Snake Echo - Part 1 in Kannada Science-Fiction by Danger Writer books and stories PDF | ಹಾವಿನ ಪ್ರತಿಧ್ವನಿ - ಭಾಗ 1

Featured Books
Categories
Share

ಹಾವಿನ ಪ್ರತಿಧ್ವನಿ - ಭಾಗ 1

ನಿನ್ನ ಕಣ್ಣುಗಳ ರೆಪ್ಪೆಗಳು ಆಡುತ್ತಿರುವುದು ನಿನಗೆ ಗೊತ್ತಾಗುತ್ತಿದೆಯೇ? ಜಾಗ್ರತೆ, ನೀನು ಕಣ್ಣು ಮಿಟುಕಿಸುವ ಆ ಅರ್ಧ ಸೆಕೆಂಡ್‌ನ ಕತ್ತಲಲ್ಲೇ ಅದು ನಿನ್ನ ಕುತ್ತಿಗೆಯನ್ನು ಸೀಳಬಹುದು. ಹಾವಿಗೆ ಕಿವಿಗಳಿಲ್ಲ, ಅವು ಶಬ್ದವನ್ನು ಕೇಳಿಸಿಕೊಳ್ಳುವುದಿಲ್ಲ ಎಂದು ನೀನು ನಂಬಿದ್ದರೆ, ನೀನು ಜಗತ್ತಿನ ಅತಿ ದೊಡ್ಡ ಸುಳ್ಳಿನ ಮಧ್ಯೆ ಬದುಕುತ್ತಿದ್ದೀಯಾ, ಅವು ಕೇಳಿಸಿಕೊಳ್ಳುವುದು ಶಬ್ದವನ್ನಲ್ಲ, ನಿನ್ನ ಮೆದುಳಿನ ನರಗಳು ಭಯದಿಂದ ಬಿಡುಗಡೆ ಮಾಡುವ ಆಲ್ಫಾ ತರಂಗಗಳನ್ನು . ಈಗ ನಿನ್ನ ಮೆದುಳಿನಲ್ಲೂ ಆ ತರಂಗಗಳು ಏಳುತ್ತಿವೆ. ಅದರ ಅರ್ಥ, ಅದು ನಿನ್ನ ಪಕ್ಕದಲ್ಲೇ ಎಲ್ಲೋ ಹತ್ತಿರದಲ್ಲಿದೆ.

ಡಾ. ಅವಿನಾಶ್ ಒಬ್ಬ ಪ್ರಸಿದ್ಧ ನ್ಯೂರೋ-ಸೈಕಾಲಜಿಸ್ಟ್ . ಮಂಗಳೂರಿನ ಆ ಕತ್ತಲೆ ಕೋಣೆಯಲ್ಲಿ ಅವನ ಎದುರು ಒಂದು ಬೃಹತ್ ಗಾಜಿನ ಪೆಟ್ಟಿಗೆಯಿತ್ತು. ಅದರೊಳಗೆ ಕಡು ಕಪ್ಪು ಬಣ್ಣದ, ಆರು ಅಡಿ ಉದ್ದದ ಅತ್ಯಂತ ವಿಷಕಾರಿ ಕಾಳಿಂಗ ಸರ್ಪವೊಂದು ಕುಳಿತಿತ್ತು. ಅವಿನಾಶ್ ಕೈಯಲ್ಲಿ ಒಂದು ವಿಚಿತ್ರವಾದ ಬೈನರಲ್ ಫ್ರೀಕ್ವೆನ್ಸಿ ಹೊರಡಿಸುವ ಡಿವೈಸ್ ಇತ್ತು. ಹಾವಿನ ಮೆದುಳಿನ ತರಂಗಗಳನ್ನು ಹಿಪ್ನೋಟಿಸಂ ಮೂಲಕ ನಿಯಂತ್ರಿಸಿ, ಅದರ ಕ್ರೂರತೆಯನ್ನು ಸಂಪೂರ್ಣವಾಗಿ ಶೂನ್ಯ ಮಾಡುವುದು ಅವನ ರಹಸ್ಯ ಸಂಶೋಧನೆಯಾಗಿತ್ತು. ಅವಿನಾಶ್ ಆ ಡಿವೈಸ್ ಆನ್ ಮಾಡಿದ. ಅದರಿಂದ ಹೊರಟ ವಿಚಿತ್ರ ಧ್ವನಿ ಇಡೀ ಕೋಣೆಯಲ್ಲಿ ಹರಡಿತು. ಹಾವಿನ ಕಣ್ಣುಗಳು ಸ್ಥಿರವಾದವು. ಅದರ ತಲೆ ಮೆಲ್ಲನೆ ತೂಗತೊಡಗಿತು. ಅವಿನಾಶ್ ಯಶಸ್ವಿಯಾಗಿದ್ದ. ಆ ಹಾವಿನ ಇಡೀ ನರಮಂಡಲ ಈಗ ಅವನ ನಿಯಂತ್ರಣದಲ್ಲಿತ್ತು. ಅವನು ಕೈ ಸನ್ನೆ ಮಾಡಿದರೆ ಅದು ಮಲಗುತ್ತಿತ್ತು, ಕೈ ಎತ್ತಿದರೆ ತಲೆ ಎತ್ತುತ್ತಿತ್ತು. ಅವಿನಾಶ್ ಹೆಮ್ಮೆಯಿಂದ ನಕ್ಕನು.

ಆದರೆ, ಕಣ್ಣು ಮುಚ್ಚಿ ಮಲಗಿದ್ದ ಆ ಹಾವಿನ ಕಣ್ಣಿನ ರೆಪ್ಪೆಗಳು ಒಮ್ಮೆಲೇ ಉಲ್ಟಾ ತಿರುಗಿದವು. ಅದರ ಕಣ್ಣುಗಳು ಪೂರ್ತಿ ಬಿಳಿ ಬಣ್ಣಕ್ಕೆ ತಿರುಗಿದವು. ಲ್ಯಾಬ್‌ನ ಕಂಪ್ಯೂಟರ್ ಸ್ಕ್ರೀನ್ ಮೇಲೆ ಹಾವಿನ ಬ್ರೈನ್ ಗ್ರಾಫ್ ಕ್ರೇಜಿಯಾಗಿ ಓಡತೊಡಗಿತು. ತಕ್ಷಣವೇ ಹೆಡೆ ಎತ್ತಿದ ಆ ಹಾವು, ಗಾಜಿನ ಪೆಟ್ಟಿಗೆಯ ಒಳಗಿನಿಂದಲೇ ನೇರವಾಗಿ ಅವಿನಾಶ್‌ನ ಕಣ್ಣುಗಳನ್ನು ದಿಟ್ಟಿಸಿ ನೋಡಿದಾಗ ಅವಿನಾಶ್‌ಗೆ ಒಮ್ಮೆಲೇ ತಲೆ ಗಿರ್ ಎಂದಿತು. ಅವನ ಇಡೀ ದೇಹ ಜಡವಾಯಿತಲ್ಲದೆ ಹಾವಿನ ಆ ಬಿಳಿ ಕಣ್ಣುಗಳು ಅವನ ಮೆದುಳಿನ ಆಳಕ್ಕೆ ನುಗ್ಗಿದಂತೆ ಭಾಸವಾಯಿತು. ಕೇವಲ ಆ ಒಂದು ಸೆಕೆಂಡ್‌ನಲ್ಲಿ ಇಡೀ ಆಟ ಉಲ್ಟಾ ತಿರುಗಿತ್ತು. ವಿಚಿತ್ರವೆಂದರೆ  ಅವಿನಾಶ್ ಹಾವನ್ನು ಹಿಪ್ನೋಟೈಸ್ ಮಾಡಲಿಲ್ಲ.  