ಸಂಜೆ ಇಬ್ಬರು ಕ್ಲಾಸ್ ಮುಗಿಸಿಕೊಂಡು ಹೊರಗೆ ಬಂದ್ವಿ ಸೀತಾ ಅವರ ಕಾರ್ ಡ್ರೈವರ್ ಗೆ ಕಾಲ್ ಮಾಡಿ ಬರೋಕೆ ಹೇಳಿದ್ರು. 5 ನಿಮಿಷದಲ್ಲಿ ಕಾರ್ ಬಂತು. ಇಬ್ಬರು ಕಾರ್ ಅಲ್ಲಿ ಕೂತು ಫುಡ್ ಸ್ಟ್ರೀಟ್ ಗೆ ಬಂದ್ವಿ. ಇಬ್ಬರು ಕಾರ್ ಇಳಿದ್ವಿ. ಸೀತಾ ಮಹಿ ಬನ್ನಿ ಅಂತ ಕರೆದ್ಲು. ನಾನು ರೆಸ್ಟೋರೆಂಟ್ ನ ನೋಡಿ ಏನ್ರಿ ಪಾನಿಪುರಿ ಗೆ ಅಂತ ಹೇಳಿ ಯಾವುದೊ ಕಾಸ್ಟ್ಲಿ ರೆಸ್ಟೋರೆಂಟ್ ಗೆ ಕರ್ಕೊಂಡು ಹೋಗ್ತಾ ಇದ್ದೀರಾ ಅಂತ ಕೇಳ್ದೆ. ಫಸ್ಟ್ ಟೈಮ್ ನಿಮ್ ಜೊತೆ ಹೊರಗೆ ಬಂದೆ ಅಲ್ವಾ ಅದಕ್ಕೆ ಇದು ನನ್ನಕಡೆಯಿಂದ ಚಿಕ್ಕ ಟ್ರೀಟ್ ಅಂತ ಹೇಳಿದ್ಲು. ಅವಳಿಗೆ ನಿರಾಶೆ ಮಾಡೋದು ಬೇಡ ಅಂತ ಸರಿ ನೀವು ನಡೀರಿ ನಾನ್ ಬರ್ತೀನಿ ಅಂತ ಹೇಳ್ದೆ. ಯಾಕೆ ಏನಾಯ್ತು ಅಂತ ಕೇಳಿದ್ಲು. ನಾನು ಏನಿಲ್ಲಾ ಸರಿ ನೀವು ಇಲ್ಲೇ ಇರಿ ಅಂತ ಹೇಳಿ ಕಾರ್ ಹತ್ತಿರ ಹೋಗಿ ಡ್ರೈವರ್ ಸರ್ ನ ಸರ್ ಬನ್ನಿ ನನ್ನ ಜೊತೆಗೆ ಅಂತ ಹೇಳ್ದೆ. ಅವರು ಅವರ ಭಾಷೇಲಿ ಯಾಕ್ ಸರ್ ಏನಾಯ್ತು ಅಂತ ಕೇಳಿದ್ರು. ಏನಿಲ್ಲಾ ಸರ್ ಬನ್ನಿ ಅಂತ ಹೇಳಿ ಅವರನ್ನ ಕರ್ಕೊಂಡು ಸೀತಾ ಹತ್ತಿರ ಹೋಗಿ ನಡೀರಿ ಅಂತ ಹೇಳ್ದೆ. ಸೀತಾ ನನ್ನ ಜೊತೆ ಡ್ರೈವರ್ ನ ನೋಡಿ ಅವಳಿಗೆ ಏನು ಅರ್ಥ ಆಗದೆ ಸರಿ ಬನ್ನಿ ಅಂತ ಹೇಳಿ ಮೂರು ಜನ ರೆಸ್ಟೋರೆಂಟ್ ಒಳಗೆ ಹೋದ್ರಿ.
