Natural Wisdom Life Art books and stories free download online pdf in Kannada

ಪ್ರಾಕೃತಿಕ ವೈಜ್ನಾನಿಕ ಜೀವನ ಕಲೆ

“ ಹಾಂ!!! ನಿನ್ನೆ ಮೊನ್ನೆ ಚೆನ್ನಾಗೇ ಇದ್ದಲ್ಲೋ “ ಈಗ ಹಾರ್ಟ್ ಬ್ಲಾಕ್ ಅಂತಿದ್ದಿಯ ಅದೂ ಇಷ್ಟು ಸಣ್ಣ ವಯಸ್ಸಿನಲ್ಲಿ !!! ನಾನಲ್ಲಪ್ಪ ಡಾಕ್ಟರ್ ಹೇಳಿದ್ದು.

ಅಯ್ಯೋ ರಾಮ, ಈಗ್ ಅರ್ಧಾ ಘಂಟಿ ಹಿಂದ ನಾನ್ ಅವ್ರ್ ಹತ್ರ ಮಾತಾಡಿ ಬಂದೋಳ್ ಇದ್ದೀನಿ , ನೀವೆನ್ರಿ ಬಿ ಪಿ ಹೆಚ್ಚಾಗಿ ದವಾಖಾನ್ಯಗ್ ಭರ್ತಿ ಅಗ್ಯರ್ ಅಂತೀರಿ!!! ಖರೆ ನೋ ಹೆಂಗ? , ಇನ್ನೂ 45 ವರ್ಷ ಅವರಿಗೆ !!!

ನಂಗೇನ್ ಗೋತ್ವಾ ನೀ ಯಾವಾಗ್ ಅವರ್ನ ಭೆಟ್ಟಿಯಾಗಿಂತ, ನೀ ಎಲ್ಲಾ ನಂಗ ಹೇಳೇಮಾಡೋರ್ಗತೆ ಮಾತಾಡ್ತಿ. ಆದ್ರೂ ಮೊದ್ಲ ಹೆಂಡ್ತಿಗ್ ಹೆಳ್ದಂಗ ಗಂಡಂದ್ರು ಮಾಡ್ಕೊಳ್ಳೋ ಆಸ್ತಿಅಂದ್ರ ಇವ ಮತ ಬಿ ಪಿ, ಶುಗರ್ರು, ಎನ್ನಂತಿ .

ಯಾ!!! ಹೌದಪ್ಪ ಪಂಚರಂಗಿ ಫೈಲ್ವಾನ್, ಮೊದ್ಲೇ ಹೇಳಿಬಿಟ್ರೆ ಬಿ ಪಿ, ಶುಗರ್ ಇಂದ ಆಸ್ತಿ ಮಾಡೋದು ಹೆಂಗ ಅಂತ ಐಡಿಯಾ ಕೊಡ್ತೀವಿ, ನಿಮ್ಗ ಅದ್ ಯಾಕ್ ಬೇಕು, ಬಿ ಪಿ, ಶುಗರ್ರ ಬೇಕು, ಅದಕ್ಕ ಮೊದ್ಲೇ ಹೇಳಲ್ಲ, ಬಂದ್ ಮ್ಯಾಲೆ ಹೆಂಡ್ರು ಮಕ್ಕಳಕನ್ನಾ ಅವನ್ನೇ ಜಾಸ್ತಿ ಕಾಳ್ಜಿ ಮಾಡ್ತೀರಿ, ಇಲ್ಲಾಂದ್ರ ಆವೇನ್ ನಮ್ಮಂಗ ನಿವೇನ ಮಾಡಿದ್ರು ಸುಮ್ಮ ಇರ್ತಾವಾ, ಎಲ್ಲಿ ಜಡೀ ಬೇಕೋ ಅಲ್ಲಿ ಜಡೀತವ.

ಬಹುಷಃ ಈ ತರಹದ ಮಾತುಗಳು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿಬಿಟ್ಟಿವೆ. ನೀವು ಆಗಾಗ ಮಾತಾಡಿರಬಹುದು ಅಲ್ವಾ ?