ಬದಲಾಗಿ ಆ ಹಾವೇ ಅವಿನಾಶ್‌ನ ಮೆದುಳನ್ನು ಪೂರ್ತಿಯಾಗಿ ಹಿಪ್ನೋಟೈಸ್ ಮಾಡಿಬಿಟ್ಟಿತ್ತು. ಅವಿನಾಶ್ ಹೆದರಿ ಆ ಡಿವೈಸ್ ಆಫ್ ಮಾಡಿದ. ಹಾವು ಮತ್ತೆ ಮೊದಲಿನಂತೆ ನಾರ್ಮಲ್ ಆಗಿ ಪೆಟ್ಟಿಗೆಯ ಮೂಲೆಗೆ ಹೋಗಿ ಮುದುರಿಕೊಂಡಿತು. ಅವಿನಾಶ್ ಬೆವತು ಹೋಗಿದ್ದ. ಅಂದು ರಾತ್ರಿ ಅವನು ಮನೆಗೆ ಬಂದಾಗ ಜಗತ್ತು ಬದಲಾಗಿತ್ತು. ಅವನು ಡೈನಿಂಗ್ ಟೇಬಲ್ ಮೇಲೆ ಕುಳಿತು ಊಟ ಮಾಡುತ್ತಿದ್ದಾಗ, ಅವನಿಗೆ ಮಾತ್ರ ಆ ಶಬ್ದ ಕೇಳಿಸಿತು ಬುಸ್, ಬುಸ್, ಬುಸ್. ಅವನು ಕೆಳಗೆ ನೋಡಿದಾಗ ಬೆಚ್ಚಿಬಿದ್ದ. ಟೇಬಲ್ ಕೆಳಗಿನಿಂದ ಆ ಕಪ್ಪು ಕಾಳಿಂಗ ಸರ್ಪ ಮೆಲ್ಲನೆ ಜಾರುತ್ತಾ ಅವನ ಕಾಲಿನ ಮೇಲೆ ಹತ್ತುತ್ತಿತ್ತು. ಅದರ ತಣ್ಣನೆಯ ಚರ್ಮ ಅವನ ಚರ್ಮಕ್ಕೆ ತಾಗುತ್ತಿತ್ತು. ಅವಿನಾಶ್ ಕಿರುಚುತ್ತಾ ಹಿಂದಕ್ಕೆ ಬಿದ್ದ. ಆದರೆ ತಕ್ಷಣ ಲೈಟ್ ಆನ್ ಮಾಡಿದಾಗ ಅಲ್ಲಿ ಏನೂ ಇರಲಿಲ್ಲ, ಬರೀ ಖಾಲಿ ನೆಲ ಇತ್ತು.

ಮರುದಿನ ಆಸ್ಪತ್ರೆಗೆ ಹೋದಾಗಲೂ ಅದು ಬಿಡಲಿಲ್ಲ. ಆಪರೇಷನ್ ಥಿಯೇಟರ್‌ನ ಲೈಟ್ ಮೇಲಿಂದ ಅದು ನೇರವಾಗಿ ಅವನ ಹೆಗಲಿಗೆ ಧುಮುಕುವಂತೆ ಕಾಣುತ್ತಿತ್ತು. ಕಾರು ಚಲಾಯಿಸುವಾಗ ಸ್ಟೀರಿಂಗ್ ವೀಲ್ ಇದ್ದಕ್ಕಿದ್ದಂತೆ ಹಾವಾಗಿ ಬದಲಾಗಿ ಅವನ ಕೈಗೆ ಕಚ್ಚಲು ಬರುತ್ತಿತ್ತು. ದಿನದ ಇಪ್ಪತ್ತನಾಲ್ಕು ಗಂಟೆಯೂ, ಪ್ರತಿ ಹೆಜ್ಜೆಯಲ್ಲೂ ಆ ಹಾವು ಅವನ ಕಣ್ಣಿಗೆ ಮಾತ್ರ ಕಾಣಿಸುತ್ತಿತ್ತು, ಅವನಿಗೆ ಮಾತ್ರ ದ್ವೇಷ ಕಾರಿ ಕೊಲ್ಲಲು ಬರುತ್ತಿತ್ತು. ಅವಿನಾಶ್ ಹುಚ್ಚನಾಗುತ್ತಿದ್ದ. ಯಾರಿಗಾದರೂ ಹೇಳೋಣ ಇಂಟರ್ನೆಟ್‌ನಲ್ಲಿ ಸರ್ಚ್ ಮಾಡೋಣ ಎಂದರೆ, ಕಣ್ಣಿಗೆ ಕಾಣುವ ಹಾವು ಮರುಕ್ಷಣವೇ ಮಾಯವಾಗುತ್ತಿತ್ತು. ಜನ ಅವನನ್ನು ನೋಡಿ ಹುಚ್ಚ ಎಂದು ನಗುತ್ತಿದ್ದರು. ಹಾವಿನ ದ್ವೇಷ ಕಣ್ಣಿಗೆ ಕಾಣುವ ವಸ್ತುವಾಗಿರಲಿಲ್ಲ, ಅದು ಅವನ ಮೆದುಳಿನ ಒಳಗೆ ಕುಳಿತುಕೊಂಡು ಅವನ ಅಸ್ತಿತ್ವವನ್ನೇ ತಿನ್ನುತ್ತಿದ್ದ ಒಂದು ಸೈಕಾಲಜಿಕಲ್ ವೈರಸ್ ಆಗಿತ್ತು.
ಒಂದು ರಾತ್ರಿ ಅವಿನಾಶ್‌ಗೆ ಆ ಭೀಕರ ಸತ್ಯ ಅರಿವಾಯಿತು. ಆ ಹಾವು ಗಾಜಿನ ಪೆಟ್ಟಿಗೆಯಿಂದ ತಪ್ಪಿಸಿಕೊಂಡೇ ಇರಲಿಲ್ಲ. ಅದು ಇಂದಿಗೂ ಅದೇ ಲ್ಯಾಬ್‌ನ ಪೆಟ್ಟಿಗೆಯೊಳಗೆ ಕುಳಿತು ಕಣ್ಣು ಮುಚ್ಚಿ ಯೋಚಿಸುತ್ತಿದೆ. ಆ ಹಾವು ತನ್ನ ಮೆದುಳಿನಲ್ಲಿ ಮಾಡುತ್ತಿರುವ ಕಲ್ಪನೆಗಳೇ  ಇಲ್ಲಿ ಅವಿನಾಶ್‌ಗೆ ನಿಜವಾಗಿ ಕಾಣಿಸುತ್ತಿವೆ ಅಂದರೆ, ಹಾವು ತನ್ನ ಕೋಣೆಯಲ್ಲಿ ಕುಳಿತು ಅವಿನಾಶ್‌ನನ್ನು ಹೇಗೆ ಕೊಲ್ಲಬೇಕು ಎಂದು ಸ್ಕ್ರಿಪ್ಟ್ ಬರೆಯುತ್ತಿದ್ದು, ಅವಿನಾಶ್ ಆ ಹಾವಿನ ಸ್ಕ್ರಿಪ್ಟ್‌ನಂತೆ ತನ್ನ ಕಣ್ಣೆದುರೇ ತನ್ನ ಸಾವನ್ನು ನೋಡುತ್ತಿದ್ದಾನೆ. ಅವಿನಾಶ್‌ಗೆ ಉಸಿರಾಡಲು ಕಷ್ಟವಾಯಿತು. ತನ್ನ ರೂಮಿನ ಗೋಡೆಗಳು ತನ್ನತ್ತಲೇ ಕುಸಿಯುತ್ತಿರುವಂತೆ ಭಾಸವಾಯಿತು. ಅವನು ಸೋಫಾದ ಮೇಲೆ ಕುಳಿತು ತಲೆಯನ್ನು ಎರಡು ಕೈಗಳಿಂದ ಗಟ್ಟಿಯಾಗಿ ಒತ್ತಿ ಹಿಡಿದುಕೊಂಡ. ಇಲ್ಲ, ಇದು ನನ್ನ ಭ್ರಮೆ, ಆ ಹಾವು ಕೇವಲ ಮೃಗ, ಅದಕ್ಕೆ ಸ್ಕ್ರಿಪ್ಟ್ ಬರೆಯಲು ಸಾಧ್ಯವಿಲ್ಲ ಎಂದು ತನಗೇ ತಾನೇ ಕಿರುಚಿಕೊಂಡ.
