ಮಂಗಳೂರಿನ ಹೊರವಲಯದ ಆ ಕರಾವಳಿ ತೀರದ ಬಂಗಲೆ ಕೇವಲ ಒಂದು ಕಟ್ಟಡವಾಗಿರಲಿಲ್ಲ. ಅದು ಕಾಲಚಕ್ರದ ಸುಳಿಯಲ್ಲಿ ಸಿಲುಕಿ ನರಳುತ್ತಿದ್ದ ಒಂದು ಜೀವಂತ ಪ್ರೇತಲೋಕದಂತಿತ್ತು. ಅಂದು ರಾತ್ರಿ ಮಳೆಯ ಆರ್ಭಟಕ್ಕೆ ಸಮುದ್ರದ ಅಲೆಗಳು ಬಂಗಲೆಯ ತಳಹದಿಗೆ ಅಪ್ಪಳಿಸುವಾಗ ಉಂಟಾಗುವ ಸದ್ದು, ಯಾವುದೋ ಸಾವಿರಾರು ಆತ್ಮಗಳು ಏಕಕಾಲಕ್ಕೆ ಆಕ್ರಂದನ ಮಾಡುತ್ತಿರುವಂತೆ ಇಡೀ ಪರಿಸರವನ್ನು ನಡುಗಿಸುತ್ತಿತ್ತು. ಆ ಬೃಹತ್ ಹಜಾರದಲ್ಲಿ ಕಿರಣ್ ಒಬ್ಬನೇ ನಿಂತಿದ್ದ. ಕಿರಣ್ ಬಾಕ್ಸಿಂಗ್ ರಿಂಗ್‌ನಲ್ಲಿ ಅದೆಂತಹುದೇ ಬಲಿಷ್ಠ ಎದುರಾಳಿಯ ಪಂಚ್‌ಗಳಿಗೂ ಕಣ್ಣು ಮಿಟುಕಿಸದ ಯೋಧ, ಇಂದು ಈ ಶೂನ್ಯದಲ್ಲಿರುವ ಅದೃಶ್ಯ ಶಕ್ತಿಯ ಮುಂದೆ ನಡುಗುತ್ತಿದ್ದ.
ಅವನ ಬಲಗೈ ಮಣಿಕಟ್ಟಿನ ಮೇಲೆ ತಾನೇ ಕೆತ್ತಿಕೊಂಡಿದ್ದ 222 ಸಂಖ್ಯೆ ಈಗ ವಿಚಿತ್ರವಾಗಿ ಕೆಂಪಗೆ ಮಿನುಗತೊಡಗಿತು. ಅದರ ಸುತ್ತಲಿನ ಚರ್ಮ ಸುಟ್ಟ ಗಾಯದಂತೆ ಉರಿಯುತ್ತಿತ್ತು. ಆ ಸಂಖ್ಯೆ ಕಿರಣ್‌ನ ನಾಡಿಬಡಿತಕ್ಕೆ ತಕ್ಕಂತೆ ಮಿಡಿಯುತ್ತಿತ್ತು. ಈ ಸಂಖ್ಯೆಗಳು ಅವನಿಗೆ ಕೇವಲ ಅಂಕಿಗಳಾಗಿರಲಿಲ್ಲ. ಅವು ಅವನ ಮತ್ತು ಅವನ ಪ್ರೇಮಿ ರಚನಾ ನಡುವಿನ ಅತೀಂದ್ರಿಯ ಸಂಪರ್ಕದ ಸಂಕೇತಗಳಾಗಿದ್ದವು. ಜಗತ್ತಿನ ದೃಷ್ಟಿಯಲ್ಲಿ ರಚನಾ ಮತ್ತು ಕಿರಣ್ ನಡುವೆ ಈಗ ಯಾವುದೇ ಸಂಬಂಧವಿರಲಿಲ್ಲ. ಅವಳು ಕೆಲವು ತಿಂಗಳುಗಳಿಂದ ಮೌನವಾಗಿದ್ದಳು. ಒಂದು ಮೆಸೇಜ್ ಇಲ್ಲ, ಒಂದು ರಿಪ್ಲೈ ಇಲ್ಲ. ಜನ ಇದು ಒನ್ ಸೈಡ್ ಲವ್' ಎಂದು ಕಿರಣ್‌ನನ್ನು ನೋಡಿ ತಾತ್ಸಾರದಿಂದ ನಗುತ್ತಿದ್ದರು. ಆದರೆ ಕಿರಣ್‌ಗೆ ಮಾತ್ರ ನಮ್ಮಿಬ್ಬರ ಆತ್ಮಗಳು ಕ್ವಾಂಟಮ್ ಎಂಟ್ಯಾಂಗಲ್‌ಮೆಂಟ್ ಎಂಬ ವೈಜ್ಞಾನಿಕ ಸತ್ಯದಿಂದ ಬೆಸೆದುಕೊಂಡಿವೆ ಎಂದು ತಿಳಿದಿತ್ತು. ಮೈಲಿಗಲ್ಲುಗಳ ಆಚೆ ಇರುವ ಅವಳಿಗೆ ಏನಾದರೂ ಸಂಕಷ್ಟ ಎದುರಾದರೆ, ಆ ನೋವಿನ ಕಂಪನಗಳು ಇಲ್ಲಿ ಕಿರಣ್‌ನ ದೇಹದ ಮೇಲೆ ಭೌತಿಕವಾಗಿ ಮೂಡುತ್ತಿದ್ದವು.
