She came unwillingly... - 24 in Kannada Drama by Kavya Pattar books and stories PDF | ಬಯಸದೆ ಬಂದವಳು... - 24

Featured Books
  • The Mind Reader's Secret - 1

    भाग एक: शौर्य रायचंद का औरा और उसकी एंग्जायटीमुंबई के सबसे म...

  • अधूरापन - 22

    अध्याय-२२अपूर्व की बात सुनकर विनय सोच में पड़ गया कि अपने भा...

  • पूर्णिमा का नशा

    वो पूर्णिमा की रात थी। चाँद कुछ ज़्यादा ही पास लग रहा था। आस...

  • BLAST - EPISODE 4

    नौशाद इब्राहिम खान:"लेकिन गद्दार कौन हो सकता है?! इस कायरो म...

  • बिसरे लम्हे

    बिसरे लम्हे... सच कहूं तो ये सिर्फ मेरी कहानी नहीं है, बल्कि...

Categories
Share

ಬಯಸದೆ ಬಂದವಳು... - 24

ಅಧ್ಯಾಯ:24 ಗೆದ್ದ ಪ್ರೀತಿ.. ಶುರುವಾದ ಹೊಸ ಆಟ


ಎಲ್ಲರ ಊಟ ಮುಗಿದ ತಕ್ಷಣ ಸ್ವಲ್ಪ ಹೊತ್ತು ಕಾಲ ಕಳೆದ ನಂತರ ಮೋಹನ್ ರಾವ್ ಫ್ಯಾಮಿಲಿ ಹೊರಡಲು ಸಿದ್ಧರಾಗುತ್ತಾರೆ.


ಮೋಹನ್ ರಾವ್ ಶಶಿಧರ್ ಅವರ ಕಡೆಗೆ ನೋಡುತ್ತಾ,

“ಶಶಿಧರ್ ಅವರೇ ಅದಷ್ಟು ಬೇಗ ರೋಹನ್ ಹಾಗೂ ಜಾನು ಮದುವೆ ಮಾಡೋಣ ನಂತರ ನಿಮ್ಮ ಸೂರ್ಯ ಹಾಗೂ ಅಂಬ್ರುತಾ ಮದುವೆ ಏನಂತೀರಾ” ಎಂದು ಕೇಳಿದರು.

ಶೇಖರ್ ಸ್ವಲ್ಪ ಸಂಕೋಚದಿಂದ,

“ಕ್ಷಮಿಸಿ.. ನಮ್ಮ ಜಾನು ಎಜುಕೇಷನ್ ಕಂಪ್ಲೀಟ್ ಆಗೋಕೆ ಇನ್ನೂ ಸ್ವಲ್ಪ ಸಮಯ ಬೇಕು.. ಅದಕ್ಕೆ ನೀವು, ಸ್ವಲ್ಪ ಸಮಯ ಕೊಟ್ಟರೆ ಒಳ್ಳೇದು ಅವಳು ಇಂಡಿಯಾ ಗೆ ಬಂದ ತಕ್ಷಣ ಮುಹೂರ್ತ ಫಿಕ್ಸ್ ಮಾಡೋಣ ಏನಂತೀರಾ”?

ಎಂದು ಹೇಳಿದರು.

ಅದಕ್ಕೆ ಮೋಹನ್ ರಾವ್ ಹಾಗೂ ಅವರ ಫ್ಯಾಮಿಲಿ ಸಮ್ಮತಿಯನ್ನು ನೀಡಿದರು.

ಲಕ್ಕಿ ಅಜ್ಜಿ ಕೂಡ,

“ಯಾವ್ದಕ್ಕೂ ನಮ್ಮ ಮನೆ ಪುರೋಹಿತರಿಗೆ ಕೇಳಿ.. ನಾಲ್ವರ ಜಾತಕವನ್ನು ತೋರಿಸಿ ನಂತರ ಒಳ್ಳೆ ಮುಹೂರ್ತ ಫಿಕ್ಸ್ ಮಾಡಿದರಾಯಿತು” ಎಂದು ಹೇಳಿದರು.

ಮನೆಯ ತುಂಬೆಲ್ಲ ಹಬ್ಬದ ವಾತಾವರಣ.

ಸಂಭ್ರಮ, ನಗು, ನಿರೀಕ್ಷೆ — ಎಲ್ಲವೂ ಗಾಳಿಯಲ್ಲಿ ತೇಲಿದವು.

ಅಷ್ಟರಲ್ಲಿ ವೃಂದಾ ಮತ್ತು ರಮ್ಯಾ ಅಂಬ್ರುತಾಳ ಕೈ ಹಿಡಿದುಕೊಂಡು ಅವಳನ್ನು ಹೊರಗೆ ಕರೆದುಕೊಂಡು ಬಂದರು. ಇಷ್ಟು ಹೊತ್ತು ಒಳಗಿದ್ದ ಅಂಬ್ರುತಾಳಿಗೆ ಹೊರಗಡೆ ಏನಾಗುತ್ತಿದೆ ಎಂಬುದರ ಅರಿವೇ ಇರಲಿಲ್ಲ.

ಅವಳು ಮುಂದೆ ಬಂದು ನಿಂತ ಕ್ಷಣ, ಮನೆಯ ಸುತ್ತಲೂ ಇರುವ ಎಲ್ಲರ ಕಣ್ಣುಗಳು ಅವಳ ಮೇಲೆ ನಿಂತವು.

ಅವಳು ಬೆರಗಿನಿಂದಲೇ ಸುತ್ತಲೂ ನೋಡಿದಳು.

