ಋಷಿತ್ ಹೊಸ ಬೈಕ್ ಮೇಲೆ ಬರೋದನ್ನ ನೋಡಿ, ಕಲ್ಪನಾ ಅವರು, ಸಂತೋಷ ದಿಂದ ಏನ್ ಋಷಿ ಹೊಸ ಬೈಕ್ ತಗೊಂಡ ಅಂತ ಕೇಳ್ತಾರೆ.
ಋಷಿತ್... ಇಲ್ಲಾ ಅಮ್ಮ ನಮ್ ಮೇಡಂ ಅವರು ಕೊಡಿಸಿದ್ರು, ಬನ್ನಿ ಒಂದು ರೌಂಡ್ ಹೋಗಿ ಬರೋಣ.
ಕಲ್ಪನಾ... ಬೇಡ ಋಷಿ.
ಋಷಿತ್... ಅಮ್ಮ ಪ್ಲೀಸ್.
ಕಲ್ಪನಾ ಅವರಿಗೆ ಅವನ ಮನಸನ್ನ ನೋಯಿಸೋಕೆ ಇಷ್ಟ ಇಲ್ಲದೆ ಸರಿ ನಡಿ ಅಂತ ಹೇಳಿ, ಅವನ ಬೈಕ್ ಅಲ್ಲಿ ಕೂತ್ಕೋತಾರೆ. ನಂತರ ಬೈಕ್ ಅಲ್ಲಿ ಒಂದು ರೌಂಡ್ ಹೋಗಿ ಬರ್ತಾರೆ.
ಕಲ್ಪನಾ ಅವರು ಬೈಕ್ ಇಳಿದು, ಸರಿ ಋಷಿ,, ನಿನ್ ಹೋಗಿ ಕೈ. ಕಾಲು ತೊಳ್ಕೊಂಡು ಬಾ ಊಟಕ್ಕೆ ಇಡ್ತೀನಿ. ಮತ್ತೆ ನಿನ್ನ ಕೆಲಸಕ್ಕೆ ಲೇಟ್ ಆಗುತ್ತೆ.
ಋಷಿತ್,,, ಬೇಡ ಅಮ್ಮ ಬರ್ತಾ ಊಟ ಮಾಡ್ಕೊಂಡೆ ಬಂದೆ. ಈಗ ಸ್ವಲ್ಪ ರೆಸ್ಟ್ ಮತ್ತೆ ಸಂಜೆ 7 ಗಂಟೆಗೆ ಹೋಗಿ ರಾತ್ರಿ 12 ಗಂಟೆಗೆ ಬರ್ತೀನಿ.
ಕಲ್ಪನಾ,,, ಹೌದ ಸರಿ ನಿನ್ ಹೋಗಿ ರೆಸ್ಟ್ ಮಾಡು, ರಾತ್ರಿ ಊಟನ ನಿನ್ನ ರೂಮಲ್ಲಿ ಇಡ್ತೀನಿ, ಕೆಲಸದಿಂದ ಬಂದು ಬಿಸಿ ಮಾಡ್ಕೊಂಡು ತಿನ್ನು ಸರಿನಾ?
ಋಷಿತ್ ಸರಿ ಅಮ್ಮ ಅಂತ ಹೇಳಿ ಅವನ ರೂಂ ಗೆ ಹೋಗ್ತಾನೆ.
ಸಂಜೆ ರೆಡಿ ಆಗಿ ಕೆಳಗೆ ಬರ್ತಾನೇ ಮೂರ್ತಿ ಅವರು ಕೂಡ ಆಗಷ್ಟೇ ಕೆಲಸದಿಂದ ಬಂದಿರ್ತಾರೆ. ಅವರನ್ನ ಮಾತಾಡಿಸಿಕೊಂಡು ಕಾಫಿ ಕುಡಿದು ಕೆಲಸಕ್ಕೆ ಹೋಗ್ತಾನೆ.
********
ಸೂರಜ್,,, ಲೋ ಏನೋ ಇಂಗಾಯ್ತು, ಇವಾಗ ನಮಗೆ ದುಡ್ಡು ಎಲ್ಲಿಂದ ಬರುತ್ತೆ. ಅ ಮುದಿಯ ತಿನ್ನೋದು ತಿಂದ, ಹೀಗೆ ಸಿಕ್ಕಿ ಹಾಕಿ ಕೊಂಡು ನಮ್ಮನ್ನ ಈ ಸ್ಥಿತಿಗೆ ತಂದು ಬಿಟ್ಟ.
