Mahi - 43 in Kannada Love Stories by S Pr books and stories PDF | ಮಹಿ - 43

The Author
Featured Books
Categories
Share

ಮಹಿ - 43

    ನಾನು ತಾತ ಮನೆ ಒಳಗೆ ಬಂದು ಹಾಲ್ ಅಲ್ಲಿ ಕುತ್ಕೊಂಡ್ವಿ. ತಾತ ಬಬಿತ ಅಂತ ಕರೆದ್ರು. ಅಡುಗೆ ಮನೆ ಅಲ್ಲಿ ಇದ್ದಾ ಅಡುಗೆ ಕೆಲಸದವಳು ಬಬಿತ ಬಂದು, ಅವರ ಭಾಷೇಲಿ. ಹೇಳಿ ಸರ್ ಅಂತ ಕೇಳಿದ್ಲು. ತಾತ ಏನಿಲ್ಲಾ ಬಬಿತ ಮಹಿ ಇದ್ದಾನೆ ಅಲ್ವಾ ಅವನಿಗೆ ಹಾಸ್ಟೆಲ್ ಅಲ್ಲಿ ಫುಡ್ ಅಷ್ಟೊಂದು ಸೆಟ್ ಆಗ್ತಾ ಇಲ್ಲಾ ಅಂತೇ ಅವನಿಗೆ ಮಾಡಿಕೊಳ್ಳೋಣ ಅಂದ್ರೆ ಏನೇನ್ ತಗೋಬೇಕೋ ಗೊತ್ತಿಲ್ಲ. ನಿನ್ನ ನಂಬರ್ ಅವನಿಗೆ ಕೊಡು. ಅವನು ಹಾಸ್ಟೆಲ್ ಅಲ್ಲಿ ಅಡುಗೆ ಮಾಡ್ಕೋಬೇಕಾದ್ರೆ ನಿನಗೆ ಕಾಲ್ ಮಾಡಿ ಯಾವ್ ಅಡುಗೆಗೆ ಏನ್ ತಗೋಬೇಕು ಹೇಗೆ ಮಾಡಬೇಕು ಅಂತ ನಿನ್ನ ಹತ್ತಿರ ಕೇಳಿ ತಿಳ್ಕೊಂಡು ಅಡುಗೆ ಮಾಡ್ಕೋತಾನೇ ಅದು ಅಲ್ಲದೆ ನಿನಗೆ ಸೌತ್ ಇಂಡಿಯನ್ ಫುಡ್ ಕೂಡ ಮಾಡೋಕೆ ಬರುತ್ತೆ ಅಲ್ವಾ  ಅವನಿಗೂ ಹೆಲ್ಪ್ ಆಗುತ್ತೆ ಫ್ರೀ ಆಗಿ ಏನು ಹೇಳಿಕೊಡಬೇಡ ದುಡ್ಡು ಕೊಡ್ತಾನೆ ಅಂತ ಹೇಳಿದ್ರು. ಬಬಿತ ಗೆ ದುಡ್ಡು ಕೊಡ್ತೀನಿ ಅಂತ ಹೇಳಿದ್ದೆ ಸರಿ ಸರ್ ಅಂತ ಹೇಳಿ ನನ್ನ ಹತ್ತಿರ ಬಂದು ಮೊಬೈಲ್ ಕೊಟ್ಟು ಬಯ್ಯ ನನಗೆ ನಿಮ್ ಭಾಷೆ ಲಿ ನಂಬರ್ ಹೇಳೋಕೆ ಬರೋದಿಲ್ಲ ನೀವೇ ಮಿಸ್ ಕಾಲ್ ಕೊಟ್ಟು ನಿಮ್ ನಂಬರ್ ನ ಸೇವ್ ಮಾಡಿ ಅಂತ ಮೊಬೈಲ್ ನ ಕೈಗೆ ಕೊಟ್ಲು.  ನಾನು ನಗ್ತಾ ಓಕೆ ಅಂತ ಹೇಳಿ. ಅವಳ ಮೊಬೈಲ್ ಯಿಂದ ಮಿಸ್ ಕಾಲ್ ಕೊಟ್ಟ್ಕೊಂಡು. ನನ್ನ ಮೊಬೈಲ್ ಯಿಂದ ಹಾಯ್ ಅನ್ನೋ ಮೆಸೇಜ್ ಕಳಿಸಿ ಡಿಲೀಟ್ ಮಾಡಿ ಅವಳ ಮೊಬೈಲ್ ನ ವಾಪಸ್ಸು ಅವಳಿಗೆ ಕೊಟ್ಟು. ಥ್ಯಾಂಕ್ಸ್ ಅಂತ ಹೇಳಿದೆ. ಅವಳು ಸರಿ ಅಂತ ಹೇಳಿ ಅಡುಗೆ ಮನೆಗೆ ಹೋದ್ಲು. 