ಮೂರು ಜನ ಹೋಗಿ ಒಂದು ಟೇಬಲ್ ಹತ್ತಿರ ಹೋಗಿ ಕುತ್ಕೊಂಡ್ವಿ. ಡ್ರೈವರ್ ಸರ್ ನಿಂತೇ ಇದ್ರು ನಾನ್ ಅವರಿಗೆ ಸರ್ ಕೂತ್ಕೊಳ್ಳಿ ಅಂತ ಹೇಳಿ ನನ್ನ ಪಕ್ಕದ ಚೇರ್ ಅಲ್ಲಿ ಕೂರಿಸಿದೆ. ಅವರು ಸ್ವಲ್ಪ ಮುಜುಗರ ಪಡ್ತಾ ಕುತ್ಕೊಂಡ್ರು. ವೈಟರ್ ಬಂದು ಮೇಡಂ ಆರ್ಡರ್ ಪ್ಲೀಸ್ ಅಂತ ಕೇಳಿದ್ರು. ಸೀತಾ ಮಹಿ ಅವರೇ ಏನ್ ತಿಂತಿರಾ ಅಂತ ಕೇಳಿದ್ಲು. ನಾನು ಡ್ರೈವರ್ ಸರ್ ಕಡೆಗೆ ನೋಡಿ ಸರ್ ನಿಮಗೆ ಏನ್ ಬೇಕು ಸರ್ ಅಂತ ಕೇಳ್ದೆ. ವೈಟರ್ ನನ್ನ ಪಕ್ಕದಲ್ಲಿ ಇದ್ದಾ ಡ್ರೈವರ್ ಮತ್ತೆ ಅವನ ಡ್ರೆಸ್ ನ ನೋಡಿ. ವೈಟರ್ ಹೋಗಿ ರೆಸ್ಟೋರೆಂಟ್ ಮ್ಯಾನೇಜರ್ ನ ಕರ್ಕೊಂಡು ಬಂದ. ಮ್ಯಾನೇಜರ್ ಡ್ರೈವರ್ ನ ಅವನ ಡ್ರೆಸ್ ನ ನೋಡಿ. ಸೀತಾ ಕಡೆಗೆ ನೋಡ್ತಾ ಮೇಡಂ ಇಲ್ಲಿ ಡ್ರೈವರ್ಸ್ ಗೆ ಒಳಗೆ ಅಲೋ ಇಲ್ಲಾ ಅಂತ ಹೇಳ್ದ. ಸೀತಾ ಯಾಕೆ ಅಂತ ಕೇಳಿದ್ಲು. ಮ್ಯಾನೇಜರ್ ಮೇಡಂ ಇದು ಆಫೀಸಿಯಲ್ ವ್ಯಕ್ತಿ ಗಳು ಬರೋ ಅಂತ ರೆಸ್ಟೋರೆಂಟ್ ಸೋ ಇಲ್ಲಿ ಡ್ರೈವರ್ಸ್ ಗೆ ಲೇಬರ್ಸ್ ಗೆ ಲೊ ಕ್ಲಾಸ್ ಗಳಿಗೆ ಪ್ರವೇಶ ಇಲ್ಲಾ ಅಂತ ಹೇಳಿದ.
ಸೀತಾ ನನ್ನ ಕಡೆಗೆ ನೋಡಿ ವಿಷಯ ಹೇಳಿದ್ಲು. ಡ್ರೈವರ್ ಸರ್ ನಾನ್ ಇದಕ್ಕೆ ಬರೋದಿಲ್ಲ ಅಂತ ಹೇಳಿದ್ದು ಅಂತ ಹೇಳಿ ಎದ್ದೇಳೋಕೆ ಹೋದ. ನಾನ್ ಅವನ ಕೈ ಇಡಿದು ತಡೆದು ಕೂತ್ಕೋಳಿ ಸರ್ ಅಂತ ಹೇಳಿ. ಮ್ಯಾನೇಜರ್ ಕಡೆಗೆ ನೋಡ್ತಾ. ಈ ರೆಸ್ಟೋರೆಂಟ್ ಅಲ್ಲಿ ಒಂದು ದಿನಕ್ಕೆ ಎಷ್ಟು ಬಿಸಿನೆಸ್ ಆಗುತ್ತೆ ಅಂತ ಕೇಳ್ದೆ. ಮ್ಯಾನೇಜರ್ ನಾನ್ ಏನ್ ಕೇಳ್ತಾ ಇದ್ದೀನೊ ಅರ್ಥ ಆಗದೆ ಮತ್ತೆ ಏನ್ ಹೇಳಿ ಸರ್ ಅಂತ ಕೇಳ್ದ. ಈ ರೆಸ್ಟೋರೆಂಟ್ ಅಲ್ಲಿ ಒಂದು ದಿನಕ್ಕೆ ಎಷ್ಟು ಬಿಸಿನೆಸ್ ಆಗುತ್ತೆ ಅಂತ ಕೇಳ್ದೆ. ಮ್ಯಾನೇಜರ್ ಸರ್ ಇಲ್ಲಾ ಅಂದ್ರು 6 7 ಲಕ್ಷ ಆಗುತ್ತೆ ಅಂತ ಹೇಳ್ದ. ಸರಿ ನಾನ್ ನಿನಗೆ ಈಗಲೇ 25 ಲಕ್ಷ ಕೊಡ್ತೀನಿ 21 ಲಕ್ಷ ರೆಸ್ಟೋರೆಂಟ್ ಬಿಸಿನೆಸ್. 