ತಂತ್ರಜ್ನಾನ, ಆಧುನಿಕತೆಯ ಪ್ರವಾದಲ್ಲಿ ನಾವು ಪ್ರಕೃತಿಯಿಂದ ತುಂಬಾ ದೂರ ಸರಿದಿದ್ದೇವೆ, ಎನಂತೀರಾ? ಹಿತ ಮಿತವಾಗಿ ಬಳಸಿದರೆ ವಿಷವೂ ಆರೋಗ್ಯ ಕೊಡುವುದು ಅತಿಯಾಗಿ ಬಳಸಿದರೆ ಅಮೃತವೂ ಮೃತ್ಯುವನ್ನು ತರುವುದು. ಯಾವುದೇ ಆಗಲಿ ಅತಿ ಆದಾಗ ಅದರ ಉಪಯೋಗಕ್ಕಿಂತ ಅಪಾಯವೇ ಹೆಚ್ಚಾಗುತ್ತಾಹೋಗುತ್ತದೆ. ಇದರ ಜ್ವಲಂತ ನಿದರ್ಶನ ನಮ್ಮ ತಂತ್ರಜ್ನಾದಮೇಲೆ ಅತಿಯಾದ ಅವಲಂಬನೆ ಹಾಗೂ ಕ್ಷುಲ್ಲಕ ಕಾರ್ಯಗಳಿಗೆ ತಂತ್ರಜ್ನಾನದ ಬಳಕೆ.

ನಾನು ಒಬ್ಬ ವಿದ್ಯುನ್ಮಾನ ಹಾಗೂ ದೂರಸಂಪರ್ಕ ಅಬಿಯಂತರ, ನನಗೆ ತಂತ್ರಜ್ನಾನ ಮತ್ತು ಅದರ ಬೆಳವಣಿಗೆಯ ಬಗ್ಗೆ ಜಿಗುಪ್ಸೆ ಅಥವಾ ಯಾವುದೇ ನಕಾರಾತ್ಮಕತೆ ಇಲ್ಲ ಆದರೆ ಅದನ್ನು ಬಳಸುವ ಹಾಗೂ ನಿಷೇಧಿಸುವ ಪದ್ದತಿಯ ಬಗ್ಗೆ ಖಂಡಿತಾ ಅಸಮಧಾನ ಇದೆ. ದಿನೇ ದಿನೇ ಒಂದಲ್ಲಾ ಒಂದು ರೀತಿಯಲ್ಲಿ ನಾವು ತಂತ್ರಜ್ಞಾನವನ್ನು ಒಂಡೆದೇ ದುರ್ಭಳಕೆ ಮಾಡುತ್ತೇವೆ ಮತ್ತೊಂದೆಡೆ ತಂತ್ರಜ್ಞಾಕ್ಕೆ ನಿಷೇಧಾಜ್ಞೆ ಹೆರುತ್ತಿದ್ದೇವೆ. ಉದಾಹರಣೆಗೆ ಸಾಮಾಜಿಕ ಜಾಲ ತಾಣಗಳನ್ನೇ ತಗೆದುಕೊಳ್ಳಿ,” ಈ ವಾಟ್ಸಾಪ್, ಫೇಸ್ ಬುಕ್ ಬಂದಾಗಿನಿಂದ ಜನ ಮೊಬೈಲ್ ಗಳ ಗುಲಾಮರಾಗಿದ್ದಾರೆ, ಖಿನ್ನಾರಾಗಿದ್ದಾರೆ, ಓದುತ್ತಿಲ್ಲಾ, ಶಾರೀರಿಕ ಶ್ರಮವಿಲ್ಲಾ .... “ ಇಂತಹ ಅನೇಕ ಮಾತು ಕೇಳಿರಬಹುದು. “ ಅಯ್ಯೋ!!! ಸ್ವಾಮಿ ಜಿಯೋ ಬಂದಮೇಲಂತೂ, ಬಿದೀಲಿ ಪ್ಯಾಂಟ್ ಹಾಕ್ಕೊಂಡು ಅಡೋಕೆ ವೈತಾಯಿದ್ರು , ಈಗ ಮನೇಲಿ ಬರ್ಮುಡಾ ಹಾಕಕೊಂಡ್ ಕುಂತು ಯೂಟೂಬ್ ನೋಡ್ತೌರೆ”, “ ಈ ಸ್ಮಾರ್ಟ್ ಫೋನ್ ಇಲ್ಲಾಂದಿದ್ರೆ ಗಿನಾ .....”.

