Saffron bath in Kannada Thriller by Saandeep Joshi books and stories PDF | ಕೇಸರಿ ಬಾತ್

Featured Books
  • Rebirth of a Bench - 1

    चैप्टर 1: सपने, जूते और मेरा जेंडर क्राइसिससब कुछ कितना अजीब...

  • हमसफ़र

    बदन पर किसी ठंडी चीज का एहसास पाकर मेरी तंद्रा टूटी। विचारों...

  • सब्र का फल

    _लेखिका: डॉ वंदना शर्मा_---सब्र का फलएक समय की बात है। बिजनौ...

  • परायें हुए अपने

    " ससुराल का बुलावा "                    दोपहर का समय था , घर...

  • श्रापित एक प्रेम कहानी - 84

    आलोक की बात को सुनकर वृन्दा गुस्से से एकांश की और दैखकर कहती...

Categories
Share

ಕೇಸರಿ ಬಾತ್

ಮಂಗಳೂರಿನ ಆ ಹಳೆಯ ಜಂಕ್ಷನ್‌ನಲ್ಲಿರುವ ವಿಷ್ಣು ಭವನ ಹೋಟೆಲ್‌ನಲ್ಲಿ ಕಳೆದ ಹತ್ತು ವರ್ಷಗಳಿಂದ ಒಂದು ಸಂಪ್ರದಾಯ ನಡೆದುಕೊಂಡು ಬಂದಿದೆ. ಸಂಜೆ ಸರಿಯಾಗಿ ಆರು ಗಂಟೆಯಾದರೆ, ಕಿಟಕಿಯ ಪಕ್ಕದ ಮೂರನೇ ನಂಬರ್ ಟೇಬಲ್ ಆದಿತ್ಯನಿಗಾಗಿ ಮೀಸಲಾಗಿರುತ್ತದೆ. ಆದಿತ್ಯ ಅಲ್ಲಿಗೆ ಬಂದು ಕುಳಿತ ಕೂಡಲೇ ಹೋಟೆಲ್ ಮಾಲೀಕ ಸೋಮಣ್ಣ ಯಾವುದೇ ಆರ್ಡರ್ ಪಡೆಯದೆ ಎರಡು ಪ್ಲೇಟ್ ಬಿಸಿ ಬಿಸಿ ಕೇಸರಿ ಬಾತ್ ಅನ್ನು ಟೇಬಲ್ ಮೇಲೆ ಇಡುತ್ತಾನೆ. ಒಂದು ಪ್ಲೇಟ್ ಆದಿತ್ಯನ ಮುಂದೆ, ಇನ್ನೊಂದು ಪ್ಲೇಟ್ ಅವನ ಎದುರಿಗಿರುವ ಖಾಲಿ ಕುರ್ಚಿಯ ಮುಂದೆ.
ಆದಿತ್ಯ ಆ ಖಾಲಿ ಕುರ್ಚಿಯ ಕಡೆಗೆ ಪ್ರೀತಿಯಿಂದ ನೋಡುತ್ತಾ, ಇವತ್ತು ತುಂಬಾ ಲೇಟ್ ಆಯ್ತಲ್ಲ ಮೈತ್ರೇಯಿ?" ಎಂದು ಗಾಳಿಯಲ್ಲಿ ಯಾರೋ ಕುಳಿತಿದ್ದಾರೆ ಎಂಬಂತೆ ಮೆಲ್ಲಗೆ ಮಾತಾಡುತ್ತಾನೆ. ಹಬೆ ಬರುತ್ತಿರುವ ಆ ಕೇಸರಿ ಬಾತ್ ಅನ್ನು ಒಂದು ಚಮಚ ಎತ್ತಿ ಎದುರಿಗಿನ ಖಾಲಿ ಪ್ಲೇಟ್‌ಗೆ ಮುಟ್ಟಿಸಿ, ಆಮೇಲೆ ತಾನು ತಿನ್ನುತ್ತಾನೆ. ಅವನ ಈ ವಿಚಿತ್ರ ನಡವಳಿಕೆಯನ್ನು ನೋಡಿ ಹೋಟೆಲ್‌ಗೆ ಬರುವ ಹೊಸ ಗ್ರಾಹಕರು ಬೆಚ್ಚಿಬೀಳುತ್ತಾರೆ, ಆದರೆ ಹಳೆಯವರಿಗೆ ಇದು ಕೇವಲ ಒಂದು ಪ್ರೀತಿಯ ಹುಚ್ಚು.
