Abhinayanaa - 8 in Kannada Love Stories by S Pr books and stories PDF | ಅಭಿನಯನಾ - 8

The Author
Featured Books
Categories
Share

ಅಭಿನಯನಾ - 8

   ಸೂಪರ್ ಮಾರ್ಕೆಟ್ ಗೆ ಬಂದ ವಿಶ್ವನಾಥ್,,, ಅಭಿ ಗೆ ಕಾಲ್ ಮಾಡ್ತಾರೆ, ಸ್ವಿಚ್ ಅಪ್ ಬರುತ್ತೆ.  ವಿಶ್ವನಾಥ್ ಗೆ ಅಭಿ ಬಗ್ಗೆ ಯೋಚ್ನೆ ಕಾಡೋಕೆ ಶುರುವಾಗುತ್ತೆ.  ಅಭಿ ಯಾವತ್ತೂ ಹೀಗೆ ಮಾಡೋವನು ಅಲ್ಲ ಏನೇ ಇದ್ರು ಕಾಲ್ ಮಾಡಿ ಹೇಳ್ತಾ ಇದ್ದಾ. ಈಗ ಸ್ವೀಟ್ ಆಫ್ ಮಾಡ್ಕೊಂಡು ಇದ್ದಾನೆ. ಮತ್ತೆ ಏನಾದ್ರು ಹುಷಾರಿಲ್ಲದೆ ಆಯ್ತಾ, ಇಲ್ಲಿ ನೋಡಿಕೊಳ್ಳೋವ್ರು ಯಾರು ಇಲ್ಲಾ ಅಂತ ಅವನ ಮನೆಗೆ ಏನಾದ್ರು ಹೋದ್ನ. ಅಂತ ಯೋಚ್ನೆ ಮಾಡ್ತಾ ಆಫೀಸ್ ಅಲ್ಲಿ ಕೂತಿರೋವಾಗ ನಯನಾ ಆಫೀಸ್ ರೂಮ್ ಡೋರ್ ಹತ್ತಿರ ಬರ್ತಾಳೆ. ನಯನಾ ನಾ ನೋಡಿ ವಿಶ್ವನಾಥ್,,, ನಯನಾ ನೀನು ಇಲ್ಲಿ 

ನಯನಾ,,, ಅಪ್ಪ ಅದು, ಅಭಿ ಅಂತ ಮೌನವಾಗಿ ಬಿಡ್ತಾಳೆ 

ವಿಶ್ವ,,, ಇಲ್ಲಾ ನಯನಾ ಕಾಲ್ ಮಾಡಿದ್ರೆ ಸ್ವಿಚ್ ಅಪ್ ಬರ್ತಾ ಇದೆ. ಯಾವತ್ತೂ ಹೀಗೆ ಮಾಡಿದವನೇ ಅಲ್ಲ. ನಿರಂಜನ್ ನಾ ಕಳಿಸಿದ್ದೀನಿ ನೋಡ್ಕೊಂಡು ಬರೋಕೆ, ನೀನು ಬಂದು ಕುತ್ಕೋ.

ನಯನಾ,,, ಇಲ್ಲಾ ಅಪ್ಪ ನಾನು ಕೌಂಟರ್ ಹತ್ತಿರ ಇರ್ತೀನಿ ಅಂತ ಹೇಳಿ ಅಲ್ಲಿಂದ ಹೊರಟು ಹೋಗ್ತಾಳೆ.

ವಿಶ್ವನಾಥ್ ಮಗಳಲ್ಲಿ ಈ ಬದಲಾವಣೆ ನೋಡಿ ಮನಸಲ್ಲೇ ಖುಷಿ ಪಡ್ತಾರೆ.

ನಯನಾ ಬಿಲ್ಲಿಂಗ್ ಕೌಂಟರ್ ಹತ್ತಿರ ಬರ್ತಾಳೆ.

ಪ್ರಿಯಾ ನಯನಾ ನಾ ನೋಡಿ,,, ಹೇಗಿದ್ದೀಯ ನಯನಾ  ಏನ್ ಇವತ್ತು ಕೂಡ ಸೂಪರ್ ಮಾರ್ಕೆಟ್ ಗೆ ಬಂದು ಬಿಟ್ಟಿದ್ದೀಯ.

ನಯನಾ,,, ಯಾಕೆ ಬರ್ಬಾರ್ದ?

ಪ್ರಿಯಾ,,, ಲೇ ನಾನ್ ಹಾಗೇ ಹೇಳಿಲ್ವೆ, ವರ್ಷಗಳೇ ಆಯ್ತು ನೀನು ಇಲ್ಲಿಗೆ ಬಂದು ಈ ಕೌಂಟರ್ ಒಳಗೆ ನಿಂತು. ನೆನ್ನೆ ಏನೋ ಸರ್ ಬಂದಿಲ್ಲ ಅಂತ ಬಂದಿದ್ದೆ. ಬಟ್ ಇವತ್ತು ಸರ್ ಬಂದ್ರು ಕೂಡ ಬಂದೆ ಅಲ್ವಾ ಅದಕ್ಕೆ ಕೇಳ್ದೆ. ಅಷ್ಟೇ ಬಟ್ ನಿನ್ ಬಂದಿದ್ದು ನನಗೆ ತುಂಬಾ ಖುಷಿ ಆಯ್ತು.