ವಿರಾಜ್,,, ಅದಕ್ಕೆ ಯಾಕೋ ಟೆನ್ಶನ್ ಆಗ್ತಿಯಾ, ಮೆಲ್ಲಗೆ ಇವನನ್ನು ಕೂಡ ನಮ್ಮ ದಾರಿಗೆ ತರೋಣ, ಒಳ್ಳೆ ಮಾತಲ್ಲಿ ಕೇಳಿದ್ರೆ ಅವನಿಗೂ ಸ್ವಲ್ಪ ಕೊಡೋಣ, ಇಲ್ಲಾ ಅಂದ್ರೆ ಗೊತ್ತು ಅಲ್ವಾ ನಮ್ ಭಾಷೇಲಿ ಹೇಳಿದ್ರೆ, ಮುಚ್ಕೊಂಡು ನಾವ್ ಹೇಳಿದ ಹಾಗೇ ಕೇಳ್ತಾನೆ. ಹೊಸದಾಗಿ ಬಂದಿದ್ದಾನೆ ಅಲ್ವಾ ಸ್ವಲ್ಪ ದಿನ ಅವನ ಪಾಡಿಗೆ ಅವನನ್ನ ಬಿಟ್ಟು ಬಿಡೋಣ. ಇಲ್ಲಾ ಅಂದ್ರೆ ಚಾಮುಂಡೇಶ್ವರಿ ತನಕ ಹೋದ್ರು ಹೋಗುತ್ತೆ.
ಸೂರಜ್.... ಮತ್ತೆ ಇವಾಗ ಖರ್ಚಿಗೆ ಏನೋ ಮಾಡೋದು.
ವಿರಾಜ್,, ಇದ್ದಾರೆ ಅಲ್ವಾ ನಮ್ಮಪ್ಪಂದ್ರು ನಡಿ ಹೋಗಿ ಕೇಳೋಣ ಅಂತ ಹೇಳಿ ಅಲ್ಲಿಂದ ಹೊರಟು ಹೋಗ್ತಾರೆ.
ಕೆಲವು ದಿನಗಳ ನಂತರ,,,
ವರ್ಣಿಕಾ... ಹಾಯ್ ಋಷಿ. ಏನ್ ಕೆಲಸದಲ್ಲಿ ಬ್ಯುಸಿ ನಾ?
ಋಷಿತ್... ಹಾಯ್ ಮೇಡಂ ,,, ಹಾಗೇನಿಲ್ಲ ಹೇಳಿ ಏನ್ ವಿಷಯ?
ಸುಹಾನಿ... ಸಾರೀ ಋಷಿ.
ಋಷಿತ್... ಸಾರೀ ನಾ ಏನಕ್ಕೆ?
ಸುಹಾನಿ... ನಿಮ್ ಬಗ್ಗೆ ಗೊತ್ತಿಲ್ದೆ ನಿಮ್ಮನ್ನ ತಪ್ಪಾಗಿ ಅರ್ಥ ಮಾಡ್ಕೊಂಡ್ವಿ ಅದಕ್ಕೆ ಸಾರೀ.
ಋಷಿತ್... ತುಸು ನಕ್ಕು ಅಷ್ಟೇನಾ ಅದಕ್ಕೆಲ್ಲ ಯಾಕ್ ಸಾರೀ ಕೇಳ್ತಿರಾ ಇಟ್ಸ್ ಓಕೆ ಮೇಡಂ.
ಸುಹಾನಿ... ನೀವು ನನಗಿಂತ ದೊಡ್ಡ ಪೋಸ್ಟ್ ಅಲ್ಲಿ ಇದ್ದೀರಾ? ನನ್ನ ಮೇಡಂ ಅಂತ ಕರಿಯೋದು ನನಗೆ ಅಷ್ಟೊಂದು ಇಷ್ಟ ಆಗಲ್ಲಾ, ಸುಹಾನಿ ಅಂತ ಕರೆದ್ರೆ ಸಾಕು.
ವರ್ಣಿಕಾ... ನನ್ನು ಅಷ್ಟೇ ವರ್ಣಿಕಾ ಅಂತ ಕರೆದ್ರೆ ಸಾಕು.
ಋಷಿತ್... ಹ್ಮ್ ಸರಿ ಹಾಗೇ ಕರೀತೀನಿ.
ವರ್ಣಿಕಾ,,, ಕೈ ಮುಂದೆ ಮಾಡಿ ಫ್ರೆಂಡ್ಸ್?