ಸಾಮಾಜಿಕ ಜಾಲತಾಣಗಳ ಶಕ್ತಿ ಮತ್ತು ಉಪಯೋಗ ತುಂಬಾನೇ ಇವೆ, ನಮ್ಮ ಕೌಶಲ್ಯವನ್ನು ಪ್ರಪಂಚಕ್ಕೆ ಅತಿ ಕಡಿಮೆ ಸಮಯ ಹಾಗೂ ಕಡಿಮೆ ವೆಚ್ಚದಲ್ಲಿ ಪಸರಿಸಬಹುದು, ನಮ್ಮ ವ್ಯವಸ್ಥೆಯ ಬಗ್ಗೆ ಅನಿಸಿಕೆ ಅಭಿಪ್ರಾಯಗಳನ್ನು ಕ್ಷಣಾರ್ಧದಲ್ಲಿ ಇಡೀ ವಿಶ್ವಕ್ಕೆ ತಿಳಿಸಬಹುದು. ನಮ್ಮ ಆಧುನಿಕ ಪ್ರಯೋಗ, ಆಲೋಚನೆ, ವಸ್ತುಗಳ ಕ್ರಯ ವಿಕ್ರಯಗಳಿಗೆ, ಹೊಸ ವಿಷಯ, ಭಾಷೆ, ಪಠ್ಯಗಳನ್ನು ಕಲಿಯುವುದಕ್ಕ ಇವನ್ನು ಬಳಸಿಕೊಳ್ಳಬಹುದು. ಇಷ್ಟಕ್ಕೆ ಸೀಮಿತವಾಗದೆ ಕ್ರಿಯಾತ್ಮಕವಾಗಿ ಇನ್ನೂ ಅನೇಕ ಸದುಪಯೋಗ ಮಾಡಿಕೊಳ್ಳಬಹುದು.

ದೂರದ ಉದಾಹರಾಣೆ ಬೇಡ, ನಾನು ಈ ಲೇಖನೆ ಬರೆಯುತ್ತಿಲ್ಲಾ!!!..... ಟೈಪ್ ಮಾಡ್ತೀದ್ದೇನೆ. ಅದಕ್ಕೆ ನನ್ನ “ತೊಡೆ ಮೇಲೆ ಯನ್ನು ಮೇಜಿನಮೇಲಿಟ್ಟು ಬಳಸುತ್ತಿದ್ದೇನೆ!!! ”….. ಕ್ಷಮಿಸಿ ಲ್ಯಾಪ್ ಟಾಪ್ ಅನ್ನು ತೊಡೆ ಮೇಲೆ ಇಟ್ಟುಕೊಂಡಲ್ಲ ಮೇಜಿನಮೇಲೆ ಇಟ್ಟು ಬಳಸುತ್ತಿದ್ದೇನೆ. ಈ ವಿ-ಪುಸ್ತಕವನ್ನು (ವಿದ್ಯುನ್ಮಾನ ಪುಸ್ತಕವನ್ನು ) ಒಂದು ಮೊಬೈಲ್ ನಲ್ಲೋ ಅಥವಾ ಮೊಬೈಲ್ ನಲ್ಲಿ ತಂತ್ರಾಂಷದ (ಸಾಫ್ಟ್ ವೇರ್) ಮುಖಾಂತರ ಓದುತ್ತಿದ್ದೀರಿ. ಈ “ತ್ರಾಂಷ” (ಯಾಪ್) ಕೂಡಾ ಒಂದುರೀತಿ “ಸಾಜಾತಾ” (ಸಾಮಾಜಿಕ ಜಾಲ ತಾಣ ) ರೀತಿಯೇ ಕಾರ್ಯ ನಿರ್ವಹಿಸುತ್ತದೆ.

ಆದರೆ, ಅಯ್ಯಾ, ನೀವು ದಿನದ ಬಿಡುವಿನಲ್ಲಿ ಕುಳಿತು ಓದುತ್ತಿದ್ದರೆ ಒಳ್ಳೆಯದು, ಸೂರ್ಯಾಸ್ಥವಾದನಂತರ ಓದುತ್ತಿದರೆ, ರಾತ್ರಿ ಮಲಗಲಿಕ್ಕೆ ಮುನ್ನ ಓದುತಿದ್ದರೆ, ದಯಮಾಡಿ ಇಲ್ಲಿಗೆ ಓದುವುದು ಸಾಕು, ನಾಳೆ ನಾನು ಪರೀಕ್ಷೆ ಏನು ಇಡಲ್ಲ ಹಾಯಾಗಿ ಮಲಗಿ. ಇಲ್ಲ ಅಂದ್ರೆ ಮುಂದೆ ಎಲ್ಲಾ ಓದಿದಮೇಲೆ ಹೇಳೋದು ಆಚಾರ ತಿನ್ನೋದು ಬದನೇಕಾಯಿ ಅಂತಾ ಬೈಕೋತಿರಿ.

ನಮ್ಮಲ್ಲಿ ಬಹುತೇಕರು ಈ ಸಾಮಾಜಿಕ ಜಾಲ ತಾಣಗಳಲ್ಲಿ ಏನು ಮಾಡುತಿದ್ದೇವೆ? ನಮ್ಮ ವೈಯ್ಕತಿಕ ಚಿತ್ರಗಳನ್ನು, ವಿಷಯಗಳನ್ನು, ಘಾತಕ ಸಂದೇಶಗಳನ್ನು , ಹಂಚಿ ಅದನ್ನು ಎಷ್ಟು ಜನ ಮೆಚ್ಚಿದ್ದಾರೆ ಅಂತ ನೋಡೋದರಲ್ಲಿ ಸಮಯ ಹಾಳು ಮಾಡಿಕೊಳ್ಳುವುದು, ನಮ್ಮ ವೈಯಕ್ತಿತ ಮಾಹಿತಿಯ ಕಳುವಿನ ಭಯದಲ್ಲಿ ಕಾಲ ಕಳೆಯುತಿದ್ದೇವೆ.

ಇದು ತಂತ್ರಜ್ಞಾನ ಒಂದೇ ಅಲ್ಲ ನಾವು ಬಹುತೇಕ ಸಲಕರಣೆಗಳನ್ನು ಒಳಿತಿಗಾಗಿ ಅಲ್ಲದೆ ಕ್ಷುಲ್ಲಕ ಸಣ್ಣ ಪುಟ್ಟ ಕೆಲಸಗಳಿಗೆ ಮತ್ತು ತಪ್ಪಾಗಿ ಬಳಸಿ ಅದರ ಪ್ರಯೋಜನದ ಬದಲು ಅಪಾಯಕ್ಕೆ ಒಳಗಾಗುತಿದ್ದೇವೆ. ಮನೆಯಲ್ಲಿ ಇರುವ ಚಾಕು ತರಕಾರಿ, ಹಣ್ಣುಗಳನ್ನು ಕತ್ತರಿಸಲು ಉಪಯೋಗಿಸುತ್ತೇವೆ, ಅದನ್ನೇ ಅಜಾಕರುಕತೆಯಿಂದ ಅಥವಾ ತಪ್ಪಾಗಿ ಬಳಸಿ ನಮ್ಮ ಕೈಯನ್ನು ಕೂಡಾ ಕತ್ತರಿಸಿಕೊಳ್ಳಬಹುದು, ಆದರೆ ಕೈ ಕತ್ತರಿಸಿದ ಚಾಕು ತಪ್ಪಿತಸ್ತವೋ ಅಥವಾ ನಾವೋ ? ಕೆಲವು ಸಂದರ್ಭಗಳಲ್ಲಿ ಚಾಕುವಿಯನದೇ ತಪ್ಪು ಅದನ್ನು ಮನೆಯಿಂದ ಆಚೆ ಇಡಿ ಅಂತ ಹೇಳುವಹಾಗೆ ಮೊಬೈಲ್ ಬ್ಯಾನ್, ಇಂಟರ್ ನೆಟ್ ಬ್ಯಾನ್, ಕೇಬಲ್ ಟೀವಿ ಬ್ಯಾನ್, ಮಾಡುವುದು ಕೆಲ ಸಂಘ ಸಂಸ್ತೆಗಳಲ್ಲಿ ಮಾತ್ರವಲ್ಲ ಮನೆಗಳಲ್ಲಿ ಕೂಡಾ ನೋಡಸಿಗಬಹುದು.

ಸಣ್ಣ ಮಕ್ಕಳಿಗೆ ಚಾಕು ಕೊಡಬೇಕಾ!!! ಸಲಕರಣೆಗಳನ್ನು ಉಪಯೋಗಿಸುದು ಒಂದು ಕಲೆ, ಪೆನ್ಸಿಲ್ ಅಥವಾ ಬಳಪ ಹಿಡಿದು ಬರೆಸಬೇಕು ಎಂದು ನೀವು ಅಪೇಕ್ಷಿಸಿದಲ್ಲಿ ಚಾಕು ಉಪಯೋಗಿಸುವ ಕೌಶಲ್ಯ ಕೂಡಾ ಮಕ್ಕಳ ಹಕ್ಕು. ಬರವಣೆಗೆಗೆ ಬೇಕಾಗುವ ಮಾರ್ಗದರ್ಶನ, ಇತರೆ ಸಲಕರಣೆಗಳನ್ನು ಉಪ್ಯೋಗಿಸುವುದಕ್ಕೂ ಬೇಕು. ಮಾರ್ಗದರ್ಶನ ಮಾಡುವ, ಮಾಡಿಸುವ ಸಾಮರ್ಥ್ಯ, ಇಚ್ಛೆ, ಓಪಿಕೆ ಇದೆಯಾ?