ತೇಜು,,, ಹೌದು ನಯನಾ ನಿನ್ ಬಂದಿದ್ದು ತುಂಬಾ ಖುಷಿ ಆಯ್ತು. ಇನ್ಮೇಲೆ ದಿನ ಬರ್ತೀಯ.

ನಯನಾ,,, ದಿನ ಬಂದ್ರೆ ಮಗಳನ್ನ ನೋಡ್ಕೊಳ್ಳೋದು ಯಾರೇ, ಅವಳನ್ನ ಅವಳ ಅಜ್ಜಿ ಜೊತೆಗೆ ಬಿಟ್ಟು ಬಂದ್ರೆ ತರ್ಲೆ ಮಾಡ್ಕೊಂಡು ಅವರಿಗೂ ಕೆಲಸ ಮಾಡ್ಕೊಳ್ಳೋಕೆ ಬಿಡೋದಿಲ್ಲ, ಸ್ವಲ್ಪ ದಿನ ಆಮೇಲೆ ಅವಳನ್ನ ಸ್ಕೂಲ್ ಗೆ ಸೇರಿಸಿ ಆಮೇಲೆ ದಿನ ಬರ್ತೀನಿ. 

ತೇಜು,,, ಅಬ್ಬಾ ಮೊದಲು ಅ ಕೆಲಸ ಮಾಡೇ. ಇಲ್ಲಾ ಅಂದ್ರೆ ಅ ಎರಡು ಕೋತಿಗಳು ಕಂಟ್ರೋಲ್ ಅಲ್ಲಿ ಇರೋದಿಲ್ಲ. ಈ ಸೂಪರ್ ಮಾರ್ಕೆಟ್ ನೇ ನಮ್ದು ಅನ್ನೋತರ ಆಡ್ತಾರೆ.

ರಾಜ್ ನಿರಂಜನ್ ಬರ್ತಾ, ಯಾರ್ಗೆ ಕೋತಿಗಳು ಅಂತ ಹೇಳ್ತಾ ಇದ್ದಿಯಾ ಅಂತ ಕೌಂಟರ್ ಹತ್ತಿರ ಬರ್ತಾರೆ.

ತೇಜು,,,, ಇನ್ನ್ಯಾರಿಗೆ ನಿಮಗೇನೇ. ಅಭಿ ಬಂದ್ರೆ ಮುಚ್ಕೊಂಡು ನಿಮ್ ಕೆಲಸ ನೀವು ಮಾಡ್ಕೊಂಡು ಸೈಲೆಂಟ್ ಆಗಿ ಇರ್ತೀರ, ಅವನು ಬಂದಿಲ್ಲ ಅಂದ್ರೆ ನಿಮ್ದೇ ರಾಜ್ಯಭಾರ ನಡೆಸ್ತೀರಾ. ಸರ್ ಕೂಡ ನಮ್ ಹುಡುಗರೇ ಅಂತ ಏನು ಮಾತಾಡೋಕು ಹೋಗೋದಿಲ್ಲ. 

ರಾಜ್,,, ಹಲೋ ಆಫ್ ಟಿಕೆಟ್ ನಾವೇನು ಅಭಿ ಭಯ ಬಿದ್ದು ಅವನು ಹೇಳಿದ್ದನ್ನ ಕೇಳೋದಿಲ್ಲ. ಸರ್ ಅವನಿಗೆ ಸೂಪರ್ ಮಾರ್ಕೆಟ್ ನಾ ನೋಡ್ಕೊಳ್ಳೋಕೆ ಹೇಳಿದ್ದಾರೆ ಅಂತ ಸ್ವಲ್ಪ ಮರ್ಯಾದೆ ಕೊಟ್ಟು ಇರ್ತೀವಿ ಅಷ್ಟೇ.

ಪ್ರಿಯಾ,,, ನಗ್ತಾ ಹೌದ ಮತ್ತೆ ಯಾಕೋ ಹೊರಗಡೆ ಕೂಡ ಅವನನ್ನ ನೋಡಿ ಅಷ್ಟು ಭಯ ಬೀಳೋದು.

ನಿರಂಜನ್,,, ನಗ್ತಾ ನೀನು ಹುಡುಗ ಆಗಿ ಹುಟ್ಟಿ ರಾತ್ರಿ ಹೊತ್ತು ಅವನ ಜೊತೆಗೆ ತಿರುಗಾಡಿದ್ರೆ ನಿನಗೆ ಗೊತ್ತಾಗಿರೋದು, ಯಾಕ್ ನಾವ್ ಅವನಿಗೆ ಭಯ ಬೀಳ್ತಿವಿ ಅಂತ. 

ನಯನಾ ಏನು ಮಾತನಾಡದೆ ಸುಮ್ನೆ ಕೇಳಿಸಿ ಕೊಳ್ತಾ ಇರ್ತಾಳೆ.

ತೇಜು,,, ಹೌದ ಏನಪ್ಪಾ ಅಂತದ್ದು ಅವನಲ್ಲಿ ಭಯ ಬಿಳಿಸೋ ಅಂತ ಕ್ಯಾರೆಕ್ಟರ್ ಇರೋದು, ಸ್ವಲ್ಪ ಬಿಡಿಸಿ ಹೇಳು. 