ಋಷಿತ್.... ನಕ್ಕು ಫ್ರೆಂಡ್ಸ್ ಅಂತ ಹೇಳಿ ಕೈ ಕೊಡ್ತಾನೆ.
ಸುಹಾನಿ... ಕೈ ಮುಂದೆ ಮಾಡಿ ಮತ್ತೆ ನನಗೆ?
ಋಷಿತ್ ನಕ್ಕು ಕೈ ಕೊಟ್ಟು ಫ್ರೆಂಡ್ಸ್ ಅಂತ ಹೇಳಿ ವರ್ಕ್ ಮಾಡೋಕೆ ಶುರು ಮಾಡ್ತನೇ..
ಋಷಿತ್ ಲಿಫ್ಟ್ ಅಲ್ಲಿ ಬರೋವಾಗ,, ಇಬ್ಬರು ಹುಡುಗರು ಮಾತಾಡಿಕೊಳ್ಳೋದು ಋಷಿತ್ ಕಿವಿಗೆ ಬೀಳುತ್ತೆ.
ಏನೋ ವಿಕ್ಕಿ ಇವಾಗ ಏನ್ ಮಾಡೋದು.
ವಿಕ್ಕಿ... ಅದೇ ನನಗೂ ಅರ್ಥ ಆಗ್ತಾ ಇಲ್ಲಾ ಕಣೋ. ಅರ್ಜೆಂಟ್ ಆಗಿ 15 ಸಾವಿರ ಅಂದ್ರೆ ಯಾರೋ ಕೊಡ್ತಾರೇ. ಸಂಬಳ ಬರೋಕೆ ಇನ್ನು 20 ದಿನ ಇದೆ.
ವಿಕ್ಕಿ ಫ್ರೆಂಡ್ ಸಂಪತ್... ಬಾರೋ ಹೋಗಿ ಅಕೌಂಟ್ಸ್ ಅಲ್ಲಿ ಸ್ವಲ್ಪ ಅಡ್ವಾನ್ಸ್ ಆದ್ರು ಕೇಳೋಣ.
ವಿಕ್ಕಿ... ಬೇಡ್ವೊ ಅ ಅಕೌಂಟೆಂಟ್ ಗೆ ನಮ್ಮಂತವರಿಗೆ ಕೊಡೋಕೆ ಅವನ ಹತ್ತಿರ ದುಡ್ಡು ಇರೋದಿಲ್ಲ. ಹೋದ್ರು ಏನು ಪ್ರಯೋಜನ ಇಲ್ಲಾ.
ಸಂಪತ್... ಲೋ ಹೀಗೆ ಅಂದ್ರೆ ಹೇಗೋ ಬಾ ಹೋಗಿ ಒಂದು ಸಾರಿ ಕೇಳೋಣ, ಇಲ್ಲಾ ಅಂದ್ರೆ ನೀನು ಎಕ್ಸಾಮ್ ಬರಿಯೋದಕ್ಕೆ ಆಗೋದಿಲ್ಲ, ಇಷ್ಟು ವರ್ಷ ಕಷ್ಟ ಪಟ್ಟು ಓದಿದೆಲ್ಲಾ ವ್ಯರ್ಥ ಆಗೋಗುತ್ತೆ ನನ್ನ ಮಾತು ಕೇಳಿ ಬಾ ಅಂತ ಹೇಳಿ, ಲಿಫ್ಟ್ ಡೋರ್ ಓಪನ್ ಆಗ್ತಾ ಇದ್ದಾ ಹಾಗೇ ಅವನ ಕೈ ಇಡ್ಕೊಂಡು ಕರ್ಕೊಂಡು ಹೋಗ್ತಾನೆ.
ಸ್ವಲ್ಪ ಸಮಯದ ನಂತರ, ವಿಕ್ಕಿ ಸಂಪತ್ ಫೈನಾನ್ಸ್ ಡಿಪಾರ್ಟ್ಮೆಂಟ್ ಹತ್ತಿರ ಬರ್ತಾರೆ.
ವರ್ಣಿಕಾ,,, ಇಬ್ಬರನ್ನು ನೋಡಿ ಹೇಳಿ ಏನಾಗಬೇಕಿತ್ತು.
ಸಂಪತ್,,, ಅವನ ಐಡಿ ಕಾರ್ಡ್ ಕೊಟ್ಟು, ಮೇಡಂ ನನ್ನ ಫ್ರೆಂಡ್ ಗೆ ಎಕ್ಸಾಮ್ ಫೀಸ್ ಕಟ್ಟೋಕೆ ನಾಳೇನೇ ಲಾಸ್ಟ್ ಡೇಟ್, ಅದಕ್ಕೆ ಅಡ್ವಾನ್ಸ್ ಆಗಿ 15 ಸಾವಿರ ಕೊಟ್ರೆ, ಬರೋ ಸಂಬಳದಲ್ಲಿ ಕಟ್ ಮಾಡಿ ಇಡ್ಕೊಳ್ಳಿ.
ವರ್ಣಿಕಾ,,, ಡೀಟೇಲ್ಸ್ ಚೆಕ್ ಮಾಡಿ, ಸಾರೀ ಸರ್, ನೀವು ಮಾಡ್ತಾ ಇರೋದೇ ಪಾರ್ಟ್ ಟೈಮ್ ಜಾಬ್ ನಿಮಗೆ ಬರೋ ಸ್ಯಾಲರಿ ಅಲ್ಲಿ 90% ನಾ ಅಡ್ವಾನ್ಸ್ ಆಗಿ ಕೇಳ್ತಾರೆ ಇದ್ದೀರಾ ಅದು ಅಲ್ಲದೆ ನಿಮ್ಮ ವರ್ಕಿಂಗ್ ಡೇ ಕೂಡ ಕಮ್ಮಿ ಇದೆ, ಇಬ್ಬರಿಗೂ ಸೇರಿ ಅಡ್ವಾನ್ಸ್ ಕೊಟ್ರು 5 ಸಾವಿರ ತನಕ ಕೊಡಬಹುದು ಅಷ್ಟೇ ಸರ್.
ವಿಕ್ಕಿ,,, ಪ್ಲೀಸ್ ಮೇಡಂ ಹಾಗೇ ಹೇಳಬೇಡಿ, ನಾಳೆ ಎಕ್ಸಾಮ್ ಫೀಸ್ ಕಟ್ಟಿಲ್ಲ ಅಂದ್ರೆ ನಾನ್ ಇಷ್ಟು ವರ್ಷ ಓದಿದೆಲ್ಲಾ ವೆಸ್ಟ್ ಆಗೋಗುತ್ತೆ ಪ್ಲೀಸ್ ಇಲ್ಲಾ ಅಂತ ಮಾತ್ರ ಹೇಳಬೇಡಿ.
ಸುಹಾನಿ... ಬ್ರದರ್ ನಿಮ್ಮ ಕಷ್ಟ ನಮಗೆ ಅರ್ಥ ಆಗುತ್ತೆ, ನಾವು ಈ ರೀತಿ ಕಷ್ಟ ಪಟ್ಟು ಓದಿನೆ ಬಂದಿರೋದು. ಬೇಕಿದ್ರೆ ನಮ್ಮ ಹತ್ತಿರ ಸೇವಿಂಗ್ಸ್ ಅಂತ 3000 ಸಾವಿರ ಇದೆ, ಅದನ್ನ ಕೊಡ್ತೀವಿ, ಮಿಕ್ಕಿದನ್ನ ಬೇರೆ ಕಡೆ ಎಲ್ಲಾದ್ರೂ ಅಡ್ಜಸ್ಟ್ ಮಾಡ್ಕೊಳ್ಳಿ. ನೀವು ನಮಗೆ ಹಣ ನಾ ವಾಪಸ್ಸು ಕೊಡದೆ ಇದ್ರು ಪರ್ವಾಗಿಲ್ಲ.
ಸಂಪತ್... ಎಲ್ಲಾ ಕಡೆ ಟ್ರೈ ಮಾಡಿನೇ ನಾವು ಇಲ್ಲಿಗೆ ಬಂದಿದ್ದು ಮೇಡಂ ಪ್ಲೀಸ್ ಇಲ್ಲಾ ಅಂತ ಮಾತ್ರ ಹೇಳಬೇಡಿ. ನಿಮ್ಮ ಕಾಲಿಗೆ ಬೇಕಾದ್ರು ಬೀಳ್ತೀನಿ.
ವರ್ಣಿಕಾ,,, ಬ್ರದರ್ ಪ್ಲೀಸ್ ಅರ್ಥ ಮಾಡ್ಕೊಳ್ಳಿ, ಸರ್ ಬಂದಮೇಲೆ, ಕೇಳ್ತೀನಿ ಅವರು ಏನಾದ್ರೂ ಕೊಟ್ರೆ ಖಂಡಿತ ಕೊಡ್ತೀನಿ. ಅಂತ ಹೇಳೋವಾಗ, ಋಷಿತ್ ಆಫೀಸ್ ಒಳಗೆ ಬರ್ತಾನೇ.