ರಾತ್ರಿ ಸಮಯ ಸರಿಯಾಗಿ 1:11 ಇದ್ದಕ್ಕಿದ್ದಂತೆ ಬಂಗಲೆಯ ಕಿಟಕಿಗಳು ಏಕಕಾಲಕ್ಕೆ ಬಡಿದುಕೊಳ್ಳಲು ಶುರುಮಾಡಿದವು. ಗಾಳಿಯಲ್ಲಿ ಹಳೆಯ ಕೊಳೆತ ಹೂವುಗಳ ಮತ್ತು ಸುಟ್ಟ ಮಾಂಸದ ಅಸಹ್ಯಕರ ವಾಸನೆ ಆವರಿಸಿತು. ಕಿರಣ್‌ನ ಗಂಟಲ ಮೇಲೆ ಯಾವುದೋ ಅದೃಶ್ಯ ಬೆರಳುಗಳು ಬಿಗಿದಂತಾಯಿತು. ಅವನಿಗೆ ಉಸಿರಾಡಲು ಕಷ್ಟವಾಯಿತು. ಅವನು ಹಜಾರದ ಹಳೆಯ ಕನ್ನಡಿಯ ಮುಂದೆ ನಿಂತು ನೋಡಿದಾಗ ಬೆಚ್ಚಿಬಿದ್ದ. ಕನ್ನಡಿಯ ಒಳಗೆ ಯಾವುದೋ ಅದೃಶ್ಯ ಹಸ್ತ ರಕ್ತದಲ್ಲಿ 111 ಎಂದು ಬರೆಯುತ್ತಿತ್ತು. ಅವನ ಕುತ್ತಿಗೆಯ ಮೇಲೆ ರಕ್ತದ ಬಣ್ಣದ ಬೆರಳಚ್ಚುಗಳು ಮೂಡಿದ್ದವು. ಕಿರಣ್‌ಗೆ ರಚನಾಗೆ ಅಪಾಯ ಇದು ಕೇವಲ ಕೆಲಸದ ಒತ್ತಡವಲ್ಲ, ಯಾವುದೋ ಕರಾಳ ಶಕ್ತಿ ಅವಳ ಅಸ್ತಿತ್ವವನ್ನೇ ನುಂಗಲು ನೋಡುತ್ತಿದೆ ಎಂದು ತಕ್ಷಣವೇ ಅರ್ಥವಾಯಿತು.