ರಾಜ್,,, ನೋಡೋಕೆ ಡಿಸೆಂಟ್ ಆಗಿ ಇರ್ತಾನೆ, ಕುಡಿದ್ರೆ ಸರಿ ಇಲ್ವೆ, ಅವನಿಗೆ ಯಾರಾದ್ರೂ ಏನಾದ್ರು ಅಂದ್ರೆ ಸುಮ್ನೆ ಆಗಿ ಬಿಡ್ತಾನೆ, ಅದ್ರೆ ಅವನು ಇಷ್ಟ ಪಡೋವ್ರ್ನಾ ಅಂದ್ರೆ ನಾವೇ ಆಗಲಿ ನೀವೇ ಆಗಲಿ, ಈ ಸೂಪರ್ ಮಾರ್ಕೆಟ್ ಅಲ್ಲಿ ವರ್ಕ್ ಮಾಡೋವ್ರು ಅಷ್ಟೇ ಯಾಕೆ ಸರ್ ಕೂಡ ಯಾರಾದ್ರೂ ಏನಾದ್ರು ಒಂದು ಮಾತು ಅಂದ್ರೆ ಹುಡುಕಿಕೊಂಡು ಹೋಗಿ ಹೊಡೀತಾನೆ. ಭಯ ಅನ್ನೋದೇ ಇಲ್ಲಾ. 

ಪ್ರಿಯಾ,,, ಲೋ ಏನೋ ಹೇಳ್ತಾ ಇದ್ದಿಯಾ.

ಅಲ್ಲಿಗೆ ಬಂದ ಮೇಘ,,, ಹೌದು ಕಣೆ ರಾಜ್ ಹೇಳೋದು ನಿಜ,, ನಾವು ಇಲ್ಲಿಗೆ ಕೆಲಸಕ್ಕೆ ಬರೋವಾಗ ಕೆಲಸ ಮುಗಿಸಿಕೊಂಡು ಹೋಗೋವಾಗಾ, ನಾಲಕ್ಕು ಜನ ಹುಡುಗರು ಬೈಕ್ ಅಲ್ಲಿ ನಮ್ಮನ್ನ ಫಾಲೋ ಮಾಡ್ಕೊಂಡು ನಮ್ ಹಿಂದೇನೆ ಬರ್ತಾ ಕೆಟ್ಟ ಕೆಟ್ಟದಾಗಿ ಕಾಮೆಂಟ್ಸ್ ಮಾಡ್ತಾ ಇದ್ರು ಅಲ್ವಾ ನೆನಪಿದೆಯಾ.

ತೇಜು,,, ಹ್ಮ್ ಬಟ್ ಅದು ನಡೆದು ಎಷ್ಟೋ ದಿನಗಳು ಆಯಿತು. ಇವಾಗ ಅವರು ಬರೋದು ಇಲ್ಲಾ ಅಲ್ವಾ.

ಮೇಘ,,, ಹೌದು ಬರೋದು ಇಲ್ಲಾ. ಅದಕ್ಕೆ ಕಾರಣ ಅಭಿ.

ಪ್ರಿಯಾ,,, ಏನೇ ಹೇಳ್ತಾ ಇದ್ದಿಯ?

ನಿರಂಜನ್,,,, ಹೌದೇ. ನಿಮ್ಮನ್ನ ಅ ಹುಡುಗರು ದಿನ ಕಾಟ ಕೊಡೋದನ್ನ ಮೇಘ ನಮ್ ಹತ್ತಿರ ಹೇಳಿದ್ಲು. ಆಮೇಲೆ ಅ ಹುಡುಗರ ಬಗ್ಗೆ ತಿಳ್ಕೊಂಡಾಗ ಗೊತ್ತಾಗಿದ್ದು. ಈ ಏರಿಯಾ ನಾ ಕಂಟ್ರೋಲ್ ಮಾಡ್ತಾ ಇರೋ ರೌಡಿ ಗ್ಯಾಂಗ್ ನಾ ಹುಡುಗರು ಅಂತ, ಅಷ್ಟೇ ಅಲ್ಲ ಅ ಗ್ಯಾಂಗ್ ಗೆ ಏರಿಯಾ ಕಾರ್ಪೊರೇಟರ್ ಸಪೋರ್ಟ್ ಬೇರೆ ಇದೆ ಅಂತ. ಅದ್ರೆ ಅಭಿ ಅದಕೆಲ್ಲಾ ತಲೇನೆ ಕೆಡಸಿ ಕೊಂಡಿಲ್ಲ. ಸೀದಾ ಅವರ ಅಡ್ಡಕ್ಕೆ ಹೋಗಿ ಅವನ ಗ್ಯಾಂಗ್ ಲೀಡರ್ ಹತ್ತಿರ ಹೋಗಿ ಮೊಬೈಲ್ ಅಲ್ಲಿ ಒಂದು ಕಾಲ್ ಮಾಡಿ ಅವನ ಕೈಗೆ ಕೊಟ್ಟ. ಅ ಗ್ಯಾಂಗ್ ಲೀಡರ್ ಹತ್ತಿರ ಮೊಬೈಲ್ ಅಲ್ಲಿ ಯಾರ್ ಮಾತಾಡಿದ್ರೋ ಗೊತ್ತಿಲ್ಲ, ನೋಡಿದ್ರೆ ನಿಮ್ಮನ್ನ ಫಾಲೋ ಮಾಡ್ತಾ ಇದ್ದಾ ಹುಡುಗರನ್ನ ಅವರೇ ಕರ್ಕೊಂಡು ಬಂದು ಅಭಿ ಮುಂದೆ ನಿಲ್ಲಿಸಿ. ನಿಮ್ಮಿಷ್ಟ ಬಾಸ್ ಇವರನ್ನ ಏನ್ ಬೇಕಾದ್ರು ಮಾಡ್ಕೊಳ್ಳಿ ನನಗು ಇದಕ್ಕೂ ಸಂಬಂಧ ಇಲ್ಲಾ ಅಂತ ಹೇಳಿ ಸೈಡ್ ಗೆ ಹೋಗಿ ಬಿಟ್ಟ. ಈ ಜನ್ಮದಲ್ಲಿ ಹುಡುಗೀರ ಸವಾಸಕ್ಕೆ ಹೋಗ್ಬಾರ್ದು ಅನ್ನೋ ತರ ಅ ನಾಲಕ್ಕು ಜನಕ್ಕೆ ಸರಿಯಾಗಿ ಕೊಟ್ಟ. ಅವತ್ತಿಂದ ಅವರು ನಿಮ್ ಹಿಂದೆ ಬರೋದನ್ನೇ ಸ್ಟಾಪ್ ಮಾಡಿ ಬಿಟ್ರು. 