ಯಾರೂ ಏನೂ ಹೇಳಲೇ ಇಲ್ಲ.

ಆದರೆ ಆ ನಿಶ್ಶಬ್ದವೇ ಅವಳ ಪಾದಗಳನ್ನು ಒಂದೇ ಸ್ಥಳಕ್ಕೆ ಬೇರ್ಪಟ್ಟಂತೆ ನಿಲ್ಲಿಸಿತು.

ಅವಳ ಹೃದಯವು ತೀವ್ರವಾಗಿ ತಡಕಾಡುತ್ತಿದ್ದಂತೆ ಅನ್ನಿಸಿತು. ಆ ಗಂಭೀರ ಮೌನದಲ್ಲಿ ಆಕೆಯ ಉಸಿರಾಟವೂ ಸ್ವಲ್ಪ ಗಾಬರಿಯಾಗಿತ್ತು.

ಅವಳ ಮುಖದ ಮೇಲೆ ಸಡಿಲ ನಗು ಮೂಡಬೇಕಾದ ಜಾಗದಲ್ಲಿ ನಿರಾಸೆ ಮತ್ತು ಮುಜುಗರ ಬೆರೆತಿತ್ತು.

ಅವಳ ತುಟಿಗಳ ತುದಿಯೂ ಕಂಪಿಸುತ್ತಿತ್ತು.

ಎದೆಯೊಳಗಿನ ಆಶ್ಚರ್ಯ ಮತ್ತು ಮುಜುಗರದ ದಣಿವಿನಿಂದ ಅವಳ ಮುಖ ಹದವಾದ ಹೂವಿನಂತೆ ಕೆಂಪಾಗಿತ್ತು.

ಅಂಬ್ರುತಾಳ ಮುಖವನ್ನು ನೋಡುತ್ತಿದ್ದಂತೆಯೇ ಸರಳಾಳಿಗೆ ಅವಳಿಗಾದ ನೋವು ಅರ್ಥವಾಯಿತು.

“ನೋಡಮ್ಮ ಅಂಬ್ರುತಾ ನೀನಿನ್ನು ದುಃಖ ಪಡೋ ಯಾವುದೇ ಅವಶ್ಯಕತೆ ಇಲ್ಲಾ... ನಿನ್ನ ಸೂರ್ಯನ ಜೊತೇನೆ ನಿನ್ನ ಮದುವೆ ಆಗುತ್ತೆ..”

ಆ ಮಾತು ಕೇಳಿದ ತಕ್ಷಣ ಅಂಬ್ರುತಾಳ ಕಾಲುಗಳು ನೆಲದ ಮೇಲೆ ನಿಲ್ಲದಂತಾಯಿತು.

“ಏನು?? ಇದು ನಿಜಾನಾ? ಅಪ್ಪ, ದೊಡ್ಡಪ್ಪ...”

ಅವಳ ಕಣ್ಣುಗಳು ಸಂತೋಷದಿಂದ ಅರಳಿದವು.

ಆಗ ಶಶಿಧರ್ ಅಂಬ್ರುತಾಳ ಹತ್ತಿರ ಬಂದು,

“ನೋಡು ಮಗಳೇ ನನ್ನಿಂದ ನಿನಗೆ ತುಂಬಾ ನೋವಾಗಿದೆ ಅಂತಾ ಗೊತ್ತು. ದಯವಿಟ್ಟು ನನ್ನನು ಕ್ಷಮಿಸು ಕಂದಾ”

ಎಂದು ಅವಳ ತಲೆಯನ್ನು ಸವರುತ್ತಾ ಕೇಳಿದರು.

ಅಂಬ್ರುತಾಳ ಸಂತೋಷಕ್ಕೆ ಪಾರವೇ ಇಲ್ಲದಂತಾಯಿತು.

ಅವಳ ಕಣ್ಣುಗಳಲ್ಲಿ ಸಂತೋಷವು ಕಣ್ಣೀರಿನ ರೂಪದಲ್ಲಿ ಬರತೊಡಗಿತು.

“ದೊಡ್ಡಪ್ಪ...”

ಎಂದು ಹೇಳುತ್ತಾ ಗಟ್ಟಿಯಾಗಿ ಅವಳ ದೊಡ್ಡಪ್ಪನನ್ನು ತಬ್ಬಿಕೊಂಡಳು.

“ಥ್ಯಾಂಕ್ ಯೂ ಸೋ ಮಚ್ ದೊಡ್ಡಪ್ಪ, ನಂಗೆ ಎಷ್ಟು ಖುಷಿ ಆಗ್ತಿದೆ ಅಂದ್ರೆ ಮಾತೇ ಬರ್ತಿಲ್ಲ.”

ಅಲ್ಲೇ ನಿಂತಿದ್ದ ಸುಧಾಕರ್ ಅವರ ಕಣ್ಣುಗಳಲ್ಲೂ ನೋವು ಮೂಡಿತು. ತಾನು ಇಷ್ಟು ದಿನ ಮಗಳೊಂದಿಗೆ ನಡೆದುಕೊಂಡ ರೀತಿ ಅವರ ಮನಸ್ಸಿಗೆ ಹಿಂಸೆಯನ್ನುಂಟು ಮಾಡಿತ್ತು.

ಅವರು ಕೂಡ ಅಂಬ್ರುತಾಳ ಬಳಿ ಬಂದು,

“ಮಗಳೇ ಈ ಅಪ್ಪನನ್ನು ಸಹ ಕ್ಷಮಿಸುತ್ತೀಯಾ ಅಲ್ವಾ..”