ಹತ್ತು ವರ್ಷಗಳ ಹಿಂದೆ ಆದಿತ್ಯ ಮತ್ತು ಮೈತ್ರೇಯಿ ಇದೇ ಹೋಟೆಲ್‌ನಲ್ಲಿ ಕುಳಿತು ಸಾವಿರಾರು ಕನಸುಗಳನ್ನು ಕಂಡಿದ್ದರು. ಆದಿತ್ಯ ಒಬ್ಬ ಬಡ ಬರಹಗಾರ, ಮೈತ್ರೇಯಿ ಶ್ರೀಮಂತ ಮನೆಯ ಏಕೈಕ ಪುತ್ರಿ. ಅವರ ಪ್ರೀತಿಗೆ ಇದ್ದ ಒಂದೇ ಒಂದು ಕೊಂಡಿ ಎಂದರೆ ಈ ಕೇಸರಿ ಬಾತ್. ಮೈತ್ರೇಯಿಗೆ ಸಿಹಿ ಎಂದರೆ ಪ್ರಾಣ. ಆದಿ, ಈ ಕೇಸರಿ ಬಾತ್‌ನಲ್ಲಿ ನಿನ್ನ ಪ್ರೀತಿಯ ಸಿಹಿಯಿದೆ. ನಾವಿಬ್ಬರೂ ಸಾಯುವವರೆಗೂ ಹೀಗೆಯೇ ಕೇಸರಿ ಬಾತ್ ಹಂಚಿಕೊಂಡು ತಿನ್ನಬೇಕು ಎಂದು ಅವಳು ಅಕ್ಕರೆಯಿಂದ ಹೇಳುತ್ತಿದ್ದಳು.
ಆದರೆ ಅವಳ ಮನೆಯಲ್ಲಿ ವಿರೋಧ ವ್ಯಕ್ತವಾಯಿತು. ಅವಳ ಮದುವೆ ನಿಶ್ಚಯವಾಯಿತು. ಅಂದು ಮಂಗಳೂರಿನಲ್ಲಿ ಭೀಕರ ಮಳೆ ಸುರಿಯುತ್ತಿತ್ತು. ಮೈತ್ರೇಯಿ ಮನೆಯಿಂದ ಓಡಿಬಂದು ಆದಿತ್ಯನನ್ನು ಭೇಟಿಯಾಗಲು ಇದೇ ಹೋಟೆಲ್‌ಗೆ ಬರಬೇಕಿತ್ತು. ಆದಿತ್ಯ ಎರಡು ಪ್ಲೇಟ್ ಕೇಸರಿ ಬಾತ್ ಆರ್ಡರ್ ಮಾಡಿ ಕಾಯುತ್ತಿದ್ದ. ಆದರೆ ಮೈತ್ರೇಯಿ ಬರಲಿಲ್ಲ. ಬಂದದ್ದು ಅವಳ ಸಾವಿನ ಸುದ್ದಿ. ಹೋಟೆಲ್‌ಗೆ ಬರುವ ದಾರಿಯಲ್ಲೇ ಅವಳ ಕಾರ್ ಅಪಘಾತಕ್ಕೀಡಾಗಿ ಅವಳು ಸ್ಥಳದಲ್ಲೇ ಮೃತಪಟ್ಟಿದ್ದಳು. ಅಂದು ಆದಿತ್ಯನ ಕೈಯಲ್ಲಿದ್ದ ಕೇಸರಿ ಬಾತ್ ನೆಲಕ್ಕೆ ಬಿದ್ದು ಚೆಲ್ಲಿತು. ಅಂದಿನಿಂದ ಆದಿತ್ಯನ ಪ್ರಪಂಚ ಸ್ಥಗಿತಗೊಂಡಿತು. ಅವನು ಪ್ರತಿ ಸಂಜೆ ಇಲ್ಲಿಗೆ ಬಂದು ಅವಳಿಗಾಗಿ ಕಾಯುವುದು ಅವನ ಬದುಕಿನ ಭಾಗವಾಯಿತು. ವರ್ಷಗಳು ಕಳೆದಂತೆ ಆದಿತ್ಯನ ಬಗ್ಗೆ ಜನರಲ್ಲಿ ಒಂದು ರೀತಿಯ ಗೌರವ ಹುಟ್ಟಿತು. ಇವನಂತ ಪ್ರೇಮಿಯನ್ನು ಎಲ್ಲೂ ನೋಡಲು ಸಾಧ್ಯವಿಲ್ಲ ಎಂದು ಜನ ಉದಾಹರಣೆ ಕೊಡುತ್ತಿದ್ದರು. ಆದಿತ್ಯ ತನ್ನ ಡೈರಿಯಲ್ಲಿ ದಿನಾ ಒಂದು ಪುಟ ಬರೆಯುತ್ತಿದ್ದ. ಆ ಪುಟದಲ್ಲಿ ಕೇವಲ ಮೈತ್ರೇಯಿ, ಇವತ್ತು ಕೇಸರಿ ಬಾತ್ ತುಂಬಾ ಸಿಹಿಯಾಗಿತ್ತು ಎನ್ನುವ ಒಂದು ಸಾಲು ಮಾತ್ರ ಇರುತ್ತಿತ್ತು. ಅವನ ಈ ಪ್ರಾಮಾಣಿಕ ಪ್ರೇಮದ ಕಥೆ ಮಂಗಳೂರಿನ ಪ್ರತಿ ಮನೆಗೂ ತಿಳಿದಿತ್ತು.

