Abhinayanaa - 26 in Kannada Love Stories by S Pr books and stories PDF | ಅಭಿನಯನಾ - 26

The Author
Featured Books
Categories
Share

ಅಭಿನಯನಾ - 26

    ಅಭಿ ನ ನೋಡಿದ ಸಾರಿಕಾ ಗೆ ನೋವು ಅಳು ಎರಡು ಕಂಟ್ರೋಲ್ ಆಗಲಿಲ್ಲ, ಬಿಕ್ಕಿ ಬಿಕ್ಕಿ ಅಳೋಕೆ ಶುರು ಮಾಡಿದಳು, ಅಳ್ತಾ ಅಪ್ಪ ದೇವ್ರೇ ನಾನು ಯಾರನ್ನ ಈ ಜನ್ಮದಲ್ಲಿ ಮತ್ತೆ ನೋಡಬಾರದು ಅವರ ಮುಂದೆ ನಿಲ್ಲ ಬಾರದು ಅಂತ ಅನ್ಕೊಂಡು ಬದ್ನೋ ಕೊನೆಗೂ ನೀನು ನನ್ನ ತಂದು ಅವನ ಮುಂದೆ ನಿಲ್ಲಿಸಿದೆ, ಏನ್ ಪಾಪ ಮಾಡಿದ್ದೆ ದೇವ್ರೇ ನಾನು, ಅವನ ಕಣ್ಣುಗಳು ನನ್ನ ಸಾವಿರ ಪ್ರಶ್ನೆಗಳನ್ನ ಕೇಳ್ತಾ ಇದ್ವು, ಅದಕ್ಕೆ ಉತ್ತರ ಅಲ್ಲ ಅವನನ್ನ ಎದುರಿಸೋ ಶಕ್ತಿ ಕೂಡ ನನಗೆ ಇಲ್ಲಾ, ನೆಮ್ಮದಿಯಾಗಿ ಬದುಕೋಣ ಅಂತ ಈ ಊರಿಗೆ ಬಂದೆ, ಅದ್ರೆ ಇಲ್ಲಿ ನನ್ನಿಂದ ನೆಮ್ಮದಿ ಖುಷಿ ಸಂತೋಷ ಪ್ರೀತಿ ಎಲ್ಲವನ್ನು ಕಳೆದುಕೊಂಡವನು ನನ್ನೆದುರು ನಿಂತಿದ್ದಾನೆ, ಅವನಿಗೆ ನಾನ್ ಏನು ಉತ್ತರ ಕೊಡಲಿ. ಪ್ರೀತಿ ನೇ ಬೇಡ ಅಂತ ಹೇಳಿದವನನ್ನ, ಹಠ ಮಾಡಿ ಪ್ರೀತಿಸಿ ಕೊನೆಗೆ ಅವನನ್ನ ನನ್ನ ಸ್ವಾರ್ಥಕ್ಕೆ, ಅವನನ್ನ ಬಿಟ್ಟು ಅವನಿಗೆ ಮೋಸ ಮಾಡಿ ಒಂದು ಕ್ಷಣ ಅವನ ಬದುಕಿನ ಬಗ್ಗೆ ಯೋಚ್ನೆ ಮಾಡದೇ ತಿರುಗಿ ನೋಡದೆ ಹೊರಟು ಹೋದೆ. ಈಗ ಅವನು ಇದೆಲ್ಲದಕ್ಕೂ ಉತ್ತರ ಕೊಡು ಅಂದ್ರೆ ನಾನ್ ಹೇಗೆ ಕೊಡಲಿ, ಅಪ್ಪ ದೇವ್ರೇ ನಿನ್ನ ಕೈ ಮುಗಿದು ಬೇಡ್ಕೋತೀನಿ ನನಗೆ ಈ ಬದುಕೇ ಬೇಡ, ಈ ಕ್ಷಣ ನೇ ನನ್ನ ಪ್ರಾಣ ನ ತೆಗೆದುಕೋ, ಅವನನ್ನ ಎದುರಿಸೋ ಶಕ್ತಿ ನನಗೆ ಇಲ್ಲಾ ಅಂತ ಹೇಳ್ತಾ ಅಳ್ತಾ ಕೈ ಮುಗಿತಾಳೆ ದೇವರಿಗೆ .

