯೋ ಏಟಿಗೆ ಸತ್ತೇ ಹೋಗ್ತಿಯ ಅಂತ ನಗ್ತಾ ಹೇಳಿದ್ಲು. ಹ್ಮ್ ಸರಿ ಕಣೆ, ಸಂಜೆ ಕಾಲ್ ಮಾಡ್ತೀನಿ. ಕ್ಲಾಸ್ ಇದೆ ಅಂತ ಹೇಳಿ ಬೈ ಹೇಳಿ ಕಾಲ್ ಕಟ್ ಮಾಡಿದೆ. ಶ್ವೇತಾ ಮಿಸ್ ಯು ಕಣೋ ಅಂತ ಹೇಳಿ ಬೈ ಹೇಳಿ ಕಾಲ್ ಕಟ್ ಮಾಡಿದ್ಲು.
ಶ್ವೇತಾ ಫ್ರೆಂಡ್ಸ್ ಶ್ವೇತಾ ಮುಖ ಸಂತೋಷ ವಾಗಿ ಇರೋದನ್ನ ನೋಡಿ ಅಮ್ಮ ಈಗಲಾದ್ರೂ ನಿನ್ನ ಬಾಯ್ಫ್ರೆಂಡ್ ನಿನ್ನ ಕೂಲ್ ಮಾಡಿದ ಅಲ್ವಾ. ಹೌದು ಎಲ್ಲಿದ್ದಾನೆ ಅಂತ ಹೇಳಿದ ಅಂತ ಕೇಳಿದ್ಲು. ಕಾಲೇಜ್ ಗೆ ಹೋಗ್ತಾ ಇದ್ದಾನೆ ಬಟ್ ಎಲ್ಲಿ ಇದ್ದಾನೆ ಅಂತ ಗೊತ್ತಿಲ್ಲ ಅಂತ ಹೇಳಿದ್ಲು. ಲೇ ಅವನು ನಿನ್ನ ತಮ್ಮ ಕಣೆ ನಿನ್ ಏನಕ್ಕೆ ಹೇಳ್ತಿಯ ಅಂತ ಅರ್ಥ ಮಾಡ್ಕೋತಾನೆ ಅದ್ರೆ ನಿನಗೆ ಹೇಳದೆ ಕಾಡಿಸ್ತಾನೆ. ಅವನು ಚೆನ್ನಾಗಿ ಓದಿ ಒಂದಲ್ಲ ಒಂದು ದಿನ ನಿನಗಿಂತ ದೊಡ್ಡ ಪೊಸಿಷನ್ ಅಲ್ಲಿ ಇರ್ತಾನೆ. ಅದು ನೀನು ಅನ್ಕೋಳ್ಳೋ ಡಾಕ್ಟರ್ ತರ ಆಗಿರಬಹುದು ಇಲ್ಲಾ ಬೇರೆ ತರ ಆಗಿರಬಹುದು. ಆರಾಮಾಗಿ ಇದ್ದಾನೆ ಅಲ್ವಾ ಬಿಡು ಅವನ ಪಾಡಿಗೆ ಅವನನ್ನ ಅಂತ ಹೇಳ್ತಾಳೆ. ಶ್ವೇತಾ ಆದ್ರು ಅವನು ನನ್ನ ಇಷ್ಟು ದಿನ ಒಂಟಿ ಆಗಿ ಬಿಟ್ಟು ಹೋದ ಅಲ್ವಾ ಅವನು ಬರಲಿ ಇದೆ ಅವನಿಗೆ ಅಂತ ಹೇಳಿ. ಬೇರೆ ವಿಷಯ ದ ಬಗ್ಗೆ ಮಾತಾಡೋಕೆ ಶುರು ಮಾಡಿದ್ರು.
ಮಧ್ಯಾಹ್ನ ಕ್ಯಾಂಟೀನ್ ಗೆ ಹೋಗಿ ಲಂಚ್ ತಗೊಂಡು ಕುರಿಗಳು ಸರ್ ಕುರಿಗಳು ಮೂವಿ ನೋಡ್ತಾ ನಗ್ತಾ ಊಟ ಮಾಡ್ತಾ ಇದ್ದೆ. ಸೀತಾ ಲಂಚ್ ಪ್ಲೇಟ್ ನ ಇಡ್ಕೊಂಡು ಬಂದು ಎದುರಿಗೆ ಕುತ್ಕೊಂಡು ನನ್ನೇ ಗುರಾಯಿಸಿಕೊಂಡು ನೋಡ್ತಾ ಇದ್ಲು. ನಾನು ಅವಳ ಕಡೆ ನೋಡಿ ಮೂವಿ ಸ್ಟಾಪ್ ಮಾಡಿ. ಅವಳ ಕಡೆಗೆ ನೋಡ್ತಾ ಏನಾಯ್ತು ಯಾಕ್ ಕೋಪದಲ್ಲಿ ಇದ್ದಿಯಾ ಅಂತ ಕೇಳ್ದೆ. ಸೀತಾ ಕೋಪದಿಂದ ಮಾತಾಡ್ತಾ ಮತ್ತೆ ನೀನು ಮಾಡಿದ ಕೆಲಸಕ್ಕೆ ಕೋಪ ಮಾಡಿಕೊಳ್ಳದೆ ಹಿ ಹಿ ಅಂತ ನಗ್ತಾ ಇರಬೇಕಾ ಅಂತ ಕೇಳಿದ್ಲು. ರಿ ನಾನ್ ಏನ್ರಿ ಮಾಡಿದೆ ನಿಮಗೆ ಕೋಪ ಬರೋತರ ಅಂತ ಕೇಳ್ದೆ. ಏನ್ ಮಾಡಿದ್ರ ನೆನ್ನೆ ಕನ್ನಡದವರು ಅಂತ ನಾನೆ ಬಂದು ಮಾತಾಡಿಸಿದೆ ಅಲ್ವಾ. ಒಂದೇ ಕ್ಲಾಸ್ ಅಂತ ಗೊತ್ತು ಅಲ್ವಾ ಆದ್ರು ನಾನ್ ಎದುರಿಗೆ ಬಂದು ನಿಂತ್ರು ಮಾತಾಡಿಸದೆ ಯಾವುದೊ ಹುಡುಗೀ ಜೊತೆ ಮಾತಾಡ್ಕೊಂಡು ಇದ್ರಿ ಅವಳು ಅಷ್ಟು ಬೈತಾ ಇದ್ರು ನಗ್ತಾ ಇದ್ರಿ. ಮಿಸ್ ಯು ಅಂತ ಬೇರೆ ಹೇಳಿದ್ರಿ. ಎಲ್ಲೋ ಇರೋ ಹುಡುಗೀ ಫೀಲಿಂಗ್ ನಿಮಗೆ ಅರ್ಥ ಆಗುತ್ತೆ ಎದುರುಗಡೆ ಇರೋ ನನ್ನ ನೋಡಿ ಹಾಯ್ ಮಾಡೋ ಅಷ್ಟು ಟೈಮ್ ಇಲ್ಲಾ ನಿಮಗೆ ಅಲ್ವಾ ಅಂತ ಕೇಳಿದ್ಲು. ನಾನು ನಗ್ತಾ ಹೌದು ನೀವು ಇಲ್ಲಿಗೆ ಬಂದು ಕುತ್ಕೊಂಡಗಾ ನಿಮ್ ಅಪ್ಪ ಇಲ್ಲಾ ನಿಮ್ ತಾತ ಕಾಲ್ ಮಾಡಿದ್ರೆ ನೀವು ಏನ್ ಮಾಡ್ತಾ ಇದ್ರಿ. ನನ್ನ ಜೊತೆ ಮಾತಾಡ್ತಾ ಇದ್ರ ಇಲ್ಲಾ ನಿಮ್ ಫ್ಯಾಮಿಲಿ ಅವರ ಜೊತೆ ಮಾತಾಡ್ತಾ ಇದ್ರ ಅಂತ ಕೇಳ್ದೆ. ಸೀತಾ ಅಪ್ಪ ತಾತ ನ ಹತ್ತಿರ ಮಾತಾಡಿ ಆಮೇಲೆ ನಿಮ್ ಹತ್ತಿರ ಮಾತಾಡ್ತಾ ಇದ್ದೆ ಅಂತ ಹೇಳಿ. ಏನೋ ನೆನಪಾಗಿ ನಿಮ್ ಫ್ಯಾಮಿಲಿ ಅವರ ಕಾಲ್ ಮಾಡಿದ್ದು ಅಂತ ಕೇಳಿದ್ಲು. ಹ್ಮ್ ಹೌದು ಇಲ್ಲಿಗೆ ಬರೋವಾಗ ಮನೇಲಿ ಅಮ್ಮನಿಗೆ ಬಿಟ್ರೆ ಬೇರೆ ಯಾರಿಗೂ ಹೇಳಿಲ್ಲ. ನೀವು ಕೇಳಿದ್ರಿ ಅಲ್ವಾ ಹುಡುಗೀ ಯಾರು ಅಂತ ನನ್ನ ಸೆಕೆಂಡ್ ಗರ್ಲ್ಫ್ರೆಂಡ್ ನಮ್ಮಕ್ಕ. ಒಂದು ದಿನ ಕೂಡ ನನ್ನ ಜೊತೆ ಮಾತಾಡದೆ ಇದ್ದವಳು ಅಲ್ಲ. ಎಷ್ಟೋ ಸರಿ ನನ್ನ ಜೊತೆ ಟೈಮ್ ಸ್ಪೆಂಡ್ ಮಾಡಬೇಕು ಅಂತ ಹೇಳಿ ಎಲ್ಲಿಗೂ ಹೋಗ್ತಾ ಇರಲಿಲ್ಲ. 10 ದಿನ ಆಯ್ತು ಅವಳ ಜೊತೆ ಮಾತಾಡಿ. ಬಂದ ಇಷ್ಟು ದಿನದಲ್ಲಿ ಅದು ಇದು ಅಂತ ಬ್ಯುಸಿ ಇದ್ದೆ ಕಾಲ್ ಮಾಡೋಕೆ ಆಗಲಿಲ್ಲ. ಹೇಗಿದ್ರು ಕ್ಲಾಸ್ ಫ್ರೀ ಇತ್ತು ಅಲ್ವಾ ಅದಕ್ಕೆ ಮಾತಾಡ್ತಾ ಇದ್ದೆ. ಅವಳನ್ನ ನೋಡಿದಾಗ ಅವಳ ಕಣ್ಣಲ್ಲಿ ತುಂಬಿ ಕೊಂಡಿದ್ದ ಕಣ್ಣೀರು ನೋಡಿ ನನ್ನ ಎಷ್ಟು ಮಿಸ್ ಮಾಡ್ಕೊಂಡು ಇದ್ಲು ಅಂತ ನನಗೆ ಅರ್ಥ ಆಯ್ತು ಅದಕ್ಕೆ ನೀವು ಎದುರಿಗೆ ಇದ್ರು ಮಾತಾಡಿಸೋಕೆ ಹೋಗಲಿಲ್ಲ. ನೀವು ಹೊರಟು ಹೋದ್ರಿ. ಮೋಸ್ಟ್ಲಿ ನನ್ನ ವರ್ತನೆ ನಿಮಗೆ ಇಷ್ಟ ಆಗಿಲ್ಲ ಅಂತ ಅನ್ನಿಸಿತು ಅದಕ್ಕೆ ನಿಮ್ಮಿಂದ ದೂರ ಇದ್ದು ಬಿಡೋಣ ಅಂತ ಸೈಲೆಂಟ್ ಆಗೋದೇ ಅಂತ ಹೇಳ್ದೆ.
ಸೀತಾ,,, ಸಾರೀ ನನಗೆ ನಿಮ್ ಅಕ್ಕ ಅಂತ ಗೊತ್ತಾಗಲಿಲ್ಲ. ಅಂತ ಹೇಳಿದ್ಲು. ಸರಿ ಬಿಡಿ ಐಸ್ಕ್ರೀಂ ತಿಂತಿರಾ ಅಂತ ಕೇಳ್ದೆ. ಈ ಕೋಲ್ಡ್ ಅಲ್ಲಿ ಐಸ್ಕ್ರೀಂ ಯಾರಾದ್ರೂ ತಿಂತಾರ ಅಂತ ಸೀತಾ ಕೇಳಿದ್ಲು. ಮತ್ತೆ ಚಾಕಲೇಟ್ ಏನಾದ್ರು ಅಂತ ಕೇಳ್ದೆ. ಸೀತಾ ತಿಂತೀನಿ ಬಟ್ ಡಯಟ್ ಅಲ್ಲಿ ಇದ್ದೀನಿ ಸೋ ನೋ ಐಸ್ಕ್ರೀಂ ನೋ ಚಾಕಲೇಟ್ ನೋ ಜಂಕ್ ಫುಡ್. ಅಂತ ಹೇಳಿದ್ಲು. ಅ ಮಾತನ್ನ ಕೇಳಿ ನಾನು ನನ್ನ ಲಂಚ್ ಪ್ಲೇಟ್ ನ ತೆಗೆದುಕೊಂಡು ಮೇಲೆ ಎದ್ದೆ. ಸೀತಾ ರೀ ಏನಾಯ್ತು ಊಟ ಮಾಡಿ ಅಂತ ಹೇಳಿದ್ಲು. ಇಲ್ಲಾ ರಿ ನೀವೇನೋ ಸಿಂಪಲ್ ಆಗಿ ಸಾರೀ ಕೇಳಿದ್ರಿ. ಬಟ್ ನನಗೆ ಏನಾದ್ರು ಕೊಟ್ಟು ಸಾರೀ ಕೇಳೋಣ ಅಂತ ನಿಮ್ಮನ್ನ ಕೇಳಿದ್ರೆ. ನೀವು ಡಯಟ್ ಅಂತ ಹೇಳಿದ್ರಿ. ನನಗೆ ಶಾಕ್ ಆಯ್ತು ಈ ಶಾಕ್ ಅಲ್ಲಿ ಏನ್ ಹೇಳಬೇಕು ಅಂತ ಅರ್ಥ ಆಗದೆ ಎದ್ದು ಹೋಗ್ತಾ ಇದ್ದೀನಿ ಅಂತ ಹೇಳ್ದೆ. ಸೀತಾ ನಗ್ತಾ ಸಂಜೆ ಪಾನಿ ಪುರಿ ಕೊಡಿಸಿ ಸಾಕು ಅಂತ ಹೇಳಿದ್ಲು. ನಂತರ ಇಬ್ಬರು ಮಾತಾಡ್ಕೊಂಡು ಲಂಚ್ ಮುಗಿಸಿಕೊಂಡು ಮತ್ತೆ ಕ್ಲಾಸ್ ಗೆ ಹೋದ್ವಿ..
****************************************
P. S