ವರ್ಣಿಕಾ... ಋಷಿತ್ ನಾ ನೋಡಿ, ಸರ್ ಬಂದ್ರು ಮಾತಾಡಿ ಹೇಳ್ತಿನಿ ಅಂತ ಹೇಳ್ತಾಳೆ.
ಋಷಿತ್... ವರ್ಣಿಕಾ ಹತ್ತಿರ ಬಂದು, ಏನ್ ಪ್ರಾಬ್ಲಮ್ ಅಂತ ಕೇಳ್ತಾನೆ..
ವರ್ಣಿಕಾ... ವಿಷಯ ಹೇಳ್ತಾಳೆ.
ಋಷಿತ್... ಹೌದ ಅಂತ ಹೇಳಿ, ವಿಕ್ಕಿ, ಸಂಪತ್ ಕಡೆ ನೋಡಿ, ಆನ್ಲೈನ್ ಪೇಮೆಂಟ್ ಆಪ್ಷನ್ ಇದೆಯಾ ಅಂತ ಕೇಳ್ತಾನೆ.
ವಿಕ್ಕಿ... ಅ ಇದೆ ಸರ್ ಅಂತ ಹೇಳಿ, ಮೊಬೈಲ್ ಅಲ್ಲಿ ಅವನ ಕಾಲೇಜ್ ಡೀಟೇಲ್ಸ್ ಕೊಡ್ತಾನೆ.
ಋಷಿತ್... ಕೆಲವು ನಿಮಿಷಗಳ ನಂತರ ಪೇಮೆಂಟ್ ಆಗಿದೆ ಅಂತ ಹೇಳ್ತಾನೆ. ತಕ್ಷಣ ವಿಕ್ಕಿ ನಂಬರ್ ಗೆ ಮೆಸೇಜ್ ಬರುತ್ತೆ. ವಿಕ್ಕಿ ಸಂಪತ್ ಇಬ್ಬರು ಖುಷಿಯಾಗಿ ತುಂಬಾ ಥ್ಯಾಂಕ್ಸ್ ಸರ್, ನಿಮ್ಮ ಈ ಉಪಕಾರ ನಾ ಯಾವತ್ತೂ ಮರೆಯೋದಿಲ್ಲ.
ಋಷಿತ್... ಪರ್ವಾಗಿಲ್ಲ ಎಕ್ಸಾಮ್ ನಾ ಚೆನ್ನಾಗಿ ಬರೆಯಿರಿ, ಅಲ್ ದಿ ಬೆಸ್ಟ್ ಅಂತ ಹೇಳಿ, ಐಡಿ ಕಾರ್ಡ್ ಕೊಟ್ಟು, ಜೇಬಿನಿಂದ ಪರ್ಸ್ ತೆಗೆದು 3 ಸಾವಿರಾರು ಕ್ಯಾಶ್ ನಾ ವಿಕ್ಕಿ ಕೈಗೆ ಕೊಡ್ತಾನೇ.
ವಿಕ್ಕಿ... ಸರ್ ಇದು?
ಋಷಿತ್... ಎಲ್ಲಾನು ಎಕ್ಸಾಮ್ ಗೆ ಕಟ್ಟಿದ್ರೆ ಹೇಗೆ ಇಟ್ಕೊಳ್ಳಿ ನಿಮ್ಮ ಖರ್ಚಿಗೆ ಅಂತ ಹೇಳಿ , ಅವರನ್ನ ಕಳಿಸಿ ಕೊಡ್ತಾನೆ.
ವರ್ಣಿಕಾ,,, ಥ್ಯಾಂಕ್ಸ್ ಋಷಿ,, ನೀನು ಹೆಲ್ಪ್ ಮಾಡಿಲ್ಲ ಅಂದಿದ್ರೆ ಅವನಿಗೆ ತುಂಬಾ ಕಷ್ಟ ಆಗಿರೋದು.
ಋಷಿತ್... ನೀವೇ ಅವನ ಕಷ್ಟ ನೋಡಿ ಹೆಲ್ಪ್ ಮಾಡೋಕೆ ಹೋದ್ರಿ, ಇನ್ನ ನಾನ್ ಹೆಲ್ಪ್ ಮಾಡದೇ ಇದ್ರೆ ಹೇಗೆ. ಲೇಟ್ ಆಯ್ತು ನೀವಿನ್ನ ಹೊರಡಿ ಅಂತ ಹೇಳಿ ಅವರನ್ನ ಕಳಿಸಿ ಅವನ ಡೆಸ್ಕ್ ಗೆ ಹೋಗಿ ವರ್ಕ್ ಮಾಡೋಕೆ ಶುರು ಮಾಡ್ತಾನೆ.
*****
ಎರಡು ದಿನಗಳ ನಂತರ..
ಋಷಿತ್ ಅವನ ಟೈಮ್ ಗೆ ಬರ್ತಾನೇ. ಗೇಟ್ ಅಲ್ಲಿ ಸೆಕ್ಯೂರಿಟಿ ಫುಲ್ ಅಲರ್ಟ್ ಅಲ್ಲಿ ಇರ್ತಾರೆ. ಋಷಿತ್ ಗೆ ಸೆಕ್ಯೂರಿಟಿ ಸೆಲ್ಯೂಟ್ ಮಾಡಿ ಒಳಗೆ ಕಳಿಸ್ತಾನೆ. ಋಷಿತ್ ಬೈಕ್ ನಿಲ್ಲಿಸಿ ಲಿಫ್ಟ್ ಹತ್ತಿರ ಬರ್ತಾನೇ ಅಲ್ಲಿ ಇಬ್ಬರು ಸೆಕ್ಯೂರಿಟಿ ಇರ್ತಾರೆ ಅದರಲ್ಲಿ ಒಬ್ಬರು ಲೇಡಿ ಇರ್ತಾರೆ. ಋಷಿತ್ ಮನಸಲ್ಲಿ ಏನಿದು ಯಾವತ್ತು ಇಲ್ದೆ ಇರೋದು ಅಂತ ಅನ್ಕೊಂಡು ಲಿಫ್ಟ್ ಹತ್ತಿ ಅವನ ಆಫೀಸ್ ಫ್ಲೋರ್ ಗೆ ಬರ್ತಾನೇ. ಅಲ್ಲಿ ಕೂಡ ಸೆಕ್ಯೂರಿಟಿ ಫುಲ್ ಅಲರ್ಟ್ ಆಗಿ ಇರುತ್ತೆ. ಸೆಕ್ಯೂರಿಟಿ ಋಷಿತ್ ಗೆ ಸೆಲ್ಯೂಟ್ ಮಾಡಿ ಒಳಗೆ ಕಳಿಸ್ತಾನೆ. ಆಫೀಸ್ ಸ್ಟಾಫ್ ಕೂಡ ಫುಲ್ ಆಕ್ಟಿವ್ ಆಗಿ ಸೈಲೆಂಟಾಗಿ ವರ್ಕ್ ಮಾಡ್ತಾ ಇರ್ತಾರೆ.
ಋಷಿತ್... ಹಾಯ್ ವರ್ಣಿಕಾ, ಹಾಯ್ ಸುಹಾನಿ ಅಂತಾನೆ.
ಇಬ್ಬರು ಋಷಿತ್ ನಾ ನೋಡಿ ಹಾಯ್ ಮಾಡ್ತಾರೆ.
ಋಷಿತ್... ಏನ್ ಇವತ್ತು ಎಲ್ಲರೂ ಇಷ್ಟು ಶ್ರದ್ದೆ ಯಿಂದ ಕೆಲಸ ಮಾಡ್ತಾ ಇದ್ದಾರೆ?
ವರ್ಣಿಕಾ... ಮೇಡಂ ಮಗಳು ವನ್ಯಾ ಬರ್ತಾ ಇದ್ದಾಳೆ ಅದಕ್ಕೆ.
ಋಷಿತ್... ಹೌದ ಸರಿ ಅಂತ ಹೇಳಿ ಅವನ ಡೆಸ್ಕ್ ಗೆ ಹೋಗಿ ವರ್ಕ್ ಮಾಡೋಕೆ ಶುರು ಮಾಡ್ತಾನೆ.
ಕೆಲವು ಸಮಯದ ನಂತರ , ಶಾಪಿಂಗ್ ಮಾಲ್ ಸೆಕ್ಯೂರಿಟಿ ಒಳಗೆ ಕಾರ್ ಬರೋದನ್ನ ನೋಡಿ ಸೆಲ್ಯೂಟ್ ಮಾಡಿ ಕಳಿಸಿ ಕೊಡ್ತಾರೆ. ಕಾರ್ ಸೀದಾ ಶಾಪಿಂಗ್ ಮಾಲ್ ಮುಖ್ಯ ದ್ವಾರದ ಮುಂದೆ ನಿಲ್ಲುತ್ತೆ. ಕಾರಿನ ಮುಂದೆ ಕೂತಿದ್ದ ಒಬ್ಬ ವ್ಯಕ್ತಿ ಕಾರಿಂದ ಇಳಿದು, ಕಾರಿನ ಹಿಂದಿನ ಡೋರ್ ನಾ ಓಪನ್ ಮಾಡಿ ಸೈಡ್ ಗೆ ನಿಂತು ಕೊಳ್ತಾನೆ.