*****

ಪ್ರಿಯಾ,,,,ಲೋ ಏನೋ ಆಯಿತು ನಿನಗೆ, ಅ ಹುಡುಗಿನ ನೋಡಿ ಯಾಕ್ ಹಾಗೇ ನಿಂತು ಬಿಟ್ಟೆ, ನಿನಗೆ ಅ ಹುಡುಗಿ ಮೊದಲೇ ಪರಿಚಯ ನ, ಹೇಳೋ ಇಷ್ಟು ವರ್ಷ ದ ನಮ್ಮ ಪರಿಚಯ ದಲ್ಲಿ ನಿನ್ನ ಯಾವತ್ತೂ ಹೀಗೆ ನೋಡಿಲ್ಲ, ಹೇಳೋ ಏನಾಯ್ತು. ಅಂತ ಕೇಳ್ತಾ ಳೇ ಅಭಿ ನಾ.

ಅಭಿ ಮೌನವಾಗಿ ನಿಂತೇ ಇರ್ತಾನೆ ಏನು ಉತ್ತರ ಕೊಡದೆ.

ಪ್ರಿಯಾ ಲೋ ನಿನ್ನೆ ಕೇಳ್ತಾ ಇರೋದು ಹೇಳೋ ಅಂತ ಕೇಳೋವಾಗ ಅವಳ ಮೊಬೈಲ್ ರಿಂಗ್ ಆಗುತ್ತೆ. ನೋಡಿದ್ರೆ ತೇಜು. ಕಾಲ್ ಪಿಕ್ ಮಾಡಿ ಹೇಳೇ.

ತೇಜು,,, ಲೇ ಸಾರಿಕಾ ನನಗೆ ಈ ಕೆಲಸ ಬೇಡ ಏನು ಬೇಡ ನಾನ್ ಹೋಗ್ತೀನಿ ದಯವಿಟ್ಟು ನನ್ನ ಕ್ಷಮಿಸಿ ಬಿಡಿ ಹೆಲ್ಪ್ ಮಾಡಿದಕ್ಕೆ ಥ್ಯಾಂಕ್ಸ್ ಅಂತ ಹೇಳ್ತಾ ಇದ್ದಾಳೆ, ನನಗೆ ಏನ್ ಹೇಳಬೇಕು ಅನ್ನೋದೇ ಅರ್ಥ ಆಗ್ತಾ ಇಲ್ಲಾ. ಏನೇ ಮಾಡೋದು.

ಪ್ರಿಯಾ,,, ಏನು ಸಾರಿಕಾ ಕೆಲಸ ಬೇಡ ಅಂತ ಹೋಗ್ತಾ ಇದ್ದಾಳ ಸರಿ ಬಂದೆ ಇರು ಅಂತ ಹೇಳ್ತಾ ಇರೋವಾಗಲೇ ಅಭಿ ಮೊಬೈಲ್ ನಾ ತೆಗೆದುಕೊಂಡು ತೇಜು ಅ ಹುಡುಗಿನ ಆಫೀಸ್ ಗೆ ಕರ್ಕೊಂಡು ಬಾ, ಬರಲ್ಲ ಅಂತ ಏನಾದ್ರೂ ಹೇಳಿದ್ರೆ ನಾನೆ ಅಲ್ಲಿಗೆ ಬರ್ತೀನಿ ಅಂತ ಹೇಳು ಅಂತ ಹೇಳಿ ಕಟ್ ಮಾಡ್ತಾನೆ. 

ಪ್ರಿಯಾ ಗೆ ಅಭಿ ನೋಡ್ತಾ ಇದ್ರೆ ಹೊಸ ಅಭಿ ನಾ ನೋಡೋ ಫೀಲ್ ಆಗ್ತಾ ಇರುತ್ತೆ.