ಎಂದು ಕೇಳಿದರು.

ಅಂಬ್ರುತಾ ತಕ್ಷಣ,

“ಅಪ್ಪ.. ಹಾಗೆಲ್ಲ ಮಾತಾಡ್ಬೇಡಿ ನಂಗೆ ಹಿಂಸೆ ಆಗುತ್ತೆ...”

ಎಂದು ಹೇಳಿದಳು.

ಅಂಬ್ರುತಾಳ ಸಂತೋಷವನ್ನು ನೋಡಿ ಅಲ್ಲಿದ್ದ ಪ್ರತಿಯೊಬ್ಬರ ಮುಖದಲ್ಲೂ ಸಮಾಧಾನ ಮತ್ತು ನೆಮ್ಮದಿ ಮೂಡಿತು.

ಆಗ ಲಕ್ಕಿ ಅಜ್ಜಿ ಅವಳನ್ನು ಛೇಡಿಸುತ್ತಾ,

“ಅಮ್ಮು ಅಂತು ಇಂತೂ ನಿನ್ನ ಪ್ರೀತಿನೇ ಗೆದ್ದಿತು..”

ಎಂದರು.

ಅಂಬ್ರುತಾಳ ಮುಖವೆಲ್ಲ ಕೆಂಪೇರಿತು.

ಅವಳು ನಿಧಾನವಾಗಿ ಸೂರ್ಯನತ್ತ ಮುಖ ಎತ್ತಿ ನೋಡಿದಳು.

ಆದರೆ ಅವಳ ಮನಸ್ಸು ತಡೆಯಲಿಲ್ಲ.

ಅವಳು ನೇರವಾಗಿ ಅವನೆಡೆಗೆ ಹೋಗಿ,

“ಸೂರ್ಯ...”

ಎಂದು ಹೇಳುತ್ತಾ ಗಟ್ಟಿಯಾಗಿ ತಬ್ಬಿಕೊಂಡಳು.

ಆ ಕ್ಷಣ ಅಲ್ಲಿದ್ದ ಎಲ್ಲರಿಗೂ ಆಶ್ಚರ್ಯ.

ಮಾಧವ್ ತಕ್ಷಣ ನಗುತ್ತಾ,

“ಅಬ್ಬಾ! ಅದೇನು ಪ್ರೀತಿ.. ಅಮ್ಮು ಮನೆಯವರೆಲ್ಲ ಇಲ್ಲೇ ಇದೀವಿ”

ಎಂದು ರೇಗಿಸಲು ಶುರು ಮಾಡಿದ.

ಅಂಬ್ರುತಾಳ ಮುಖವೆಲ್ಲ ನಾಚಿಕೆಯಿಂದ ಕೆಂಪಾಗಿತ್ತು.

ಸೂರ್ಯ ಮತ್ತು ಅಂಬ್ರುತಾ ಇಬ್ಬರೂ ಒಬ್ಬರಿಗೊಬ್ಬರು ಕಣ್ಣುಗಳಲ್ಲೇ ಪ್ರೀತಿಯ ನೋಟವನ್ನು ಬೀರುತ್ತಿದ್ದರು.

ಲಕ್ಕಿ ಅಜ್ಜಿ ಅವರಿಬ್ಬರನ್ನು ಒಟ್ಟಿಗೆ ನೋಡಿ,

“ನನ್ನ ಮೊಮ್ಮಕ್ಕಳಿಗೆ ಯಾರ ದೃಷ್ಟಿನೂ ಬೀಳದೆ ಇರಲಿ”

ಎಂದು ಹೇಳುತ್ತಾ ಅವರ ದೃಷ್ಟಿ ತೆಗೆದರು.

ಮೋಹನ್ ರಾವ್ ಎಲ್ಲರತ್ತ ನೋಡುತ್ತಾ,

“ಸರಿ ಬೀಗರೆ ನಾವಿನ್ನೂ ಹೋರಡ್ತೀವಿ...”

ಎಂದರು.

ಮೋಹನ್ ರಾವ್ ಮತ್ತು ಅವರ ಫ್ಯಾಮಿಲಿ ಎಲ್ಲರಿಗೂ ವಿದಾಯ ಹೇಳಿ ಅಲ್ಲಿಂದ ಹೊರಟರು.

---

ಮೋಹನ್ ರಾವ್ ತಮ್ಮ ಮನೆಗೆ ಬರುತ್ತಿದ್ದ ಹಾಗೆ,

“ರೋಹನ್.. ರೋಹನ್..”

ಎಂದು ಸ್ವಲ್ಪ ಗಡಸು ಧ್ವನಿಯಲ್ಲಿ ಕರೆದರು.

ಮೆಟ್ಟಿಲುಗಳನ್ನು ಇಳಿದು ಕೆಳಗೆ ಬಂದ ರೋಹನ್,

“ಏನಾಯ್ತು ಅಪ್ಪ?...”

ಎಂದು ಕೇಳಿದ.

ಮೋಹನ್ ರಾವ್ ಸ್ವಲ್ಪ ಕೋಪದಿಂದ ಅವನತ್ತ ನೋಡುತ್ತಾ,

“ರೂಮ್ ಗೆ ನಡಿ. ನಾನು ನಿನ್ನ ಹತ್ರ ಮಾತಾಡಬೇಕು...”

ಎಂದರು.