3 ಲಕ್ಷ ನಿನಗೆ ಟಿಪ್. 1 ಲಕ್ಷ ಅ ವೈಟರ್ ಗೆ ಟಿಪ್. ಈ ರೆಸ್ಟೋರೆಂಟ್ ನ 3 ದಿನ ಕ್ಲೋಸ್ ಮಾಡಿ ಅಂತ ಹೇಳ್ದೆ. ಮ್ಯಾನೇಜರ್ ವೈಟರ್ ಸೀತಾ ಡ್ರೈವರ್ ಕೂಡ ಶಾಕ್ ಅದ ನಾನ್ ಹೇಳೋದನ್ನ ಕೇಳಿ. ಮ್ಯಾನೇಜರ್ ಸರ್ ಅದೆಲ್ಲಾ ನಮ್ ಓನರ್ ನೋಡ್ಕೋತಾರೆ ಅಂತ ಹೇಳಿದ್ರು. ಹೌದ ಸರಿ ಅವರನ್ನೇ ಬರೋಕೆ ಹೇಳಿ ಅಂತ ಹೇಳ್ದೆ. ಮ್ಯಾನೇಜರ್ ಕಾಲ್ ಮಾಡಿ ಅವರ ಓನರ್ ನ ಬರೋಕೆ ಹೇಳ್ದ. 10 ನಿಮಿಷ ದಲ್ಲಿ ಅವರ ಓನರ್ ಬಂದು ಮ್ಯಾನೇಜರ್ ಕಡೆಗೆ ನೋಡ್ತಾ ಏನ್ ಪ್ರಾಬ್ಲಮ್ ಅಂತ ಕೇಳಿದ. ಮ್ಯಾನೇಜರ್ ನನ್ನ ಕಡೆಗೆ ನೋಡಿಸಿದ. ಓನರ್ ಸರ್ ಹೇಳಿ ಏನ್ ಪ್ರಾಬ್ಲಮ್ ಅಂತ ಕೇಳ್ದ. ನಾನು ಮ್ಯಾನೇಜರ್ ಗೆ ಹೇಳಿದ ವಿಷಯ ನ ಅವನಿಗೆ ಹೇಳ್ದೆ. ಓನರ್ ಇಲ್ಲಾ ಸರ್ ನಮಗೆ ದುಡ್ಡಿಗಿಂತ ಕಸ್ಟಮರ್ ಮುಖ್ಯ. ನೀವು ದುಡ್ಡು ಕೊಡ್ತೀರಾ ಅಂತ ನಾವು ಕಸ್ಟಮರ್ ನ ದೂರ ಮಾಡಿಕೊಳ್ಳೋಕೆ ಇಷ್ಟ ಪಡೋದಿಲ್ಲ. ಸಾರೀ ಸರ್ ಅಂತ ಹೇಳಿದ. ನಾನ್ ಓನರ್ ಕಡೆಗೆ ನೋಡ್ತಾ ಮತ್ತೆ ನಿಮ್ ಮ್ಯಾನೇಜರ್ ಇಲ್ಲಿಗೆ ತುಂಬಾ ದೊಡ್ಡ ದೊಡ್ಡ ವ್ಯಕ್ತಿ ಗಳು ಮಾತ್ರ ಬರಬೇಕು. ಡ್ರೈವರ್ಸ್ ಲೇಬರ್ಸ್ ಲೊ ಕ್ಲಾಸ್ ಪೀಪಲ್ ಗೆ ಒಳಗೆ ಎಂಟ್ರಿ ಇಲ್ಲಾ ಅಂತ ಹೇಳ್ದ ಅಂತ ಕೇಳ್ದೆ. ಓನರ್ ಸಾರೀ ಸರ್ ಅವನ ಪರವಾಗಿ ನಾನು ನಿಮ್ ಹತ್ತಿರ ಕ್ಷಮೆ ಕೇಳ್ತೀನಿ ಅಂತ ಹೇಳ್ದ. ನಾನು ಓನರ್ ಕಡೆಗೆ ನೋಡಿ ನೀವು ಕ್ಷಮೆ ಏನು ಕೇಳಬೇಡಿ ನಿಮ್ ಹತ್ತಿರ ಕೆಲಸ ಮಾಡೋವರಿಗೆ ಹೇಳಿ. ಊಟದ ವಿಷಯ ದಲ್ಲಿ ದೊಡ್ಡವರು ಚಿಕ್ಕವರು ಅಂತ ಯಾರು ಇಲ್ಲಾ ಎಲ್ಲರೂ ಒಂದೇ ಅಂತ. ಈ ರೆಸ್ಟೋರೆಂಟ್ ಕ್ಲೋಸ್ ಅದ್ರೆ ಅವನು ಬೇರೆ ರೆಸ್ಟೋರೆಂಟ್ ಗೆ ಹೋಗ್ತಾನೆ. ಇದನ್ನೇ ನಂಬಿ ಇರೋ ನೀವು ಬೀದಿಗೆ ಬರ್ತೀರಾ ಅಂತ ಹೇಳ್ದೆ. ಓನರ್ ಮ್ಯಾನೇಜರ್ ಕಡೆಗೆ ನೋಡಿ ಅವನ ಕಪಾಳಕ್ಕೆ ಒಂದು ಬಾರಿಸಿ ಗೆಟ್ ಔಟ್ ಅಂತ ಅವನನ್ನ ಕಳಿಸಿ ಬಿಟ್ಟ. ವೈಟರ್ ಗೆ ಕಸ್ಟಮರ್ ಗೆ ಏನ್ ಬೇಕೋ ಕೇಳಿ ಸರ್ವ್ ಮಾಡು ಅಂತ ಹೇಳಿ. ನನ್ನ ಕಡೆಗೆ ನೋಡ್ತಾ ತುಂಬಾ ಥ್ಯಾಂಕ್ಸ್ ಸರ್. ಇಂತವರಿಂದ ನಿಮಗೂ ತೊಂದ್ರೆ ನಮಗೂ ತೊಂದ್ರೆ ಇನ್ಮುಂದೆ ಈ ರೀತಿ ಆಗದೆ ಇರೋ ಹಾಗೇ ನಾನ್ ನೋಡ್ಕೋತೀನಿ ಅಂತ ಹೇಳಿ ಹೊರಟು ಹೋದ. ನಾನು ಡ್ರೈವರ್ ಸರ್ ಕಡೆಗೆ ನೋಡಿ ಸರ್ ಏನ್ ಬೇಕೋ ಆರ್ಡರ್ ಮಾಡಿ ಅಂತ ಹೇಳಿದೆ. ಡ್ರೈವರ್ ಸರ್ ಏನೋ ಮಾತಾಡೋಕೆ ಬಂದ. ಸರ್ ಮೊದಲು ಊಟ ಮಾಡಿ ಆಮೇಲೆ ಕುತ್ಕೊಂಡು ಆರಾಮಾಗಿ ಮಾತಾಡೋಣ ಆರ್ಡರ್ ಮಾಡಿ ಅಂತ ಹೇಳಿದೆ. ಡ್ರೈವರ್ ಗೆ ಏನ್ ಬೇಕೋ ಆರ್ಡರ್ ಮಾಡಿದ.
ಸೀತಾ ಕಡೆಗೆ ನೋಡಿ ಆರ್ಡರ್ ಮಾಡಿ ಅಂತ ಹೇಳ್ದೆ. ಸೀತಾ ಆರ್ಡರ್ ಮಾಡಿದ್ಲು. ನಾನು ಕೂಡ ಆರ್ಡರ್ ಮಾಡಿದೆ. ಮೂರು ಜನ ಕೂತು ಆರಾಮಾಗಿ ಊಟ ಮಾಡಿದ್ವಿ. ವೈಟರ್ ಬಿಲ್ ತಂದು ಕೊಟ್ಟ. ಸೀತಾ ನಾನ್ ಪೆ ಮಾಡ್ತೀನಿ ಅಂತ ಹೇಳಿದ್ಲು. ನಾನು ನೆಕ್ಸ್ಟ್ ಟೈಮ್ ನೀವೇ ಮಾಡಿ ಅಂತ ಬಿಲ್ ಪೆ ಮಾಡಿ ವೈಟರ್ ಗೆ ಟಿಪ್ ಕೊಟ್ಟು. ವೈಟರ್ ಗೆ ನೋಡು ನೀನು ನಮಗೆ ಊಟ ತಂದು ಕೊಡ್ತಾ ಇದ್ದಿಯಾ ಅಂದ್ರೆ ನಿನಗೆ ಒಂದು ಗೌರವ ಇದೆ. ನಿಮ್ ಮ್ಯಾನೇಜರ್ ಗೆ ತಿಂಗಳಿಗೆ 30 40 ಸಾವಿರ ದುಡಿಯೋವನು ಲೊ ಕ್ಲಾಸ್ ಅದ್ರೆ ಅಷ್ಟೇ ಸಂಬಳ ತಗೋಳೋ ನೀನು ಕೂಡ ಅವನ ದೃಷ್ಟಿಲಿ ಅದೇ ಲೆವೆಲ್ ಅಲ್ಲಿ ಇರ್ತೀಯ. ಅವನು ಹೇಳೋ ಕೆಲಸಕ್ಕೆ ಬೆಲೆ ಕೊಡು ಮಾಡು ಅದ್ರೆ ಇಂತ ಕೆಲಸಕ್ಕೆ ಅಲ್ಲ ಅಂತ ಹೇಳ್ದೆ. ವೈಟರ್ ಸಾರೀ ಸರ್ ಅವರು ಹೇಳಿದ ಹಾಗೇ ಕೇಳಿಲ್ಲ ಅಂದ್ರೆ ನನ್ನ ಕೆಲಸ ಹೋಗುತ್ತೆ ಅದಕ್ಕೆ ಅಂತ ಹೇಳ್ದ. ಸರಿ ನೆಕ್ಸ್ಟ್ ಟೈಮ್ ಈ ರೀತಿ ಮಾಡಬೇಡ ಅಂತ ಹೇಳಿ ಮೂರು ಜನ ಹೊರಗೆ ಬಂದ್ವಿ.