ಪ್ರಿಯಾ, ತೇಜು,, ಇಬ್ಬರು ಶಾಕ್ 

ಪ್ರಿಯಾ,,, ಏನೋ ಹೇಳ್ತಾ ಇದ್ದಿಯಾ, ನಂಬೋಕೆ ಆಗ್ತಾ ಇಲ್ಲಾ, ಅಷ್ಟೆಲ್ಲ ನಮಗೆ ಹೆಲ್ಪ್ ಮಾಡಿದವನು ನಮಗೆ ಹೇಳೇ ಇಲ್ಲಾ.

ಮೇಘ,,, ನನಗು ಹೇಳಿಲ್ಲ, ಅವತ್ತು ಮಾರನೇ ದಿನ ಮುರುಜನ ಹಿಂದೆ ಸ್ಮೋಕ್ ಮಾಡೋಕೆ ಹೋದಾಗ ಮಾತಾಡ್ತಾ ಇದ್ರು. ನಾನು ಕೇಳಿಸಿಕೊಂಡು ಕೇಳಿದಕ್ಕೆ ಆಮೇಲೆ ಹೇಳಿದ್ರು. ಇಲ್ಲಾ ಅಂದಿದ್ರೆ ಹೇಳ್ತಾನೆ ಇದ್ದಿಲ್ಲ. 

ರಾಜ್,,,, ಅವರಿಗೆ ಅಷ್ಟೇ ಅಲ್ಲ, ಸರ್  ರಿಲೇಟಿವ್ ರೂಪೇಶ್ ಗೆ ಕೂಡ ಅಂತ ಮುಂದೆ ಹೇಳೋಕೆ ಹೋಗ್ತಾನೆ 

ನಿರಂಜನ್,, ಅಲ್ಲೇ ನಯನಾ ಇರೋದನ್ನ ಗಮನಿಸಿ ರಾಜ್ ನಾ ತಡೆದು ಸುಮ್ನೆ ಇರೋ ಅಂತ ಸನ್ನೆ ಮಾಡ್ತಾನೆ.

ರಾಜ್,,, ನಯನಾ ನಾ ನೋಡಿ ಸೈಲೆಂಟ್ ಆಗ್ತಾನೆ.

ಬಟ್ ನಯನಾ ಸ್ಪಷ್ಟವಾಗಿ ಕೇಳಿಸಿಕೊಂಡಳು. ರಾಜ್ ಹೇಳಿದ್ದನ್ನ.

ನಯನಾ,,, ರಾಜ್ ಮುಖ ನೋಡ್ತಾ ರಾಜ್ ಹೇಳು ಅಭಿ ರೂಪೇಶ್ ಜೊತೆಗೆ ಗಲಾಟೆ ಮಾಡಿಕೊಂಡನ ಏನಕ್ಕೆ.

ನಿರಂಜನ್,,, ಏನಿಲ್ಲಾ ನಯನಾ ಏನೋ ಚಿಕ್ ವಿಷಯ ಅಷ್ಟೇ ಬಿಡು, ಬೀಡಾ ಅಂಗಡಿ ಹತ್ತಿರ ಸಣ್ಣ ಗಲಾಟೆ ಅಷ್ಟೇ.

ನಯನಾ,,, ಕೈ ಕಟ್ಟಿಕೊಂಡು ಹೌದ, ನನ್ನ ಮುಖ ನೋಡಿಕೊಂಡು ಹೇಳು. ರೂಪೇಶ್ ಏನು ಎಂತವನು ಅನ್ನೋದು ನನಗೆ ಚೆನ್ನಾಗಿ ಗೊತ್ತು, ಏನ್ ನಡೀತು ಅಂತ ಹೇಳು.

ನಿರಂಜನ್,,, ನಯನಾ ಅದು ನಿನಗೆ ಮದುವೆ ಆಯಿತು ಅಲ್ವಾ ಅ ಹೊಸದರಲ್ಲಿ, ಅ ರೂಪೇಶ್ ರಾತ್ರಿ ಕುಡ್ಕೊಂಡು ಬಂದು ಸೂಪರ್ ಮಾರ್ಕೆಟ್ ಮುಂದೆ ನಿಂತು ಅವನ ಹುಡುಗರ ಜೊತೆಗೆ ಗಲಾಟೆ ಮಾಡ್ತಾ ಸರ್ ನಾ ಬಾಯಿಗೆ ಬಂದ ಹಾಗೇ ಬೈತಾ ಇದ್ದಾ ಅಷ್ಟೇ ಅಲ್ಲ ನಿನ್ನ ಬಗ್ಗೆ ತುಂಬಾ ಕೆಟ್ಟದಾಗಿ ಮಾತಾಡ್ತಾ ಇದ್ದಾ. ಅಭಿ ಹೊಸದಾಗಿ ಕೆಲಸಕ್ಕೆ ಸೇರ್ಕೊಂಡು ಇದ್ದಾ.  ಸರ್ ಕೂಡ ರೂಪೇಶ್ ಬಗ್ಗೆ ಗೊತ್ತಿರೋದ್ರಿಂದ  ನಮ್ಮನ್ನ ಸೈಲೆಂಟ್ ಆಗಿ ಇರೋದಕ್ಕೆ ಹೇಳಿ ಬಿಟ್ರು. ನಾವು ಸರ್ ಅವನು ಬಾಯಿಗೆ ಬಂದ ಹಾಗೇ ಮಾತಾಡ್ತಾ ಇದ್ದಾನೆ, ನೋಡ್ಕೊಂಡು ಹೇಗೆ ಸುಮ್ನೆ ಇರಿ ಅಂತ ಇದ್ದೀರಾ ಯಾಕೆ ಅಂತ ಕೇಳಿದ್ರೆ. ಅದಕ್ಕೆ ಸರ್ ಅವನು ಬೇಕು ಬೇಕು ಅಂತ ನೇ ಗಲಾಟೆ ಮಾಡೋಕೆ ಬಂದಿರೋದು, ಇವಾಗ ಅವನ ಮೇಲೆ ಗಲಾಟೆಗೆ ಹೋದ್ರೆ ಅವನು ಎಲ್ಲಿ ತನಕ ಬೇಕಾದ್ರು ಹೋಗ್ತಾನೆ. ಅದರಿಂದ ನಿಮಗೂ ತೊಂದ್ರೆ ಆಗುತ್ತೆ. ಪೊಲೀಸ್ ಅದು ಇದು ಅಂತ ಹೋಗಬೇಕಾಗುತ್ತೆ, ಅವನಿಗೆ ದುಡ್ಡಿನ ಬಲ ಇದೆ, ಅದ್ರೆ ನಿಮ್ಮನ್ನ ನಂಬಿಕೊಂಡು ನಿಮ್ಮ ಕುಟುಂಬ ಇದೆ. ನಮ್ಮಿಂದ ನಿಮ್ ಕುಟುಂಬ ಕ್ಕೆ ತೊಂದ್ರೆ ಆಗೋದು ನನಗೆ ಇಷ್ಟ ಇಲ್ಲಾ. ಸುಮ್ನೆ ಇರಿ ಅಂತ ಹೇಳಿ ಬಿಟ್ರು. ರೂಪೇಶ್ ಇಷ್ಟ ಬಂದ ಹಾಗೇ ಮಾತಾಡಿ,  ಕೊನೇಲಿ ಹೋಗೋವಾಗ. ನಿನ್ನ ಮಗಳನ್ನ ಯಾವನಿಗೊ ಕೊಟ್ಟು ಮದುವೆ ಮಾಡಿದೆ. ನಿನ್ನ ಕಣ್ಣಿಗೆ ನಾನು ಗಂಡಸಾಗಿ ಕಾಣಿಸಲಿಲ್ವಾ. ಅಷ್ಟು ಅನುಮಾನ ನಿನಗೆ ಇದ್ದಿದ್ರೆ ನಿನ್ನ ಮಗಳನ್ನ ಕಳಿಸಬೇಕಾಗಿತ್ತು. ತೋರಿಸ್ತಾ ಇದ್ದೆ ನಿನ್ನ ಮಗಳಿಗೆ ನನ್ನ ಗಂಡಸ್ತನ ಏನು ಅಂತ, ಈಗ್ಲೂ ಏನು ಆಗಿಲ್ಲ. ಒಂದು ರಾತ್ರಿ ಕಳಿಸಿ ಕೊಡು. ಕಾಯ್ತಾ ಇರ್ತೀನಿ ಅಂತ ಹೇಳಿ ಹೊರಟು ಹೋದ. 

ನಯನಾ ಗೆ ನಿರಂಜನ್ ಹೇಳಿದ ಮಾತನ್ನ ಕೇಳಿ ರೂಪೇಶ್ ನಾ ತುಂಡು ತುಂಡಾಗಿ ಕತ್ತರಿಸಿ ಅವನ ರಕ್ತ ಕುಡಿಬೇಕು ಅನ್ನೋ ಅಷ್ಟು ಕೋಪ ಬಂತು. ಪ್ರಿಯಾ ನಯನಾ ನಾ ನೋಡಿ, ನಯನಾ ಸಮಾಧಾನ ಮಾಡ್ಕೋ ಅಂತ ಸಮಾಧಾನ ಮಾಡ್ತಾಳೆ. 

ನಿರಂಜನ್,,, ನಯನಾ ನಾ ನೋಡಿ, ನೀನು ಈ ರೀತಿ ಕೋಪ ಮಾಡ್ಕೊತೀಯ ಅಂತಾನೆ ನಾನು ರಾಜ್ ನಾ ತಡೆದಿದ್ದು, ಬಟ್ ನೀನೇ?

ನಯನಾ,,, ಕೋಪನ ಕಂಟ್ರೋಲ್ ಮಾಡ್ಕೊಂಡು, ಸರಿ ಆಮೇಲೆ ಏನಾಯ್ತು.

ನಿರಂಜನ್,,, ಅವನು ಹೊರಟು ಹೋದಮೇಲೆ. ಸೂಪರ್ ಮಾರ್ಕೆಟ್ ನಾ ಕ್ಲೋಸ್ ಮಾಡಿಕೊಂಡು ಸರ್ ಕಾರ್ ಅಲ್ಲಿ ಹೊರಟು ಹೋದರು.. ಅಭಿ, ಬೈಕ್ ಸ್ಟಾರ್ಟ್ ಮಾಡ್ತಾ ನಮ್ಮನ್ನ ನೋಡಿ ಡ್ರಿಂಕ್ಸ್ ಮಾಡೋಣ್ವಾ ಅಂತ ಕೇಳಿದ. ನಮಗೂ ಸ್ವಲ್ಪ ಬೇಜಾರಾಗಿತ್ತು ಸರಿ ಅಂತ ಇಬ್ರು ಅವನ ಜೊತೆಗೆ ಹೋದ್ವಿ. ಬಟ್ ಅದೇ ನಾವು ಮಾಡಿದ ದೊಡ್ಡ ತಪ್ಪು. ಹೋಗಿ ಮೂರು ಜನ ಡ್ರಿಂಕ್ಸ್ ಮಾಡ್ತಾ ಮೊದಲಿಗೆ ನಮ್ ಬಗ್ಗೆ ಮಾತಾಡ್ತಾ ಆಮೇಲೆ ಸೂಪರ್ ಮಾರ್ಕೆಟ್ ಕೆಲಸದ ಬಗ್ಗೆ ಮಾತಾಡ್ತಾ ಇದ್ವಿ... ಬಟ್ ನಮಗೆ ಒಂದು ಹಂತಕ್ಕೆ ಹೋದಮೇಲೆ ಅಭಿ, ಗಲಾಟೆ ಬಗ್ಗೆ ರೂಪೇಶ್ ಬಗ್ಗೆ ಕೇಳೋಕೆ ಶುರು ಮಾಡಿದ. ನಮಗೆ ಅವನ ಬಗ್ಗೆ ಗೊತ್ತಿದ್ದ ವಿಷಯ ನಾ ಎಲ್ಲಾ ಹೇಳ್ತಾ ಹೋದ್ವಿ. ಎಲ್ಲಾ ತಿಳ್ಕೊಂಡ ಮೇಲೆ ಇವಾಗ ಎಲ್ಲಿ ಸಿಗ್ತಾನೆ ಅಂತ ಕೇಳಿದ. ಹೇಳಿದ್ದೆ ತಡ ಬೈಕ್ ಸ್ಟಾರ್ಟ್ ಮಾಡಿಕೊಂಡು ಹೊರಟೆ ಹೋದ. ನಮಗೆ ಭಯ ಆಗೋಕೆ ಶುರುವಾಯ್ತು. ನಾವು ಕೂಡ ಅವನ ಹಿಂದೆ ಬೈಕ್ ಸ್ಟಾರ್ಟ್ ಮಾಡಿಕೊಂಡು ಹೋದ್ವಿ. ರೂಪೇಶ್ ಮತ್ತೆ ಅವನ ಜೊತೆಗೆ ಇದ್ದವರು ಡ್ರಿಂಕ್ಸ್ ಮಾಡ್ತಾ ಅವರ ಅಡ್ಡದಲ್ಲಿ ಇದ್ರು. ಅಭಿ ಹೋದವನು ಬೈಕ್ ನಿಲ್ಲಿಸಿ ಕೈಗೆ ಸಿಕ್ಕಿದನ್ನ ತೆಗೆದುಕೊಂಡು ಅವರ ಮೇಲೆ ಹೋದ. ಅವರು ಸುಮಾರು 8 ಜನ. ಇವನು ಒಬ್ಬನೇ ಅದು ಅಲ್ಲದೆ ಡ್ರಿಂಕ್ಸ್ ಕೂಡ ಮಾಡಿದ್ದ. ಅವರಿಗೆ ಮಾತಾಡೋಕೆ ಚಾನ್ಸ್ ಕೂಡ ಕೊಟ್ಟಿಲ್ಲ. ಸರಿಯಾಗಿ ಹೊಡೆದ ಅವರಿಗೆ. ಅ ಗಲಾಟೆ ಅಲ್ಲಿ ಅಭಿ ಗು ಸ್ವಲ್ಪ ಏಟು ಬಿತ್ತು, ಆದ್ರು ಅದನ್ನ ಲೆಕ್ಕ ಮಾಡದೇ. ಅವರ ಮೇಲೆ ಬಿದ್ದ. ರೂಪೇಶ್ ಮಾತಾಡಿದ್ದ ಪ್ರತಿಯೊಂದು ಮಾತಿಗೂ ತಕ್ಕ ಉತ್ತರ ಕೊಟ್ಟ. ಅವನ ಕೈ ಕಾಲು ಮುರಿದು ಹಾಕಿದ. ನಾವು ಅಲ್ಲಿಗೆ ಹೋಗೋ ಅಷ್ಟರಲ್ಲಿ ಎಲ್ಲರಿಗೂ ಸರಿಯಾಗಿ ಕೊಟ್ಟು. ರೂಪೇಶ್ ಗೆ ಹೊಡಿತಾ ಇದ್ದಾ. ಅಭಿ ಕುಡಿದಿದ್ರು ಕೋಪ ಇದ್ರು ಮತ್ತೆ ಸರ್ ಗೆ ಪ್ರಾಬ್ಲಮ್ ಬರಬಾರದು ಅಂತ ಅವನ ಮುಖನಾ ಕವರ್ ಮಾಡಿಕೊಂಡು ಇದ್ದಾ. ನಾವು ಕೂಡ ಮುಖಕ್ಕೆ ಬಟ್ಟೆ ಕಟ್ಕೊಂಡು ಹೋಗಿ ಅಭಿ ನಾ ತಡೆದ್ವಿ.  ಅದ್ರೆ ಅಭಿ ಗೆ ರೂಪೇಶ್ ಹೇಳಿದ ಒಂದೊಂದು ಮಾತು ಎಷ್ಟು ಕೋಪ ತರಿಸಿತ್ತು ಅಂತ ಅವನ ಕಣ್ಣಲ್ಲಿ ಇದ್ದಾ ಕೋಪ ನೋಡಿ ನಮಗೆ ಗೊತ್ತಾಯ್ತು. ಬಿಟ್ರೆ ರೂಪೇಶ್ ನಾ ಸಾಯಿಸಿ ಬಿಡ್ತಾನೆ ಅಂತ ಅನ್ಕೊಂಡು ಅಭಿ ಕಷ್ಟ ಪಟ್ಟು ಕಂಟ್ರೋಲ್ ಮಾಡಿ ಅಲ್ಲಿಂದ ಅವನನ್ನ ಕರ್ಕೊಂಡು ಬೈಕ್ ಹತ್ತಿರ ಬಂದು. ಅವನನ್ನ ಬೈಕ್ ಅಲ್ಲಿ ಕೂರಿಸಿಕೊಂಡು. ಅಲ್ಲಿಂದ ಹೊರಟು ರಾಜ್ ಮನೆ ಹತ್ತಿರ ಬಂದು ಬಿಟ್ವಿ..