ಪವಿತ್ರಾ ತಕ್ಷಣ,

“ರಿ.. ಸ್ವಲ್ಪ ಸಮಾಧಾನದಿಂದ ಇರಿ..”

ಎಂದು ಹೇಳಿದಳು.

ಮೋಹನ್ ಅವಳಿಗೆ ಚೂಪಾದ ನೋಟ ಬೀರುತ್ತಾ,

“ನೀನು ಸುಮ್ನೆ ನಿನ್ನ ಕೆಲಸ ಏನಿದೆಯೋ ಅದನ್ನ ಮಾಡು..”

ಎಂದರು.

ಪವಿತ್ರಾ ಹಾಗೂ ಸರಳಾ ಒಬ್ಬರಿಗೊಬ್ಬರು ಮುಖವನ್ನು ನೋಡಿಕೊಂಡು ಒಳಗಡೆ ಹೋದರು.

ಇನ್ನು ಮೋಹನ್ ರೋಹನ್‌ನನ್ನು ರೂಮ್‌ಗೆ ಕರೆದುಕೊಂಡು ಬಂದರು.

“ಲೋ ನಿಂಗೇನಾದ್ರೂ ಬುದ್ಧಿ ಇದೆಯಾ? ಆತರ ಅರ್ಧಕ್ಕೆ ಮನೆ ಬಿಟ್ಟು ಬಂದಿದಿಯಾ...”

ಎಂದು ಕೋಪದಿಂದ ಕೇಳಿದರು.

ರೋಹನ್ ತಕ್ಷಣ,

“ಸುಮ್ನೆ ಇರಿ ಅಪ್ಪ ಅವರು ಅಷ್ಟೆಲ್ಲಾ ಅವಮಾನ ಮಾಡ್ತಿದ್ರೆ ಅಲ್ಲೇ ಇರ್ಬೇಕಾ...”

ಎಂದನು.

“ಅಲ್ವೋ... ಇನ್ನು ಮುಂದೆ ಹೇಳುವಷ್ಟರಲ್ಲಿ—”

ಅಷ್ಟರಲ್ಲಿ ಮೋಹನ್ ರಾವ್ ಅವರ ಫೋನ್ ರಿಂಗಾಗಲು ಶುರು ಆಯಿತು.

ಫೋನ್ ಸ್ಕ್ರೀನ್ ಮೇಲೆ ಕಾಣಿಸಿದ ಹೆಸರನ್ನು ನೋಡುತ್ತಿದ್ದಂತೆಯೇ ಅವರ ಮುಖದಲ್ಲಿ ಒಂದು ರೀತಿಯ ಸಂತಸ ಮೂಡಿತು.

ಅವರು ತಕ್ಷಣ ಕಾಲ್ ಪಿಕ್ ಮಾಡಿ,

“ಹಲೋ...”

ಎಂದರು.

ರೋಹನ್ ಕುತೂಹಲದಿಂದ,

“ಯಾರು? ಪೂರ್ವಿನಾ?”

ಎಂದು ಕೇಳಿದ.

ಮೋಹನ್ ರಾವ್ ತಲೆಯಾಡಿಸುತ್ತಾ ಹೌದು ಎಂಬಂತೆ ಸೂಚಿಸಿದರು.

ಅತ್ತ ಕಡೆಯಿಂದ ಪೂರ್ವಿಯ ಗಾಬರಿಯ ಧ್ವನಿ ಕೇಳಿಸಿತು.

“ಹಲೋ ಅಂಕಲ್ ಏನಾಯ್ತು? ಎಲ್ಲಾ ಓಕೆ ನಾ, ನಂಗೆ ಎಷ್ಟು ಟೆನ್ಷನ್ ಆಗ್ತಿದೆ ಗೊತ್ತಾ ಪ್ಲೀಸ್ ಬೇಗ ಹೇಳಿ ಅಲ್ಲಿ ಏನು ನಡೀತು ಅಂತ ಎಲ್ಲಾ ನಮ್ಮ ಪ್ಲಾನ್ ಪ್ರಕಾರನೇ ಆಯ್ತು ತಾನೇ?”

ಮೋಹನ್ ರಾವ್ ಅವಳನ್ನು ಸಮಾಧಾನಪಡಿಸುತ್ತಾ,

“ಕೂಲ್ ಡೌನ್ ಪೂರ್ವಿ ನಿಜ ಹೇಳ್ಬೇಕು ಅಂದ್ರೆ ಯಾವುದು ನಮ್ಮ ಪ್ಲಾನ್ ಪ್ರಕಾರ ಆಗಿಲ್ಲ.. ಆದರೆ”

ಎಂದರು.

ಆ ಮಾತು ಕೇಳಿದ ತಕ್ಷಣ ಪೂರ್ವಿಗೆ ಆಕಾಶವೇ ತಲೆ ಮೇಲೆ ಬಿದ್ದಂತಾಯಿತು.

ತಾನು ಕುಳಿತಿದ್ದ ಜಾಗದಿಂದ ಎದ್ದು ನಿಂತಳು.

“ಏನು? ನಮ್ಮ ಪ್ಲಾನ್ ಪ್ರಕಾರ ಏನೂ ನಡೀಲಿಲ್ವಾ ಅಂದ್ರೆ...”

ಅವಳ ಹೃದಯದ ಬಡಿತ ಜೋರಾಗಿ ಹೊಡೆದುಕೊಳ್ಳತೊಡಗಿತು.

“ಅಂಕಲ್ ಪ್ಲೀಸ್ ಏನಾಯ್ತು ಅಂತ ಹೇಳಿ ನಂಗೆ ತುಂಬಾ ಟೆನ್ಷನ್ ಆಗ್ತಿದೆ...”