ಆದರೆ ಕಾಲವು ಒಂದೇ ರೀತಿ ಇರುವುದಿಲ್ಲ ಬದಲಾಗುತ್ತಲೇ ಇರುತ್ತದೆ ಎನ್ನುವುದಕ್ಕೆ ಸಾಕ್ಷಿ ಎಂಬಂತೆ ಆದಿತ್ಯನ ಅಮ್ಮ ಸಾಯುವ ಮುನ್ನ ಒಬ್ಬ ಹಳೆಯ ಪೋಲಿಸ್ ಅಧಿಕಾರಿಯನ್ನು ಭೇಟಿಯಾಗಿ ಒಂದು ರಹಸ್ಯವನ್ನು ಹೊರಹಾಕಿದಳು. ಆ ಅಧಿಕಾರಿ ಈಗ ನಿವೃತ್ತನಾಗಿದ್ದರೂ, ಅಂದು ಮೈತ್ರೇಯಿ ಅಪಘಾತವಾದ ದಿನ ತನಿಖೆ ನಡೆಸಿದ್ದು ಅವನೇ ಆಗಿದ್ದ. ಅವನು ಆದಿತ್ಯನ ಮನೆಗೆ ಬಂದಾಗ ಆದಿತ್ಯ ಎಂದಿನಂತೆ ಹೋಟೆಲ್‌ಗೆ ಹೋಗಿದ್ದ. ಆ ಅಧಿಕಾರಿ ಆದಿತ್ಯನ ಕೊಠಡಿಯನ್ನು ಶೋಧಿಸಿದಾಗ ಅಲ್ಲಿ ಸಿಕ್ಕಿದ್ದು ಕೇವಲ ಕವಿತೆಗಳಲ್ಲ ಅಲ್ಲಿ ನೂರಾರು ವಿಚಿತ್ರವಾದ ಔಷಧಗಳ ಬಾಟಲಿಗಳು ಮತ್ತು ಕೆಲವು ರಹಸ್ಯ ಪತ್ರಗಳು ಸಿಕ್ಕವು. 
ಆ ಪತ್ರಗಳನ್ನು ಓದಿದ ಅಧಿಕಾರಿಯ ಕಣ್ಣುಗಳು ಕೆಂಪಾದವು. ಅದರಲ್ಲಿ ಬರೆದಿತ್ತು ಮೈತ್ರೇಯಿ, ನಿನಗೆ ಕೇಸರಿ ಬಾತ್ ಅಂದರೆ ಇಷ್ಟ ಇರಬಹುದು. ಆದರೆ ನನಗೆ ನಿನ್ನ ಶ್ರೀಮಂತಿಕೆ ಮತ್ತು ನಿನ್ನ ಅಪ್ಪನ ಅಹಂಕಾರದ ಮೇಲೆ ದ್ವೇಷವಿತ್ತು. ನೀನು ಸತ್ತರೆ ಮಾತ್ರ ನನ್ನ ಕಥೆ ಅಮರವಾಗುತ್ತದೆ ಎಂದು ನನಗೆ ಅಂದೇ ತಿಳಿದಿತ್ತು. ಅಂದು ನಾನು ಹೋಟೆಲ್‌ಗೆ ಬರುವ ಮುನ್ನ ನಿನ್ನ ಕಾರ್‌ನ ಬ್ರೇಕ್ ವೈರ್ ಕತ್ತರಿಸಿದ್ದು ನಾನೇ ಎಂದು ನಿನಗೆ ತಿಳಿಯಲೇ ಇಲ್ಲ. 
ಅಧಿಕಾರಿ ಬೆಚ್ಚಿಬಿದ್ದ. ಆದಿತ್ಯ ಒಬ್ಬ ಪ್ರೇಮಿಯಲ್ಲ, ಬದಲಾಗಿ ಅವನು ಒಬ್ಬ ಸೈಕೋಪಾತ್ ಬರಹಗಾರನಾಗಿದ್ದ, ಅವನು ತನ್ನ ಕಥೆಯ ಕ್ಲೈಮ್ಯಾಕ್ಸ್‌ಗಾಗಿ ತನ್ನ ಪ್ರೇಯಸಿಯನ್ನೇ ಕೊಂದಿದ್ದ. ಆದರೆ ಟ್ವಿಸ್ಟ್ ಇಲ್ಲೇ ಮುಗಿಯುವುದಿಲ್ಲ. 
