Anirban 000 in Kannada Horror Stories by Danger Writer books and stories PDF | ಅನಿರ್ಬಾನ್ 000

Featured Books
  • Safar e Raigah - 19

    منظر ۔آیت نے دھیرے سے اپنے کمرے کا دروازہ کھولا اور اندر داخ...

  • والدین کے فرائض

    والدین کے فرائضتحریر۔شاہد شکیلوالدین اور اولاد کا رشتہ محض خ...

  • زندگی کی صلیب

    حالات خدا کی حوصلہ افزائی سے، میں نے اپنے حالات بدل لیے ہیں۔...

  • Safar e Raigah - 18

    منظر ۔شاہ میر نے محسوس کر لیا تھا کہ آیات کے مزاج کی برہمی ا...

  • Safar e Raigah - 17

    منظر ۔شاہ میر نے آئس کریم کا کپ پکڑا اور اس کی ٹھنڈک کو محسو...

Categories
Share

ಅನಿರ್ಬಾನ್ 000

ಮಂಗಳೂರಿನ ಬಂದರಿನಲ್ಲಿ ಅಂದು ಸುರಿಯುತ್ತಿದ್ದ ಮಳೆ ಕೇವಲ ನೀರಾಗಿರಲಿಲ್ಲ; ಅದು ಕಪ್ಪು ಶಾಯಿಯಂತೆ  ಹರಿಯುತ್ತಿತ್ತು. ನಗರದ ಪ್ರತಿಷ್ಠಿತ ಉದ್ಯಮಿ ರಘುರಾಮ್ ತನ್ನ ಗೋದಾಮಿನಲ್ಲಿ ಸತ್ತು ಬಿದ್ದಿದ್ದ. ಅವನ ಎದೆಯ ಮೇಲೆ ರಕ್ತದಲ್ಲಿ ಒಂದು ಹೆಸರಿತ್ತು ಅನಿರ್ಬಾನ್ ಚಟರ್ಜಿ.  ಇನ್ಸ್‌ಪೆಕ್ಟರ್ ಸೂರ್ಯ ಆ ಹೆಸರನ್ನು ನೋಡಿದಾಗ ಅವನಿಗೆ ಅರಿವಿರಲಿಲ್ಲ, ಅದು ಮನುಷ್ಯನ ಹೆಸರಲ್ಲ, ಅದೊಂದು ಮರಣಶಾಸನ ಎಂದು.
ಶರತ್ ತನ್ನ RTRT ಬೈಕ್ ಹತ್ತಿ ಡೆಲಿವರಿ ಹೊರಟಾಗ ರಾತ್ರಿ ಹನ್ನೊಂದು ಗಂಟೆ. ಅವನಿಗೆ ವಿಚಿತ್ರವಾದ ವಿಳಾಸವೊಂದು ಸ್ಕ್ರೀನ್ ಮೇಲೆ ಮೂಡಿತು ಸ್ಮಶಾನದ ಮೂರನೇ ಗೋಡೆ, ಕತ್ತಲಲ್ಲಿ ಕಣ್ಣು ಬಿಟ್ಟಿರುವ ಮನೆ ಆರ್ಡರ್ ಮಾಡಿದ ಹೆಸರು ಮೈತ್ರೇಯಿ. ಶರತ್ ಗಾಬರಿಯಿಂದ ಬೈಕ್ ಸ್ಟಾರ್ಟ್ ಮಾಡಿದ. ಆದರೆ ಅವನ ಬೈಕ್‌ನ ಹೆಡ್‌ಲೈಟ್ ಬೆಳಕು ಚೆಲ್ಲುವ ಬದಲು ಕತ್ತಲನ್ನು ಹರಡುತ್ತಿತ್ತು‌. ಆದರೆ ಅವನು ತಲುಪಿದ್ದು ದೋಸೆ ಕ್ಯಾಂಪ್ ಪಕ್ಕದ ಒಂದು ಹಳೆಯ ಬಂಗಲೆಗೆ. ಅಲ್ಲಿ ಒಬ್ಬ ವೃದ್ಧ ವ್ಯಕ್ತಿ ಕುಳಿತು ಬಾಂಗ್ಲಾ ಭಾಷೆಯಲ್ಲಿ ಏನೋ ಬರೆಯುತ್ತಿದ್ದ. ಅವನೇ ಅನಿರ್ಬಾನ್ ಚಟರ್ಜಿ. 
ಶರತ್ ಪಾರ್ಸೆಲ್ ನೀಡಲು ಹೋದಾಗ ಅನಿರ್ಬಾನ್ ತಲೆಯೆತ್ತದೆ ಹೇಳಿದ, ಶರತ್, ಈ ಇಡ್ಲಿ ಪಾರ್ಸೆಲ್ ಆರ್ಡರ್ ಮಾಡಿದ್ದು ಮೈತ್ರೇಯಿ ಅಲ್ಲ, ಅದು ನಿನ್ನ ಸಾವಿನ ನಂತರದ ನಿನ್ನ ಪ್ರತಿಬಿಂಬ. ಶರತ್ ‌ಗೆ ಏನೂ ಅರ್ಥವಾಗಲಿಲ್ಲ. ಅನಿರ್ಬಾನ್ ಒಂದು ಕನ್ನಡಿ ಹೊರತೆಗೆದ. ಆ ಕನ್ನಡಿಯಲ್ಲಿ ಶರತ್ ಈ ಕ್ಷಣದಲ್ಲಿ ನಿಂತಿರುವ ದೃಶ್ಯವಿರಲಿಲ್ಲ ಬದಲಾಗಿ ಶರತ್ ಡೆಲಿವರಿ ಬ್ಯಾಗ್ ಹೊತ್ತು ಸತ್ತು ಬಿದ್ದಿರುವ ದೃಶ್ಯವಿತ್ತು. ಅನಿರ್ಬಾನ್ ನಗುತ್ತಾ ತನ್ನ ಫೌಂಟೇನ್ ಪೆನ್ನಿನಿಂದ ಶರತ್ ‌ನ ನೆರಳನ್ನು ಕತ್ತರಿಸಿದ. ನೆರಳು ಕತ್ತರಿಸಿದ ತಕ್ಷಣ ಶರತ್ ಗೆ ತನ್ನ ಅಸ್ತಿತ್ವವೇ ಇಲ್ಲದಂತೆ ಭಾಸವಾಯಿತು.
ಅನಿರ್ಬಾನ್ ಹೇಳಿದ, ಶರತ್, ನೀನು ಇಷ್ಟು ದಿನ ಬರೆದ ಕಥೆಗಳು ವಾಸ್ತವದಲ್ಲಿ ನಡೆದ ಘಟನೆಗಳಲ್ಲ. ಅವುಗಳು ನಾನು ಬಂಗಾಳದ ಸ್ಮಶಾನವೊಂದರಲ್ಲಿ ಕುಳಿತು ಬರೆದ ಕಲ್ಪನೆಗಳು. ಆ ಕಲ್ಪನೆಗೆ ನಾನು ನಿನ್ನ ಹೆಸರಿಟ್ಟಿದ್ದೆ ಅಷ್ಟೇ. ಈಗ ನಾನು ಆ ಕಥೆಯನ್ನು ಮುಗಿಸಲು ಬಂದಿದ್ದೇನೆ. ಶರತ್ ಅಲ್ಲಿಂದ ತಪ್ಪಿಸಿಕೊಳ್ಳಲು ಓಡಿದ. ಆದರೆ ಬಂಗಲೆಯಿಂದ ಹೊರಬಂದಾಗ ಅವನು ಮಂಗಳೂರಿನಲ್ಲಿರಲಿಲ್ಲ, ಬದಲಾಗಿ 1970ರ ದಶಕದ ಕೋಲ್ಕತ್ತಾದ ಬೀದಿಗಳಲ್ಲಿದ್ದ. ಅಲ್ಲಿ ಪ್ರತಿಯೊಬ್ಬರೂ ಶರತ್ ‌ನ ಕಡೆಗೆ ನೋಡಿ ಒರಿಜಿನಲ್ ಪ್ರೇಮಿ ಬಂದಿದ್ದಾನೆ ಎಂದು ಬೊಬ್ಬೆ ಹೊಡೆಯುತ್ತಿದ್ದರು. ಶರತ್ ಗೆ ತನ್ನ ಭಾಷೆಯೇ ಮರೆತುಹೋಯಿತು. ಅವನು ಮಾತಾಡಲು ಹೋದಾಗ ಅವನ ಬಾಯಿಯಿಂದ ಕೇವಲ ಶಬ್ದಗಳು ಬರುವ ಬದಲು ಕಪ್ಪು ಅಕ್ಷರಗಳು ಹೊರಬರುತ್ತಿದ್ದವು.