ಎಂದು ಗಾಬರಿಯಿಂದ ಕೇಳಿದಳು.

ಮೋಹನ್ ರಾವ್,

“ಪೂರ್ವಿ ಒಂದು ಸ್ವಲ್ಪ ನನ್ನ ಮಾತು ಕೆಳಮ್ಮ...”

ಎಂದರು.

ಆದರೆ ಪೂರ್ವಿ ಮಧ್ಯದಲ್ಲೇ,

“ಇಲ್ಲ ಅಂಕಲ್ ನಾನೇ ನಿಮ್ಮ ಮನೆಗೆ ಬರ್ತೀನಿ ಅಲ್ಲೇ ಎಲ್ಲಾ ಮಾತಾಡೋಣ”

ಎಂದು ಹೇಳಿದಳು.

“ಸರಿ ಆಯ್ತು ಬೇಗ ಬಾ ವೇಟ್ ಮಾಡ್ತೀರ್ತಿವಿ”

ಎಂದು ಮೋಹನ್ ರಾವ್ ಹೇಳಿ ಕಾಲ್ ಕಟ್ ಮಾಡಿದರು.

---

ಸ್ವಲ್ಪ ಸಮಯದ ನಂತರ ಪೂರ್ವಿ ಮನೆಗೆ ಬಂದು ರೀಚ್ ಆದಳು.

ಒಳಗೆ ಬರುತ್ತಿದ್ದ ಹಾಗೆ,

“ಅಂಕಲ್.. ಅಂಕಲ್..”

ಎಂದು ಕರೆಯಲು ಶುರು ಮಾಡಿದಳು.

ಕಿಚನ್ ಒಳಗಿದ್ದ ಸರಳಾ ಹೊರಗೆ ಬಂದು ನೋಡುತ್ತಾ,

“ಅರೆ ಪೂರ್ವಿ.. ಯಾವಾಗ ಬಂದೆ..”

ಎಂದು ಕೇಳಿದರು.

ಪೂರ್ವಿ ಆತುರದಿಂದ,

“ಅಜ್ಜಿ ಅಂಕಲ್ ಎಲ್ಲಿ?”

ಎಂದು ಕೇಳಿದಳು.

“ಮೇಲೆ ರೂಮ್ ನಲ್ಲಿ ಇರ್ಬೇಕು. ಆದರೆ ಯಾಕೆ ನೀನು ಇಷ್ಟು ಗಾಬರಿ ಆಗಿದ್ದೀಯಾ? ಹುಷಾರಾಗಿ ಇದಿಯಾ ತಾನೇ?”

ಎಂದು ಸರಳಾ ಕೇಳಿದರು.

“ಅಯ್ಯೋ.. ಅಜ್ಜಿ ನಾನು ನಿಮ್ಮ ಹತ್ರ ಆಮೇಲೆ ಮಾತಾಡ್ತೀನಿ”

ಎಂದು ಹೇಳಿ ಪೂರ್ವಿ ನೇರವಾಗಿ ಮೇಲಿನ ರೂಮ್‌ಗೆ ಹೋದಳು.

ಡೋರ್ ಓಪನ್ ಮಾಡಿದಾಗ ಒಳಗೆ ರೋಹನ್ ಮತ್ತು ಮೋಹನ್ ರಾವ್ ಇಬ್ಬರೂ ಒಬ್ಬರಿಗೊಬ್ಬರು ಮಾತನಾಡುತ್ತಾ ಕುಳಿತಿದ್ದರು.

ಮೋಹನ್ ರಾವ್ ಅವಳನ್ನು ನೋಡುತ್ತಾ ಸಣ್ಣ ಮುಗುಳ್ನಗೆ ಬೀರಿದರು.

ಪೂರ್ವಿ ಆತುರದಿಂದ,

“ಅಂಕಲ್ ನಮ್ಮ ಪ್ಲಾನ್ ಯಾಕೆ ಫ್ಲಾಪ್ ಆಯ್ತು.. ಅಲ್ಲಿ ಏನು ನಡೀತು ಬೇಗ ಹೇಳಿ ಪ್ಲೀಸ್..”

ಎಂದು ಕೇಳಿದಳು.

ಮೋಹನ್ ರಾವ್ ಅವಳನ್ನು ಕುಳಿತುಕೊಳ್ಳುವಂತೆ ಸೂಚಿಸುತ್ತಾ,

“ಪೂರ್ವಿ ಮೊದಲು ನೀನು ಸಮಾಧಾನದಿಂದ ಇರು. ಇಲ್ಲಿ ಕುಳಿತುಕೋ ಬಾ ಮೊದಲು..”

ಎಂದರು.

ರೋಹನ್ ಕೂಡ,

“ನೀನು ಅಂದುಕೊಂಡ ತರ ಏನು ನಡೆದಿಲ್ವೆ... ಅಪ್ಪ ಹೇಳಿ ಅವಳಿಗೆ”

ಎಂದನು.

ಮೋಹನ್ ರಾವ್ ಅವನತ್ತ ಕೋಪದಿಂದ ನೋಡುತ್ತಾ,

“ನೀನು ಸೆಮ್ನಿರೋ ಕತ್ತೆ...”

ಎಂದು ಗದರಿಸಿ, ಮತ್ತೆ ಪೂರ್ವಿಯತ್ತ ತಿರುಗಿದರು.