ಅಧಿಕಾರಿ ತಕ್ಷಣ ಹೋಟೆಲ್‌ಗೆ ಧಾವಿಸಿದ. ಆದಿತ್ಯ ಅಲ್ಲಿ ಕುಳಿತು ಆ ಖಾಲಿ ಕುರ್ಚಿಯ ಜೊತೆ ಮಾತಾಡುತ್ತಿದ್ದ. ಅಧಿಕಾರಿ ಆದಿತ್ಯನ ಹತ್ತಿರ ಹೋಗಿ ಅವನ ಕಾಲರ್ ಹಿಡಿದು ಎಳೆದು ಹಾಕಿದ. ನಿನಗೆ ನಾಚಿಕೆಯಾಗಲ್ವಾ? ನಿನ್ನ ಪ್ರೇಯಸಿಯನ್ನೇ ಕೊಂದ ಕಟುಕ ನೀನು ಎಂದು ಕೂಗಾಡಿದ. ಹೋಟೆಲ್‌ನಲ್ಲಿ ಕುಳಿತಿದ್ದವರೆಲ್ಲಾ ಸ್ತಬ್ಧರಾದರು. 
ಆದಿತ್ಯ ನಗುತ್ತಾ ಎದ್ದ. ಅವನ ಕಣ್ಣುಗಳಲ್ಲಿ ಯಾವುದೇ ಭಯವಿರಲಿಲ್ಲ. ಅವನು ಮೆಲ್ಲಗೆ ಹೇಳಿದ, ಸಾರ್, ನೀವು ಅರ್ಧ ಸತ್ಯವನ್ನು ಮಾತ್ರ ಓದಿದ್ದೀರಿ. ನಾನು ಮೈತ್ರೇಯಿಯನ್ನು ಕೊಂದದ್ದು ನಿಜ. ಆದರೆ ಅವಳು ಸತ್ತ ದಿನದಿಂದ ನಾನು ತಿನ್ನುತ್ತಿರುವ ಕೇಸರಿ ಬಾತ್‌ನಲ್ಲಿ ಅಸಲಿ ರಹಸ್ಯ ಅಡಗಿದೆ. ಈ ಹತ್ತು ವರ್ಷಗಳಿಂದ ನಾನು ಆರ್ಡರ್ ಮಾಡುತ್ತಿರುವ ಆ ಎರಡು ಪ್ಲೇಟ್ ಕೇಸರಿ ಬಾತ್‌ನಲ್ಲಿ ಒಂದರಲ್ಲಿ ನಾನು ದಿನಾ ಸ್ವಲ್ಪ ಸ್ವಲ್ಪವೇ ಸ್ಲೋ ಪಾಯ್ಸನ್' ಬೆರೆಸುತ್ತಿದ್ದೇನೆ. ಆ ವಿಷವಿರುವ ಪ್ಲೇಟ್ ನನ್ನದು, ಮೈತ್ರೇಯಿಯ ಪ್ಲೇಟ್ ಶುದ್ಧವಾಗಿದೆ.  
ಅಧಿಕಾರಿ ಗಾಬರಿಯಿಂದ ಕೇಳಿದ, "ಯಾಕೆ? ಆದಿತ್ಯ ನೆಲಕ್ಕೆ ಬಿದ್ದ. ಅವನ ಬಾಯಿಯಿಂದ ರಕ್ತ ಉಕ್ಕುತ್ತಿತ್ತು. ಅವನು ಸಾಯುವ ಮುನ್ನ ತನ್ನ ಡೈರಿಯನ್ನು ಅಧಿಕಾರಿಯ ಕೈಗಿಟ್ಟು ಹೇಳಿದ, ನಾನು ಅವಳನ್ನು ಕೊಂದೆ, ಏಕೆಂದರೆ ಒಬ್ಬ Danger Writer ಗೆ ತನ್ನ ಕಥೆಗಿಂತ ಯಾವುದೂ ಮುಖ್ಯವಲ್ಲ. ಆದರೆ ಅವಳು ಸತ್ತ ಮೇಲೆ ನನಗೆ ಅರಿವಾಯಿತು, ಅವಳಿಲ್ಲದೆ ನನ್ನ ಲೇಖನಿ ಮೂಕವಾಯಿತು ಎಂದು. ಈ ಹತ್ತು ವರ್ಷಗಳ ಕಾಲ ನಾನು ತಿಂದ ವಿಷ ಇಂದು ನನ್ನ ಕೆಲಸ ಪೂರ್ಣಗೊಳಿಸಿದೆ. ನನ್ನ ಕಥೆಯ ಕೊನೆಯ ಸಾಲು ಈಗ ಪೂರ್ತಿಯಾಗಿದೆ. 
ಅಧಿಕಾರಿ ಆ ಡೈರಿಯನ್ನು ತೆರೆದು ನೋಡಿದಾಗ ಅಲ್ಲಿ ಕೊನೆಯ ಪುಟದಲ್ಲಿ ಕೆಂಪು ಅಕ್ಷರಗಳಲ್ಲಿ ಬರೆಯಲಾಗಿತ್ತು ಕೇಸರಿ ಬಾತ್ ಅತೀ ಸಿಹಿಯಾಗಿದೆ, ಏಕೆಂದರೆ ಇದರಲ್ಲಿ ನನ್ನ ಪ್ರೇಯಸಿಯ ಸಾವಿನ ನೆನಪು ಮತ್ತು ನನ್ನ ಪ್ರಾಯಶ್ಚಿತ್ತದ ವಿಷ ಎರಡೂ ಬೆರೆತಿದೆ. 
ಆದಿತ್ಯ ಹೋಟೆಲ್‌ನ ಅದೇ ಕಿಟಕಿಯ ಪಕ್ಕದಲ್ಲಿ ಶವವಾಗಿ ಬಿದ್ದಿದ್ದ. ಅವನ ಮುಖದಲ್ಲಿ ಒಂದು ವಿಚಿತ್ರವಾದ ಶಾಂತಿ ಇತ್ತು.
ಜನರೆಲ್ಲಾ ಜಮಾಯಿಸಿದಾಗ, ಹೋಟೆಲ್ ಮಾಲೀಕ ಸೋಮಣ್ಣ ಅಧಿಕಾರಿಯ ಕಿವಿಯಲ್ಲಿ ಮೆಲ್ಲಗೆ ಹೇಳಿದ, ಸಾರ್, ಈ ಆದಿತ್ಯ ಹತ್ತು ವರ್ಷದಿಂದ ವಿಷ ತಿಂತಿದ್ದ ಅಂತ ಹೇಳಿದ್ನಲ್ಲ? ಅದು ಸುಳ್ಳು. ನಾನು ಅವನಿಗೆ ದಿನಾ ವಿಷ ಕೊಡುತ್ತಿರಲಿಲ್ಲ, ಬದಲಾಗಿ ಅವನು ಕೊಡುತ್ತಿದ್ದ ಆ ವಿಷದ ಪುಡಿಯನ್ನು ನಾನು ಬದಲಿಸಿ ಅದಕ್ಕೆ ಕೇವಲ ಸಕ್ಕರೆ ಪುಡಿ ಹಾಕಿ ಕೊಡುತ್ತಿದ್ದೆ. ಅವನಿಗೆ ಸಾಯುವ ಆಸೆಯಿತ್ತು, ಆದರೆ ನನಗೆ ಅವನ ಕಥೆಯನ್ನು ಸಾಯಿಸಲು ಮನಸ್ಸಿರಲಿಲ್ಲ.
ಅಂದರೆ, ಆದಿತ್ಯ ಸತ್ತಿದ್ದು ವಿಷದಿಂದಲ್ಲ, ಬದಲಾಗಿ ಅವನು ತನ್ನ ಕಥೆಯ ಕ್ಲೈಮ್ಯಾಕ್ಸ್ ಪೂರ್ತಿಯಾಯಿತು ಎಂಬ ಮಾನಸಿಕ ಆಘಾತದಿಂದ ಹೃದಯಾಘಾತವಾಗಿ ಸತ್ತಿದ್ದ.