ಅಷ್ಟರಲ್ಲಿ ಅವನಿಗೆ ವಾಟ್ಸಾಪ್ ನೋಟಿಫಿಕೇಶನ್ ಬಂತು. ಅಜಯ್ ಮೆಸೇಜ್ ಮಾಡಿದ ಶರತ್, ನೀನು ಈಗ 217ನೇ ಕಥೆಯೊಳಗೆ ಇದ್ದೀಯಾ. ಈ ಕಥೆಯ ಅಂತ್ಯ ಅನಿರ್ಬಾನ್ ಚಟರ್ಜಿಯ ಕೈಯಲ್ಲಿದೆ. ಅವನು ನಿನ್ನನ್ನು ಮರೆತರೆ ಮಾತ್ರ ನೀನು ಬದುಕುತ್ತೀಯಾ.  ಶರತ್ ಅನಿರ್ಬಾನ್‌ನನ್ನು ಹುಡುಕುತ್ತಾ ಹೋದ. ಅವನಿಗೆ ಅಚ್ಚರಿಯಾಗಿದ್ದು ಏನೆಂದರೆ, ಅನಿರ್ಬಾನ್ ಈಗ ಒಬ್ಬ ಸಣ್ಣ ಮಗುವಾಗಿ ರಸ್ತೆಯಲ್ಲಿ ಆಟವಾಡುತ್ತಿದ್ದ. ಆ ಮಗು ಒಂದು ಕಾಗದದ ದೋಣಿ ಮಾಡಿ ನೀರಿನಲ್ಲಿ ಬಿಡುತ್ತಿತ್ತು. ಆ ದೋಣಿಯ ಮೇಲೆ ಬರೆದಿತ್ತು RTRT ಡೆತ್ ಮಿಷನ್.
ಶರತ್ ಆ ಮಗುವನ್ನು ಹಿಡಿದು ಕಿರುಚುತ್ತಾ, ಯಾರು ನೀನು? ನಿನಗೆ ನನ್ನ ಬದುಕು ಯಾಕೆ ಬೇಕು? ಆ ಮಗು ನಗುತ್ತಾ ಮುಖವಾಡ ಕಳಚಿತು. ಅದರ ಒಳಗೆ ಇರುವುದು ಮೈತ್ರೇಯಿ, ಅವಳು ಹೇಳಿದಳು, ಶರತ್, ನಾನು ನಿನ್ನ ಪ್ರೇಯಸಿಯಲ್ಲ. ನಾನು ಅನಿರ್ಬಾನ್ ಚಟರ್ಜಿ ಬರೆಯುತ್ತಿರುವ ಪೆನ್ನಿನ ಶಾಯಿ. ನೀನು ಬರೆದ ಪ್ರತಿಯೊಂದು ಕವಿತೆಯೂ ನನ್ನನ್ನೇ ಕೊಲ್ಲುತ್ತಿತ್ತು. ಈಗ ನಾನು ನಿನ್ನನ್ನು ಶೂನ್ಯದಲ್ಲಿ ಲೀನ ಮಾಡುತ್ತೇನೆ.
ಶರತ್ ತನ್ನ ಫೋನ್ ತೆಗೆದು ನೋಡಿದಾಗ ಅಲ್ಲಿ ಬ್ಯಾಟರಿ 0% ಆಗಿತ್ತು, ಆದರೆ ಫೋನ್ ಮಾತಾಡುತ್ತಿತ್ತು. ಫೋನ್‌ನಿಂದ ಅನಿರ್ಬಾನ್ ಚಟರ್ಜಿಯ ಧ್ವನಿ ಕೇಳಿಸಿತು ಶರತ್, ನೀನು ಈ ಕಥೆಯನ್ನು ಎಷ್ಟು ಬಾರಿ ಓದುತ್ತೀಯೋ ಅಷ್ಟು ಬಾರಿ ನಿನ್ನ ಜೀವನದ ಒಂದು ನೆನಪು ಮಾಯವಾಗುತ್ತದೆ. ಮೊದಲು ನಿನ್ನ ಹೆಸರು ಮಾಯವಾಗಲಿ. 