ಒಂದು ಕಡೆ ವಿಪರೀತ ಹಾಗೂ ಕ್ಷುಲ್ಲಕವಾಗಿ ಸೌಲಭ್ಯಗಳ ಉಪಯೋಗ, ಇನ್ನೊಂದೆಡೆ ಸೌಲಭ್ಯಗಳಿಗೆ ನಿಷೇದಾಜ್ಞೆ, ಹಾನಿಕಾರಕ ವಿಷಯಗಳ ಕಡೆಗೆ ಸಾಗಲು ನೀಡುತ್ತಿರುವ ಪ್ರಚೋದನೆ, ಅತ್ಯಾಸೆಗೆ ಕೊಡುತ್ತಿರುವ ಬಣ್ಣದ ಹೆಸರುಗಳಿಗೆ ಬೆನ್ನು ಹತ್ತಿ, ನಮ್ಮ ಜೀವನವನ್ನು ಪ್ರಕೃತಿಗೆ ದೂರ ಮಾಡಿಕೊಂಡಿರುವುದಲ್ಲದೆ, ಅವೈಜ್ನಾನಿಕವಾಗಿ ಜೀವನ ಸಾಗಿಸುತ್ತಿದೆವೆ!!!

ನಿಮಗೆ ಯವಾಗದರೂ ಹೀಗೆ ಅನಿಸಿದೆಯಾ? ಅಥವಾ ಇವೆಲ್ಲವಕ್ಕೂ ಸಮಯ ಎಲ್ಲಿ ಅಂತೀರಾ? ಏನೇ ಇರಲಿ “ ಹೇಳುವುದಕ್ಕೂ ಕೇಳುವುದಕ್ಕೂ ಇದು ಸಮಯವಲ್ಲಾ” ಅಂತ ಮಾತ್ರ ಅನ್ನಲ್ಲಾ ತಾನೇ.

ಇಂತಹ ಅತೀವೃಷ್ಠಿ ಮತ್ತು ಅನಾವೃಷ್ಠಿಯ ತೂಗುಡೋಣಿಯ ಪರಿಸ್ಥಿತಿಯಲ್ಲಿ ನಮ್ಮ ಋಷಿ ಮುನಿಗಳು ತೋರಿದ ಜೀವನ ಶೈಲಿ, ಅದರಲ್ಲಡಗಿರುವ ವೈಜ್ಞಾನಿಕತೆ ನಾವು ತಿಳಿಯಲೇಬೇಕು. ಉದಾಹರಣೆಗೆ ಗೌತಮ ಬುಧ್ಧ ಹೇಳಿದ್ದು ಅದಕ್ಕೂ ಮುನ್ನ ಶ್ರೀಕೃಷ್ಣ ತೋರಿಸಿದ ಮಾರ್ಗದರ್ಶನ ಅವಲೋಕಿಸಲೇ ಬೇಕು ಅದೇ “ ಮಧ್ಯಮ ಮಾರ್ಗ ”. ದಾರಿ ಮಧ್ಯದಲ್ಲಿ ಹಾಕಿ ಅಂತಲ್ಲ, ಯಾವುದನ್ನೂ ಅತಿಯಾಗಿಸಬೇಡ ಅನ್ನುವುದು. ಅದನ್ನೇ ಆಂಗ್ಲರು “The Law of Golden Path” “ಬಂಗಾರ ಮಾರ್ಗದ ನಿಯಮ” ಎಂದು ಕರೆದಿದ್ದಾರೆ.

ಬನ್ನಿ ಈಗ ನಮ್ಮ ಹಿರಿಯರು, ಋಷಿಗಳು ನಮ್ಮ ಜೀವನ ಶೈಲಿ ಯನ್ನು ವೈಜ್ಞಾನಿಕವಾಗಿ ಹೇಗೆ ನಿರ್ವಹಿಸಬೇಕು ಅಂದರಿದಾಗುವ ಲಾಭಗಳೇನು ಅನ್ನೋದನ್ನತಿಳಿಯೋಣ. ಪ್ರಪ್ರಥಮವಾಗಿ ನಮ್ಮ ಎಲ್ಲಾಕಾರ್ಯಗಳನ್ನು ಪ್ರಾರಂಬಿಸುವ ಮುನ್ನ ಪ್ರಾರ್ಥನೆ ಮಾಡಬೇಕು ಎಂದಿದ್ದಾರೆ, ಪ್ರಾರ್ಥನೆಯಿಂದ ನಮ್ಮ ಮನಸ್ಸು ಶಾಂತವಾಗುತ್ತದೆ, ಏಕಾಗ್ರಗೊಳ್ಳುತ್ತದೆ, ಸಕಾರಾತ್ಮಕವಾಗಲು ಅನುವಾಗುತ್ತದೆ.