ಕೆಲವು ನಿಮಿಷಗಳ ನಂತರ ತೇಜು ಸಾರಿಕಾ ಆಫೀಸ್ ರೂಮ್ ಹತ್ತಿರ ಬರ್ತಾರೆ, ಸಾರಿಕಾ ಅಭಿ ನಾ ನೋಡದೆ ತಲೆ ಬಗ್ಗಿಸಿಕೊಂಡು ಇದ್ದು ಬಿಡ್ತಾಳೆ.

ಅಭಿ ಪ್ರಿಯಾ ತೇಜು ಕಡೆಗೆ ನೋಡಿ, ನಿಮಗೆ ಕೆಲಸ ಇದೆ ಅಲ್ವಾ ಹೋಗಿ ಅದನ್ನ ಮಾಡಿ, ನಿಮ್ಮನ್ನ ಆಮೇಲೆ ಕರೀತೀನಿ ಅಂತ ಹೇಳ್ತಾನೆ. ತೇಜು ಗೆ ಏನು ಅರ್ಥ ಆಗಲ್ಲ, ಪ್ರಿಯಾ ಸರಿ ಅಭಿ ಅಂತ ಹೇಳಿ ತೇಜು ಜೊತೆಗೆ ಅಲ್ಲಿಂದ ಹೊರಟು ಹೋಗ್ತಾಳೆ.

ಅಭಿ ಸಾರಿಕಾ ನಾ ನೋಡಿ, ಕುತ್ಕೋ ಅಂತ ಹೇಳ್ತಾನೆ. ಸಾರಿಕಾ ಮೌನ ವಾಗಿ ತಲೆ ಬಗ್ಗಿಸಿ ಕೊಂಡೆ ನಿಂತೇ ಇರ್ತಾಳೆ. ಅಭಿ,,,ಸ್ವಲ್ಪ ಕೋಪದಲ್ಲಿ ನಿನಗೆ ಹೇಳಿದ್ದು ಕೇಳಿಸಿಲ್ವಾ 

ಸಾರಿಕಾ,, ಭಯ ಬಿದ್ದು ಚೇರ್ ಮೇಲೆ ಕೂತ್ಕೋತಾಳೆ.

ಅಭಿ,,, ವಾಟರ್ ಬಾಟೆಲ್ ಓಪನ್ ಮಾಡಿ ಕುಡಿಯೋದಕ್ಕೆ ನೀರು ಕೊಡ್ತಾನೆ. 

ಸಾರಿಕಾ,,, ವಾಟರ್ ಬಾಟೆಲ್ ಓಪನ್ ಮಾಡಿ ಗಟ ಗಟ ಅಂತ ನೀರನ್ನ ಕುಡಿದು, ಅಭಿ  ಕಡೆಗೆ ನೋಡಿ ಮತ್ತೆ ತಲೆ ನಾ ಬಗ್ಗಿಸಿಕೊಂಡು ಬಿಡ್ತಾಳೆ. 

ಅಭಿ,,, ಇಲ್ಲೇ ಕೂತಿರು ಬರ್ತೀನಿ ಅಂತ ಹೇಳಿ ಎರಡೇಜ್ಜೆ ಇಡ್ತಾನೆ.

ಸಾರಿಕಾ,,, ಇಲ್ಲಾ ನಾನ್ ಹೋಗ್ತೀನಿ ಅಂತ ಸ್ವಲ್ಪ ಭಯದಲ್ಲೇ ಹೇಳ್ತಾಳೆ.

ಅಭಿ,,, ಅಲ್ಲೇ ನಿಂತು ಕೂತಿರು ಅಂತ ಹೇಳಿದ್ದು, ಮಾತಾಡು ಅಂತ ಹೇಳಿಲ್ಲ ಅಂತ ಹೇಳಿ ಅಲ್ಲಿಂದ ಹೊರಟು ಹೋಗ್ತಾನೆ. 

ಸಾರಿಕಾ ಮರು ಮಾತನಾಡದೆ ಸುಮ್ಮನೆ ಆಗಿ ಬಿಡ್ತಾಳೆ.