ಹೈ ಹಿಲ್ಸ್ ಚಪ್ಪಲಿ ಹಾಕೊಂಡು, ಮಾಡ್ರೆನ್ ಚೆರ್ರಿ ರೆಡ್ ಲಾಂಗ್ ಡ್ರೆಸ್ ನಾ ಹಾಕಿಕೊಂಡು, ಕಣ್ಣಿಗೆ ಸನ್ ಗ್ಲಾಸ್ ನಾ ಹಾಕಿಕೊಂಡು, ಸ್ಟೈಲಿಶ್ ಆಗಿ ಕಾರಿನಿಂದ ಇಳಿತಾಳೆ ವನ್ಯಾ..
ಸಿನಿಮಾ ಹೀರೋಯಿನ್ ತರ ಇರೋ ವನ್ಯಾ ಕ್ಯಾಟ್ ವಾಕ್ ಮಾಡ್ಕೊಂಡು ಕೈಲಿ ಮೊಬೈಲ್ ನಾ ಇಡ್ಕೊಂಡು ನಡ್ಕೊಂಡು ಬರ್ತಾ ಇದ್ರೆ ಅವಳನ್ನ ಕಣ್ತುಂಬ ನೋಡೋವರಿಗಿಂತ ಭಯ ಬಿದ್ದು ನೋಡೋವ್ರೆ ಜಾಸ್ತಿ. ಅಷ್ಟು ಭಯ ಅವಳು ಅಂದ್ರೆ. ಸೆಕ್ಯೂರಿಟಿ ಅವಳಿಗೆ ಸೆಲ್ಯೂಟ್ ಮಾಡಿ ಒಳಗೆ ಕಳಿಸ್ತಾರೆ.
ವನ್ಯಾ ಶಾಪಿಂಗ್ ಮಾಲ್ ಒಳಗೆ ಬರ್ತಾ ಇದ್ದಾ ಹಾಗೇ ಅವಳಿಗೋಸ್ಕರ ಒಂದು ಲಿಫ್ಟ್ ಕಾಯ್ತಾ ಇರುತ್ತೆ. ವನ್ಯಾ ಲಿಫ್ಟ್ ಅಲ್ಲಿ ಆಫೀಸ್ ಫ್ಲೋರ್ ಗೆ ಬರ್ತಾಳೆ. ಆಫೀಸ್ ಸ್ಟಾಫ್ ಎಲ್ಲ ವನ್ಯಾ ನಾ ನೋಡಿ ಎದ್ದು ಗುಡ್ ಮಾರ್ನಿಂಗ್ ಮೇಡಂ ಅಂತ ಹೇಳ್ತಾರೆ. ವನ್ಯಾ ಯಾರಿಗೂ ಗುಡ್ ಮಾರ್ನಿಂಗ್ ಹೇಳದೆ ಅವಳ ಪಾಡಿಗೆ ಅವಳು ಅವಳ ಆಫೀಸ್ ರೂಂ ಒಳಗೆ ಹೋಗ್ತಾಳೆ.
ವನ್ಯಾ... ಅವಳ ಚೇರ್ ಅಲ್ಲಿ ಕುತ್ಕೊಂಡು, pa ಸೇತು ನಾ ನೋಡಿ, ಅಮ್ಮ ಬಂದಿದ್ದಾರಾ ಅಂತ ಕಾಲ್ ಮಾಡಿ ಕೇಳು ಅಂತ ಹೇಳಿ ಅವಳ ವರ್ಕ್ ಮಾಡೋಕೆ ಶುರು ಮಾಡ್ತಾಳೆ.
ಸೇತು ಓಕೆ ಮೇಡಂ ಅಂತ ಹೇಳಿ ಮೊಬೈಲ್ ತೆಗೆದುಕೊಂಡು ಹೊರಗಡೆ ಬರ್ತಾನೇ.
ಋಷಿತ್ ಕೈಲಿ ಫೈಲ್ ಇಡ್ಕೊಂಡು ಅವನ ಪಾಡಿಗೆ ಅವನು ಹೋಗ್ತ ಸೇತು ಮುಂದೆ ಪಾಸ್ ಆಗ್ತಾನೆ. ಸೇತು ಋಷಿತ್ ಹಾಗೇ ಹೋಗೋದನ್ನ ನೋಡಿ, ಯಾರಿವನು ಅಂತ ಅಂದುಕೊಂಡು, ಮೊಬೈಲ್ ಇಡ್ಕೊಂಡು ವನ್ಯಾ ಆಫೀಸ್ ಒಳಗೆ ಹೋಗ್ತಾನೆ.
ಸೇತು... ಮೇಡಂ, ದೊಡ್ಡ ಮೇಡಂ ಅವರ ಕ್ಯಾಬಿನ್ ಅಲ್ಲೇ ಇದ್ದಾರೆ ಅಂತೇ.
ವನ್ಯಾ... ಹೌದ ಸರಿ ನೀವ್ ಇಲ್ಲೇ ಇರಿ ನಾನ್ ಹೋಗಿ ಬರ್ತೀನಿ ಅಂತ ಹೇಳಿ ಎದ್ದು ಆಫೀಸ್ ರೂಮಿಂದ ಹೊರಗಡೆ ಬಂದು ಲಿಫ್ಟ್ ಕಡೆಗೆ ಹೋಗ್ತಾಳೆ.
ವನ್ಯಾ ವಾಪಸ್ಸು ಬರ್ತಾಳೆ ಅಂತ ಗೊತ್ತಿಲ್ಲದ ಸೆಕ್ಯೂರಿಟಿ ಅಲ್ಲಿಂದ ಹೊರಟು ಹೋಗಿರ್ತಾರೆ.
ವನ್ಯಾ ಅದಕ್ಕೆ ತಲೆ ಕೆಡಸಿಕೊಳ್ಳದೆ ಬಂದು ಲಿಫ್ಟ್ ಹತ್ತಿರ ನಿಂತು ಲಿಫ್ಟ್ ಬಟನ್ ನಾ ಪ್ರೆಸ್ ಮಾಡಿ ಲಿಫ್ಟ್ ಗೋಸ್ಕರ ಕಾಯ್ತಾ ಇರ್ತಾಳೆ.
ಋಷಿತ್ ಮೊಬೈಲ್ ಅಲ್ಲಿ ಮಾತಾಡ್ತಾ ಸರಿ ಅಪ್ಪಯ್ಯ ನಾನ್ ಏನು ಅಂತ ವಿಚಾರಿಸಿ ಕಾಲ್ ಮಾಡ್ತೀನಿ ಅಂತ ಹೇಳಿ ಕಾಲ್ ಕಟ್ ಮಾಡಿ ಮೊಬೈಲ್ ನಾ ಜೇಬಲ್ಲಿ ಇಟ್ಕೊಂಡು ವಿಜಿಲ್ ಹೊಡಿತಾ ಲಿಫ್ಟ್ ಹತ್ತಿರ ಬರ್ತಾ ಲಿಫ್ಟ್ ಬಟನ್ ಆನ್ ಆಗಿರೋದನ್ನ ನೋಡದೆ ಪ್ರೆಸ್ ಮಾಡೋಕೆ ಹೋಗ್ತಾನೆ.
ವನ್ಯಾ,,, ಋಷಿತ್ ನಾ ನೋಡಿ, ಹಲೋ ಮಿಸ್ಟರ್, ಬಟನ್ ಆನ್ ಆಗಿರೋದು ಕಾಣಿಸ್ತಾ ಇಲ್ವಾ?
ಋಷಿತ್... ಲಿಫ್ಟ್ ನಾ ಡೌನ್ ಬಟನ್ ನಾ ಪ್ರೆಸ್ ಮಾಡಿ , ಗ್ರೌಂಡ್ ಫ್ಲೋರ್ ಟಾಪ್ ಅಲ್ಲಿ ಇಲ್ಲಾ ಅದಕ್ಕೆ.
ವನ್ಯಾ.. ಡಿಸ್ಕರ್ಸಿಂಗ್ ಅಂತ ಬೈಕೊಂಡು ಸುಮ್ಮನೆ ಆಗಿ ಬಿಡ್ತಾಳೆ .
ನಂತರ ಲಿಫ್ಟ್ ಬರುತ್ತೆ ವನ್ಯಾ ಅದರಲ್ಲಿ ಹೊರಟು ಹೋಗ್ತಾಳೆ.
@@@@@@@@@@@@@@@@@@@@@@@@@@@@@@@@@