ನಮ್ಮ ಹಿರಿಯರು ಗಣಪತಿ ಪ್ರಾರ್ಥನೆಯನ್ನು ಸೂಚಿಸಿರುತ್ತಾರೆ, ಹೀಗಾಹಿ ಈಗ ನಾವು ಈ ಗ್ರಂಥದ ವಸ್ತುವಿಶಕ್ಕೆ ಹೋಗುವಮುನ್ನ ಗಣಪತಿಯನ್ನು ವಿಶೇಷವಾಗಿ ನೆನೆಯೊಣ. ಗಣಪತಿ ಹಬ್ಬವನ್ನು ನಾವು ಏತಕ್ಕಾಗಿ ಅಚ್ಚರಿಸಬೇಕು?

“ಇನ್ಯಾಕೆ, ಓಣಿ ಗಣಪನ ಹೆಸರಿನಲ್ಲಿ ಚಂದಾ ವಸೂಲಿ, ಮನೇಲಿ ಕಡುಬು ಮಾಡಿ ತಿನ್ನೋಕೆ, ಆಮೇಲೆ ಓಣಿ ಗಣಪನ ಮುಂದೆ ಒಂದ್ ಹೊಸಾ ಸಿನ್ಮಾ ಹಾಡ್ ಹಾಕ್ಕೊಂಡು ಕುಣ್ಕೋಂತ ಕ್ಯೆನಾಲೋ ಬಾವೀಗೋ ಹೋಗಿ ವಿಸರ್ಜನೆ, ಮನೀದು, ದಯೇನ್ ಬಕೇಟ್ ಇಲ್ಲಾ ನಮ್ ಓಣಿ ಗಣಪನ ಜೊತೆ ಕಲ್ಸೋದಪ್ಪ” ಅಂತಾನೆ ನಮ್ ಪಂಚರಂಗಿ ಫೈಲ್ವಾನ್.

ಭಾದ್ರಪದ ಮಾಸ ಶುಕ್ಲ ಪಕ್ಷ ಚೌತಿ ತಿಥಿಯಂದು ನಾವು ಗಣೇಶ ಹಬ್ಬ ಅಂತ ಅಚ್ಚರಿಸುತ್ತೇವೆ. ಅಂದ್ರೆ ಭಾದ್ರಪದ ಮಾಸದ ಶುಕ್ಲ ಪಕ್ಷದ 4 ನೇ ದಿನ. ಭಾದ್ರಪದ ಮಾಸದ ಶುಕ್ಲ ಪಕ್ಷದ ಹೊತ್ತಿಗೆ ವಾತಾವರಣ, ಕೆರೆ ಕೊಳ್ಳವನ್ನು ಗಮನಿಸಿದ್ದೀರಾ? ತುಂಬ್ಬಿ ಹರಿಯುತ್ತಿರುತ್ತವೆ, ಹೊಸನೀರು, ಆಗಾಗ ವಂಡು.

ಮಹಾಬುದ್ದಿವಂತ ಜೀವಿ ಎಂದು ತನಗೆತಾನೆ ಬಿರುದಾಂಕಿತ ಮಾಡಿಕೊಂಡಿರುವ ಪ್ರಾಣಿ ಒಂದರ ಹಸ್ತಕ್ಷೇಪದಿಂದ ಇತ್ತೀಚೆಗೆ ನಿಮಗೆ ಇವೆಲ್ಲಾ ಕಾಣದೇನು ಇರಬಹುದು ಅಥವಾ ನೀವು ಕೆರೆ, ಕಾಲುವೆಗಳ ಕಡೆ ಹೋಗದೇನೂ ಇರಬಹುದು.

ಇಂತಹ ವಾತಾವರಣದಲ್ಲಿ ನಮಗೆ ಮಣ್ಣಿನ, ಅಥವಾ ಯಥಾ ಶಕ್ತಿ ಚಿನ್ನದ, ಬೆಳ್ಳಿಯ, ಅಥವಾ ಪಂಚಲೋಹದ ಗಣೇಶನ ವಿಗ್ರಹವನ್ನು ಪೂಜೆಮಾಡಿ ಪುರಾಣಗಳು ಹೇಳುತ್ತಿವೆ. ಪೂಜೆಯಲ್ಲಿ ಪತ್ರ ಪೂಜೆ, ಪುಷ್ಪ ಪೂಜೆ ಎಂದು ಗಣಪನಿಗೆ ಪತ್ರ ಪುಷ್ಪಗಳನ್ನು ಸಮರ್ಪಿಸುತ್ತೇವೆ. ಈ ಪತ್ರ ಪುಷ್ಪಗಳನ್ನು ವಿಸರ್ಜನೆಯಸಮದಲ್ಲಿ ಈ ಪತ್ರ ಪುಷ್ಪ ಗಳನ್ನು ಹರಿಯುವ ನೀರಿನಲ್ಲಿ ವಿಸರ್ಜಿಸುತ್ತೇವೆ.