ನಾನು ಸೀತಾ ಕಡೆಗೆ ನೋಡಿ ಹೋಗೋಣ್ವಾ ಪಾನಿಪುರಿ ತಿನ್ನೋಕೆ ಅಂತ ಕೇಳ್ದೆ. ಸೀತಾ ಹೊಟ್ಟೆ ತುಂಬೋಗಿದೆ ನಾಳೆ ಹೋಗೋಣ ಅಂತ ಹೇಳಿದ್ಲು. ಸರಿ ಅಂತ ಹೇಳ್ದೆ. ಮತ್ತೆ ಸೀತಾ ಮಾತಾಡ್ತಾ. ಹೌದು ನಿನ್ನ ಒಂದು ಕ್ವೆಶ್ಚನ್ ಕೇಳ್ಳ ಅಂತ ಅಂದ್ಲು. ನೀವು ಏನ್ ಕೇಳಬೇಕು ಅಂತ ಇದ್ದೀರಾ ಅನ್ನೋದು ನನಗೆ ಗೊತ್ತು. ಅ ಮ್ಯಾನೇಜರ್ ನ ಹೊಡಿತಾ ಇದ್ರು ಸೈಲೆಂಟ್ ಆಗಿ ಇದ್ದೆ. ವೈಟರ್ ಗೆ ಮಾತ್ರ ಕೂಲ್ ಆಗಿ ಟಿಪ್ ಕೊಟ್ಟು ಬುದ್ದಿ ಹೇಳಿದೆ ಯಾಕೆ ಅಂತ ಅಲ್ವಾ ಅಂತ ಕೇಳ್ದೆ. ಸೀತಾ ಹ್ಮ್ ಹೌದು ಅಂತ ಕೇಳಿದ್ಲು. ಸೀತಾ ಅವರೇ ಮ್ಯಾನೇಜರ್ ಓದಿರೋವ್ನು. ವೈಟರ್ ಅವನು ಹೇಳಿದ ಹಾಗೇ ಮಾಡೋವ್ನು. ಮ್ಯಾನೇಜರ್ ಬೇಕಾದ್ರೆ ನಾಳೆ ಇನ್ನೊಂದು ಕಡೆ ಕೆಲಸ ತಗೋತಾನೆ ಅದ್ರೆ ವೈಟರ್ ಗೆ ಕೆಲಸ ಹೋದ್ರೆ ಇನ್ನೊಂದು ಕೆಲಸ ಸಿಗೋವರೆಗೂ ತುಂಬಾ ಕಷ್ಟ ಆಗುತ್ತೆ. ಅದಕ್ಕೆ ಬುದ್ದಿ ಕಲಿಸ ಬೇಕಾಗಿರೋದು ವೈಟರ್ ಗೆ ಅಲ್ಲ ಮ್ಯಾನೇಜರ್ ಗೆ ಅಂತ ಹೇಳ್ದೆ. ಸೀತಾ ಪರ್ವಾಗಿಲ್ಲ ರೀ ನೀವು ಸೈಲೆಂಟಾಗಿ ಇರ್ತೀರ ಬಟ್ ತುಂಬಾ ಯೋಚ್ನೆ ಮಾಡ್ತೀರಾ ಅಂತ ಹೇಳಿದ್ಲು. ನಾವು ಹಾಗೇನೇ. ಎಲ್ಲಿ ಹೇಗೆ ಇರಬೇಕೋ ಹಾಗೇ ಇರ್ತೀವಿ. ನೀವು ಹೊರಡಿ ಲೇಟ್ ಆಗುತ್ತೆ ಅಂತ ಹೇಳ್ದೆ. ಸೀತಾ ಮತ್ತೆ ನೀವು ಹೇಗೆ ಹೋಗ್ತೀರಾ ಡ್ರಾಪ್ ಮಾಡ್ತೀನಿ ನಡೀರಿ ಅಂತ ಹೇಳಿದ್ಲು. ಏನು ಬೇಡ ನಾನು ಆಟೋ ದಲ್ಲಿ ಹೋಗ್ತೀನಿ ನೀವು ಹೋಗಿ ಅಂತ ಹೇಳ್ದೆ. ಸರಿ ಹುಷಾರು ಅಂತ ಹೇಳಿ ಕಾರ್ ಅಲ್ಲಿ ಕುತ್ಕೊಂಡ್ಲು. ಡ್ರೈವರ್ ಸೀಟ್ ಅಲ್ಲಿ ಕೂತಿದ್ದ ಡ್ರೈವರ್ ನ ನೋಡಿ. ಸರ್ ಎಷ್ಟೇ ಕೆಲಸ ಇದ್ರು ಏನೇ ಇದ್ರು ಟೈಮ್ ಸರಿಯಾಗಿ ಊಟ ಮಾಡಿ. ನೀವು ಟೈಮ್ ಸರಿಯಾಗಿ ಊಟ ಮಾಡದೇ ಈ ರೀತಿ ಸುಸ್ತಾಗಿ ಕಾರ್ ಡ್ರೈವ್ ಮಾಡಿದ್ರೆ ನಿಮ್ಮ ನಂಬಿ ಬರೋವ್ರಿಗೂ. ನಿಮಗೂ ತುಂಬಾ ತೊಂದ್ರೆ ಆಗುತ್ತೆ. ಹುಷಾರು ಅಂತ ಹೇಳ್ದೆ. ಡ್ರೈವರ್ ಗೊತ್ತು ಸರ್ ಅದ್ರೆ ಇವತ್ತು ತುಂಬಾ ಕೆಲಸ ಇತ್ತು ಅದಕ್ಕೆ. ಇನ್ಮೇಲಿಂದ ಹೀಗೆ ಆಗೋದಿಲ್ಲ ಅಂತ ಹೇಳಿದ್ರು. ಸರಿ ಹೊರಡಿ ಅಂತ ಹೇಳಿ ಅವರನ್ನ ಕಳಿಸಿ. ಆಟೋ ಹತ್ತಿ ಹಾಸ್ಟೆಲ್ ಗೆ ಹೋದೆ.