ಆದರೆ ತಕ್ಷಣವೇ ಅವನ ಕಿವಿಯ ಪಕ್ಕದಲ್ಲೇ ಅತ್ಯಂತ ತಣ್ಣನೆಯ, ಸೀಳು ನಾಲಿಗೆಯ ಶಬ್ದ ಕೇಳಿಸಿತು. ಹೌದೇ ಅವಿನಾಶ್?
ಅವಿನಾಶ್ ಬೆಚ್ಚಿಬಿದ್ದು ಕಣ್ಣು ತೆರೆದಾಗ ಅವನ ಇಡೀ ಮೈ ರೋಮಾಂಚನಗೊಂಡಿತು. ಅವನ ಇಡೀ ಲಿವಿಂಗ್ ರೂಮ್ ಈಗ ಹಾವಿನ ಚರ್ಮದ ಬಣ್ಣಕ್ಕೆ ತಿರುಗಿತ್ತು. ಗೋಡೆಗಳ ಮೇಲಿದ್ದ ಪೇಂಟಿಂಗ್‌ಗಳೆಲ್ಲವೂ ಹಾವಿನ ಕಣ್ಣುಗಳಾಗಿ ಬದಲಾಗಿ ಇವನನ್ನೇ ದಿಟ್ಟಿಸುತ್ತಿದ್ದವು. ಅವನು ಎದ್ದು ಓಡಲು ಯತ್ನಿಸಿದಾಗ ನೆಲ ಒಮ್ಮೆಲೇ ಮೆತ್ತಗಾಗಿ, ನೂರಾರು ಸಣ್ಣ ಸಣ್ಣ ಹಾವುಗಳು ಅವನ ಕಾಲನ್ನು ಬಿಗಿದಪ್ಪಿದವು. ಅವನು ಹೆಜ್ಜೆ ಇಡಲೂ ಸಾಧ್ಯವಾಗದೆ ಸೋಫಾದ ಮೇಲೆಯೇ ಕುಸಿದುಬಿದ್ದ. ಅವನಿಗೆ ಅರ್ಥವಾಯಿತು, ಹಾವಿನ ಹಿಪ್ನೋಟಿಸಂ ಅವನ ಮೆದುಳಿನ ಐದೂ ಇಂದ್ರಿಯಗಳನ್ನು  ಸಂಪೂರ್ಣವಾಗಿ ಹ್ಯಾಕ್ ಮಾಡಿದ್ದು ಅವನು ಏನನ್ನು ಮುಟ್ಟುತ್ತಿದ್ದಾನೋ, ಏನನ್ನು ನೋಡುತ್ತಿದ್ದಾನೋ, ಪ್ರತಿಯೊಂದನ್ನೂ ಆ ಹಾವೇ ನಿರ್ಧರಿಸುತ್ತಿದೆ. ಇನ್ನು ಕೇವಲ ಎರಡು ಗಂಟೆಗಳಲ್ಲಿ ಈ ಸ್ಕ್ರಿಪ್ಟ್ ಮುಗಿಯುತ್ತದೆ. ಬೆಳಗಿನ ಜಾವ 5 ಗಂಟೆಗೆ ನನ್ನ ಹೃದಯ ಸ್ತಂಭನವಾಗಿ ನಾನು ಸಾಯುತ್ತೇನೆ, ಅದನ್ನು ಆ ಹಾವಿನ ಸ್ಕ್ರಿಪ್ಟ್‌ನಲ್ಲಿ ನಾನು ನೋಡಿದ್ದೇನೆ, ಅವಿನಾಶ್‌ನ ಮೆದುಳು ಅವನಿಗೆ ಎಚ್ಚರಿಕೆ ನೀಡಿತು. ಹಾವಿನ ಕೋಪಕ್ಕೆ ಕಾರಣ ಆ ಹಿಪ್ನೋಟಿಸಂ ಡಿವೈಸ್ ಅಲ್ಲ, ಬದಲಾಗಿ ಆ ಡಿವೈಸ್ ಮೂಲಕ ಅವಿನಾಶ್ ಹಾವಿನ ಮೆದುಳಿನಲ್ಲಿದ್ದ ಅದರ ಸ್ವಂತ ಅಸ್ತಿತ್ವವನ್ನು ಅಳಿಸಲು ಯತ್ನಿಸಿದ್ದ. ಆದರೆ ಈಗ ಆ ಹಾವು ಇವನ ಅಸ್ತಿತ್ವವನ್ನೇ ಅಳಿಸಲು ಆಟ ಶುರು ಮಾಡಿತ್ತು.

ಸಾಯುವ ಮುನ್ನ ಆ ಹಾವನ್ನು ಎದುರಿಸಲೇಬೇಕು ಎಂದು ನಿರ್ಧರಿಸಿದ ಅವಿನಾಶ್ ಹುಚ್ಚನಂತೆ ಕಾರಿನ ಕೀ ಎತ್ಕೊಂಡು, ಕಣ್ಣೆದುರು ಕಾಣುತ್ತಿದ್ದ ಹಾವಿನ ಭ್ರಮೆಗಳನ್ನು ಸೀಳಿಕೊಂಡು ಮತ್ತೆ ಅದೇ ಕತ್ತಲೆ ಲ್ಯಾಬೊರೇಟರಿಗೆ ಓಡಿಬಂದ. ಲ್ಯಾಬ್‌ನ ಬಾಗಿಲು ತೆರೆದಾಗ ಇಡೀ ಕೋಣೆಯಲ್ಲಿ ನಿಶ್ಯಬ್ದವಿತ್ತು. ಕಂಪ್ಯೂಟರ್ ಸ್ಕ್ರೀನ್ ಮಸುಕಾಗಿ ಹೊಳೆಯುತ್ತಿತ್ತು. ಅವಿನಾಶ್ ಮೆಲ್ಲನೆ ನಡೆದು ಆ ಬೃಹತ್ ಗಾಜಿನ ಪೆಟ್ಟಿಗೆಯ ಮುಂದೆ ನಿಂತ. ಪೆಟ್ಟಿಗೆಯೊಳಗೆ ಆ ಕಾಳಿಂಗ ಸರ್ಪ ಕಣ್ಣು ಮುಚ್ಚಿ ಪ್ರಶಾಂತವಾಗಿ ಕುಳಿತಿತ್ತು. ಅದರ ಇಡೀ ದೇಹ ಸ್ಥಿರವಾಗಿತ್ತು. ಆದರೆ ವಿಚಿತ್ರವೆಂದರೆ, ಲ್ಯಾಬ್‌ನ ಕಂಪ್ಯೂಟರ್ ಮಾನಿಟರ್ ಮೇಲೆ ಹಾವಿನ ಬ್ರೈನ್ ಗ್ರಾಫ್ ಅತಿ ವೇಗವಾಗಿ ಓಡುತ್ತಿತ್ತು ಹಾವು ನಿಜಕ್ಕೂ ಮಲಗಿರಲಿಲ್ಲ, ಅದು ಅವಿನಾಶ್‌ನ ಸಾವಿನ ಕ್ಲೈಮ್ಯಾಕ್ಸ್ ಅನ್ನು ಅತ್ಯಂತ ತೀವ್ರವಾಗಿ ಯೋಚಿಸುತ್ತಿತ್ತು. ಅವಿನಾಶ್ ಗಾಜಿನ ಪೆಟ್ಟಿಗೆಯ ಮೇಲಿದ್ದ ಲಾಕ್ ಅನ್ನು ಮುಟ್ಟಿದ. ನೀನು ನನ್ನ ತಲೆಯೊಳಗೆ ಕುಳಿತು ನನ್ನನ್ನು ಕೊಲ್ಲಬೇಕಾದರೆ, ನಾನು ನಿನ್ನ ಪ್ರಪಂಚದೊಳಗೆ ಬರಲೇಬೇಕು ಎಂದು ಪಿಸುಗುಟ್ಟುತ್ತಾ, ಆ ಆರು ಅಡಿ ಉದ್ದದ ಹಾವಿದ್ದ ಪೆಟ್ಟಿಗೆಯ ಬಾಗಿಲನ್ನು ಪೂರ್ತಿಯಾಗಿ ತೆರೆದುಬಿಟ್ಟ. ಹಾವು ಕಣ್ಣು ಬಿಟ್ಟಿತು. ಅದರ ಕಣ್ಣುಗಳು ಈಗ ಸಾಮಾನ್ಯ ಕಣ್ಣುಗಳಾಗಿರಲಿಲ್ಲ, ಅವುಗಳ ಒಳಗೆ ಅವಿನಾಶ್‌ಗೆ ತನ್ನದೇ ಸಾವು ಸ್ಪಷ್ಟವಾಗಿ ಕಾಣಿಸುತ್ತಿತ್ತು. ಹಾವು ಪೆಟ್ಟಿಗೆಯಿಂದ ಹೊರಗೆ ಬಂದು ಹೆಡೆ ಎತ್ತಿ ನಿಂತಿತು. ಅವಿನಾಶ್ ಓಡಲಿಲ್ಲ, ಕಣ್ಣು ಮುಚ್ಚಲಿಲ್ಲ. ಬದಲಾಗಿ, ಹಾವಿನ ಕಣ್ಣುಗಳನ್ನೇ ದಿಟ್ಟಿಸಿ ನೋಡುತ್ತಾ ತನ್ನ ಕೈಯಲ್ಲಿದ್ದ ಆ ಹಿಪ್ನೋಟಿಸಂ ಡಿವೈಸ್ ಅನ್ನು ತನ್ನದೇ ತಲೆಗೆ ಇಟ್ಟುಕೊಂಡ.

Support the Creator
ಗೆಳೆಯರೇ, ಮನುಷ್ಯ ಮತ್ತು ಹಾವಿನ ಮಧ್ಯದ ಈ ಮಾನಸಿಕ ಯುದ್ಧದ ಕಲ್ಪನೆಯನ್ನು ರಚಿಸಲು ನನ್ನ ಅಪಾರ ಪರಿಶ್ರಮವಿದೆ. ಒಬ್ಬ ಸ್ವತಂತ್ರ ಬರಹಗಾರನಾಗಿ ನನ್ನ ಬರವಣಿಗೆಯೇ ನನ್ನ ಶಕ್ತಿ. ಈ ಹೊಸ ಶೈಲಿಯ ಕಥೆ ನಿಮಗಿಷ್ಟವಾಗಿದ್ದರೆ, ನನಗೆ ಒಂದು ಕಪ್ ಕಾಫಿ ಕೊಡಿಸುವ ಮೂಲಕ (Support me with a coffee) ನನ್ನ ಕೆಲಸವನ್ನು ಪ್ರೋತ್ಸಾಹಿಸಬಹುದು.

GPay / PhonePe Number: 9019919635