ಈ ಪತ್ರ ಪುಷ್ಪಗಳ ಗುಣಗಳಿಂದಾಗಿ ಹೊಸನೀರಿನ ಕಲ್ಮಷಗಳು ದೂರವಾಗಿ ಸೇವನೆಗೆ ಯೋಗ್ಯವಾಗುತ್ತವೆ ಎಂದು ನಮ್ಮ ಋಷಿಮುನಿಗಳು ತಿಳಿದು, ಅದರ ಆಚರಣೆಗೆ ಬೇಕಾಗುವ ವ್ಯವಸ್ಥೆಯನ್ನು ಸಿದ್ಧಪಡಿಸಿದರು.

ಗಣಪತಿ ವಿಸರ್ಜನೆಯಿಂದಾಗಿ ಹೊಂಡ ಕೆರೆ ಕಲುಷಿತವಾಗುತ್ತಿವೆ ಎಂದು ನಾವು ಕೇಳಿರುತ್ತೇವೆ. ನಮ್ಮ ಋಷಿಗಳು ಸ್ಪಷ್ಟವಾಗಿ ಮಣ್ಣಿನ ಅಥವಾ ಯಥಾ ಶಕ್ತಿ ಚಿನ್ನದ, ಬೆಳ್ಳಿಯ, ಅಥವಾ ಪಂಚಲೋಹದ ಗಣೇಶನ ವಿಗ್ರಹವನ್ನು ಪೂಜೆಮಾಡಿ ಎಂದು ಹೇಳಿರುವಾಗ ಪ್ಲಾಸ್ಟರ್ ಆಫ್ ಪ್ಯಾರಿಸ್ ಬಳಕೆ ಹೇಗೆ, ಯಾರು ಮಾತ್ತು ಏತಕ್ಕಾಗಿ ಪ್ರಾರಂಬಿಸಿದರು? ಇತ್ತೀಚೆಗೆ ಮತ್ತೊಂದು ವಿಷಯವನ್ನು ಒಂದು ದಿನಪತ್ರಿಕೆಯಲ್ಲಿ ಪ್ರಕಟವಾಗಿತ್ತು, ನೀರುಕಲುಷಿತವಾಗುತ್ತಿರುವುದು ಪ್ಲಾಸ್ಟರ್ ಆಫ್ ಪ್ಯಾರಿಸ್ ನಿಂದಲ್ಲ, ಅದರ ಮೇಲೆ ಹಚ್ಚುವ ಕೃತಕ ಬಣ್ಣಗಳಿಂದ, ಎಂದು.

ನಮ್ಮ ಪ್ರಾಚೀನರು ಬಣ್ಣಗಳಬಗ್ಗೆ ಹೇಳಿಯೂಯಿಲ್ಲ, ಬಳಸಿದರೂ ಪ್ರಾಕೃತಿಕ ಬಣ್ಣಗಳು ಅಂದರೆ ಹರಿದ್ರಾ, ಕುಂಕುಮ, ಗಂಧ ಇಂತಹ ಆರೋಗ್ಯ ವೃದ್ದಿಯಾಗುವಂತಹ ವಸ್ತುಗಳಿಂದ ಶೃಂಗಾರವನ್ನು ಮಾಡುತಿದ್ದರು. ಹಾಗಾದರೆ ಈ ಅನಾರೋಗ್ಯ, ಕೃತಕ ವಸ್ತುಗಳ ಬಳಕೆ ಹೇಗೆ ಪ್ರಾರಂಭವಾಯಿತು? ಹಾನಿಕಾರಕ ವಸ್ತುಗಳಬಳಕೆಯಿಂದ ಆಗುತ್ತಿರುವ ಅನಾಹುತಕ್ಕೆ ಕಾರಣ ಗಣಪತಿ ಹಬ್ಬವೊ, ಗಣಪತಿ ವಿಸರ್ಜನೆಯೊ, ನಮ್ಮ ಜ್ನಾನದ ಅಭಾವವೋ, ವಿಜ್ನಾನ ತಂತ್ರಜ್ನಾನ ಮತ್ತು ಸೃಜನಾತ್ಮಕತೆಯ ದುರ್ಬಳಕೆಯೋ ಅಥವಾ ವಿಜ್ನಾನ ಮತ್ತು ತಂತ್ರಜ್ನಾನವು ಮಾನವನ ಸೌಕರ್ಯವನ್ನು ಹೆಚ್ಚಿಸುವುದಕ್ಕೆಮಾತ್ರವೆಂದು ತಿಳಿದು ನಮ್ಮ ಆಲಸ್ಯಕ್ಕೆ ಸೌಲಭ್ಯವೆಂದು ತಿಳಿದಿವುದೋ?