ಸ್ವಲ್ಪ ಸಮಯದ ನಂತರ ಅಭಿ ಬಂದು ಸಾರಿಕಾ ಮುಂದೆ ಪಾರ್ಸೆಲ್ ಕವರ್ ಇಟ್ಟು  ಮೊದಲು ತಿಂಡಿ ತಿನ್ನು, ಆಮೇಲೆ ಮಾತಾಡೋಣ. 

ಸಾರಿಕಾ ನ,,,,, ನನಗೆ ಏನು ಬೇಡ ಅಂತ ಭಯದಲ್ಲೇ ಹೇಳ್ತಾಳೆ. ಅಭಿ ಪಾರ್ಸೆಲ್ ಕವರ್ ನ ಓಪನ್ ಮಾಡಿ ತಿಂತೀಯಾ ಇಲ್ಲಾ ತಿನ್ನಿಸ್ಲಾ ಅಂತ ಕೇಳ್ತಾ, ತಿಂಡಿ ಗೆ ಕೈ ಇಡೋಕೆ ಹೋಗ್ತಾನೆ, ಅಷ್ಟ್ರಲ್ಲಿ ಸಾರಿಕಾ ತಿಂಡಿ ನ ತೆಗೆದುಕೊಂಡು ತಿನ್ನೋಕೆ ಶುರು ಮಾಡ್ತಾಳೆ. ಸಾರಿಕಾ ತಿಂಡಿ ತಿಂದ ಮೇಲೆ ಅಭಿ ನೇ ಅ ಪಾರ್ಸೆಲ್ ಕವರ್ ನ ಕಸದ ಬುಟ್ಟಿಗೆ ಹಾಕಿ. ಬಂದು ಅವಳ ಪಕ್ಕ ನಿಂತು ಮನಸಲ್ಲಿ ನೋವು, ಹೊಟ್ಟೇಲಿ ಹಸಿವು ಇಟ್ಕೊಂಡು, ನನ್ನಿಂದ ದೂರ ಹೋಗಿ ಏನ್ ಸಾಧಿಸಬೇಕು ಅಂತ ಇದ್ದಿಯಾ. ನೀನು ಇಲ್ಲಿಗೆ ಕೆಲಸಕ್ಕೆ ಅಂತ ತಾನೇ ಬಂದಿದ್ದು, ಈಗ ಹೋಗ್ತೀನಿ ಅಂತ ಇದ್ದಿಯಾ. ನಿನಗೆ ಪ್ರಾಬ್ಲಮ್ ಏನು ಕೆಲಸ ನ ಇಲ್ಲಾ ನಾನಾ? ನಿನಗೆ ಕಷ್ಟ ಪಟ್ಟು ದುಡಿಯೋ ಯಾವ ಕೆಲಸಾನು ಚಿಕ್ಕದು ಅಂತ ಅನ್ನಿಸಲ್ಲ ಅನ್ನೋದು ನನಗೆ ಗೊತ್ತು. ನಿನಗೆ ಪ್ರಾಬ್ಲಮ್ ಕೆಲಸ ಅಲ್ಲ ನಾನು, ನಿನಗೆ ನಾನು ನಿನ್ನ ಕಣ್ಣ ಮುಂದೆ ಇರೋದು ಇಷ್ಟ ಇಲ್ಲಾ ಅಂದ್ರೆ ಹೇಳು. ಮತ್ತೆ ಇನ್ಯಾವತ್ತಿಗೂ ನಿನ್ನ ಕಣ್ಣಿಗೆ ಕಾಣಿಸದಷ್ಟು ದೂರ ಹೊರಟು ಹೋಗ್ತೀನಿ. ಅವಗಾದ್ರು ನೀನು ಸ್ವಲ್ಪ ನೆಮ್ಮದಿಯಾಗಿ ಇರ್ತೀನಿ ಏನೋ. 

ಸಾರಿಕಾ ಅಭಿ ಕೈ ಇಡಿದು ಅಳ್ತಾ ನನ್ನ ಕ್ಷಮಿಸಿ ಬಿಡೋ, ಗೊತ್ತಿದ್ದೂ ಗೊತ್ತಿದ್ದೂ ನಿನಗೆ ತುಂಬಾ ನೋವನ್ನ ಕೊಟ್ಟು ಹೊರಟು ಹೋದೆ. ಅದಕ್ಕೆ ಅ ದೇವ್ರು ನನಗೆ ಸರಿಯಾದ ಪಾಠ ನೇ ಕಲಿಸಿದ. ಈ ಊರಿಗೆ ಹೆಜ್ಜೆ ಇಡೋವಾಗ ಅ ದೇವರ ಹತ್ತಿರ ಒಂದೇ ಕೇಳಿದ್ದು, ಯಾವುದೇ ಕಾರಣಕ್ಕೂ ನಾನು ನಿನ್ನ ಕಣ್ಣಿಗೆ ಬೀಳಬಾರ್ದು ಅದೊಂದು ಮಾಡು ಸಾಕು ದೇವ್ರೇ ಅಂತ ಬೇಡ್ಕೊಂಡು ಬಂದೆ. ಅದ್ರೆ ಅ ದೇವ್ರು ನನ್ನ ತಂದು ನಿನ್ನ ಮುಂದೆ ನಿಲ್ಲಿಸಿದ. ನಿನ್ನ ಕಣ್ಣುಗಳು ಕೇಳ್ತಾ ಇದ್ದಾ ಪ್ರಶ್ನೆ ಗಳಿಗೆ ನನ್ನತ್ರ ಉತ್ತರ ಇಲ್ಲದೆ ಭಯ ಆಗೋಕೆ ಶುರುವಾಯ್ತು. ನನ್ನಿಂದ ಮತ್ತೆ ನೀನು ನೋವು ಅನುಭವಿಸೋದನ್ನ ನಾನು ನೋಡಬಾರದು ಅಂತ ಹೋಗಿಬಿಡೋಣ ಅಂತ ಅನ್ನಿಸಿ ಬಿಡ್ತು. ಪ್ಲೀಸ್ ದಯವಿಟ್ಟು ನನ್ನ ಕ್ಷಮಿಸಿ ಬಿಡೋ. 

ಅಭಿ,,, ಸಾರಿಕಾ ಕೈ ಮೇಲೆ ಕೈ ಇಟ್ಟು, ನೀನು ಖುಷಿಯಾಗಿ ಇದ್ದು ನಾನು ನೋವಲ್ಲಿ ಇದ್ದಾಗ ನೀನು ಕ್ಷಮಿಸಿ ಬಿಡೋ ಅಂತ ಕೇಳೋದ್ರಲ್ಲಿ ಅರ್ಥ ಇದೆ. ಅದ್ರೆ ನೀನೇ ನೋವಲ್ಲಿ ಇದ್ದು ನನ್ನ ಕ್ಷಮಿಸಿ ಬಿಡೋ ಅಂತ ಇದ್ದಿಯಾ, ನಿನ್ನ ಮೇಲೆ ಕೋಪ ದ್ವೇಷ ಏನಾದ್ರೂ ಇದ್ದಿದ್ರೆ, ಇಷ್ಟು ವರ್ಷ ಆದಮೇಲೆ ಕೂಡ ನಾನು ಹೀಗೆ ನಿನ್ನ ಹತ್ತಿರ ಮಾತಾಡ್ತಾ ಇರಲಿಲ್ಲ. ನಡೆದು ಹೋಗಿದ್ದಕ್ಕೆ ಕಾರಣ ನಾನು ಅಲ್ಲ ನೀನು ಅಲ್ಲ, ಸಮಯ ಹಾಗೇ ಮಾಡಿತು, ಅದನ್ನೆಲ್ಲಾ ಮರೆತು ಬಿಡು. ಇಲ್ಲಿ ಕೆಲಸಕ್ಕೆ ಅಂತ ಬಂದಿದ್ದೀಯಾ ಆರಾಮಾಗಿ ಕೆಲಸ ಮಾಡಿಕೊಂಡು ಇರು. 