“ನೋಡು ಪೂರ್ವಿ ನಾವು ಅಂದುಕೊಂಡಿರೋತರ ಪ್ಲಾನ್ ನಡೆದಿಲ್ಲ ಆದ್ರೆ.. ಪ್ಲಾನ್ ಸಕ್ಸಸ್ ಆಗಿದೆ”

ಎಂದರು.

ಅಲ್ಲಿದ್ದ ರೋಹನ್ ಮತ್ತು ಪೂರ್ವಿ ಇಬ್ಬರಿಗೂ ಶಾಕ್ ಆಯಿತು.

“ಅಂಕಲ್ ನೀವು ಏನ್ ಹೇಳ್ತಿದ್ದೀರಾ?”

ಎಂದು ಇಬ್ಬರೂ ಆಶ್ಚರ್ಯದಿಂದ ಕೇಳಿದರು.

ಮೋಹನ್ ರಾವ್ ಕಿರುನಗೆಯನ್ನು ಬೀರುತ್ತಾ,

“ಹೌದು ಪೂರ್ವಿ ಈ ವಿಷಯ ಮೊದ್ಲು ನಿಂಗೆ ಹೇಳ್ಬೇಕು ಅಂತ ರೋಹನ್ ಗೆ ಸಹ ಹೇಳ್ದೆ. ವೇಟ್ ಮಾಡ್ತಿದ್ದೆ...”

ಎಂದರು.

ರೋಹನ್ ಗೊಂದಲದಿಂದ,

“ಅಪ್ಪ ಎನ್ ಹೇಳ್ತಿದೀರಾ? ಅದು ಹೇಗೆ ಸಾಧ್ಯ? ಅವರೇ ಈ ಮದುವೆ ನಡೆಯಲ್ಲ ಅಂತ ಹೇಳ್ತಿದ್ರು ಆದ್ರೆ ಈಗ ನೀನು.. ಅಂದ್ರೆ ಅವರು...”

ಎಂದು ಕೇಳಿದ.

“ಇರಿ.. ಎಲ್ಲಾ ವಿಷಯನು ಹೇಳ್ತೀನಿ..”

ಎಂದು ಮೋಹನ್ ರಾವ್ ಅವನ ಮಾತನ್ನು ನಿಲ್ಲಿಸಿದರು.

“ನೋಡು ಪೂರ್ವಿ ನಮ್ಮ ಪ್ಲಾನ್ ಆಗಿದ್ದು ಅಂಬ್ರುತಾನಾ ನಮ್ಮ ಮನೆ ಸೊಸೆ ಮಾಡ್ಕೋಬೇಕು ಅಂತಾ ಅಲ್ವಾ..”

ಪೂರ್ವಿ ತಕ್ಷಣ ಹೌದು ಎಂಬಂತೆ ತಲೆ ಆಡಿಸಿದಳು.

“ಆದರೆ ಆ ಅಂಬ್ರುತಾ ಸೂರ್ಯ ಅನ್ನುವವನನ್ನ ಲವ್ ಮಾಡ್ತಿದಾಳೆ ಅಂತ ನಮ್ಗೆ ಕೊಟ್ಟಿರೋ ಮಾತನ್ನು ಸಹ ಮುರಿದಾ ಆ ಶಶಿಧರ್..”

ಎಂದು ಮೋಹನ್ ರಾವ್ ಹೇಳಿದರು.

ಪೂರ್ವಿ ಗಾಬರಿಯಿಂದ,

“ಅಯ್ಯೋ.. ಆದ್ರೆ ಅಂಕಲ್...”

ಎಂದಳು.

“ಹಾ! ಇರು.. ಇರು.. ಇನ್ನೂ ಇದೇ ಮುಂದೆ.. ಅದೇ ಸಮಯಕ್ಕೆ ಈ ದಡ್ಡ ಅಲ್ಲಿಂದ ಹೊರಟು ಬಂದ. ನಂಗಂತೂ ಏನ್ಮಾಡಬೇಕು ಅಂತ ಗೊತ್ತಾಗ್ತಾನೆ ಇರ್ಲಿಲ್ಲ..”

ಎಂದು ರೋಹನ್‌ನತ್ತ ನೋಡುತ್ತಾ ಹೇಳಿದರು.

“ಆದ್ರೆ ನಮ್ಮ ಅದೃಷ್ಟ ಚೆನ್ನಾಗಿತ್ತು. ಶಶಿಧರ್ ತಂಗಿ ಗಂಡ ಶೇಖರ್ ಇದಾನಲ್ಲ... ಪಾಪ ಬಕ್ರಾ ನನ್ಮಗ. ಅವನ ಮಾವ ಕೊಟ್ಟಿರೋ ಮಾತು ಉಳಿಸೋಕೆ ತನ್ನ ಮಗಳನ್ನೇ ನನ್ನ ಮನೆಗೆ ಕೊಡೋಕೆ ರೆಡೀ ಆದಾ.”

ಮೋಹನ್ ರಾವ್ ಅವರ ಮುಖದಲ್ಲಿ ಕ್ರೂರತೆಯಿಂದ ಕೂಡಿದ ನಗು ಕೋಣೆಯ ತುಂಬೆಲ್ಲಾ ರಾರಾಜಿಸಿತು.

ಪೂರ್ವಿ ಸ್ವಲ್ಪ ಯೋಚಿಸುತ್ತಾ,

“ಅಂದ್ರೆ ಆ ಸೂರ್ಯನ ತಂಗಿ ಅಲ್ವಾ ಅಂಕಲ್? ಆದ್ರೆ ಅದು ಅವಳು ಹೇಗೆ ಒಪ್ಗೊಂಡ್ಲು...”