     ಅಂಕಲ್ ಮೊಬೈಲ್ ಅಲ್ಲಿ ಮಾತಾಡೋದನ್ನ ಮುಗಿಸಿಕೊಂಡು ಹಾಲ್ ಗೆ ಬಂದು ನಮ್ಮ ಜೊತೆಗೆ ಕುತ್ಕೊಂಡ್ರು. ಸ್ವಲ್ಪ ಹೊತ್ತು ಹೀಗೆ ತಮಷೆ ಆಗಿ ಮಾತಾಡಿಕೊಂಡು ಕುತ್ಕೊಂಡ್ವಿ. ಅಡುಗೆ ರೆಡಿ ಆಯಿತು, ಎಲ್ಲರೂ ಒಟ್ಟಿಗೆ ಕೂತು ಡಿನ್ನರ್ ನ ಮಾಡಿದ್ವಿ.. ತುಂಬಾ ದಿನ ಆಯಿತು ಸೌತ್ ಇಂಡಿಯನ್ ಫುಡ್ ತಿಂದು ಮೇಡಂ ಗೆ ಥ್ಯಾಂಕ್ಸ್ ಹೇಳಿ ಬಬಿತ ಆಂಟಿ ಗೆ ಕೂಡ ತುಂಬಾ ಚೆನ್ನಾಗಿ ಇದೆ ಥ್ಯಾಂಕ್ಸ್ ಅಂತ ಹೇಳ್ದೆ. ಬಬಿತ ಆಂಟಿ ಫುಲ್ ಖುಷಿ ಅಗೋದ್ಲು. ಎಲ್ಲರ ಡಿನ್ನರ್ ಆಗೋ ಅಷ್ಟ್ರಲ್ಲಿ ರಾತ್ರಿ 9 ಗಂಟೆ ಆಗಿತ್ತು. ಸ್ವಲ್ಪ ಹೊತ್ತು ಮಾತಾಡಿಕೊಂಡು ನಾನು ಇನ್ನ ಹೊರಡ್ತೀನಿ ಅಂತ ಹೇಳ್ದೆ. ತಾತ ನನ್ನ ನೋಡಿ ಮಹಿ ನನ್ನ ಬೈಕ್ ಇದೆ RX ಬೈಕ್, ಇವಾಗ ನಾನು ಅದನ್ನ ಓಡಿಸೋ ಸ್ಟೇಜ್ ಅಲ್ಲಿ ಇಲ್ಲಾ ನನ್ನ ಮಗ ಕೂಡ ಬಿಸಿನೆಸ್ ಅಂತ ಬೈಕ್ ನ ಮುಟ್ಟೋಕು ಹೋಗಲ್ಲ. ಹೇಗಿದ್ರು ನಿನ್ನ ಸ್ಟಡೀಸ್ ಮುಗಿಯೋ ವರೆಗೂ ಅ ಬೈಕ್ ನಿನ್ನ ಹತ್ತಿರಾನೆ ಇರಲಿ ಎಲ್ಲದಕ್ಕೂ ಟ್ಯಾಕ್ಸಿ ಆಟೋ ಅಂತ ಹೋದ್ರೆ ಕಷ್ಟ ಅಂತ ಹೇಳಿದ್ರು. ಅಂಕಲ್ ಕೂಡ ಹೌದು ಮಹಿ ಇಲ್ಲಿ ಇರೋತನಕ ಅ ಬೈಕ್ ನಾ ನೀನೇ ಯೂಸ್ ಮಾಡ್ಕೋ ಅಂತ ಹೇಳಿದ್ರು. ನಾನು ಬೇಡ ಸರ್ ಅಂತ ಹೇಳ್ದೆ. ಮೇಡಂ ಬೈಕ್ ಕೀ ತಂದು ಕೈಲಿ ಇಟ್ಟು ಇದು ಮಾವನ ಬೈಕ್ ಅಂದ್ರೆ ನಿಮ್ ತಾತನ ಬೈಕ್ ತಾತ ಪ್ರೀತಿನಿಂದ ಕೊಡೋವಾಗ ಬೇಡ ಅಂತ ಹೇಳಬಾರದು ಅಂತ ಹೇಳಿದ್ರು. ನಾನು ವಿಧಿ ಇಲ್ಲದೆ ಬೈಕ್ ಕೀ ತೆಗೆದುಕೊಂಡು ಸರಿ ನಾನಿನ್ನು ಬರ್ತೀನಿ ಅಂತ ಹೇಳಿ ಬೈಕ್ ಸ್ಟಾರ್ಟ್ ಮಾಡಿಕೊಂಡು ಅಲ್ಲಿಂದ ಹೊರಟು ಹಾಸ್ಟೆಲ್ ಗೆ ಗೇಟ್ ಹತ್ತಿರ ಬಂದೆ. ಸೆಕ್ಯೂರಿಟಿ ಬೈಕ್ ನಾ ನೋಡಿ ಗನ್ ಬೈಕ್ ಅಂತ ಹೇಳಿದ್ರು. ನಾನು ಅವನ ಕೈಗೆ 100 ಕೊಟ್ಟು ಬೈಕ್ ನಾ ಪಾರ್ಕಿಂಗ್ ಅಲ್ಲಿ ನಿಲ್ಲಿಸಿ ನನ್ನ ರೂಮ್ ಗೆ ಹೋಗಿ ಲ್ಯಾಪ್ಟಾಪ್ ನಾ ತೆಗೆದುಕೊಂಡು. ಅಸಲಿ ವರ್ಕ್ ನಾ ಶುರು ಮಾಡೋದಕ್ಕೆ ಕುತ್ಕೊಂಡೆ. 

   ಮಾರನೇ ದಿನ ಬೆಳಿಗ್ಗೆ ಎದ್ದು ಫ್ರೆಷ್ ಅಪ್ ಆಗಿ ತಿಂಡಿ ತಿಂದು ಬೈಕ್ ಸ್ಟಾರ್ಟ್ ಮಾಡಿಕೊಂಡು ಕಾಲೇಜ್ ಗೆ ಹೋದೆ. ಅಷ್ಟರಲ್ಲಿ ಸೀತಾ ಕಾಲ್ ಮಾಡಿದ್ಲು. ನಾನು ಕಾಲ್ ಪಿಕ್ ಮಾಡಿ ಅ ಹೇಳಿ ಅಂತ ಹೇಳ್ದೆ. ಮಹಿ ಅಪ್ಪ ನಿಮ್ಮನ್ನ ಕರೀತಾ ಇದ್ದಾರೆ ಕಾರ್ ಪಾರ್ಕಿಂಗ್ ಅಲ್ಲಿ ಇದ್ದೀವಿ ಅಂತ ಹೇಳಿದ್ಲು. ಸರಿ ಬರ್ತೀನಿ ಅಂತ ಹೇಳಿ ಕಾಲ್ ಕಟ್ ಮಾಡಿ ಪಾರ್ಕಿಂಗ್ ಕಡೆಗೆ ಹೋದೆ. ಸೀತಾ ಕಾರ್ ಕಾಣಿಸ್ತು. ಸೀತಾ ಕಾರ್ ಒಳಗೆ ಬಂದು ಕುತ್ಕೋ ಅಂತ ಹೇಳಿದ್ರು. ನಾನು ಹೋಗಿ ಮುಂದೆ ಸೀಟ್ ಅಲ್ಲಿ ಕುತ್ಕೊಂಡೆ. ಡ್ರೈವರ್ ಕಾರ್ ಸ್ಟಾರ್ಟ್ ಮಾಡಿ ಮುಂದೆ ಹೋದ. ನಾನು ಅಂಕಲ್ ನಾ ನೋಡಿ ಗುಡ್ ಮಾರ್ನಿಂಗ್ ಸರ್ ಅಂತ ಹೇಳ್ದೆ. ಅವರು ಗುಡ್ ಮಾರ್ನಿಂಗ್ ಹೇಳಿ. ಮಹಿ ನಾನ್ ಹೇಳಿದರ ಬಗ್ಗೆ ಏನ್ ಯೋಚ್ನೆ ಮಾಡಿದೆ ಅಂತ ಕೇಳಿದ್ರು. ನಾನು ಡ್ರೈವರ್ ಗೆ ಸರ್ ವಾಪಸ್ಸು ಪಾರ್ಕಿಂಗ್ ಗೆ ನಡೀರಿ ಅಂತ ಹೇಳ್ದೆ.  