  ಬೈಕ್ ಇಳಿದು ಅಭಿ ನಾ ನೋಡಿದೆ. ಅಭಿ ಕೈಲಿ ಅವರನ್ನ ಹೊಡಿಯೋಕೆ ತಗೊಂಡಿದ್ದ ವಸ್ತು ಇನ್ನು ಕೈ ಅಲ್ಲೇ ಇಡ್ಕೊಂಡು ಇದ್ದಾ. ನನಗೆ ಡೌಟ್ ಬಂದು ಅವನ ಕೈಲಿ ಇದ್ದಾ ವಸ್ತು ನಾ ತೆಗೆದುಕೊಂಡು ನೋಡಿದೆ. ಐರನ್ ರಾಡ್ ಅದು. ತುಂಬಾ ತೂಕ ಇತ್ತು, ಅವನನ್ನ ನೋಡಿ ಲೋ ಏನೋ ನಿನಗೆ ಇಷ್ಟು ಕೋಪ, ಸರ್ ಹೇಳಿದ್ರು ಅಲ್ವಾ ಸುಮ್ನೆ ಇರಿ ಅಂತ ಮತ್ತೆ ಏನಕ್ಕೆ, ಅವರನ್ನ ಹೊಡಿಯೋಕೆ ಹೋದೆ, ಅವರು ಅಷ್ಟು ಜನ ನಿನಗೆ ಏನಾದ್ರು ಮಾಡಿದ್ದಿದ್ರೆ ಅಂತ ಕೇಳಿದಕ್ಕೆ. ಅಭಿ ಹೇಳಿದ್ದು ಒಂದೇ ಮಾತು. ಏನೇ ಗಲಾಟೆ ಇದ್ರು, ಮನೆ ಹೆಣ್ಣುಮಕ್ಕಳನ್ನ, ಮಧ್ಯದಲ್ಲಿ ತರೋದು ಬಾಯಿಗೆ ಬಂದ ಹಾಗೇ ಮಾತಾಡೋದು.  ಅದು ಒಬ್ಬ ತಂದೆ ಮುಂದೆ. ಅವರ ಮನಸ್ಸಿಗೆ ಎಷ್ಟು ನೋವು ಆಗಿರೋದಿಲ್ಲ. ಅವರಿಗೆ ಕೋಪ ತಡೆದುಕೊಳ್ಳೋಕೆ ಕಾರಣ ಏನೇ ಇರಬಹುದು. ನನಗೆ ಏನು ಇಲ್ಲಾ, ಅಲ್ಲೇ ಸೂಪರ್ ಮಾರ್ಕೆಟ್ ಹತ್ತಿರಾನೆ ಹೊಡಿತಾ ಇದ್ದೆ. ಸರ್ ಮಾತಿಗೆ ಬೆಲೆ ಕೊಟ್ಟು ಸುಮ್ಮನೆ ಇದ್ದೆ. ಅದೇನೋ ಗಂಡ ಗಂಡಸ್ತನ ಗಂಡಸು ಅಂತ ಹೇಳ್ತಾ ಇದ್ದಾ ಅಲ್ವಾ ಇವಾಗ ನೋಡಿಸ್ಲಿ ಅವನ ಗಂಡಸ್ತನ ನಾ, ನೀವು ಬಂದು ತಡೆದಿದ್ದಕ್ಕೆ ಸರಿ ಹೋಯ್ತು ಇಲ್ಲಾ ಅಂದಿದ್ರೆ ಮಗನ ಹೆಣ ನಾ ಅಪ್ಪ ನೋಡ್ತಾ ಇದ್ದಾ ಅಂತ ಹೇಳಿದ. ಅವಾಗ ನಮಗೆ ಇನ್ನು ಭಯ ಆಯ್ತು ಇವನನ್ನ ಒಬ್ಬನೇ ಬಿಟ್ರೆ ಮತ್ತೆ ಹೋಗಿ ಅವನನ್ನ ಸಾಯಿಸಿದ್ರೂ ಸಾಯಿಸಿ ಬಿಡ್ತಾನೆ ಅಂತ ಅವತ್ತು ರಾತ್ರಿ ಮೂರು ಜನ ರಾಜ್ ರೂಮ್ ಅಲ್ಲೇ ಇದ್ವಿ. 