ಎಂದು ಕೇಳಿದಳು.

“ಹೌದು.. ಜಾಹ್ನವಿ ಅಂತಾ ನಂಗೂ ಅದೆ ಭಯ ಇತ್ತು. ಎಲ್ಲಿ ಅವಳೂ ಒಪ್ಗೊಳಲ್ವೋ ಅಂತ. ನಮ್ಮ ಅದೃಷ್ಟ ಅವಳು ಅವರ ಅಪ್ಪ ಹೇಳಿದ ಒಂದೇ ಒಂದು ಮಾತಿಗೆ ಒಪ್ಗೊಂಡ್ಬಿಟ್ಲು.”

ಎಂದು ಮೋಹನ್ ರಾವ್ ಹೇಳಿದರು.

ಪೂರ್ವಿಯ ಮುಖದಲ್ಲಿ ನೆಮ್ಮದಿಯ ನಗು ಮೂಡಿತು.

“ವಾವ್! ನಂಗೆ ನಂಬೋಕೆ ಆಗ್ತಿಲ್ಲ ಅಂಕಲ್. ನಂಗೆ ಎಷ್ಟು ಭಯ ಆಗ್ತಿತ್ತು ಗೊತ್ತಾ.. ಈಗ ನಂಗೆ ಸಮಾಧಾನ ಆಗ್ತಿದೆ.”

ಮೋಹನ್ ರಾವ್ ಕೂಡ ಕಿರುನಗೆ ಬೀರುತ್ತಾ,

“ನಿಜ ಅಂತೂ ನಮ್ಮ ಗಾಳಕ್ಕೆ ಆ ಶಶಿಧರ್ ಫ್ಯಾಮಿಲಿ ಬಿತ್ತು... ನಿನ್ನ ಜೆಕೆ ನಿಂಗೆ ಸಿಗೋ ಸಮಯ ಹತ್ರ ಬಂದಾಯ್ತು.”

ಎಂದರು.

ಪೂರ್ವಿಯ ಕಣ್ಣುಗಳಲ್ಲಿ ಸಂತೋಷ ಹೊಳೆಯಿತು.

“ಅಂಕಲ್.. ಥ್ಯಾಂಕ್ ಯು ಸೋ ಮಚ್. ಇದೆಲ್ಲಾ ಆಗ್ತಿರೋದು ನಿಮ್ಮ ಸಪೋರ್ಟ್ ಇಂದಾನೆ.”

ಎಂದು ಹೇಳಿದಳು.

ಆದರೆ ರೋಹನ್ ಮಾತ್ರ ಆ ಮಾತುಗಳನ್ನು ಕೇಳುತ್ತಾ ಅಸಮಾಧಾನದಿಂದ ಕುಳಿತಿದ್ದ.

“ಏನೂ ಆಗೋಲ್ಲ.. ನಾನು ಈ ಮದುವೆ ಆಗೋಕೆ ರೆಡಿ ಇಲ್ಲಾ... ನೋಡಿ ಸುಮ್ನೆ ನಂಗೆ ಬಲವಂತಾ ಮಾಡ್ಬೇಡಿ. ನೋಡು ಪೂರ್ವಿ ನಿಂಗೂ ಗೊತ್ತಲ್ವಾ ನನಗೆ ಈ ಮದುವೆ ಅದು.. ಎಲ್ಲಾ ಇಷ್ಟಾ ಆಗೋಲ್ಲ ಅಂತ..”

ಎಂದು ಸ್ಪಷ್ಟವಾಗಿ ಹೇಳಿದ.

ಪೂರ್ವಿ ಅವನ ಹತ್ತಿರ ಬಂದು,

“ಆದ್ರೆ ಮುಂಚೆ ನೀನು ಅಂಬ್ರುತಾಗೆ ಮದುವೆ ಆಗಿ ಸ್ವಲ್ಪ ದಿನ ಆದ್ಮೇಲೆ ಡಿವೋರ್ಸ್ ಮಾಡು ಅಂತಾ ಹೇಳಿದಕ್ಕೆ ಓಕೆ ಅಂತಾ ಹೇಳಿದ್ದೆ ಅಲ್ವಾ.. ಇದು ಹಾಗೇನೇ ಅವಳನ್ನ ಮದುವೆ ಆಗು. ಯಾವಾಗ ಜೆಕೆ ನನ್ನವನು ಆಗ್ತಾನೋ ಆಮೇಲೆ ಅವಳಿಗೆ ಡಿವೋರ್ಸ್ ಆದ್ರು ಕೊಡು ಏನಾದ್ರೂ ಮಾಡ್ಕೋ.. ನಂಗೆ ಯಾವ ಪ್ರಾಬ್ಲಮ್ ಕೂಡ ಇಲ್ಲಾ, ಬಟ್ ಪ್ಲೀಸ್ ನನ್ನ ಜೆಕೆ ನಾ ಪಡಿಯೋಕೆ ನಿನ್ನ ಸಹಾಯ ನಂಗೆ ಬೇಕೇ ಬೇಕು. ರೋಹನ್ ಪ್ಲೀಸ್...”

ಎಂದು ಬೇಡಿಕೊಂಡಳು.