ಸಾರಿಕಾ,,, ಅಳ್ತಾ ಇಲ್ಲಾ ಅಭಿ, ನಿನ್ನ ಮನಸ್ಸು ಏನು ಅಂತ ನನಗೆ ಚೆನ್ನಾಗಿ ಗೊತ್ತು, ನನಗೆ ಸಮಾಧಾನ ಮಾಡಿ ಧೈರ್ಯ ಹೇಳ್ತಾ ಇದ್ದಿಯಾ ಬಿಟ್ರೆ. ನನ್ನಿಂದ ನೀನು ಎಷ್ಟು ನೋವನ್ನ ಅನುಭವಿಸಿದೆ ಅನ್ನೋದು ನನಗೆ ಮಾತ್ರ ಗೊತ್ತು. ಇಲ್ಲಿ ನಿನ್ನ ಎದುರು ಇರೋಕೆ ನನಗೆ ಧೈರ್ಯ ಇಲ್ಲಾ, ನನ್ನ ಕ್ಷಮಿಸಿ ಬಿಡು ನಾನು ಹೊರಟು ಹೋಗ್ತೀನಿ ಅಂತ ಹೇಳಿ ಇದು ಹೋಗೋಕೆ ಹೋಗ್ತಾಳೆ. ಬಟ್ ಅಭಿ ಸಾರಿಕಾ ಕೈ ನ ಗಟ್ಟಿಯಾಗಿ ಇಡ್ಕೊಂಡು ಇರೋದ್ರಿಂದ ಅವಳು ಅಲ್ಲಿಂದ ಒಂದು ಹೆಜ್ಜೆ ಮುಂದೆ ಇಡೋಕೆ ಆಗಲ್ಲಾ.

ಅಭಿ,,, ಸಾರಿಕಾ  ನ ಕೈ ಇಡಿದು ಕೊಂಡೆ, ನನ್ನಲ್ಲಿ ಇರೋ ರಾಕ್ಷಸನ ಸಾಯಿಸಿದವಳು ನೀನು. ಮತ್ತೆ ಅವನು ಹುಟ್ಟಿ ಬರೋದಕ್ಕೆ ಅವಕಾಶ ಕೊಡಬೇಡ. ಇಷ್ಟುದಿನ ಎಲ್ಲೋ ಸಂತೋಷ ವಾಗಿ ಇರ್ತೀಯ ನೀನು ಅಂತ ಅನ್ಕೊಂಡು ಇದ್ದೆ, ಅದ್ರೆ ಸುಳ್ಳು ಅಂತ ಗೊತ್ತಾದಮೇಲೆ ಸುಮ್ನೆ ಇರ್ತೀನಿ ಅಂತ ಹೇಗೆ ಅನ್ಕೊಂಡೆ. ನಿನಗೆ ಇಷ್ಟ ಇದ್ರು ಇಲ್ದೆ ಇದ್ರು ನೀನು ಇಲ್ಲೇ ಇರಬೇಕು. ಯಾಕಂದ್ರೆ ನೀನು ನನ್ನ ಬಿಟ್ಟು ಹೋದಮೇಲೆ ಒಂದು ಮಾತು ಹೇಳಿದ್ದೆ, ಲೈಫ್ ಅಲ್ಲಿ ಯಾವತ್ತಾದ್ರೂ ಒಂದು ದಿನ ನಿನ್ನ ಮುಂದೆ ಬಂದು ನಿಲ್ತಿನಿ ಅವತ್ತು ನನ್ನ ಕೈ ಬಿಡೋದಿಲ್ಲ ಅಲ್ಲ ಅಲ್ವಾ ಅಂತ.  ಇವತ್ತು ನೀನಾಗೆ ಬಂದೆ ನೀನಾಗೆ ನನ್ನ ಕೈ ಇಡ್ಕೊಂಡೇ. ಇನ್ನ ಈ ಕೈ ನ ಬಿಡೋ ಮಾತೆ ಇಲ್ಲಾ. ಅಂತ ಹೇಳಿ ಸಾರಿಕಾ ಕೈ ನ ಇಡ್ಕೊಂಡೇ ಪ್ರಿಯಾ ಗೆ ಕಾಲ್ ಮಾಡಿ, ತೇಜು ಮೇಘ ನ ಆಫೀಸ್ ಗೆ ಬರೋಕೆ ಹೇಳ್ತಾನೆ.