ಸೀತಾ ಅಂಕಲ್ ಏನು ಮಾತಾಡಿಲ್ಲ. ಡ್ರೈವರ್ ಕಾರ್ ಪಾರ್ಕಿಂಗ್ ಗೆ ಬಂದು ಕಾರ್ ನಿಲ್ಲಿಸಿ ಹೊರಗೆ ಹೋಗೋಕೆ ನೋಡಿದ್ರು. ನಾನು ಅವರನ್ನ ನೋಡಿ ಸರ್ ಇಲ್ಲೇ ಕುಳಿತುಕೊಳ್ಳಿ ಅಂತ ಹೇಳ್ದೆ. ಡ್ರೈವರ್ ಅಲ್ಲೇ ಅವನ ಸೀಟ್ ಅಲ್ಲೇ ಕುತ್ಕೊಂಡ್ರು. ನಾನು ಅಂಕಲ್ ನಾ ನೋಡಿ ಸರ್ ನಾನು ನಿಮ್ಮ ಕಂಪನಿ ಅಲ್ಲಿ ವರ್ಕ್ ಮಾಡೋಕೆ ರೆಡಿ, ಅದ್ರೆ ನನ್ನ ಐಡೆಂಟಿಟಿ ಯಾರಿಗೂ ಗೊತ್ತಾಗಬಾರದು ಅಂತ ಹೇಳ್ದೆ. ಅಂಕಲ್ ತುಂಬಾ ಥ್ಯಾಂಕ್ಸ್ ಮಹಿ ಒಪ್ಪಿಕೊಂಡಿದ್ದಕ್ಕೆ ಅಂತ ಹೇಳಿದ್ರು. ಸರ್ ನೀವು ನನ್ನ ಮೇಲೆ ನಂಬಿಕೆ ಇಟ್ಟು ಕೇಳೋವಾಗ ಆಗಲ್ಲಾ ಅನ್ನೋದಕ್ಕೆ ಆಗೋದಿಲ್ಲ. ಅದ್ರೆ ನನ್ನದು ಒಂದೇ ಕಂಡೀಶನ್ ಅಂತ ಕೇಳ್ದೆ. ಅಂಕಲ್ ಏನ್ ಹೇಳು ಮಹಿ ಅಂತ ಕೇಳಿದ್ರು. ಇನ್ಮುಂದೆ ಈ ಕಂಪನಿ ನಾನ್ ಹೇಳಿದ ಹಾಗೇ ನಡೆಯಬೇಕು. ಅಂತ ನನ್ನ ಪ್ಲಾನ್ ಪೂರ್ತಿ ಹೇಳಿದೆ. ಅಂಕಲ್ ನನ್ನ ಪ್ಲಾನ್ ಕೇಳಿ ಖುಷಿ ಆಗಿ ಮಹಿ ಇನ್ಮುಂದೆ ಈ ಕಂಪನಿ ನಿಂದು, ನಿನ್ ಹೇಗೆ ಹೇಳ್ತೀಯೋ ಹಾಗೇ, ಮೋಸದಿಂದ ಹೊಡಿಯೋಕೆ ಬರೋ ಪ್ರತಿ ಒಬ್ಬರಿಗೂ ಗೊತ್ತಾಗಬೇಕು ಅದರ ಪ್ರತಿ ಫಲ ಏನು ಅಂತ ಹೇಳಿದ್ರು. ಸರಿ ಸರ್ ನೀವು ಬಂದು ತುಂಬಾ ಹೊತ್ತಾಯಿತು. ನೀವು ನನ್ನ ಹತ್ತಿರ ಏನಾದ್ರು ಮಾತಾಡಬೇಕು ಅಂದ್ರೆ ಈ ನಂಬರ್ ಗೆ ಕಾಲ್ ಮಾಡಿ ಅಂತ ಹೇಳಿ ನನ್ನ ನಂಬರ್ ಯಿಂದ ಮಿಸ್ ಕಾಲ್ ಕೊಟ್ಟು. ಈ ನಂಬರ್ ಗೆ ಕಾಲ್ ಮಾಡಿ. ಇನ್ಮುಂದೆ ನೀವು ಆಫೀಸ್ ಅಲ್ಲೇ ಇರಿ ಹೊರಗಡೆ ಏನಾದ್ರು ಪ್ರಾಜೆಕ್ಟ್ ಮೀಟಿಂಗ್ ಇದ್ರೆ ಪ್ರಾಜೆಕ್ಟ್ ಫೈಲ್ ನಾ ಸಂಜೆ ಮನೆಗೆ ಬರ್ತಾ ಮನೆಗೆ ತಂದು ಬೆಳಿಗ್ಗೆ ಸೀತಾ ಅವರ ಕೈಗೆ ಕೊಟ್ಟು ಕಳಿಸಿಕೊಡಿ. ಅಂತ ಹೇಳ್ದೆ. ಅಂಕಲ್ ಸರಿ ಮಹಿ ಅಂತ ಹೇಳಿದ್ರು. ಸರಿ ಸರ್ ನೀವಿನ್ನು ಹೊರಡಿ ಬಂದು ತುಂಬಾ ಹೊತ್ತಾಯಿತು ಅಂತ ಹೇಳಿ. ಡೋರ್ ಒಪನ್ ಮಾಡಿ  ಡೋರ್ ಗೆ ಅಟ್ಟಿಸಿದ್ದ ಸಿಗ್ನಲ್ ಜಾಮ್ಮರ್ ನಾ ತೆಗೆದುಕೊಂಡು ಬೈ ಸರ್ ಅಂತ ಹೇಳ್ದೆ. ಅಂಕಲ್ ನನ್ನ ಕಡೆಗೆ ನೋಡಿ ಒಂದು ಸ್ಮೈಲ್ ಮಾಡಿ ಬೈ ಹೇಳಿದ್ರು. ಸೀತಾ ಅವರ ಅಪ್ಪನಿಗೆ ಬೈ ಹೇಳಿದ್ಲು. ಅಂಕಲ್ ಅಲ್ಲಿಂದ ಹೊರಟು ಹೋದ್ರು.

   ಇಬ್ರು ಕ್ಲಾಸ್ ಕಡೆಗೆ ನಡ್ಕೊಂಡು ಹೋಗ್ತಾ ನನ್ನ ನೋಡಿ,  ಏನೋ ಅನ್ಕೊಂಡು ಇದ್ದೆ ಅದ್ರೆ ನಾನ್ ಅಂದುಕೊಂಡಷ್ಟು ಸಾಮಾನ್ಯ ವ್ಯಕ್ತಿ ನೀವಲ್ಲ. ನೋಡೋಕೆ ಡಿಸೆಂಟ್ ಆಗಿ ಇದ್ರು ಬ್ರೈನ್ ಮಾತ್ರ ಕ್ರಿಮಿನಲ್ ಬ್ರೈನ್ ಇಷ್ಟೇನಾ ಇಲ್ಲಾ ಇನ್ನು ಏನಾದ್ರು ಹಿಡೆನ್ ಟ್ಯಾಲೆಂಟ್ ಇದೆಯಾ ಅಂತ ಕೇಳಿದ್ಲು. ನಾನು ನಗ್ತಾ ಸದ್ಯಕ್ಕೆ ಇಷ್ಟೇ ಅಂತ ಹೇಳಿ. ಕ್ಲಾಸ್ ಒಳಗೆ ಹೋಗಿ ಕೂತ್ಕೊಂಡು. ಸೀತಾ ಅವರ ಫ್ರೆಂಡ್ಸ್ ಕಡೆಗೆ ನೋಡಿ. ಮಧ್ಯಾಹ್ನ ಲಂಚ್ ಆದಮೇಲೆ ಒಂದು ಪಾರ್ಟಿ ಇದೆ ಎಲ್ಲರೂ ಬರ್ಬೇಕು ಅಂತ ಹೇಳ್ದೆ. ಪಾರ್ಟಿ ಹೆಸರು ಕೇಳಿದ್ದೆ ಎಲ್ಲರೂ ಫುಲ್ ಖುಷಿ ಆದ್ರು. ಕ್ಲಾಸ್ ಗಳು ಶುರು ಆದ್ವು. ಮಧ್ಯಾಹ್ನ ಎಲ್ಲರೂ ಲಂಚ್ ಮಾಡಿ  ಕ್ಯಾಂಪಸ್ ಗಾರ್ಡನ್ ಏರಿಯಾ ಗೆ ಹೋಗಿ ಕುತ್ಕೊಂಡ್ವಿ.  ಪಾಯಲ್ ಪಾರ್ಟಿ ಅಂತ ಹೇಳ್ದೆ ಎಲ್ಲಿ ಅಂತ ಕೇಳಿದ್ಲು. ಇರು ಇರು ಅಂತ ಹೇಳಿದೆ. ಅಲ್ಲಿಗೆ ಸಿಂಗ್ ಮತ್ತೆ ಇನ್ನೊಬ್ಬ ಹುಡುಗ ಬಂದ. ಸಿಂಗ್ ನನ್ನ ನೋಡಿ ಮಹಿ ಬರೋಕೆ ಹೇಳ್ದೆ ಏನ್ ವಿಷಯ ಅಂತ ಕೇಳಿದ. ಮೊದಲು ಎಲ್ಲರಿಗೂ ಪರಿಚಯ ಮಾಡಿಸಿದೆ. ನಂತರ ಮಾತಾಡ್ತಾ. ನೋಡಿ ಇವಾಗ ನಾವು ಸ್ಟಡೀಸ್ ಮಾಡ್ತಾ ಇದ್ದಿವಿ, ಬಟ್ ಫ್ರೀ ಟೈಮ್ ಅಲ್ಲಿ ಖಾಲಿ ಇರ್ತೀವಿ. ಇವಾಗ ಖಾಲಿ ಇರೋ ಟೈಮ್ ಅಲ್ಲಿ ಜಾಬ್ ಮಾಡಿದ್ರೆ ಫ್ಯೂಚರ್ ಅಲ್ಲಿ ನಮಗೂ ಹೆಲ್ಪ್ ಆಗುತ್ತೆ ದುಡ್ಡು ಕೂಡ ಬರುತ್ತೆ ಅಂತ ಹೇಳಿದೆ. ಸಿಂಗ್ ಮಾತಾಡ್ತಾ ಇವಾಗ ನಮಗೆ ಯಾರ್ ಜಾಬ್ ಕೊಡ್ತಾರೆ ಅದು ನಮಗೆ ಕಾಲೇಜ್ ಮುಗಿದು ಸಿಗೋ ಫ್ರೀ ಟೈಮ್ ಅಲ್ಲಿ ಅಂತ ಕೇಳಿದ. ಪಾಯಲ್ ಕೂಡ ಹೌದು ಮಹಿ ಯಾರ್ ಕೊಡ್ತಾರೆ ಅಂತ ಕೇಳಿದ್ಲು.  ನಾನೆ ಕೊಡ್ತೀನಿ ಬಟ್ ಈ ವಿಷಯ ನಮ್ಮಲ್ಲೇ ಇರಬೇಕು ಅಂತ ಹೇಳ್ದೆ. ಮೋನಿಕಾ ಇದ್ಕೊಂಡು ಅನ್ಕೊಂಡೆ ಈಗಲೇ ನೀನು ಈ ರೀತಿ ಯೋಚ್ನೆ ಮಾಡಿದ್ದಿಯ ಅಂದ್ರೆ ನಿನ್ನ ಆಲೋಚನೆಗಳು ಏನು ಅಂತ ನಾನು ಅರ್ಥ ಮಾಡ್ಕೋತೀನಿ. ಐಮ್ ವಿತ್ ಯು ಅಂತ ಹೇಳಿದ್ಲು. ಪಾಯಲ್ ಏನೇ ಹೇಳ್ತಾ ಇದ್ದಿಯಾ ಏನ್ ಕೆಲಸ ಏನು ಅಂತ ಏನು ಗೊತ್ತಿಲ್ದೆ ಓಕೆ ಹೇಳ್ತಾ ಇದ್ದಿಯಾ ಅಂತ ಕೇಳಿದ್ರೆ. ಮೋನಿಕಾ ಲೇ ಸ್ವಲ್ಪ ಯೋಚ್ನೆ ಮಾಡು ಇಂಜಿನಿಯರಿಂಗ್ ಸ್ಟೂಡೆಂಟ್ಸ್ ನಾವು, ಫ್ರೆಂಡ್ಸ್ ಅದ ಎರಡೇ ದಿನಕ್ಕೆ ಪಾರ್ಟಿ ಪಬ್ ಹೋಗೋಣ ಅಂತ ಕೇಳೋ ಹುಡುಗರು ಇರೋವಾಗ ಜಾಬ್ ಕೊಡ್ತೀನಿ ಮಾಡೋಣ ಅಂತ ಕೇಳ್ತಾ ಇದ್ದಾನೆ ಅಂದ್ರೆ ಅರ್ಥ ಮಾಡ್ಕೋ ಅವನ ಆಲೋಚನೆ ಏನು ಅಂತ. ನಾವು ಒಬ್ಬರ ಮೇಲೆ ಡಿಪೆಂಡ್ ಆಗೋಕ್ಕಿಂತ ನಮ್ ಮೇಲೆ ನಾವೇ ನಂಬಿಕೆ ಇಟ್ಕೋಬೇಕು ಅಲ್ವಾ. ನಿನಗೆ ಇಷ್ಟ ಇದ್ರೆ ಓಕೆ ಹೇಳು ಇಲ್ಲಾ ಹಾಯ್ ಬೈ ಪಬ್ ಪಾರ್ಟಿ ಅನ್ನೋ ಫ್ರೆಂಡ್ಸ್ ಸಿಗ್ತಾರೆ ಅವರ ಜೊತೆಗೆ ಹೋಗು ಅಂತ ಹೇಳಿದ್ಲು. ಪಾಯಲ್  ಏನೇ ಅನ್ಕೊಂಡು ಇದ್ದಿಯಾ ನನ್ನ ಅಂತ ಹೇಳಿ ಮಹಿ ನಾನ್ ಕೂಡ ಬರ್ತೀನಿ ಅಂತ ಹೇಳಿದ್ಲು. ಬಿಪ್ಪನ್ ಕೂಡ ಓಕೆ ಭಾಯ್ ನಾನ್ ಕೂಡ ಬರ್ತೀನಿ ಅಂತ ಹೇಳಿದ. ಸಿಂಗ್ ಕೂಡ ಓಕೆ ಹೇಳಿದ ಇನ್ನೊಬ್ಬ ಹುಡುಗ ಕೂಡ ಓಕೆ ಅಂತ ಹೇಳಿದ. ಇದನ್ನೆಲ್ಲಾ ನೋಡ್ತಾ ಇದ್ದಾ ಸೀತಾ ಹಾಗೇ ನೋಡ್ತಾ ಇದ್ಲು. ಪಾಯಲ್ ಲೇ ಸೀತಾ ಹೇಳು ನಿನಗೆ ಓಕೆ ನಾ ಅಂತ ಕೇಳಿದ್ಲು. ಸೀತಾ ನನಗೆ ಡಬ್ಬಲ್ ಓಕೆ ಅಂತ ಹೇಳಿದ್ಲು.

   ಸರಿ ಎಲ್ಲರೂ ಒಪ್ಪಿಕೊಂಡ್ರಿ ಅಲ್ವಾ. ಕಾಲೇಜ್ ಮುಗಿದ ಮೇಲೆ ಒಂದು ಪ್ಲೇಸ್ ಗೆ ಹೋಗೋಣ ಅಲ್ಲಿ ಮಿಕ್ಕಿದ ವಿಷಯ ಮಾತಾಡೋಣ ಅಂತ ಹೇಳಿದೆ. ಎಲ್ಲರೂ ನಂಬರ್ ಶೇರ್ ಮಾಡ್ಕೊಂಡು ವಾಪಸ್ಸು ಕ್ಲಾಸ್ ರೂಮ್ ಒಳಗೆ ಹೋದ್ವಿ. ಸಂಜೆ ಕ್ಲಾಸ್ ಮುಗಿದ ಮೇಲೆ  ಎಲ್ಲರೂ ಬೈಕ್ ಅಲ್ಲಿ ಒಂದು ಪ್ಲೇಸ್ ಗೆ ಹೋದ್ವಿ.  ಅಲ್ಲಿ ದೀಪು ಕಾಣಿಸಿದ ನಾನ್ ಹೋಗಿ ಮಾತಾಡಿಸಿದೆ. ದೀಪು ನನ್ನ ನೋಡಿ ಅನ್ಕೊಂಡೆ ಆಲ್ ದಿ ಬೆಸ್ಟ್, ಯಾವಾಗಾದ್ರೂ ನಿನ್ನ ಕಂಪನಿ ಗೆ ಬರ್ತೀನಿ ನನಗು ಒಂದು ಜಾಬ್ ಕೊಡು ಅಂತ ಹೇಳಿದ.  ಬ್ರೋ ಕಂಪನಿ ನೇ ನಮ್ದು ಬನ್ನಿ ಬ್ರೋ ಅಂತ ಹೇಳಿ ಒಂದು ಅಪಾರ್ಟ್ಮೆಂಟ್ ಒಳಗೆ ಹೋಗಿ ಒಂದು ಫ್ಲಾಟ್ ಒಳಗೆ ಹೋದ್ವಿ. ದೀಪು ಇದೆ ಮಹಿ ನಿನ್ನ ಫ್ಲಾಟ್, ಎಲೆಕ್ಟ್ರಿಶಿಯನ್ ಬರ್ತಾನೇ ನಿನಗೆ ಎಲ್ಲೆಲ್ಲಿ ಏನ್ ಬೇಕೋ ಹಾಗೇ ರೆಡಿ ಮಾಡಿಸ್ಕೊ, ಅಂತ ಹೇಳಿ ಫ್ಲಾಟ್ ಕೀ ಕೊಟ್ಟ. ಅದು 3 bhk ಫ್ಲಾಟ್. ನಾನು ಎಲ್ಲರ ಕಡೆಗೆ ನೋಡಿ ಫ್ರೆಂಡ್ಸ್ ಇದೆ ನಮ್ ಆಫೀಸ್. 