ರೋಹನ್ ತಕ್ಷಣ ತಲೆಯಾಡಿಸುತ್ತಾ,

“ನೀವು ನನ್ನ ಮೊದ್ಲು ಬಲವಂತವಾಗಿ ಒಪ್ಸಿರಬಹುದು ಆದ್ರೆ ಈಗ ಖಂಡಿತಾ ನಾನು ಇದಕ್ಕೆಲ್ಲ ಒಪ್ಗೊಳಲ್ಲ... ನನ್ನ ಲೈಫ್ ಏನಿದ್ರೂ ಚಿಲ್ ಮಾಡೋದು, ಎಂಜಾಯ್ ಮಾಡೋದು. ಈ ಮದುವೆ ಎಲ್ಲಾ ನಂಗೆ ಸೂಟ್ ಆಗೋಲ್ಲ.”

ಎಂದನು.

ಮೋಹನ್ ರಾವ್ ಅವನತ್ತ ನೋಡುತ್ತಾ,

“ಏನೋ ಹೀಗೆ ಹೇಳ್ತಿದ್ದಿಯಾ, ಪಾಪ ಆ ಹುಡುಗಿ ನಮ್ಮನ್ನೇ ನಂಬಿಕೊಂಡು ಬಂದಿದ್ದಾಳೆ. ಅದು ಅಲ್ಲೇ ಅವಳು ನನ್ನ ಪ್ರಾಣ ಸ್ನೇಹಿತನ ಮಗಳು.”

ಎಂದು ಹೇಳಿದರು.

ಆದರೆ ಅವರ ಮಾತಿನ ಹಿಂದೆ ಅಡಗಿದ್ದ ಸ್ವಾರ್ಥ ಬೇರೆಯದೇ ಆಗಿತ್ತು.

ಪೂರ್ವಿಯ ತಂದೆ ಮತ್ತು ಮೋಹನ್ ರಾವ್ ಇಬ್ಬರೂ ಪ್ರಾಣ ಸ್ನೇಹಿತರು.

ಪೂರ್ವಿಗೆ ಜೆಕೆಯನ್ನು ತನ್ನದಾಗಿಸಿಕೊಳ್ಳಬೇಕು ಎಂಬ ಹುಚ್ಚು ಆಸೆ. ಆ ಆಸೆಗೆ ಮೋಹನ್ ರಾವ್ ಕೂಡ ಸಾಥ್ ನೀಡಿದ್ದರು.

ಅದರ ಜೊತೆಗೆ ಶಶಿಧರ್ ಫ್ಯಾಮಿಲಿ ಸಮಾಜದಲ್ಲಿ ಪಡೆದಿದ್ದ ಒಳ್ಳೆಯ ಹೆಸರು, ಬಿಸಿನೆಸ್ ಕ್ಷೇತ್ರದಲ್ಲಿ ಗಳಿಸಿದ್ದ ಕೀರ್ತಿ — ಇವೆಲ್ಲವೂ ಮೋಹನ್ ರಾವ್ ಅವರ ಮನಸ್ಸಿನಲ್ಲಿ ಅಸೂಯೆಯನ್ನು ಹುಟ್ಟಿಸಿತ್ತು.

ಅವರಿಗಿಂತ ಮುಂದೆ ಹೋಗಬೇಕು ಎಂಬ ಹಠವೂ ಇತ್ತು.

ಹೀಗಾಗಿ ಜೆಕೆ ಫ್ಯಾಮಿಲಿಯೊಂದಿಗೆ ಸಂಬಂಧ ಬೆಳೆಸಿಕೊಂಡು ತಮ್ಮ ಸ್ಥಾನವನ್ನು ಇನ್ನಷ್ಟು ಬಲಪಡಿಸಿಕೊಳ್ಳುವುದು ಅವರ ಮತ್ತೊಂದು ಉದ್ದೇಶವಾಗಿತ್ತು.

ಆದರೆ ಈ ಆಟದಲ್ಲಿ ಅವರು ಮರೆತಿದ್ದ ಒಂದು ವಿಷಯವಿತ್ತು.

ಜೆಕೆಯ ಮನಸ್ಸಿನಲ್ಲಿ ಈಗಾಗಲೇ ಯಾರೋ ಒಬ್ಬಳು ಮೌನವಾಗಿ ತನ್ನ ಸ್ಥಾನವನ್ನು ಪಡೆದುಕೊಂಡಿದ್ದಳು...

ಆ ಸತ್ಯ ಇನ್ನೂ ಯಾರಿಗೂ ತಿಳಿದಿರಲಿಲ್ಲ.

ರೋಹನ್ ಈ ಮದುವೆಗೆ ಒಪ್ಕೊಳ್ತಾನಾ?

ಪೂರ್ವಿಯ ಮುಂದಿನ ಹೆಜ್ಜೆ ಏನಾಗಿರಬಹುದು?

ಇನ್ನೂ ನಮ್ಮ ಹೀರೋ ಜೆಕೆ ಯ ಬಾಳಲ್ಲಿ ಯಾವ ರೀತಿ ತಿರುವುಗಳು ಬರುತ್ತವೆ ಎಂಬುದನ್ನು ಮುಂದಿನ ಸಂಚಿಕೆಗಳಲ್ಲಿ ನೋಡೋಣ....

ಮುಂದುವರೆಯುವುದು....

ನಿಮಗೆ ಈ ಕಥೆ ಇಷ್ಟವಾದಲ್ಲಿ ದಯವಿಟ್ಟು ಕಾಮೆಂಟ್‌ಗಳ ಮೂಲಕ ತಿಳಿಸಿ, ಹಿಂಬಾಲಿಸಿ. ಧನ್ಯವಾದಗಳು 😊