ಶರತ್  ಕಣ್ಣು ಬಿಟ್ಟಾಗ ಅವನು ಉಡುಪಿಯ ತನ್ನ ರೂಮಿನಲ್ಲಿದ್ದ. ಅಬ್ಬಾ, ಕನಸು ಎಂದು ಉಸಿರು ಬಿಟ್ಟ. ಆದರೆ ಅವನು ತನ್ನ ಶರ್ಟ್ ಬಿಚ್ಚಿದಾಗ ಬೆನ್ನಿನ ಮೇಲೆ ಸಾವಿರಾರು ಬಾಂಗ್ಲಾ ಅಕ್ಷರಗಳು ರಕ್ತದಲ್ಲಿ ಮೂಡಿದ್ದವು. ಅವನು ಕನ್ನಡಿಯ ಮುಂದೆ ಹೋದ. ಕನ್ನಡಿಯಲ್ಲಿ ಅವನ ಮುಖವಿರಲಿಲ್ಲ, ಕೇವಲ ಒಂದು ಕಪ್ಪು ಬಿಂದುವಿತ್ತು. ಅಷ್ಟರಲ್ಲೇ ರೂಮಿನ ಬಾಗಿಲು ತೆರೆಯಿತು. ಒಳಗೆ ಬಂದಿದ್ದು ಬೇರೆ ಯಾರೂ ಅಲ್ಲ, ಸ್ವತಃ ಶರತ್. 
ಅಂದರೆ, ಈಗ ರೂಮಿನ ಒಳಗೆ ಬಂದವನು ಅಸಲಿ ಶರತ್ ಅಥವಾ ಕನ್ನಡಿಯಲ್ಲಿರುವವನು ಅಸಲಿ ಶರತ್? ಅಥವಾ ಈ ಕಥೆಯನ್ನು ಓದುತ್ತಿರುವ ನೀವೇ ಆ ಅನಿರ್ಬಾನ್ ಚಟರ್ಜಿಯ ಪ್ರತಿರೂಪವೇ?
ಕಥೆ ಇಲ್ಲಿಗೆ ಮುಗಿಯುವುದಿಲ್ಲ. ಕಥೆಯ ಕೊನೆಯ ಪುಟದಲ್ಲಿ ಒಂದು ವಾಟ್ಸಾಪ್ ಗ್ರೂಪ್‌ನ ಸ್ಕ್ರೀನ್‌ಶಾಟ್ ಇತ್ತು. ಅದರಲ್ಲಿ ಶರತ್ ಮತ್ತು ಆ ಬಂಗಾಳಿ ವ್ಯಕ್ತಿ ಅನಿರ್ಬಾನ್ ಚಟರ್ಜಿ ಇಬ್ಬರೂ ಇಲ್ಲ, ಅಲ್ಲಿ ಕೇವಲ ಒಂದು ಮೆಸೇಜ್ ಇತ್ತು 000 ಹಸ್ತಪ್ರತಿ ಪೂರ್ಣಗೊಂಡಿದೆ. ಈಗ ಓದುಗರು ಈ ಕಥೆಯೊಳಗೆ ಬಂಧಿಯಾಗಿದ್ದಾರೆ. 
ಶರತ್  ಮಂಗಳೂರಿನ ಆ ಹೋಟೆಲ್‌ನಲ್ಲಿ ಕುಳಿತಾಗ ವೇಟರ್ ಒಂದು ಪ್ಲೇಟ್ ಬಿಸಿ ಇಡ್ಲಿ ತಂದು ಟೇಬಲ್ ಮೇಲೆ ಇಟ್ಟ. ಆ ಇಡ್ಲಿಯಿಂದ ಹೊಗೆ ಬರುವ ಬದಲು ಅನಿರ್ಬಾನ್ ಚಟರ್ಜಿಯ ನಗು ಕೇಳಿಸುತ್ತಿತ್ತು. ಇಡ್ಲಿಯ ಮೇಲೆ ಕೆತ್ತಲಾಗಿತ್ತು IDLY - I Deeply Lost You.
ಈಗ ಕಥೆಯನ್ನು ಮತ್ತೆ ಮೊದಲಿನಿಂದ ಓದಿ. ಈ ಬಾರಿ ನಿಮಗೆ ಮಂಗಳೂರಿನ ಬದಲು ಕೋಲ್ಕತ್ತಾ ಕಾಣಿಸುತ್ತದೆ. ಮೂರನೇ ಬಾರಿ ಓದಿದಾಗ ನಿಮ್ಮ ಫೋನಿನ ಸ್ಕ್ರೀನ್ ಮೇಲೆ ಕಪ್ಪು ಚುಕ್ಕೆ ಮೂಡುತ್ತದೆ. ಆ ಚುಕ್ಕೆ ಬೇರೆ ಯಾವುದೂ ಅಲ್ಲ, ಅದು ಅನಿರ್ಬಾನ್ ಚಟರ್ಜಿಯ ಕಣ್ಣು.