ಸೀತಾ ಬ್ಯಾಗ್ ಹಾಕೊಂಡು ಮನೆ ಒಳಗೆ ಬಂದ್ಲು ಹಾಲ್ ಅಲ್ಲಿ ಅಪ್ಪ ಅಮ್ಮ ತಾತ ಇರೋದನ್ನ ನೋಡಿ ಅಪ್ಪ ಅಮ್ಮ ನ ನೋಡಿ ಖುಷಿಯಾಗಿ ಅಪ್ಪ ಯಾವಾಗ ಬಂದ್ರಿ ಅಂತ ಹೋಗಿ ಅವರ ಪಕ್ಕದಲ್ಲಿ ಕೂತ್ಕೋತಾಳೆ. ಸ್ವಲ್ಪ ಹೊತ್ತಾಯಿತು ಬಂದು ಹೌದು ನೀನೇನು ಇವತ್ತು ಲೇಟ್ ಆಗಿ ಬಂದೆ ಅಂತ ಕೇಳಿದ್ರು. ಸೀತಾ ಅಪ್ಪ ನಮ್ ಕ್ಲಾಸ್ ಅಲ್ಲಿ ಕನ್ನಡದ ಹುಡುಗ ಒಬ್ಬ ಜಾಯಿನ್ ಆಗಿದ್ದಾನೆ ಹೆಸರು ಮಹಿ ಅಂತ ತುಂಬಾ ಒಳ್ಳೆಯವನು. ಬೆಂಗಳೂರು ಅವನದ್ದು. ಅದಕ್ಕೆ ಹೋಗಿ ರೆಸ್ಟೋರೆಂಟ್ ಅಲ್ಲಿ ತಿಂಡಿ ಮಾಡೋಕೆ ಹೋದ್ವಿ ಅದಕ್ಕೆ ಬರೋದಕ್ಕೆ ಲೇಟ್ ಆಯ್ತು ಅಂತ ಹೇಳಿದ್ಲು. ಸೀತಾ ಅವರ ಅಪ್ಪ ಸರಿ ಮಗಳೇ ನಾಳೆ ಸಂಜೆ ಬರ್ತಾ ನಿನ್ನ ಫ್ರೆಂಡ್ ನ ಕೂಡ ಮನೆಗೆ ಕರ್ಕೊಂಡು ಬಾ. ಈಗಷ್ಟೇ ನಿಮ್ ತಾತ ಹೇಳ್ತಾ ಇದ್ರು. ನಿನ್ನ ಹೊಸ ಫ್ರೆಂಡ್ ನ ಬಗ್ಗೆ ಅಂತ ಹೇಳಿದ್ರು. ಸೀತಾ ಖುಷಿಯಾಗಿ ಸರಿ ಅಪ್ಪ ನಾಳೆ ಕರ್ಕೊಂಡು ಬರ್ತೀನಿ ಅಂತ ಹೇಳಿ. ಅಪ್ಪ ಇವತ್ತು ರೆಸ್ಟೋರೆಂಟ್ ಅಲ್ಲಿ ಏನಾಯ್ತು ಅಂತ ಗೊತ್ತಾ ಅಂತ ಹೇಳೋಕೆ ಶುರು ಮಾಡಿದ್ಲು. ಸೀತಾ ಅವರ ಅಮ್ಮ ಸೀತಾ ನಿನ್ ಏನು ಹೇಳೋದು ಬೇಕಾಗಿಲ್ಲ ನಾವು ಕೂಡ ನೋಡಿದ್ವಿ. ನಿನ್ನ ಫ್ರೆಂಡ್ ಮಾತಾಡಿದ ರೀತಿ ಹೇಳಿದ ರೀತಿ ಸರಿಯಾಗಿ ಇತ್ತು. ದುಡ್ಡಿನ ಹತ್ತಿರ ಬಡವ ಶ್ರೀಮಂತ ಇರಬಹುದು ಅದ್ರೆ ಊಟದ ಹತ್ತಿರ ಎಲ್ಲರೂ ಒಂದೇ ಅಂತ ಹೇಳಿದ್ರು. ಸೀತಾ ಶಾಕ್ ಆಗಿ ಏನಮ್ಮ ನೀನು ಹೇಳೋದು ನೀವು ಅಲ್ಲೇ ಇದ್ರ ಮತ್ತೆ ಬಂದು ಮಾತಾಡಿಸೋದು ಅಲ್ವಾ ಅಂತ ಕೇಳಿದ್ಲು. ಅದಕ್ಕೆ ಅವರ ಅಮ್ಮ ಇಲ್ಲಾ ಸೀತಾ ಕ್ಲೈಂಟ್ಸ್ ಜೊತೆ ಬಂದಿದ್ವಿ ಅದಕ್ಕೆ ಮಾತಾಡಿಸೋಕೆ ಆಗಲಿಲ್ಲ ಅದಕ್ಕೆ ಅಲ್ವಾ ನಾಳೆ ಕರ್ಕೊಂಡು ಬಾ ಡಿನ್ನರ್ ಗೆ ಅಂತ ಹೇಳ್ತಾ ಇರೋದು ಅಂತ ಹೇಳಿದ್ರು. ಸೀತಾ ಖುಷಿಯಾಗಿ ಸರಿ ಅಮ್ಮ ಅಂತ ಹೇಳಿ ಎದ್ದು ಅವಳ ರೂಮ್ ಗೆ ಹೋದ್ಲು.
ಮಾರನೇ ದಿನ ಬೆಳಿಗ್ಗೆ ಎದ್ದು ರೆಡಿ ಆಗಿ ತಿಂಡಿ ತಿಂದು ಕಾಲೇಜ್ ಗೆ ಹೋದೆ. ಕ್ಲಾಸ್ ರೂಮ್ ಒಳಗೆ ಬಂದು ಹೋಗಿ ನನ್ನ ಪ್ಲೇಸ್ ಅಲ್ಲಿ ಕುತ್ಕೊಂಡೆ. ಸೀತಾ ಕ್ಲಾಸ್ ಒಳಗೆ ಬಂದು ನನ್ನ ಪಕ್ಕ ಕೂತು ಗುಡ್ ಮಾರ್ನಿಂಗ್ ಸರ್ ಅಂತ ಹೇಳಿದ್ಲು. ನಾನು ಕಣ್ ಮುಚ್ಚಿಕೊಂಡೆ ಗುಡ್ ಮಾರ್ನಿಂಗ್ ಮೇಡಂ ಅಂತ ಹೇಳ್ದೆ. ಇನ್ನು ಮೂರು ಧ್ವನಿಗಳು ಕೂಡ ಗುಡ್ ಮಾರ್ನಿಂಗ್ ಸರ್ ಅಂತ ಹೇಳಿದ್ರು. ಯಾರಪ್ಪ ಇದು ಅಂತ ಕಣ್ ಬಿಟ್ಟು ನೋಡಿದೆ. ನನ್ನ ಪಕ್ಕದಲ್ಲಿ ಒಂದು ಹುಡುಗೀ ಎದುರುಗಡೆ ಒಂದು ಹುಡುಗ ಇನ್ನೊಬ್ಬ ಹುಡುಗ ಕೂತಿದ್ರು. ನಾನು ಸೀತಾ ಕಡೆಗೆ ನೋಡಿದೆ. ಸೀತಾ ಇವರು ನನ್ನ ಫ್ರೆಂಡ್ಸ್. ಪಾಯಲ್. ಮೋನಿಕಾ. ಬಿಪ್ಪನ್ ಅಂತ ಪರಿಚಯ ಮಾಡಿಸಿದ್ಲು. ನಾನು ಮೂರು ಜನಕ್ಕೆ ಹಾಯ್ ಹೇಳಿ. ಏನು ಎಲ್ಲರೂ ಇಲ್ಲಿಗೆ ಬಂದಿದ್ದೀರಾ ಅಂತ ಕೇಳ್ದೆ. ಸೀತಾ ಫ್ರೆಂಡ್ಸ್ ಅಲ್ವಾ ಒಟ್ಟಿಗೆ ಕೂರೋಣ ಅಂತ ಬಂದ್ವಿ ಅಂತ ಹೇಳಿದ್ಲು. ನೋಡಿ ಸೀತಾ ಫ್ರೆಂಡ್ಸ್ ಅದ ಮಾತ್ರಕ್ಕೆ ಒಂದೇ ಹತ್ತಿರ ಕೂತ್ಕೋಬೇಕು ಅಂತ ಏನು ಇಲ್ಲಾ. ನಿಮಗೆ ಕಂಫರ್ಟ್ ಆಗಿ ಮೊದಲು ಎಲ್ಲಿ ಕೂತ್ಕೋತಾ ಇದ್ರೋ ಅಲ್ಲೇ ಹೋಗಿ ಕೂತ್ಕೊಳ್ಳಿ ಅಂತ ಹೇಳಿದೆ. ಪಾಯಲ್ ಗೆ ನಾನು ಮಾತಾಡಿದು ಅರ್ಥ ಆಗಿಲ್ಲ ಸೀತಾ ನ ಕೇಳಿದ್ಲು ಏನ್ ಹೇಳಿದ ಅಂತ. ಸೀತಾ ಪಾಯಲ್ ಕಡೆಗೆ ನೋಡಿ. ಹಿಂದೀಲಿ ನೀನು ನೋಡೋಕೆ ತುಂಬಾ ಮುದ್ದಾಗಿ ಕಾಣ್ತಾ ಇದ್ದಿಯಾ ಅಂತೇ ನಿನ್ನ ಮೇಲೆ ಕ್ರಶ್ ಆಗಿದೆ ಅಂತೇ. ನಿನಗೆ ಬಾಯ್ಫ್ರೆಂಡ್ ಯಾರಾದ್ರೂ ಇದ್ರೆ ಹೇಳು ಇಲ್ಲಾ ಅಂದ್ರೆ ನಾನ್ ಬಾಯ್ಫ್ರೆಂಡ್ ಆಗ್ತೀನಿ ಅಂತ ನನಗೆ ಹೇಳಿ ನಿನ್ನ ಕೇಳೋಕೆ ಹೇಳ್ದ ಅಂತ ಅಂದ್ಲು. ಪಾಯಲ್ ಇಷ್ಟು ಬೇಗ ನ ನನಗೆ ನಾಳೆ ನಾಳೆ ವರೆಗೂ ಟೈಮ್ ಕೊಡೋಕೆ ಹೇಳು ಹೇಳ್ತಿನಿ ಅಂತ ಹೇಳಿದ್ಲು. ನಾನು ಪಾಯಲ್ ಕಡೆಗೆ ಕೈ ಮುಗಿದು ಅವಳ ಭಾಷೇಲಿ ಹೇಳ್ತಾ. ಮೇಡಂ ನಾನು ಅಷ್ಟೆಲ್ಲ ಹೇಳಿಲ್ಲ ನನಗೆ ಅ ಉದ್ದೇಶ ಕೂಡ ಇಲ್ಲಾ. ದಯವಿಟ್ಟು ಅವರ ಮಾತನ್ನ ಕೇಳಬೇಡಿ. ಅಂತ ಹೇಳ್ದೆ. ಪಾಯಲ್ ನಗ್ತಾ ತಮಾಷೆ ಅಲ್ವಾ ಬಿಡು ಅಂತ ಲೈಟ್ ಆಗಿ ತಗೊಂಡ್ಲು.
ನಾನು ಸೀತಾ ಕಡೆಗೆ ನೋಡಿ. ಮೂರೇ ದಿನಕ್ಕೆ ಫಿಟ್ಟಿಂಗ್ ಇಡೋ ತನಕ ಬಂದ್ರಿ ಮುಂದೆ ಇನ್ನು ಏನೇನ್ ಮಾಡ್ತಿರೋ. ಪ್ಲೀಸ್ ನೀವು ನನ್ನ ಏನ್ ಬೇಕಾದ್ರು ಅನ್ನಿ ಅದ್ರೆ ಈ ಹುಡುಗೀರ ವಿಷಯ ದಲ್ಲಿ ಮಾತ್ರ ನನ್ನ ಸೇರಿಸ ಬೇಡಿ. ಅಂತ ಹೇಳಿ ಕೈ ಮುಗಿದೇ. ಸೀತಾ ನಗ್ತಾ ಹ್ಮ್ ಆಯ್ತು ಅಂತ ಹೇಳಿ ಅಪ್ಪ ಅಮ್ಮ ತಾತ ಇವತ್ತು ನಿಮ್ಮನ್ನ ಡಿನ್ನರ್ ಗೆ ಕರ್ಕೊಂಡು ಬಾ ಅಂತ ಹೇಳಿದ್ರು ಸೋ ಸಂಜೆ ನೀವು ನನ್ನ ಜೊತೆ ಮನೆಗೆ ಬನ್ನಿ ಅಂತ ಹೇಳಿದ್ಲು. ಮನೆಯವರೆಲ್ಲ ಕರೀತಾ ಇದ್ದಾರೆ ಅಂದಾಗ ಹೋಗದೆ ಇದ್ರೆ ತಪ್ಪಾಗುತ್ತೆ ಅಂತ ಹೇಳಿ ಓಕೆ ಬರ್ತೀನಿ ಅಂತ ಹೇಳ್ದೆ.
****************************************