    ಬೆಳಿಗ್ಗೆ ಸೂಪರ್ ಮಾರ್ಕೆಟ್ ಗೆ ಬಂದಾಗ ಸರ್ ಬಂದು ರಾತ್ರಿ ಎಲ್ಲಿ ಹೋಗಿದ್ರಿ ಅಂತ ಕೇಳಿದ್ರು. ರಾತ್ರಿ ಡ್ರಿಂಕ್ಸ್. ಮಾಡಿ ರಾಜ್ ರೂಮ್ ಅಲ್ಲೇ ಇದ್ವಿ ಅಂತ ಹೇಳಿದ್ವಿ. ಸರ್ ಕೂಡ ಮತ್ತೆ ಏನು ಕೇಳಲಿಲ್ಲ. ಆಮೇಲೆ ಗೊತ್ತಾಯಿತು. ಅಭಿ ಕೈಲಿ ಒದೆ ತಿಂದವರು ಕೈ ಕಾಲು ಮುರಿದುಕೊಂಡು ಹಾಸ್ಪಿಟಲ್ ಬೆಡ್ ಮೇಲೆ ಮಲಗಿದ್ದಾರೆ, ರೂಪೇಶ್ ಕಂಪ್ಲೀಟ್ ರಿಕವರಿ ಆಗೋಕೆ 8 ತಿಂಗಳು ಬೇಕಾಗುತ್ತೆ, ಎರಡು ಕಾಲಲ್ಲಿ ನಡೀತಾ ಇದ್ದವನು, ಲೈಫ್ ಲಾಂಗ್ ಸ್ಟಿಕ್ ಇಡ್ಕೊಂಡು ನಡೆದಾಡ ಬೇಕು ಅಂತ.  ಇದು ನಯನಾ ನಡೆದಿದ್ದು. ಅವನಿಗೆ ಸರ್ ಅಂದ್ರೆ ತುಂಬಾ ಗೌರವ ಇದೆ. ಸರ್ ಗು ಅಷ್ಟೇ ಅಭಿ ಅಂದ್ರೆ ಅಷ್ಟೇ ಗೌರವ ಇದೆ. 

ನಿರಂಜನ್ ಹೇಳಿದ್ದನ್ನ ಕೇಳಿ, ನಯನಾ ಕಣ್ಣಲ್ಲಿ ಕಣ್ಣೀರು ತುಂಬಿಕೊಂಡು ಹೊರಗೆ ಬರೋಕೆ ಕಾಯ್ತಾ ಇತ್ತು. ಆದ್ರು ತಡ್ಕೊಂಡು. ಈ ವಿಷಯ ನಾ ಸರ್ ಗೆ ಹೇಳಬೇಡಿ ಅಂತ ಹೇಳಿ ಆಫೀಸ್ ರೂಮ್  ಕಡೆಗೆ ಹೋಗ್ತಾಳೆ.

ಆಫೀಸ್ ರೂಮ್ ಅಲ್ಲಿ ವರ್ಕ್ ಮಾಡ್ತಾ ಇದ್ದಾ, ವಿಶ್ವನಾಥ್, ನಯನಾ ಬಂದಿದ್ದನ್ನ ನೋಡಿ. ಅವಳ ಮುಖ ನೋಡಿ ಎದ್ದು ನಿಂತು ಏನಾಯ್ತು ನಯನಾ ಯಾಕ್ ಹಾಗೇ ಇದ್ದಿಯಾ.

ನಯನಾ,,, ಅಳ್ತಾ ಓಡಿ ಬಂದು ಅಪ್ಪನನ್ನ ತಬ್ಬಿಕೊಂಡು ಅಳ್ತಾ ಸಾರೀ ಅಪ್ಪ, ನಿಮಗೆ ತುಂಬಾ ನೋವನ್ನ ಕೊಟ್ಟು ಬಿಟ್ಟೆ, ಅಭಿ ಬಗ್ಗೆ ಅರ್ಥ ಮಾಡಿಕೊಳ್ಳದೆ ಅವಮಾನ ಮಾಡಿ ಬಿಟ್ಟೆ. ತುಂಬಾ ದೊಡ್ಡ ತಪ್ಪು ಮಾಡಿಬಿಟ್ಟೆ ಐಮ್ ಸಾರೀ ಅಪ್ಪ. 

ವಿಶ್ವನಾಥ್,,, ಈಗಲಾದ್ರೂ ಅಭಿ ನಾ ಅರ್ಥ ಮಾಡಿಕೊಂಡೆ ಅಲ್ವಾ ಅಷ್ಟು ಸಾಕು ನನಗೆ. ಅಂತ ಹೇಳಿ ಸಮಾಧಾನ ಮಾಡ್ತಾರೆ..

@@@@@@@@@@@@@@@@@@@@@@@@