2 3 ಡೇಸ್ ಅಲ್ಲಿ ವರ್ಕ್ ಕಂಪ್ಲೀಟ್ ಆಗುತ್ತೆ, ನೆಕ್ಸ್ಟ್ ವೀಕಿಂದ ವರ್ಕ್ ಸ್ಟಾರ್ಟ್, ಇಲ್ಲಿ ಸ್ಯಾಲರಿ ಇಲ್ಲಾ ಬಂದ ಪ್ರಾಫಿಟ್ ಅಲ್ಲಿ ಎಲ್ಲರಿಗೂ ಈಕ್ವಲ್ ಶೇರ್ ಅಂತ ಹೇಳ್ದೆ. ಎಲ್ಲರೂ ಓಕೆ ಅಂತ ಹೇಳಿದ್ರು. ವಾಪಸ್ಸು ಅಪಾರ್ಟ್ಮೆಂಟ್ ಹೊರಗೆ ಬಂದು ಒಂದು ಹೋಟೆಲ್ ಗೆ ಹೋಗಿ ಸ್ನಾಕ್ಸ್ ಕಾಫಿ ಆರ್ಡರ್ ಮಾಡಿ  ಎಲ್ಲಾ ಕುತ್ಕೊಂಡು ತಿಂದು ಕುಡಿದ್ವಿ. ದೀಪು ಬೈ ಹೇಳಿ ಹೊರಟು ಹೋದ. ಸಿಂಗ್ ಮತ್ತೆ ಇನ್ನೊಬ್ಬ ಹಾಸ್ಟೆಲ್ ಗೆ ಹೋದ್ರು. ಪಾಯಲ್ ಮೋನಿಕಾ ಮನೆಗೆ ಹೋದ್ರೆ. ಬಿಪ್ಪನ್ ಹಾಸ್ಟೆಲ್ ಗೆ ಹೋದ. 

  ಸೀತಾ ನಾ ಬೈಕ್ ಅಲ್ಲಿ ಕೂರಿಸಿಕೊಂಡು ಹೋಗಿ ಅವರ ಮನೆ ಹತ್ತಿರ ಡ್ರಾಪ್ ಮಾಡಿದೆ. ಸೀತಾ ಬನ್ನಿ ಮನೆ ಒಳಗೆ ಅಂತ ಹೇಳಿದ್ಲು. ಇಲ್ಲಾ ಸ್ವಲ್ಪ ಕೆಲಸ ಇದೆ ಅಂತ ಹೇಳಿದೆ. ಸೀತಾ ಅರ್ಥ ಮಾಡಿಕೊಂಡು ಬೈ ಹೇಳಿ ಮನೆ ಒಳಗೆ ಹೋದಳು. ನಾನು ಬೈಕ್ ಸ್ಟಾರ್ಟ್ ಮಾಡಿಕೊಂಡು ಹಾಸ್ಟೆಲ್ ಗೆ ಹೋದೆ. 


2 ಡೇಸ್ ಅಲ್ಲಿ ಫ್ಲಾಟ್ ಒಳಗೆ ಎಲ್ಲಾ ರೆಡಿ ಆದವು. ಕಿಚನ್ ಅಲ್ಲಿ ಅಡುಗೆ ಮಾಡಿ ಕೊಳ್ಳೋಕೆ ರೇಷನ್ ಪಾತ್ರೆಗಳು. ಹಾಲ್ ಅಲ್ಲಿ ಒಂದು ಟಿವಿ ಕೂತ್ಕೋಳ್ಳೋಕೆ ಸೋಫಾ, ಒಂದು ರೂಮ್ ಅಲ್ಲಿ ಮೂರು ಸಿಂಗಲ್ ಬೆಡ್, 2 ರೂಮ್ ಅಲ್ಲಿ  6 ಸಿಸ್ಟಮ್ಸ್  ಮೂರು ಲ್ಯಾಪ್ಟಾಪ್. ಪವರ್ ಬ್ಯಾಕ್ ಅಪ್. ಮಿನಿ ಸರ್ವರ್ ಹೈ ಸ್ಪೀಡ್ ಇಂಟರ್ನೆಟ್ ಕನೆಕ್ಷನ್. ಎಲ್ಲಾ ರೆಡಿ ಆದವು. 

* ************************************