ಸಾರಿಕಾ ಮೌನವಾಗಿ ನೇ ಇದ್ದು ಬಿಡ್ತಾಳೆ. 

ಕೆಲವು ನಿಮಿಷಗಳ ನಂತರ ಪ್ರಿಯಾ ತೇಜು ಮೇಘ ಬರ್ತಾರೆ ಆಫೀಸ್ ರೂಮ್ ಹತ್ತಿರ.

ಪ್ರಿಯಾ,,, ಅಭಿ ಬರೋಕೆ ಹೇಳ್ದೆ. 

ಅಭಿ,,,, ಪ್ರಿಯಾ ಸಾರಿಕಾ ಇನ್ಮೇಲೆ ತೇಜು ಜೊತೆಗೆ ಕೆಲಸ ಮಾಡ್ತಾರೆ. ಅಂತ ಹೇಳಿ ತೇಜು ಕಡೆಗೆ ನೋಡಿ ತೇಜು  ಸಾರಿಕಾ ಗೆ ಏನೇನ್ ಕೆಲಸ ಅಂತ ಪೂರ್ತಿ ಆಗಿ ಹೇಳಿ ಕೊಡು. 

ಪ್ರಿಯಾ ತೇಜು,, ಓಕೆ ಅಭಿ.

ಅಭಿ,,, ಸಾರಿಕಾ ಕಡೆಗೆ ನೋಡಿ, ಸ್ಮೈಲ್ ಮಾಡ್ತಾ ಅವರ ಜೊತೆಗೆ ಹೋಗಿ ಅಂತ ಹೇಳ್ತಾನೆ.

ಸಾರಿಕಾ,, ಹ್ಮ್ ಅಂತ ಹೇಳಿ ಮುವ್ವರ ಜೊತೆಗೆ ಅಲ್ಲಿಂದ ಹೊರಟು ಹೋಗ್ತಾಳೆ.

ಸಾರಿಕಾ ಗೆ ಅಭಿ ಬಗ್ಗೆ ಪೂರ್ತಿ ಆಗಿ ಗೊತ್ತಿರೋದ್ರಿಂದ ಅವನಿಗೆ ಎದುರು ಹೇಳೋಕೆ ಹೋಗಲಿಲ್ಲ. 

*******

ಸಾರಿಕಾ ಹೋದ ಮೇಲೆ ಅಭಿ ಚೇರ್ ಮಳೆ ಕೂತು ಕಣ್ಣ್ ಮುಚ್ಚಿಕೊಂಡು ಅವನ ತಲೇನ ಚೇರ್ ಗೆ ಒರಗಿಸಿಕೊಂಡು ನೆಮ್ಮದಿಯಾಗಿ ಒಂದು ನಿಟ್ಟುಸಿರು ಬಿಡ್ತಾನೆ. ಅಭಿ ಕಣ್ಣಲ್ಲಿ ಇಷ್ಟೋತ್ತು ತಡೆದುಕೊಂಡಿದ್ದ ನೋವು ಕಣ್ಣೀರಿನ ರೂಪದಲ್ಲಿ ಹೊರಗಡೆ ಬರುತ್ತೆ.

ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದವರು ಬಿಟ್ಟು ಹೋದಾಗ ಆಗೋ ನೋವಿಗಿಂತ, ಮತ್ತೆ ಅವರು ಎದುರು ಬಂದಾಗ ಅವರ ಜೀವನದಲ್ಲಿ ಸಂತೋಷ ಕ್ಕಿಂತ ನೋವನ್ನೆ ಜಾಸ್ತಿ ಅನುಭವಿಸಿದ್ದಾರೆ ಅಂತ ಗೊತ್ತಾದಾಗ ಆಗೋ ನೋವೇ ಮನಸ್ಸಿಗೆ ತುಂಬಾ ನೋವನ್ನ ಕೊಡುತ್ತೆ. ಇಷ್ಟುದಿನ ಸಾರಿಕಾ ಎಲ್ಲೋ ಒಂದು ಕಡೆ ಸಂತೋಷವಾಗಿ ಇದ್ದಾಳೆ ಅಂತ ಅಂದುಕೊಂಡು ಇದ್ದಾ ಆದರೆ ಅವಳ ಜೀವನದಲ್ಲಿ ಇಷ್ಟೊಂದು ನೋವನ್ನ ಅನುಭವಿಸಿದ್ದಾಳೆ ಅಂತ ಗೊತ್ತಾದಾಗ ಅಭಿ ಮನಸಲ್ಲಿ ಹೇಳಿಕೊಳ್ಳಿಕೆ ಆಗದ  ನರಕ ಯಾತನೆ ಅನುಭವಿಸ್ತಾ ಇದ್ದಾನೆ. 

*********

ಮಗ ವೇದಾಂತ್ ಜೈಲಿಗೆ ಹೋಗೋದಕ್ಕೆ ಕಾರಣ ಅದ ಸಾರಿಕಾ ಮೇಲೆ ವೇದಾಂತ್ ನ ತಾಯಿ ಶಾಂತಲಾ ದ್ವೇಷವನ್ನ ಬೆಳೆಸಿಕೊಳ್ತಾಳೆ. ತನ್ನ ಮಗನನ್ನ ಜೈಲಿಗೆ ಕಳಿಸಿ ಎಲ್ಲೋ ಹೋಗಿ ನೆಮ್ಮದಿಯಾಗಿ ಬದುಕಬೇಕು ಅಂತ ಇರೋ ಸಾರಿಕಾ ನ ನೆಮ್ಮದಿಯಾಗಿ ಬದುಕೋಕೆ ಬಿಡಬಾರದು, ಪ್ರತಿದಿನ ಪ್ರತಿಕ್ಷಣ ಅವಳು ನರಕ ನೋಡಬೇಕು, ಬದುಕೋಕು ಆಗ್ಬಾರ್ದು ಸಾಯೋಕು ಆಗ್ಬಾರ್ದು, ಬದುಕಿ ಇರೋ ಅಷ್ಟು ದಿನ ವಿಲ ವಿಲ ಅಂತ ಒದ್ದಾಡ್ತಾ ಸಾಯಬೇಕು ಅಂತ ಒಂದು ಘೋರ ನಿರ್ಧಾರ ತೆಗೆದುಕೊಂಡು, ಕೇರಳದ ಕಡೆಗೆ ಪ್ರಯಾಣ ಮಾಡ್ತಾಳೆ. 

****

ಅಭಿ ಮಾಡಿದ ಕೆಲಸಕ್ಕೆ ರೂಪೇಶ್ ಅವನ ಮೇಲೆ ದ್ವೇಷ ಬೆಳೆಸಿಕೊಂಡು ಸರಿಯಾದ ಸಮಯ ನೋಡಿ ಅವನಿಗೆ ತಕ್ಕ ಪಾಠ ಕಲಿಸಬೇಕು ಅಂತ ಕಾಯ್ತಾ ಇರ್ತಾನೆ.

****

ಇದ್ಯಾವುದು ಗೊತ್ತಿರದ ನಯನಾ ಅಭಿ ಪ್ರೀತಿ ಅಲ್ಲಿ ತನ್ನದೇ ಅದ ಒಂದು ಸುಂದರ ಪ್ರಪಂಚ ನ ಕಟ್ಟಿಕೊಂಡು ಸಂತೋಷ ವಾಗಿ ಇದ್ದಾಳೆ. 

@@@@@@@@@@@@@@@@@@@@@@@@