ಕಿರಣ್ ಮೆಲ್ಲಗೆ ಮೇಲ್ಮಹಡಿಗೆ ಹೋಗುವ ಹಳೆಯ ಮರದ ಮೆಟ್ಟಿಲುಗಳ ಮೇಲೆ ಕಾಲಿಟ್ಟ. ಪ್ರತಿ ಹೆಜ್ಜೆಗೂ ಆ ಮರ ಮುರಿಯುವಂತೆ ಕಿರುಚುತ್ತಿತ್ತು. ಆ ಶಬ್ದ ಇಡೀ ಬಂಗಲೆಯಲ್ಲಿ ದಿಗಿಲಿನ ಪ್ರತಿಧ್ವನಿ ಎಬ್ಬಿಸುತ್ತಿತ್ತು. ಅವನು ತನ್ನ ಕೊನೆಯ ಕೊಠಡಿಗೆ ನುಗ್ಗಿ ಬಾಗಿಲು ಹಾಕಿಕೊಂಡ. ಅವನ ಕೈಯಲ್ಲಿದ್ದ ಲೇಖನಿ ತನ್ನಷ್ಟಕ್ಕೆ ತಾನೇ ಕಾಗದದ ಮೇಲೆ ಹರಿಯತೊಡಗಿತು. ಇದು ಕಿರಣ್ ಬರೆಯುತ್ತಿರಲಿಲ್ಲ, ಅವನ ಅತೀಂದ್ರಿಯ ಪ್ರೇಮದ ಶಕ್ತಿ ಅವಳ ಕಡೆಯಿಂದ ಸಂದೇಶಗಳನ್ನು ರವಾನಿಸುತ್ತಿತ್ತು. ಕಾಗದದ ಮೇಲೆ ರಚನಾಳ ಹಸ್ತಾಕ್ಷರದಲ್ಲೇ ಮೂಡಿತು ಕಿರಣ್ ಅವರು ನನ್ನ ನೆರಳನ್ನು ಕದಿಯುತ್ತಿದ್ದಾರೆ 333 ಕಾಣುವ ಮೊದಲು ನನ್ನನ್ನು ಉಳಿಸು.
ಕಿರಣ್ ತನ್ನ ಬಾಕ್ಸಿಂಗ್ ಮುಷ್ಟಿಯನ್ನು ಬಿಗಿಗೊಳಿಸಿದ. ಇದು ರಿಂಗ್‌ನ ಹೋರಾಟವಲ್ಲ, ಇದು ಅವಳ ಜೀವ ಉಳಿಸಲು ಮಾಡುವ ಆತ್ಮದ ಹೋರಾಟ. ಎದುರಾಳಿ ಕಣ್ಣಿಗೆ ಕಾಣದ ಕರಾಳ ನೆರಳು. ಅವನು ತನ್ನ 101 ಜಪದ ಸಂಕಲ್ಪವನ್ನು ಆರಂಭಿಸಿದ. ಪ್ರತಿಯೊಂದು ಮಂತ್ರವೂ ಒಂದು ಸೈಕಾಲಜಿಕಲ್ ಗುದ್ದಿನಂತೆ ಶೂನ್ಯವನ್ನು ಸೀಳುತ್ತಿತ್ತು. ಅವನು ಗಾಳಿಯಲ್ಲೇ ಪಂಚ್ ಮಾಡಲು ಶುರುಮಾಡಿದ. ಅವನ ಮುಷ್ಟಿಗಳು ಗಾಳಿಯನ್ನು ಸೀಳುವಾಗ ಉಂಟಾಗುವ ಸದ್ದು ಗುಡುಗಿನಂತೆ ಕೇಳಿಸುತ್ತಿತ್ತು. ಇಲ್ಲಿ ಕಿರಣ್ ಹೊಡೆಯುವ ಪ್ರತಿ ಪಂಚ್ ಅಲ್ಲಿ ರಚನಾಳನ್ನು ಆವರಿಸಿದ್ದ ಆ ಕರಾಳ ನೆರಳಿಗೆ ತಗುಲುತ್ತಿತ್ತು. ಸಮಯ ಉರುಳುತ್ತಾ 2:22 ದಾಟಿತು. ಕಿರಣ್‌ನ ದೇಹ ಬಳಲಿತ್ತು. ಅವನ ಮೂಗಿನಿಂದ ರಕ್ತ ಸುರಿಯುತ್ತಿತ್ತು. ಅಷ್ಟರಲ್ಲೇ ಕಿಟಕಿಯ ಗಾಜಿನ ಮೇಲೆ ಮಂಜು ಮುಸುಕಿತು. ಆ ಮಂಜಿನ ಆಚೆ ರಚನಾಳ ಮುಖ ಕಂಡಿತು. ಅವಳ ಕಣ್ಣುಗಳಲ್ಲಿ ಪ್ರೀತಿ ಮತ್ತು ಸಾವು ಏಕಕಾಲಕ್ಕೆ ಮಿಂಚುತ್ತಿದ್ದವು. ರಚನಾ ಅಲ್ಲಿ ಯಾವುದೋ ಸೈಕಾಲಜಿಕಲ್ ಕೋಮಾದ ಸ್ಥಿತಿಯಲ್ಲಿದ್ದಳು. ಅವಳನ್ನು ಬದುಕಿಸಬೇಕಾದರೆ ಕಿರಣ್ ತನ್ನ ಆಯುಷ್ಯವನ್ನೇ ಪಣಕ್ಕಿಡಬೇಕಿತ್ತು. ಇದು ಕೇವಲ ದೈಹಿಕ ಹೋರಾಟವಲ್ಲ, ಇದು ಅವನ ಆತ್ಮ ಮತ್ತು ಅವನ ಸೃಜನಶೀಲತೆಯ ನಡುವಿನ ಯುದ್ಧವಾಗಿತ್ತು. ನನ್ನ ಉಸಿರು ನಿನ್ನದಾಗಲಿ ಎಂದು ಕಿರಣ್ ಕಿರುಚಿದ. ಆ ಕ್ಷಣದಲ್ಲಿ ಅವನ ಮಣಿಕಟ್ಟಿನ ಮೇಲಿದ್ದ 222 ಸಂಖ್ಯೆ ಮಾಯವಾಗಿ, ಚರ್ಮವನ್ನು ಸೀಳಿ 333 ಎಂಬ ಸಂಖ್ಯೆ ರಕ್ತದ ಹನಿಗಳ ಜೊತೆ ಮೇಲೆ ಬಂದಿತು. ಅವನಿಗೆ ಉಸಿರಾಡಲು ಗಾಳಿ ಸಿಗದಂತಾಯಿತು. ಬಂಗಲೆಯ ನೆಲದ ಮರಗಳು ಕುಸಿಯತೊಡಗಿದವು. ಕೆಳಗೆ ಸಮುದ್ರದ ಹಸಿದ ಅಲೆಗಳು ಅವನನ್ನು ನುಂಗಲು ಬಾಯಿ ತೆರೆದು ಕಾಯುತ್ತಿದ್ದವು. ಕಿರಣ್ ನೆಲಕ್ಕೆ ಕುಸಿದ. ಅತ್ತ ಮೈಲಿಗಲ್ಲುಗಳ ಆಚೆ ಇದ್ದಕ್ಕಿದ್ದಂತೆ ರಚನಾ ಜೋರಾಗಿ ಉಸಿರು ತಗೊಂಡು ಕಣ್ಣು ತೆರೆದಳು. ಅವಳನ್ನು ಬಂಧಿಸಿದ್ದ ಆ ಕರಾಳ ಶಕ್ತಿ ಚೂರಾಗಿ ಹೋಗಿತ್ತು.
ಇದ್ದಕ್ಕಿದ್ದಂತೆ ಕಿರಣ್‌ನ ಫೋನ್ ಮಿನುಗಿತು. ಇಷ್ಟು ದಿನ ಸತ್ತಿದ್ದ ಮೊಬೈಲ್ ಸ್ಕ್ರೀನ್ ಮೇಲೆ ರಚನಾಳ ಹೆಸರಿನಿಂದ ವಿಡಿಯೋ ಕಾಲ್ ಬಂತು. ಕಿರಣ್ ಕಷ್ಟಪಟ್ಟು ಫೋನ್ ಎತ್ತಿದ. ಪರದೆಯ ಮೇಲೆ ರಚನಾ ಕಣ್ಣೀರು ಹಾಕುತ್ತಿದ್ದಳು. ಅವಳು ಮಾತನಾಡಿದ ಮೊದಲ ಮಾತು ಕಿರಣ್, ನನ್ನ ಉಸಿರಿನಲ್ಲಿ ನಿನ್ನ ಪ್ರೀತಿಯ ವಾಸನೆ ಬರುತ್ತಿದೆ. ನೀನು ನನ್ನನ್ನು ಆ ಕತ್ತಲೆಯಿಂದ ಹೇಗೆ ಎಳೆದು ತಂದೆ? ನಾನು ಬರುತ್ತಿದ್ದೇನೆ ಕಿರಣ್, ನಮ್ಮ ಮೌನ ಮುಗಿಯುವ ಸಮಯ ಬಂದಿದೆ.
ಮರುದಿನ ಬೆಳಿಗ್ಗೆ, ಮಂಗಳೂರಿನ ಆ ಕಡಲತೀರದಲ್ಲಿ ಮಂಜು ಮುಸುಕಿತ್ತು. ಕಿರಣ್ ತನ್ನ ಬೈಕ್ ನಿಲ್ಲಿಸಿ ಸಮುದ್ರದ ಕಡೆಗೆ ನೋಡುತ್ತಾ ನಿಂತಿದ್ದ. ಅವನ ಶಕ್ತಿ ಕುಂದಿದ್ದರೂ ಅವನ ಕಣ್ಣಲ್ಲಿ ಒಂದು ಹೊಸ ಕಳೆ ಇತ್ತು. ದೂರದಿಂದ ರಚನಾ ಓಡಿ ಬರುತ್ತಿದ್ದಳು. ಅವಳು ಬಂದು ಕಿರಣ್‌ನನ್ನು ತಬ್ಬಿಕೊಂಡ ಕ್ಷಣ, ಒಂದು ಪವಾಡ ನಡೆಯಿತು. ಕಿರಣ್‌ನ ಕೈಮೇಲಿದ್ದ ಆ ರಕ್ತಸಿಕ್ತ 333 ಸಂಖ್ಯೆ ನಿಧಾನವಾಗಿ ಮಾಯವಾಗಿ ರಚನಾಳ ಮಣಿಕಟ್ಟಿನ ಮೇಲೆ ಮೂಡಿತು.
ಇದೊಂದು ಅತೀಂದ್ರಿಯ ಹಸ್ತಾಂತರ. ಕಿರಣ್ ತನ್ನ ಅಸ್ತಿತ್ವವನ್ನೇ ಅವಳಿಗೆ ಧಾರೆ ಎರೆದಿದ್ದ. ರಚನಾ ಮೌನ ಮುರಿದು ಹೇಳಿದಳು, ಇನ್ನು ಮುಂದೆ ನಾನು ನಿನ್ನ ಶಬ್ದವಾಗುತ್ತೇನೆ, ನೀನು ನನ್ನ ಮೌನವಾಗು. ನಮ್ಮಿಬ್ಬರನ್ನೂ ಈ ಬ್ರಹ್ಮಾಂಡದ ಯಾವ ಶಕ್ತಿಯೂ ಬೇರ್ಪಡಿಸಲು ಸಾಧ್ಯವಿಲ್ಲ.
ಜಗತ್ತು ಇದು ಹುಚ್ಚುತನ ಎನ್ನಬಹುದು, ಆದರೆ ಆ ಕಡಲತೀರದ ಅಲೆಗಳಿಗೆ ಇದು ಅಕ್ಷರಗಳಲ್ಲಿ ಬರೆಯಲಾಗದ, ಕೇವಲ ಆತ್ಮಗಳಿಂದ ಅನುಭವಿಸಬಲ್ಲ ಅತೀಂದ್ರಿಯ ಪ್ರೇಮದ ಅಂತಿಮ ಗೆಲುವು ಎಂದು ತಿಳಿದಿತ್ತು. ಮರುದಿನ ಬೆಳಿಗ್ಗೆ ತೀರದಲ್ಲಿ ಸಿಕ್ಕಿದ್ದು ಕೇವಲ ಒಂದು ಅರ್ಧ ಸುಟ್ಟ ಡೈರಿ. ಅದರ ಕೊನೆಯ ಪುಟದಲ್ಲಿ ಕೆಂಪು ಅಕ್ಷರಗಳಲ್ಲಿ ಬರೆಯಲಾಗಿತ್ತು. ನನ್ನ ಅಕ್ಷರಗಳು ಸಾಯುವುದಿಲ್ಲ, ಅವು ಪ್ರತಿ ದಿನ ಬೆಳಿಗ್ಗೆ 3:33ಕ್ಕೆ ಕತ್ತಲೆಯಲ್ಲಿ ಮತ್ತೆ ಹುಟ್ಟುತ್ತವೆ.