ಸತ್ಯಂ ಜ್ಞಾನಂ ಅನಂತಮ್ ಭ್ರಮ್ಮ ಎಂದು ನಿರಾಕಾರ, ನಿರ್ಗುರ್ಣ ಭ್ರಮ್ಮ, ಭಗವಂತನಿಗೆ ಯಾವುದೇ ರೂಪವಿಲ್ಲ ಸ್ವರೂಪ ವಿಲ್ಲ ಗುಣವೂ ಇಲ್ಲ ಎಂದು ಹೇಳಿ ಈಗ ವಿಗ್ರಹ ಆರಾಧನೆ ಏಕೆ ಪ್ರತಿಪಾದಿಸಿದರು? ನಮ್ಮ ಋಷಿಗಳು ಪರಲೋಕದ ವಿಷಯ ಮಾತ್ರವಲ್ಲ ಇಹಲೋಕದ ಸಾಧನೆಯ ಬಗ್ಗೆಯೂ ಹೇಳಿದ್ದಾರೆ. ಇಹ ಪರ ಎರಡರ ಸಾಧನೆಯಾಗುವ ಮಾರ್ಗ ವನ್ನು ತೋರಿಸಿದ್ದಾರೆ. ನಿರ್ಗುಣ ಪ್ರಮಾತ್ಮನ ಜೊತೆ ಈ ಜೀವಾತ್ಮ ಸೇರಿ ಮೋಕ್ಷ ಹೊಂದಬೇಕು, ಇದೇ ಪರಮ ಗುರಿ. ಜೊತೆಗೆ ಲೌಕಿಕ ಕೆಲಸ ಕಾರ್ಯಗಳನ್ನು ಅಚ್ಕುಕಟ್ಟಾಗಿ ಮಾಡಬೇಕು.

ಹೀಗಾಗಬೇಕಾದರೆ ನಮ್ಮಲ್ಲಿರುವ ಕೆಲ ಗುಣಗಳನ್ನು ತ್ಯಜಿಸಬೇಕು, ಕೆಲವನ್ನು ವೃಧ್ಧಿಸಿಕೊಳ್ಳಬೇಕು ಅನಂತರ ಎಲ್ಲಾ ಗುಣಗಳನ್ನ ಮೀರಿ ನಿರ್ಗುಣರಾಗಬೇಕು. ಇಹಲೋಕ ಸಾಧನೆಗೆ ಯಾವ ಗುಣಗಳನ್ನ ನಾವು ವೃಧ್ಧಿಸಿಕೊಳ್ಳಬೇಕು, ಯಾವ ಗುಣಗಳನ್ನ ಹತೋಟಿಯಲ್ಲಿಟ್ಟುಕೊಂಡು ತ್ಯಜಿಸಬೇಕು ಎನ್ನುವುದು ನಮ್ಮ ಋಷಿಗಳು ಪುರಾಣಗಳಲ್ಲಿ ದೇವತಾ ವಿಗ್ರಹಗಳ, ವ್ರತ ಕಥೆಗಳ ಮೂಲಕ ತಿಳಿಸಿರುತ್ತಾರೆ.

ಬನ್ನಿ ಗಣೇಶನ ವಿಗ್ರಹ ನಮಗ್ಯಾವ ಗುಣ ವೃದ್ದಿಸಿಕೊಳ್ಳಬೇಕು ಮತ್ತು ಹತೋಟಿಯಲ್ಲಿಡಬೇಕು ಎಂದು ತಿಳಿಸುತ್ತಿದೆ ಅಂತ ನೋಡೋಣ.

ಹೀಗೆ ನಮ್ಮ ಪ್ರಥಮ ಪೂಜ್ಯನಾದ ಗಣಪನನ್ನು ನೆನೆದು, ನಮ್ಮ ಹಿರಿಯರು ಹೇಳುವ ನಿತ್ಯ ಕೃತ್ಯಗಳು ಹಾಗೂ ಆಚರಣೆಯ ಲಾಭ ಮತ್ತು ತಿಳಿಸಿರುವ ವೈಜ್ನಾನಿಕ ಜೀವನ ಶೈಲಿಯನ್ನು ತಿಳಿಯಲು ಮುಂದೆಸಾಗೋಣ.